Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಗ್ಯಾಸ್ ಹೆಚ್ಚು ಮಾಡಿದ್ರು ಉರಿ ಸಣ್ಣದಾಗಿ ಉರಿಯುತ್ತಾ.! ಒಂದು ರೂಪಾಯಿ ಖರ್ಚಿಲ್ಲದೆ ರಿಪೇರಿ ಮಾಡಿ..!
ಗೃಹಿಣಿಯರಿಗೆ ಅಡುಗೆ ಮನೆಯಲ್ಲಿ ದಿನಕ್ಕೊಂದಾದರು ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಅದು ಅಡುಗೆ ಕೋಣೆಯಲ್ಲಿ ಏನಾದರು ಸಮಸ್ಯೆಗಳು ಕಂಡು ಬಂದಾಗ ಇಡೀ ದಿನ ಹಾಳಾಗುತ್ತದೆ. ಸರಿ ಮಾಡುವವರೆಗೂ ಅವರಿಗೆ ನೆಮ್ಮದಿ ಇರುವುದಿಲ್ಲ. ಅಡುಗೆ ಮನೆಯಲ್ಲಿ ನೀರು ಬಾರದಿರುವುದು, ಗ್ಯಾಸ್ ಖಾಲಿಯಾಗುವುದು, ಲೈಟರ್ ಹೊತ್ತಿಕೊಳ್ಳದೆ ಇರುವುದು, ಅಕ್ಕಿ ಖಾಲಿಯಾಗಿರುವುದು, ಗ್ಯಾಸ್ ಇದ್ದರೂ ಒಲೆ ಉರಿಯದೆ ಇರುವುದು, ಗ್ಯಾಸ್ ಲೀಕ್ ಆಗುವುದು ಹೀಗೆ ಒಂದಲ್ಲಾ ಒಂದು ಸಮಸ್ಯೆ ಎದುರಾದರೆ ತಲೆನೋವು ಬಂತು ಅಂತಲೇ.
ನೀವು ಮನೆಯಲ್ಲಿ ಗ್ಯಾಸ್ ಸ್ಟವ್ ಬಳಸಿ ಅಡುಗೆ ಮಾಡುತ್ತಿದ್ದರೆ ನಿಮಗೊಂದು ಸಮಸ್ಯೆ ಖಂಡಿತ ಎದುರಾಗಿರುತ್ತೆ. ಗ್ಯಾಸ್ ಬರ್ನರ್‌ನಿಂದ ಸಣ್ಣ ಉರಿ ಬರುವುದು. ಹೌದು ಗ್ಯಾಸ್ ಎಷ್ಟು ಜೋರಾಗಿ ಬಿಟ್ಟರೆ ಉರಿ ಮಾತ್ರ ಸಣ್ಣಗೆ ಬರುತ್ತಿರುತ್ತದೆ. ಈ ರೀತಿ ಆದಾಗ ಒಲೆ ಮೇಲೆ ಅನ್ನವಿಟ್ಟರು ಬೇಯಲು ಅರ್ಧ ಗಂಟೆ ಹಿಡಿಯುತ್ತದೆ, ಹೀಗಾಗಿ ಗೃಹಿಣಿಯರಿಗೆ ಬರ್ನರ್‌ವೊಂದು ಸಮಸ್ಯೆಯಾಗಿ ಪರಿಣಮಿಸಿದೆ.

ಹಾಗಾದ್ರೆ ಅಡುಗೆ ಮನೆಯಲ್ಲಿ ಗೃಹಿಣಿಯರಿಗೆ ಕಾಡುವ ಸ್ಟವ್ ಸಮಸ್ಯೆಯನ್ನ ಬಗೆಹರಿಸುವುದು ಹೇಗೆ? ಬರ್ನರ್‌ನಲ್ಲಿ ಸಣ್ಣದಾಗಿ ಉರಿ ಬರುತ್ತಿರುವುದನ್ನು ಹೆಚ್ಚು ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬರ್ನರ್ ಪಿನ್ / ಗುಂಡು ಸೂಜಿ
ಬರ್ನರ್‌ನಿಂದ ಸಣ್ಣದಾಗಿ ಉರಿ ಬರುತ್ತಿದ್ದರೆ ಮೊದಲು ರೆಗ್ಯೂಲೇಟರ್ ಆಫ್ ಮಾಡಿಕೊಳ್ಳಿ, ನಂತರ ಸ್ಟವ್ ಅನ್ನು ಉಲ್ಟಾ ಮಗುಚಿಕೊಳ್ಳಿ. ಈಗ ಬರ್ನರ್ ಬುಡದಲ್ಲಿ ಒಂದು ಸಣ್ಣ ತೂತು ಇರುತ್ತದೆ. ಆ ತೂತಿನಿಂದ ಗ್ಯಾಸ್ ಹೊರಬರುತ್ತದೆ. ಈ ತೂತಿನಲ್ಲಿ ಕಸ ಕಟ್ಟಿದ್ದರೆ ಬರ್ನರ್‌ನಿಂದ ಸಣ್ಣದಾಗಿ ಉರಿ ಬರುತ್ತದೆ. ಈಗ ಆ ತೂತಿಗೆ ಬರ್ನರ್ ಪಿನ್ ಅಥವಾ ಗುಂಡು ಸೂಜಿಯ ಹಾಕಿ ಕಟ್ಟಿರುವ ಕಸವನ್ನ ತೆಗೆಯಿರಿ. ಹೀಗೆ ಮಾಡೋದ್ರಿಂದ ಬರ್ನರ್‌ನಿಂದ ಉರಿ ದೊಡ್ಡದಾಗಿ ಬರಲಿದೆ.
ಬರ್ನರ್ ಸ್ವಚ್ಛಗೊಳಸಿ
ಗ್ಯಾಸ್ ಸ್ಟವ್‌ನಿಂದ ಉರಿ ಸಣ್ಣದಾಗಿ ಬರುತ್ತಿದ್ದರೆ ಬರ್ನರ್‌ನಲ್ಲಿ ಕಸ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ, ಹೀಗಾಗಿ ಬರ್ನರ್ ತೆಗೆದು ತೊಳೆದು ಸ್ವಚ್ಛ ಮಾಡಬೇಕು. ಹೀಗೆ ಮಾಡೋದ್ರಿಂದ ಬರ್ನರ್‌ನಿಂದ ಉರಿ ದೊಡ್ಡದಾಗಿ ಬರಲಿದೆ.
ಬರ್ನರ್ ಸ್ವಚ್ಛ ಮಾಡೋದು ಹೇಗೆ?
ಬರ್ನರ್ ಮೇಲೆ ಉಂಟಾಗುವ ಜಿಡ್ಡು ಬಿಡಿಸಲು ಕಷ್ಟವಾಗುತ್ತದೆ. ಜೊತೆಗೆ ಈ ಜಿಡ್ಡಿನಿಂದ ಒಲೆ ಉರಿಯುವುದಕ್ಕೂ ಅಡೆತಡೆಯಾಗುತ್ತದೆ. ಸಣ್ಣದಾಗಿ ಕೆಂಪು ಬಣ್ಣದಲ್ಲಿ ಉರಿ ಬರುತ್ತಿದ್ದರೆ ಬರ್ನರ್ ಸ್ವಚ್ಛ ಮಾಡಬೇಕಾಗುತ್ತದೆ. ಹಾಗಾದ್ರೆ ಸುಲಭವಾಗಿ ಬರ್ನರ್ ಸ್ವಚ್ಛ ಮಾಡೋದು ಹೇಗೆ ಎಂಬುದನ್ನು ನೋಡಿ.
ಮೊದಲು ಒಂದು ಬೌಲ್‌ನಲ್ಲಿ ಬಿಸಿ ನೀರು ಹಾಕಿಕೊಳ್ಳಿ. ಅದಕ್ಕೆ ಅರ್ಧ ನಿಂಬೆ ಹಣ್ಣನ್ನು ಹಿಂಡಿಕೊಳ್ಳಿ. ಬಳಿಕ ಇದಕ್ಕೆ ಒಂದು ಇನೋ ಪ್ಯಾಕ್ ಹಾಕಿ. ಆ ನೀರಿನಲ್ಲಿ ಈ ಬರ್ನರ್ ಅನ್ನು 2 ಗಂಟೆಗಳ ಕಾಲ ಅದ್ದಿ ಇಡ ಬೇಕು. ಇನ್ನೊಂದು ಕಡೆ ಮತ್ತೊಂದು ಬೌಲ್‌ನಲ್ಲಿ ಬಿಸಿ ನೀರು ತೆಗೆದುಕೊಂಡು ಅದಕ್ಕೆ ಅಡುಗೆ ಸೋಡಾ, ವಿನೆಗರ್ ಹಾಕಿ ಅದರೊಳಗೆ ಒಂದು ಬರ್ನರ್ ಹಾಕಿಡಿ. ಈ ಎರಡೂ ವಿಧಾನದಲ್ಲಿ ಬರ್ನರ್ ಅನ್ನು ಸ್ವಚ್ಛ ಮಾಡಬಹುದು. ಎರಡು ವಿಧಾನದಲ್ಲು ಈ ಬರ್ನರ್ ಅನ್ನು 2 ಗಂಟೆಗೂ ಹೆಚ್ಚು ಕಾಲ ನೆನೆಸಿಡಬೇಕು.
ಬಳಿಕ ಯಾವುದಾದರು ಲಿಕ್ವಿಡ್ ತೆಗೆದುಕೊಂಡು ಬರ್ನರ್ ಮೇಲೆ ಹಚ್ಚಿ ಒಂದು ಬ್ರಷ್‌ನಿಂದ ಚೆನ್ನಾಗಿ ಉಜ್ಜಿ ನಂತರ ತೊಳೆಯಬೇಕು. ಹೀಗೆ ಮಾಡಿದರೆ ಬರ್ನರ್‌ನಲ್ಲಿರುವ ಜಿಡ್ಡು, ಕಸ ತೆಗೆಯಬಹುದು. ಹೀಗೆ ಮಾಡೋದ್ರಿಂದ ಸಣ್ಣದಾಗಿ ಉರಿಯುವ ಬರ್ನರ್‌ನಿಂದ ಮುಕ್ತಿ ಪಡೆಯಬಹುದು.



Click it and Unblock the Notifications
