Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಕಬ್ಬಿಣದ ಕಾವಲಿಗೆ ತುಕ್ಕು-ಜಿಡ್ಡು ಹಿಡಿದರೆ ಏನು ಮಾಡಬೇಕು? ಕ್ಲೀನ್ ಮಾಡೋ ಟಿಪ್ಸ್ ಇದು!
ನೀವು ಮನೆಯಲ್ಲಿ ದೋಸೆ, ಚಪಾತಿ ಮಾಡಲು ಕಬ್ಬಿಣದ ಕಾವಲಿಯನ್ನು ಬಳಸುವುದು ಕಾಮನ್. ಈ ಕಾವಲಿಗಳು ನಿಮಗೂ ಉತ್ತಮ. ಏಕೆಂದರೆ ಕಬ್ಬಿಣದ ಕಾವಲಿಗಳನ್ನು ಬಳಸಿ ಮಾಡುವ ಅಡುಗೆ ಬಹಳ ರುಚಿಕರವೂ ಹೌದು. ಹಾಗೆ ಕಬ್ಬಿಣಾಂಶ ನಿಮ್ಮ ದೇಹಕ್ಕೆ ಅಗತ್ಯ ಅಂಶಗಳಲ್ಲಿ ಒಂದಾಗಿದೆ. ಆದ್ರೆ ಕಬ್ಬಿಣದ ನಮ್ಮ ದೇಹಕ್ಕೆ ಬಹಳ ಮುಖ್ಯ.
ಆದ್ರೆ ಕಬ್ಬಿಣದ ಕಾವಲಿಯನ್ನು ನಿತ್ಯ ಬಳಸದೆ ಇದ್ದರೂ ವಾರದಲ್ಲಿ ಒಮ್ಮೆಯಾದರೂ ನೀವು ಬಳಸುತ್ತೀರಿ. ಆದ್ರೆ ಈ ಕಾವಲಿಗೆ ಹೆಚ್ಚು ಎಣ್ಣೆ ಹಾಕುವುದರಿಂದ ಜಿಡ್ಡು ಹಿಡಿಯುವುದು ಸಾಮಾನ್ಯ. ಆದನ್ನು ತೆಗೆಯುವುದು ಸುಲಭವವಾಗಿರುವುದಿಲ್ಲ. ದೀರ್ಘಕಾಲದ ಬಳಕೆಯಿಂದಾಗಿ ಕಬ್ಬಿಣದ ಪಾತ್ರೆಗಳು ತುಕ್ಕು ಹಿಡಿಯಬಹುದು ಅಥವಾ ಮಸುಕಾಗಬಹುದು.

ಆದ್ರೆ ಈ ಜಿಡ್ಡು ತೆಗೆಯುವುದು ಅಷ್ಟು ಸುಲಭವಲ್ಲ. ಏಕೆಂದರೆ ಬಹುದಿನಗಳ ಬಳಕೆಯಿಂದ ಈ ಜಿಡ್ಡು ಗಟ್ಟಿಯಾಗುತ್ತದೆ. ಆದ್ರೆ ನೀವು ಎಷ್ಟೇ ಉಜ್ಜಿ ತೊಳೆದರು ಕೂಡ ಇದು ನಿವಾರಣೆ ಆಗೋದಿಲ್ಲ. ಹಾಗಾದ್ರೆ ಜಿಡ್ಡು ಹಿಡಿದ ಈ ಕಬ್ಬಿಣದ ಕಾವಲಿಯನ್ನು ಸ್ವಚ್ಛಗೊಳಿಸುವುದು ಹೇಗೆ ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಉಪ್ಪು ಮತ್ತು ನಿಂಬೆಹಣ್ಣಿನ ಮಿಶ್ರಣ
ನೀವು ಉಪ್ಪು ಮತ್ತು ನಿಂಬೆಹಣ್ಣನ್ನು ಬಳಸಿ ಪಾತ್ರೆಯಿಂದ ತುಕ್ಕು ಮತ್ತು ಜಿಡ್ಡು ತೆಗೆಯಬಹುದು. ಮೊದಲು ತುಕ್ಕು ಅಥವಾ ಜಿಡ್ಡು ಹಿಡಿದ ಪಾತ್ರೆಯನ್ನು ಒಲೆ ಮೇಲೆ ಇಟ್ಟು ಸ್ವಲ್ಪ ಬಿಸಿ ಮಾಡಬೇಕು. ನಂತರ ಮೇಲೆ ಉಪ್ಪನ್ನು ಸಿಂಪಡಿಸಬೇಕು. ಹಾಗೆ ಮೇಲೆ ನಿಂಬೆಹಣ್ಣಿನಿಂದ ಚೆನ್ನಾಗಿ ಉಜ್ಜಬೇಕು. ಹೀಗೆ ಮಾಡೋದ್ರಿಂದ ತುಕ್ಕು ಹಾಗೂ ಜಿಡ್ಡು ಪರಿಣಾಮಕಾರಿಯಾಗಿ ತೆಗೆಯಬಹುದು. ಹೀಗೆ ನಿಂಬೆ ಉಪ್ಪು ಹಚ್ಚಿ 15ರಿಂದ 20 ನಿಮಿಷ ಹಾಗೆಯೇ ಬಿಡಿ. ಅನಂತರ ನೀರಿನಿಂದ ತೊಳೆದು ನೋಡಿ. ಇದರಿಂದ ಜಿಡ್ಡು, ತುಕ್ಕು ನಿವಾರಣೆಯಾಗಲಿದೆ.
ವಿನೆಗರ್ ಮತ್ತು ಅಡುಗೆ ಸೋಡಾ ಮಿಶ್ರಣ
ತುಕ್ಕು ಹಾಗೂ ಜಿಡ್ಡು ಹಿಡಿರುವ ಪಾತ್ರೆಯನ್ನು ಅಥವಾ ಕಾವಲಿಯನ್ನು ಸ್ವಚ್ಛಗೊಳಿಸಲು ನೀವು ವಿನೆಗರ್ ಮತ್ತು ಅಡುಗೆ ಸೋಡಾವನ್ನು ಬಳಸಬಹುದು. ಒಂದು ಬೌಲ್‌ಗೆ ವಿನೆಗರ್ ಹಾಕಿಕೊಳ್ಳಿ. ಹಾಗೆ ಒಂದು ಚಮಚ ಅಡುಗೆ ಸೋಡಾವನ್ನು ಸೇರಿಸಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಪ್ಯಾನ್‌ನ ಸಂಪೂರ್ಣ ಮೇಲ್ಮೈಗೆ ಹಚ್ಚಿ 10-15 ನಿಮಿಷಗಳ ಕಾಲ ಬಿಡಿ. ನಂತರ ಹಳೆಯ ಸ್ಕ್ರಬ್ ಬ್ರಷ್ ಅಥವಾ ಸ್ಟೀಲ್ ಉಣ್ಣೆಯಿಂದ ಚೆನ್ನಾಗಿ ಸ್ಕ್ರಬ್ ಮಾಡಿ. ಇದು ಪ್ಯಾನ್‌ನಿಂದ ಯಾವುದೇ ಜಿಡ್ಡನ್ನು ಸುಲಭವಾಗಿ ತೆಗೆದುಹಾಕುತ್ತದೆ.
ಹುಣಸೆ ಹುಳಿ ಮತ್ತು ಈನೋ
ತುಕ್ಕು ಮತ್ತು ಜಿಡ್ಡು ನಿವಾರಣೆಗೆ ಹುಣಸೆ ಹುಳಿ ಬಹಳ ಉಪಕಾರಿ. ಒಂದು ಬೌಲ್‌ನಲ್ಲಿ ಹುಣಸೆಹುಳಿಯನ್ನು ಹಾಕಿ ನೆನೆಸಿಕೊಂಡು ಅದರ ಹುಳಿ ತೆಗೆದುಕೊಳ್ಳಿ. ಹಾಗೆ ಅದಕ್ಕೆ ಒಂದು ಪ್ಯಾಕ್ ಈನೋ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 10 ನಿಮಿಷ ಬಿಟ್ಟು ಈ ಮಿಶ್ರಣವನ್ನು ತುಕ್ಕು ಹಿಡಿದ ಅಥವಾ ಜಿಡ್ಡಿನ ಪಾತ್ರೆಯ ಮೇಲೆ ಹಾಕಿ ಹಾಗೆಯೇ ಬಿಡಿ. 10 ನಿಮಿಷ ಬಿಟ್ಟು ಅನಂತರ ಬ್ರಷ್‌ನಿಂದ ಚೆನ್ನಾಗಿ ಉಜ್ಜಿ ನಂತರ ನೀರಿನಿಂದ ತೊಳೆದರೆ ಜಿಡ್ಡು ತುಕ್ಕು ನಿವಾರಣೆಯಾಗಲಿದೆ.
ಲಿಕ್ವಿಡ್‌ನಲ್ಲಿ ನೆನೆಸಿಡಿ
ತುಕ್ಕು ಜಿಡ್ಡು ಬಂದ ಪಾತ್ರೆಯನ್ನು ಒಂದೇ ಬಾರಿಗೆ ತೊಳೆಯಲು ಸಾಧ್ಯವಿಲ್ಲ. ಹೀಗಾಗಿ ಅದನ್ನು ನೀವು ಮಾರುಕಟ್ಟೆಯಲ್ಲಿ ಸಿಗುವಂತಹ ಯಾವುದಾದರು ಲಿಕ್ವಿಡ್ ಬಳಸಿಕೊಂಡು ಪಾತ್ರೆ ಮೇಲೆ ಹಾಕಿ ನಂತರ ನಿಧಾನಕ್ಕೆ ಉಜ್ಜಿಕೊಂಡು ಹಾಗೆಯೆ ನೀರಿನಲ್ಲಿ ನೆನೆಸಿಡಬೇಕು. ಹೀಗೆ 2 ದಿನ ಇಟ್ಟು ಬಳಿಕ ತೊಳೆದರೆ ಜಿಡ್ಡು ನಿವಾರಣೆಯಾಗಲಿದೆ.



Click it and Unblock the Notifications
