Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
Kitchen Tips: ಮನೆಯ ಕನ್ನಡಿ, ಸ್ವಿಚ್ ಬಾಕ್ಸ್ ಕ್ಲೀನ್ ಮಾಡೋದು ಹೇಗೆ? ಈ ಟ್ರಿಕ್ಸ್ ಬಳಸಿ
ನಾವು ಮನೆಯಲ್ಲಿ ಸುಲಭವಾಗಿ ಮಾಡುವಂತಹ ಕೆಲಸವನ್ನು ಕಷ್ಟಕರವಾಗಿ ಬಹಳ ಸಮಯ ವ್ಯಯಿಸಿ ಮಾಡುತ್ತಿರುತ್ತೇವೆ, ಏಕೆಂದರೆ ಸುಲಭವಾಗಿ ಹೇಗೆ ಮಾಡಬೇಕು ಎಂಬುದು ನಮಗೆ ತಿಳಿದಿರುವುದಿಲ್ಲ. ಕೆಲವೊಂದು ಎಷ್ಟೊಂದು ಸುಲಭದ ಉಪಾಯ ಆಗಿರುತ್ತೆ ಅಂದರೆ ನಾವು ಅದನ್ನು ಒಮ್ಮೆ ಮಾಡಿದರೆ ಸಮಯ ಉಳಿತಾಯ ಆಗುವುದರಿಂದ ಹಿಡಿದು ಬಹಳ ಬೇಗ ಕೆಲಸ ಮಾಡಿ ಮುಗಿಸುತ್ತೇವೆ ಇದಕ್ಕೆ ಹೆಚ್ಚು ಶ್ರಮದ ಅಗತ್ಯವೂ ಬೀಳುವುದಿಲ್ಲ.
ನಾವು ಸಾಮಾಜಿಕ ಜಾಲತಾಣದಲ್ಲಿ ಹಲವು ರೀತಿಯ ಹ್ಯಾಕ್ಸ್ ವಿಡಿಯೋ ನೋಡಿರುತ್ತೇವೆ. ಕಿಚನ್ ಹ್ಯಾಕ್ಸ್‌ಗಳು ಅದರಲ್ಲಿ ಪ್ರಮುಖವಾಗಿವೆ. ಕೆಲವೊಂದು ಉಪಾಯಗಳು ನಮ್ಮ ಕೆಲಸಗಳ ಕಡಿಮೆ ಮಾಡುತ್ತವೆ, ಸುಲಭವಾಗಿಸುತ್ತೆ. ಅಡುಗೆ ಮನೆಯಲ್ಲಿ ಎಷ್ಟು ಸಮಯ ಇದ್ದರೂ ಕೆಲಸ ಮುಗಿಯಲ್ಲ ಅನ್ನೋದು ಹಲವರ ದೂರಾಗಿರುತ್ತೆ, ಇದಕ್ಕೆ ಕಾರಣ ನಾವು ಸರಿಯಾದ ಕ್ರಮದಲ್ಲಿ ಕೆಲಸ ಮಾಡುತ್ತಿಲ್ಲ ಎಂದರ್ಥ.

ಹಾಗಾದ್ರೆ ನಾವಿಂದ ಅಡುಗೆ ಮನೆಯ ಕೆಲಸ ಬಹುಬೇಗ ಮುಗಿಯುಂತಹ ಉಪಾಯಗಳನ್ನು ಟ್ರೈ ಮಾಡಿ ನೋಡೋಣ. ಇದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡುವುದು ಹೇಗೆ ಅನ್ನೋದನ್ನು ತಿಳಯೋಣ.
ಬಾತ್ ರೂಮ್ ನಲ್ಲಿಗೆ ಹಿಡಿದಿರುವ ಗಡಸು ನೀರಿನ ಕಲೆ
ಎಲ್ಲರ ಮನೆ ನಲ್ಲಿಯೂ ಬಿಳಿ ಬಣ್ಣದ ಪೌಡರ್‌ನಂತರ ಅಂಶದಿಂದ ಆವೃತವಾಗುವುದನ್ನು ನಾವು ನೋಡಿರಬಹುದು. ಇದು ನೀರಿನಲ್ಲಿರುವ ವಿವಿಧ ರಾಸಾಯನಿಕಗಳಿಂದ ಉಂಟಾಗುತ್ತದೆ. ಈ ನೀರು ಕುಡಿಯಲು ಯೋಗ್ಯ ಅಲ್ಲವೇ ಅಲ್ಲ. ಹೀಗಿರುವಾಗ ನಲ್ಲಿಗೆ ಹಿಡಿದ ಈ ಕಲೆಯನ್ನು ತೆಗೆಯುವುದು ಮತ್ತೊಂದು ಸಾಹಸವಾಗಿರುತ್ತದೆ. ಏಕೆಂದರೆ ಇದರಲ್ಲಿ ನಿಕಲ್, ಮೆಗ್ನೀಷಿಯಂ, ಕ್ಲೋರಿನ್, ಕ್ಯಾಲ್ಸಿಯಂನಂತಹ ಅಂಶ ಹೆಚ್ಚಾಗಿರುತ್ತದೆ.
ಹಾಗಾದ್ರೆ ಇದನ್ನು ಸುಲಭವಾಗಿ ತೆಗೆಯುವುದು ಹೇಗೆ?, ಇದಕ್ಕೆ ನೀವು ಬಳಸದೆ ಇರುವ ಒಂದು ಟೂತ್ ಬ್ರಷ್ ತೆಗೆದುಕೊಂಡು, ಅದಕ್ಕೆ ಸ್ವಲ್ಪ ಪೇಸ್ಟ್ ಹಚ್ಚಿಕೊಂಡು ನಲ್ಲಿಯನ್ನು ಚೆನ್ನಾಗಿ ಉಜ್ಜಬೇಕು ಒಂದು ಬಾರಿ ತೊಳೆಯುವುದರಿಂದ ಈ ಕಲೆ ಹೋಗದಿದ್ದರೆ ಮತ್ತೆ ಅದಕ್ಕೆ ನಿಂಬೆ ಹಣ್ಣಿನ ರಸ ಹಾಕಿ 5 ನಿಮಿಷ ಬಿಟ್ಟು ಮತ್ತೆ ಪೇಸ್ಟ್‌ಗೆ ಸ್ವಲ್ಪ ಉಪ್ಪು ಹಾಕಿಕೊಂಡು ಉಜ್ಜಿ ನೋಡಿ.
ಸ್ವಿಚ್ ಬಾಕ್ಸ್
ನಾವು ಮನೆಯಲ್ಲಿ ಸ್ವಿಚ್ ಬಾಕ್ಸ್ ಸಾಕೆಟ್‌ಗಳನ್ನು ನಿತ್ಯ ಬಳಸುತ್ತೇವೆ. ಹೀಗಾಗಿ ಅವು ಕಪ್ಪು ಕಲೆ ಹಿಡಿದಿರುತ್ತದೆ. ಆದ್ರೆ ಇದನ್ನು ನೀರು ಹಾಕಿ ಕ್ಲೀನ್ ಮಾಡುವುದು. ಬರಿಗೈನಲ್ಲಿ ಮುಟ್ಟುವುದು ಅಪಾಯಕಾರಿ. ಹೀಗಾಗಿ ನಾವು ಸಹ ಕಲೆಗಳಿದ್ದರೂ ಹಾಗೆ ಬಿಟ್ಟಿರುತ್ತೇವೆ. ಆದ್ರೆ ಇದನ್ನು ಕ್ಲೀನ್ ಮಾಡುವುದು ತುಂಬಾನೆ ಸುಲಭ.
ಒಂದು ನಿಂಬೆ ಹಣ್ಣಿನ ರಸವನ್ನು ಬೌಲ್‌ಗೆ ಹಿಂಡಿ ಅದಕ್ಕೆ ಉಪ್ಪು ಮಿಕ್ಸ್ ಮಾಡಿಕೊಂಡು ಕಿವಿಗೆ ಹಾಕುವಂತಹ ಇಯರ್ ಬಡ್ಸ್ ತೆಗೆದುಕೊಂಡು ಚೆನ್ನಾಗಿ ಸ್ವಿಚ್ ಬೋರ್ಡ್‌ಗೆ ಈ ಮಿಶ್ರಣ ಹಚ್ಚಿ. ಹಾಗೆ ಕಲೆ ಇರುವ ಕಡೆ ಉಜ್ಜಿಕೊಳ್ಳಿ. ಬಳಿಕ ಒಣಗಿದ ಬಟ್ಟೆಯಿಂದ ಒರೆಸಿದರೆ ಕ್ಲೀನ್ ಆಗಲಿದೆ.
ಕನ್ನಡಿ ಕ್ಲೀನ್ ಮಾಡುವುದು ಹೇಗೆ?
ನಾವು ಮನೆಯಲ್ಲಿ ಬಳಸುವ ಕನ್ನಡಿ ಕಲೆಯಾಗಿ ಮುಖವೇ ಕಾಣದ ರೀತಿ ಬದಲಾಗಿರುತ್ತದೆ. ಬರಿ ನೀರು ಹಾಕಿ ಕ್ಲೀನ್ ಮಾಡಿದರೆ ಸ್ವಲ್ಪ ಹೊತ್ತಿಗೆ ಮತ್ತೆ ಅದೇ ರೀತಿ ಮಂಕಾಗುತ್ತದೆ. ಒಂದು ಕ್ಲಾಸ್‌ನಲ್ಲಿ ಟೂತ್‌ಪೇಸ್ಟ್, ಸೋಪಿನ ಪುಡಿ, ಸೋಡಾ ಪುಡಿ ಹಾಕಿ ಮಿಕ್ಸ್ ಮಾಡಿ. ಅದನ್ನು ಒಂದು ಟೂತ್ ಬ್ರಚ್‌ಗೆ ಹಚ್ಚಿಕೊಂಡು ಕನ್ನಡಿಗೆ ಹಚ್ಚಿಕೊಳ್ಳಿ. ಬಳಿಕ ಪಾತ್ರೆ ಉಜ್ಜುವ ಸ್ಪಾಂಜಿನಿಂದ ಒರೆಸಿಕೊಳ್ಳಿ, ಬಳಿಕ ನೀರಿನಿಂದ ಕನ್ನಡಿ ತೊಳೆಯಿರಿ. ಈಗ ಕನ್ನಡಿ ಹೊಳಪು ಬರುತ್ತದೆ.



Click it and Unblock the Notifications
