Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಪರ್ಫೆಕ್ಟ್ ಆಗಿ ಮೊಟ್ಟೆ ಬೇಯಿಸುವ ಸೀಕ್ರೆಟ್ ಇದು..! ಒಡೆಯಲ್ಲ..ಸಿಪ್ಪೆ ಹಿಡಿಯಲ್ಲ..!!
ನಾವು ಮನೆಯಲ್ಲಿ ಮೊಟ್ಟೆಯನ್ನು ಬಳಸಿ ಎಷ್ಟೊಂದು ಖಾದ್ಯಗಳ ಮಾಡುತ್ತೇವೆ. ಮೊಟ್ಟೆ ನಮ್ಮ ಆರೋಗ್ಯಕ್ಕೂ ಬಹಳ ಉತ್ತಮವಾದ ಖಾದ್ಯವಾಗಿದೆ. ಒಮೆಗಾ 3 ಕೊಬ್ಬಿನಾಂಶ ಇರುವ ಹಾಗೂ ಅತ್ಯಂತ ಕಡಿಮೆ ಬೆಲೆಯಲ್ಲಿ ಹೆಚ್ಚು ಪ್ರೋಟಿನ್ ಸಿಗುವಂತ ಏಕೈಕ ಆಹಾರ ಮೊಟ್ಟೆಯಾಗಿದೆ. ದಿನಕ್ಕೊಂದು ಮೊಟ್ಟೆ ಸವಿದರೆ ದೇಹದ ಅಗತ್ಯ ಪ್ರೋಟಿನ್ ಸಿಗುತ್ತದೆ. ಇದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ.
ಇನ್ನು ಮೊಟ್ಟೆಯನ್ನು ಕರಿ ಮಾಡಿ, ಸಾಂಬಾರ್, ಫ್ರೈ, ಆಮ್ಲೆಟ್ ಮಾಡಿ ಸವಿಯುವುದು ನೋಡಿರುತ್ತೇವೆ. ಆದ್ರೆ ಬೇಯಿಸಿದ ಮೊಟ್ಟೆಯಲ್ಲಿ ಯಾವುದೇ ಪ್ರೋಟಿನ್ ವ್ಯರ್ಥವಾಗದೆ ಸಂಪೂರ್ಣ ಲಾಭ ಪಡೆಯಬಹುದು. ಹೀಗಾಗಿ ದಿನ ಒಂದೊಂದು ಬೇಯಿಸಿದ ಮೊಟ್ಟೆ ಸವಿಯುವುದು ಬಹಳ ಉತ್ತಮ. ಹಾಗೆ ನಾವು ಮೊಟ್ಟೆಯನ್ನು ಬೇಯಿಸಿಯು ಕೂಡ ಒಂದಲ್ಲಾ ಒಂದು ಖಾದ್ಯ ಮಾಡುತ್ತಿರುತ್ತೇವೆ. ಅದರಲ್ಲೂ ಬಿರಿಯಾನಿ, ಮೊಟ್ಟೆ ಮಸಾಲೆ ಕರಿ, ಗ್ರೀನ್ ಮೊಟ್ಟೆ ಕರಿ, ಹೀಗೆ ಹತ್ತಾರು ಖಾದ್ಯಗಳನ್ನು ಮಾಡವಾಗ ಬೇಯಿಸಿದ ಮೊಟ್ಟೆ ಬಳಸುತ್ತೇವೆ.

ಆದ್ರೆ ನಾವು ಮೊಟ್ಟೆಯನ್ನು ಬೇಯಿಸುವಾಗ ಮಾಡುವ ತಪ್ಪಿನಿಂದಾಗಿ ಮೊಟ್ಟೆಗಳು ಒಡೆದುಕೊಳ್ಳುವುದು, ಒಂದು ಭಾಗ ಹೊರಗೆ ಬರುವುದು ಆಗುತ್ತದೆ. ಎಷ್ಟೇ ಸಣ್ಣ ಉರಿ ಇಟ್ಟು ಬೇಯಿಸಿದಾಗಲು ಕಲೆವೊಮ್ಮೆ ಮೊಟ್ಟೆಗಳು ಒಡೆದು ಹೋಗುವುದನ್ನು ನಾವು ನೋಡಬಹುದು. ಇದರಿಂದ ನೀರಿನಲ್ಲಿ ಮೊಟ್ಟೆ ಒಡೆದು ಹಾಳಾಗುತ್ತದೆ. ಅದು ಸವಿಯಲು ರುಚಿ ಇರುವುದಿಲ್ಲ.
ಕೆಲವೊಮ್ಮೆ ಮೊಟ್ಟೆಯೊಳಗೆ ನೀರು ಸಹ ತುಂಬಿಕೊಳ್ಳುತ್ತದೆ. ಮತ್ತೆ ಕೆಲವರು ಬಾರಿ ಮೊಟ್ಟೆಗಳು ಬೆಂದರೂ ಅದರ ಸಿಪ್ಪೆ ಬಿಡಿಸಲಾಗದೆ ಪರದಾಡಬೇಕಾಗುತ್ತದೆ. ಹಾಗೆ ಸಿಪ್ಪೆ ಬಿಡಿಸುವಾಗಲೂ ಒಂದಿಷ್ಟು ಮೊಟ್ಟೆ ಸಿಪ್ಪೆಯ ಜೊತೆಗೆ ಕಸದ ಬುಟ್ಟಿ ಸೇರುತ್ತವೆ. ಇದು ಎಲ್ಲರ ಮನೆಯ ಸಾಮಾನ್ಯ ಸಮಸ್ಯೆ ಎನ್ನಬಹುದು.
ಆದ್ರೆ ಇದ್ಯವ ಸಮಸ್ಯೆಯೂ ಇಲ್ಲದಂತೆ ಸುಲಭವಾಗಿ ಬಿಳಿ ಬಿಳಿಯ ಇಡಿ ಇಡಿಯಾದ ಮೊಟ್ಟೆಯನ್ನು ಬೇಯಿಸಿ ಸವಿಯಬಹುದು. ಹಾಗಾದ್ರೆ ನೀರಿನಲ್ಲಿ ಒಡೆಯದಂತೆ ಸಿಪ್ಪೆ ಸುಲಭವಾಗಿ ಬಿಡಿಸುವಂತೆ ಮೊಟ್ಟೆ ಬೇಯಿಸುವುದು ಹೇಗೆ? ಯಾವ ಟ್ರಿಕ್ಸ್ ಬಳಸಬೇಕು ಎಂಬುದನ್ನು ನಾವಿಂದು ತಿಳಿಯೋಣ.
ಮೊದಲು ಒಂದು ಬೌಲ್‌ಗಳಿಗೆ ಮೊಟ್ಟೆಗಳನ್ನು ಹಾಕಿ ಅದಕ್ಕೆ ತಣ್ಣೀರು ಹಾಕಿಕೊಂಡು ಕಲ್ಲು ಉಪ್ಪು ಹಾಕಿ ಉಪ್ಪು ನೀರಿನಲ್ಲಿ ಕರಗಿದ ಬಳಿಕ ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ಒಂದೊಂದೇ ಮೊಟ್ಟೆಯನ್ನು ತೆಗೆದಿಟ್ಟುಕೊಳ್ಳಿ. ಈಗ ಒಂದು ಪಾತ್ರೆಯನ್ನ ಒಲೆ ಮೇಲೆ ಇಟ್ಟು ನಂತರ ಮೊಟ್ಟೆಯನ್ನ ಮೊದಲಿ ನಿಧಾನವಾಗಿ ಇಟ್ಟು ಬಳಿಕ ನೀರು ಹಾಕಬೇಕು.
ಮೊಟ್ಟೆಗಳು ನೀರಿನಲ್ಲಿ ಮುಳುಗುವಷ್ಟು ನೀರು ಹಾಕಿ ಬಳಿಕ ಒಂದು ಸ್ಪೂನ್ ಉಪ್ಪು ಹಾಕಿಕೊಳ್ಳಬೇಕು. ಉರಿಯನ್ನು ಹೆಚ್ಚಿಗೆ ಇಡಬೇಡಿ ಹಾಗೆ ಹಣ್ಣ ಉರಿಯನ್ನೂ ಇಡಬೇಡಿ, ಮಧ್ಯಮ ಉರಿಯಲ್ಲಿ ಬೇಯಲು ಬಿಡಿ. ಮುಚ್ಚಳ ಮುಚ್ಚಿ ಬೇಯಲು ಬಿಡಿ. ನಿಧಾನ ಉರಿಯಲ್ಲಿ ಕುದಿಬರಲು ಬಿಡಿ. ಒಂದು ಕುದಿ ಬರುತ್ತಿದೆ ಎಂದು ತಿಳಿದಾಗ ಒಂದು ಸಣ್ಣ ಈರುಳ್ಳಿಯನ್ನು ಸಿಪ್ಪೆ ಸಮೇತ ಹೆಚ್ಚಿ ಈ ಪಾತ್ರೆಗೆ ಹಾಕಿಕೊಳ್ಳಿ.
ಕೆಲವರು ಸಿಪ್ಪೆಯನ್ನು ಹಾಕಿಕೊಳ್ಳುತ್ತಾರೆ, ಈ ಸಿಪ್ಪೆ ಹಾಕಿದಾಗ ನೀರು ಹಾಗೂ ಮೊಟ್ಟೆ ಕೂಡ ಬ್ರೌನ್ ಕಲರ್‌ಗೆ ಬದಲಾಗುತ್ತದೆ. ಈರುಳ್ಳಿಯ ಸಿಪ್ಪೆಯಲ್ಲಿನ ಅಂಶಗಳು ಮೊಟ್ಟೆಯ ಸಿಪ್ಪೆಗಳು ಬಹುಬೇಗ ಬಿಡುವಂತೆ ಮಾಡುತ್ತವೆ. ಮೊಟ್ಟೆಗಳು ಬೆಂದ ಬಳಿಕ ಇಳಿಸಿಕೊಂಡು ಹಾಗೆಯೇ ಬಿಡಿ.
2 ನಿಮಿಷ ಬಿಟ್ಟ ಬಳಿಕ ಬೆಂದಿರುವ ಮೊಟ್ಟೆಯನ್ನು ಆ ಪಾತ್ರೆಯಿಂದ ತೆಗೆದು ತಣ್ಣೀರಿನಲ್ಲಿ ಹಾಕಿ ಇಡಬೇಕು. 3 ನಿಮಿಷದ ಬಳಿಕ ಮೊಟ್ಟೆಯ ಸಿಪ್ಪೆಯನ್ನು ನಿಧಾನವಾಗಿ ಬಿಡಿಸಿಕೊಳ್ಳಿ. ಈ ರೀತಿ ಮಾಡುವುದರಿಂದ ಮೊಟ್ಟೆ ಒಡೆಯುವುದಿಲ್ಲ, ಸಿಪ್ಪೆಯನ್ನು ಕೂಡ ಸುಲಭವಾಗಿ ಬಿಡಿಸಿಕೊಳ್ಳಬಹುದು. ನೀವು ಕೂಡ ಮನೆಯಲ್ಲಿ ಈ ರೀತಿ ಟ್ರೈ ಮಾಡಿ ನೋಡಿ.



Click it and Unblock the Notifications
