Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಎಷ್ಟು ದಿನ ನಾವು ಫ್ರಿಡ್ಜ್‌ನಲ್ಲಿ ಮೀನು ಇಡಬಹುದು..? ಹೇಗೆ ಇಡಬೇಕು ಗೊತ್ತಾ?
ನಮ್ಮ ಮನೆಯಲ್ಲಿ ಫ್ರಿಡ್ಜ್ ಇದ್ದರೆ ಅದರಲ್ಲಿ ಎಲ್ಲಾ ವಸ್ತುಗಳನ್ನು ಕೂಡ ತುಂಬುತ್ತೇವೆ. ಸಣ್ಣ ಪುಟ್ಟ ವಸ್ತುಗಳಿಂದ ಹಿಡಿದು ವರ್ಷಾನುಗಟ್ಟಲೆ ಅದೇ ಫ್ರಿಡ್ಜ್‌ನಲ್ಲಿಟ್ಟ ವಸ್ತುಗಳನ್ನು ಬಳಸುತ್ತೇವೆ. ತರಕಾರಿಗಳು, ಹಣ್ಣುಗಳು, ಹಾಲು, ಮೊಸರು, ತಿಂಡಿಗಳಿ, ದಿನಸಿ ವಸ್ತುಗಳು ಸೇರಿ ಸಿಕ್ಕ ಸಿಕ್ಕ ವಸ್ತುಗಳನ್ನು ಕೂಡ ಫ್ರಿಡ್ಜ್‌ನಲ್ಲಿಡುತ್ತೇವೆ.
ಆದ್ರೆ ನಮಗೆ ಫ್ರಿಡ್ಜ್‌ನಲ್ಲಿ ಯಾವ ವಸ್ತುವನ್ನು ಎಷ್ಟು ದಿನ ಇಡಬಹುದು. ಯಾವ ವಸ್ತು ಇಡಬಾರದು?, ಯಾವ ವಸ್ತುಗಳನ್ನು ಇಟ್ಟರೆ ಅಪಾಯವಿದೆ ಎಂಬುದು ನಮಗೆ ತಿಳಿದಿರುವುದಿಲ್ಲ. ಇನ್ನು ಕೆಲವೊಂದು ವಸ್ತುಗಳನ್ನು ಫ್ರಿಡ್ಜ್‌ನಲ್ಲಿಟ್ಟರು ಕೂಡ ಹಾಳಾಗುವುದನ್ನು ನಾವು ನೋಡಿದ್ದೇವೆ. ಹೀಗೆ ಕೆಲವು ವಸ್ತು ಫ್ರಿಡ್ಜ್‌ನಲ್ಲಿಟ್ಟರೂ ಕೂಡ ಅವುಗಳಿಗೆ ಒಂದು ವ್ಯಾಲಿಡಿಟಿ ಇದ್ದೇ ಇರುತ್ತೆ.

ಇಂತಹ ವಸ್ತುಗಳ ಪೈಕಿ ನಾವಿಂದು ಮೀನನ್ನು ಎಷ್ಟು ದಿನಗಳ ಕಾಲ ಫ್ರಿಡ್ಜ್‌ನಲ್ಲಿಡಬಹುದು ಎಂಬುದನ್ನು ತಿಳಿಯೋಣ. ಮೀನನ್ನು ಹೆಚ್ಚಿನವರು ಅಂದೇ ಫ್ರೈ ಮಾಡಿ, ಸಾರು ಮಾಡಿ ಸವಿಯುತ್ತಾರೆ. ಆದ್ರೆ ಕೆಲವೊಂದು ಬಾರಿ ನಾವು ಮೀನನ್ನು ಫ್ರಿಡ್ಜ್‌ನಲ್ಲಿ ಇಡಬೇಕಾದ ಅನಿವಾರ್ಯತೆ ಬರಬಹುದು.
ಆದ್ರೆ ಕೆಲವರು ಒಮ್ಮೆ ಹೆಚ್ಚು ಮೀನು ತಂದು ಫ್ರಿಡ್ಜ್‌ನಲ್ಲಿಟ್ಟು ನಿತ್ಯ ನಾಲ್ಕೈದು ಮೀನು ಫ್ರೈ ಮಾಡಿಕೊಂಡು ಸವಿಯುತ್ತಾರೆ. ಆದ್ರೆ ನಿಮಗೆ ಗೊತ್ತಾ ಫ್ರಿಡ್ಜ್‌ನಲ್ಲಿ ನಾವು ಎಷ್ಟು ದಿನ ಮೀನು ಇಡಬಹುದು? ಎಷ್ಟು ದಿನ ಇಟ್ಟರೆ ಮೀನು ಕೆಡುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರೆಡಿ ಮಾಡದೆ ಇರುವ ಮೀನುಗಳು
ಅಂದರೆ ನೀವು ಮಾರುಕಟ್ಟೆಯಿಂದ ನೇರವಾಗಿ ತಂದಿರುವ ಮೀನು. ಇದನ್ನು ಕತ್ತರಿಸಿ ಒಳಗಿನ ಅನಗತ್ಯ ಅಂಗಗಳನ್ನು ತೆಗೆದಿರುವುದಿಲ್ಲ. ಅಂತಹ ಮೀನುಗಳು ಫ್ರಿಡ್ಜ್‌ನಲ್ಲಿ ಎರಡು ದಿನ ಇಡಬಹುದಂತೆ. ಹೀಗೆ 2ಕ್ಕಿಂತ ಹೆಚ್ಚು ದಿನ ಇಟ್ಟರೆ ಮೀನು ಮೇಲಿನಿಂದ ನೋಡಲು ಚೆನ್ನಾಗಿ ಕಾಣುತ್ತದೆ. ಆದರೆ ಒಳಗೆ ಅದು ರಾಸಾಯನಿಕ ಕ್ರಿಯೆಗೆ ಒಳಗಾಗಿ ಆಹಾರವಾಗಿ ಸವಿಯಲು ಉತ್ತಮವಾಗಿರದೆ ಹಾಳಾಗುತ್ತದೆ. 5 ದಿನಗಳ ಬಳಿಕ ಸಂಪೂರ್ಣ ಹಾಳಾಗುತ್ತವೆ.
ಕತ್ತರಿಸಿ ಇಟ್ಟ ಮೀನುಗಳು
ಇನ್ನು ಮಾರ್ಕೆಟ್‌ನಿಂದ ಕತ್ತರಿಸಿ ತಂದಿರುವ ಮೀನುಗಳಿಗೂ ಕಡಿಮೆ ಜೀವಿತಾವಧಿ ಏಕೆಂದರೆ ಕತ್ತರಿಸಿರುವ ಮೀನುಗಳಿಗೆ ನೀವು ಉಪ್ಪು ಹಾಗೂ ಅರಶಿನ ಪುಡಿ ಹಾಕಿ ಇಟ್ಟರೆ 3 ದಿನ ಇಡಬಹುದು, ಅದಕ್ಕೂ ಹೆಚ್ಚಿನ ದಿನ ಮೀನನ್ನು ಇಟ್ಟರೆ ಅದು ಮೆತ್ತಗಾಗಲು ಆರಂಭಿಸುತ್ತದೆ. ಇಲ್ಲವೆ ಅದು ಕಹಿಯಾಗಿರುತ್ತದೆ.
ಬೇಯಿಸಿ ಇಟ್ಟ ಮೀನುಗಳು
ನೀವು ಈಗಾಗಲೇ ಮೀನುಗಳನ್ನು ಬೇಯಿಸಿದ್ದೀರಿ ಎಂದುಕೊಳ್ಳಿ. ಈ ಮೀನುಗಳು 5 ದಿನ ಇಡಬಹುದು. ಏಕೆಂದರ ನೀವು ಒಮ್ಮೆ ಈ ಮೀನುಗಳನ್ನು ಬೇಯಿಸಿದ ಬಳಿಕ ಅದರ ಮೇಲೆ ಬ್ಯಾಕ್ಟೀರಿಯಾಗಳು ಬೆಳೆಯಲು ಸಮಯಾವಕಾಶ ಹೆಚ್ಚು ಬೇಕಾಗುತ್ತದೆ. ಹೀಗಾಗಿ ಬೇಯಿಸಿದನ್ನು ಹೆಚ್ಚು ದಿನ ಇಡಬಹುದು.
ಹಾಗೆ ಮೀನನ್ನು 0 ಡಿಗ್ರಿ ಸೆಲ್ಸಿಯಸ್‌ನಲ್ಲಿ ನೀವು ಇಟ್ಟರೆ ಸುಮಾರು 1 ವಾರಗಳಿಗೂ ಹೆಚ್ಚು ಕಾಲ ಇಡಬಹುದು. ಹಾಗೆ ಕ್ಲೊಸ್ ಮಾಡಿದ ಐಸ್ ಮಾಕ್ಸ್ ಆಗಿದ್ದರೆ ಇನ್ನು ಹೆಚ್ಚಿನ ದಿನಗಳ ಕಾಲ ಇಡಬಹುದು. ನೀವು ಯಾವ ಸೆಲ್ಸಿಯಸ್‌ನಲ್ಲಿ ಮೀನನ್ನು ಶೇಖರಿಸಿಡುತ್ತಿದ್ದೀರಿ ಎಂಬುದು ಅದರ ಅವಧಿಯನ್ನು ನಿರ್ಧರಿಸುತ್ತದೆ.
ಆದ್ರೆ ಫ್ರೀಜರ್‌ನಲ್ಲಿ ನಾವು ಫ್ರಿಡ್ಜ್‌ಗಿಂತ ಹೆಚ್ಚು ದಿನಗಳ ಕಾಲ ಮೀನನ್ನು ಇಡಬಹುದು. ಫ್ರೀಜರ್‌ನಲ್ಲಿ ಸೆಲ್ಸಿಯಸ್ 0 ಡಿಗ್ರಿಗಿಂತ ಕಡಿಮೆ ಇರುತ್ತದೆ ಹೀಗಾಗಿ ಹೆಚ್ಚು ದಿನ ವಸ್ತುಗಳು ಫ್ರೀಜರ್‌ನಲ್ಲಿ ಉಳಿಯುತ್ತವೆ.
ಫ್ರಿಡ್ಜ್‌ನಲ್ಲಿಟ್ಟ ಮೀನು ಹಾಳಾದರೆ ತಿಳಿಯುವುದು ಹೇಗೆ?
- ಅತಿಯಾದ ವಾಸನೆ ಬರುವುದು
- ಮೀನು ಹಸಿ ಅಥವಾ ಕಪ್ಪು ನೀಲಿ ಬಣ್ಣಕ್ಕೆ ತಿರುಗುವುದು
- ಮೀನಿನ ಮೇಲೆ ಲೋಳೆಯಂತಹ ರಚನೆ ಬರುವುದು
- ಮೀನಿನ ಮಾಂಸ ಮೃದುವಾಗುವುದು



Click it and Unblock the Notifications

