Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕಿಚನ್ ಟಿಪ್ಸ್: ಅಡುಗೆ ಮನೆ ಕೆಲಸ ಸುಲಭ ಮಾಡುವ ಟ್ರಿಕ್ಸ್ ಇಲ್ಲಿವೆ..!
ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಎನ್ನುವುದು ಎಲ್ಲರ ಬಯಕೆ ಆಸೆಯಾಗಿರುತ್ತೆ. ಹೀಗಾಗಿ ಗೃಹಿಣಿಯರು ಮನೆ ಕ್ಲೀನ್ ಆಗಿ ಇಟ್ಟುಕೊಳ್ಳಬೇಕು ಅಂತಲೇ ಹಲವು ಗಂಟೆಗಳ ಕಾಲ ಶ್ರಮ ವಹಿಸುತ್ತಾರೆ. ಗುಡಿಸುವುದು, ಒರೆಸುವುದು ಎಲ್ಲಾ ವಸ್ತುಗಳನ್ನೂ ಕ್ರಮವಾಗಿ ಸೂಕ್ತ ಸ್ಥಳದಲ್ಲಿ ಇಡುವುದು. ಅದನ್ನು ಧೂಳು ಹಿಡಿಯದಂತೆ ಸ್ವಚ್ಚ ಮಾಡುವ ಕಾರ್ಯ ಆಗಾಗ ಮಾಡುತ್ತಲೇ ಇರುತ್ತಾರೆ.
ಆದ್ರೆ ಈ ಕೆಲಸ ಮಾಡಲು ಬಹಳ ಸಮಯ ಹಿಡಿಯುವುದರಿಂದ ಗೃಹಿಣಿಯರ ಪಾಲಿಗೆ ಮನೆ ಸ್ವಚ್ಛ ಮಾಡುವುದೊಂದು ಸವಾಲಿನ ಕೆಲಸ ಆಗಿರುತ್ತೆ. ಆದ್ರೆ ಈ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇರುತ್ತೆ. ಬೇರೆಲ್ಲಾ ಕೆಲಸದ ನಡುವೆ ಈ ಮನೆ ಕ್ಲೀನ್ ಮಾಡುವುದು, ಹಾಗೆ ಕಡಿಮೆ ಸಮಯದಲ್ಲಿ ಮನೆಯ ಕೆಲಸ ಮಾಡಿಕೊಂಡು ಎಲ್ಲಾವನ್ನು ನಿಭಾಯಿಸುವುದು ಕಷ್ಟವಾಗಿಬಿಡುತ್ತೆ.

ಆದ್ರೆ ನಾವು ಕಡಿಮೆ ಸಮಯದಲ್ಲಿ ಸುಲಭವಾಗಿ ಮನೆಯನ್ನು ಅತ್ಯಂತ ಸುಲಭವಾಗಿ ನಿಭಾಯಿಸುವ ಕೆಲವೊಂದು ಟಿಪ್ಸ್ ಹಾಗೂ ಟ್ರಿಕ್ಸ್ ಅನ್ನು ತಿಳಿದುಕೊಳ್ಳೋಣ.
ಸಿಂಕ್ ಕ್ಲೀನ್ ಮಾಡುವ ಸುಲಭ ಉಪಾಯ
ಪ್ರತಿಯೊಬ್ಬ ಗೃಹಿಣಿಯರು ಕೂಡ ಮನೆಯಲ್ಲಿ ಸಿಂಕ್ ಕ್ಲೀನ್ ಮಾಡುವುದೆ ದೊಡ್ಡ ಕೆಲಸವಾಗಿರುತ್ತೆ, ಏಕೆಂದರೆ ಈ ಸಿಂಕ್ ಕ್ಲೀನ್ ಮಾಡುವುದು ಸುಲಭವಾಗಿರುವುದಿಲ್ಲ. ಹಲವು ಬಾರಿ ಸೋಪಿನ ಪುಡಿ ಹಾಕಿ ತೊಳೆದರು ಸಿಂಕ್ ಕ್ಲೀನ್ ಆಗುವುದಿಲ್ಲ. ಹಾಗಾದ್ರೆ ಸುಲಭವಾಗಿ ಸಿಂಕ್ ಮಾಡಲು ಈ ರೀತಿ ಮಾಡಿ ನೋಡಿ.
ಮೊದಲು ಸಿಂಕ್‌ಗೆ ಬೇಕಿಂಗ್ ಪೌಡರ್ ಹಾಕಿಕೊಳ್ಳಿ. ನಂತರ ಒಂದು ನಿಂಬೆ ಹಣ್ಣು ಕತ್ತರಿಸಿಕೊಂಡು ಸಿಂಕ್ ತುಂಬ ಅದರ ರಸವನ್ನು ಹಾಕಿ. ಬಳಿಕ ಯಾವುದಾದರು ಪಾತ್ರೆ ತೊಳೆಯುವ ಲಿಕ್ವಿಡ್ ಇದ್ದರೆ ಅದನ್ನು ಸ್ವಂಜಿನ ಮೇಲೆ ಹಾಕಿಕೊಂಡು ಸ್ವಲ್ಪ ನೀರು ಚಿಮುಕಿಸಿ ಚೆನ್ನಾಗಿ ಉಜ್ಜಿಕೊಳ್ಳಿ. ನಮತರ ನೀರು ಹಾಕಿ ತೊಳೆಯಿರಿ. ಇದು ಸಿಂಕ್ ಕ್ಲೀನ್ ಮಾಡುವ ಸುಲಭದ ವಿಧಾನವಾಗಿದೆ. ಸಿಂಕ್‌ನಲ್ಲಿ ಎಂತಹ ಕಠಿಣ ಕಲೆ ಇದ್ದರೂ ಒಂದೆ ವಾಶ್‌ನಲ್ಲಿ ನಿವಾರಣೆಯಾಗುತ್ತದೆ.
ಗ್ಯಾಸ್ ಬರ್ನರ್ ಕ್ಲೀನ್ ಮಾಡುವುದು ಹೇಗೆ?
ಗ್ಯಾಸ್ ಬರ್ನರ್ ಕ್ಲೀನ್ ಮಾಡದಿದ್ದರೆ ಉರಿ ಸರಿಯಾಗಿ ಬರುವುದಿಲ್ಲ. ಹೀಗಾಗಿ ಅಡುಗೆ ತಡವಾಗುವುದು ಸರಿಯಾಗಿ ಉರಿ ಇಲ್ಲದಿರುವುದಕ್ಕೆ ಬರ್ನರ್ ಕ್ಲೀನ್ ಇಲ್ಲದಿರುವುದು ಕಾರಣವಾಗುತ್ತದೆ. ಹಾಗಾದ್ರೆ ಸುಲಭವಾಗಿ ಬರ್ನರ್ ಕ್ಲೀನ್ ಮಾಡುವುದು ಹೇಗೆ?
ಮೊದಲು ಬರ್ನರ್ ಅನ್ನು ಒಂದು ಪಾತ್ರೆಗೆ ಹಾಕಿ ಬರ್ನರ್ ಮುಚ್ಚುವಂತೆ ನೀರು ಹಾಕಿಕೊಳ್ಳಿ. ಬಳಿಕ ಇಂದು ನಿಂಬೆ ಹಣ್ಣು ಕತ್ತರಿಸಿ ಇದಕ್ಕೆ ಹಿಂಡಿಕೊಳ್ಳಿ. ನಂತರ ENO ಪುಡಿಯನ್ನು ಅದಕ್ಕೆ ಹಾಕಿ ಸ್ವಲ್ಪ ಹೊತ್ತು ಹಾಗೆಯೆ ಬಿಡಿ. ನಂತರ ಬರ್ನರ್ ಅನ್ನು ನೀರಿನಿಂದ ತೆಗೆದುಕೊಂಡು ಯಾವುದಾದರು ಲಿಕ್ವಿಡ್ ಬಳಸಿ ಚೆನ್ನಾಗಿ ತೊಳೆಯಿರಿ. ಇಷ್ಟಾದರೆ 5 ನಿಮಿಷದಲ್ಲಿ ಬರ್ನರ್ ಕ್ಲೀನ್ ಆಗುತ್ತದೆ.
ಕರಿ ಹಿಡಿದ ಪಾತ್ರೆ ಕ್ಲೀನ್ ಮಾಡುವುದು ಹೇಗೆ?
ಪಾತ್ರೆ ಕರಿ ಹಿಡಿದಾಗ ಅದನ್ನು ಕ್ಲೀನ್ ಮಾಡಲು ಬಹಳ ಸಮಯ ಹಿಡಿಯುತ್ತೆ. ಹಾಗಾದ್ರೆ ಇದನ್ನು ಕ್ಲೀನ್ ಮಾಡುವುದು ಹೇಗೆ? ಮೊದಲು ಒಂದು ಪಾತ್ರೆಯಲ್ಲಿ ನೀರು ಹಾಕಿ ಒಲೆ ಮೇಲೆ ಇಟ್ಟು ಅದಕ್ಕೆ ಮೂರು ಸ್ಪೂನ್ ಬಟ್ಟೆ ತೊಳೆಯುವ ಪುಡಿ ಹಾಕಿ ಕುದಿಯಲು ಬಿಡಿ. ನಂತರ ಒಂದು ಸ್ಪೂನ್‌ನಲ್ಲಿ ಉಪ್ಪು ಹಾಕಿ ಮಿಕ್ಸ್ ಮಾಡಿ ಹಾಗೆ 5 ನಿಮಿಷದ ಬಳಿಕ ಇದಕ್ಕೆ ಒಂದು ನಿಂಬೆ ಹಣ್ಣು ಹಿಂಡಿ ಕುದಿಯಲು ಬಿಡಿ. ಕುದಿಬಂದ ಬಳಿಕ ಒಲೆ ಆಫ್ ಮಾಡಿ.
ನಂತರ ಈ ನೀರನ್ನು ಕರಿ ಹಿಡಿದ ಪಾತ್ರೆಯ ಮೇಲೆ ಹಾಕಿಕೊಂಡು ಅದನ್ನು ಚೆನ್ನಾಗಿ ತೊಳೆಯಿರಿ. ಈ ನೀರಿನಲ್ಲಿ ಬಟ್ಟೆಯನ್ನ ಒರೆಸಿ ಕರಿ ಹಿಡಿದ ಪಾತ್ರೆಯನ್ನು ತೊಳೆದುಕೊಳ್ಳಿ. ಇದು ಕಿಚನ್ ಕ್ಲೀನ್ ಮಾಡುವಾಗ ನಿಮ್ಮ ಕೆಲಸ ಸುಲಭವಾಗಿಸುವ ಸುಲಭ ಕ್ರಮವಾಗಿದೆ.



Click it and Unblock the Notifications
