Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹೀಗೆ ಮಾಡಿದ್ರೆ ಸಕ್ಕರೆ ಡಬ್ಬಕ್ಕೆ ಇನ್ನೆಂದು ಇರುವೆ ಬರಲ್ಲ..!! ಇಲ್ಲಿವೆ ಕಿಚನ್ ಟಿಪ್ಸ್!
ಮನೆಯಲ್ಲಿ ಕೀಟಗಳು, ಹುಳುಗಳು, ಸೊಳ್ಳೆ, ನೊಣ, ಇರುವೆ ಹೀಗೆ ಒಂದಲ್ಲಾ ಒಂದು ಕೀಟ ಇರುವುದು ಸಹಜ. ಅದರಲ್ಲೂ ಅಡುಗೆ ಮನೆಯಲ್ಲಿ ಈ ಕೀಟಗಳ ಹಾವಳಿ ಹೆಚ್ಚಾಗಿಯೇ ಇರಲಿವೆ. ಅವುಗಳು ಎಲ್ಲೆಂದರಲ್ಲಿ ಸಿಕ್ಕ ಸಿಕ್ಕ ವಸ್ತುಗಳ ಮೇಲೆ ಇರುವುದು ನೋಡಬಹುದು. ಕೆಲವೊಮ್ಮೆ ಈ ಕೀಟಗಳೇ ದೊಡ್ಡ ತಲೆನೀವಾಗುತ್ತವೆ.
ಅದರಲ್ಲೂ ನಾವು ನಿತ್ಯ ಬಳಸುವ ವಸ್ತುಗಳಲ್ಲಿ ಈ ಕೀಟಗಳು ಸೇರಿಕೊಳ್ಳುತ್ತವೆ. ಅದರಲ್ಲೂ ಹೆಚ್ಚಾಗಿ ಇರುವೆಗಳು ಎಲ್ಲಾ ವಸ್ತುಗಳಲ್ಲೂ ಕಾಣಸಿಗುತ್ತವೆ. ಅನ್ನ, ಬೆಲ್ಲ, ಸಕ್ಕರೆ, ಸಿಹಿ ತಿಂಡಿಗಳು, ಹಾಲು, ಮೊಸರು ಹೀಗೆ ಯಾವುದೇ ಪದಾರ್ಥಗಳಿರಲಿ ಈ ಇರುವೆಗಳು ಅವುಗಳಿಗೆ ಮುತ್ತಿಕೊಳ್ಳುತ್ತವೆ. ಹಾಗೆ ಎಲ್ಲಾ ಪದಾರ್ಥಗಳಲ್ಲಿ ಬೀಳುವುದು ನಾವು ನೋಡಬಹುದು.

ಅದರಲ್ಲೂ ಇರುವೆಗಳು ಸಿಹಿ ಅಂದರೆ ಸಾಕು ಥಟ್ ಅಂತ ಎಲ್ಲಿದ್ದರೂ ಪ್ರತ್ಯಕ್ಷವಾಗಿಬಿಡುತ್ತವೆ. ಹಾಗೆ ನಾವು ನಿತ್ಯ ಬಳಸುವ ಸಕ್ಕರೆ ಡಬ್ಬಕ್ಕಂತು ಇರುವೆಗಳು ಯಾವಾಗಲು ಮುತ್ತಿರುತ್ತವೆ. ಡಬ್ಬದ ಒಳಗೆ ಹೋಗಲು ಆಗದಿದ್ದರೂ ಕೂಡ ಮುಚ್ಚಳದ ಮೇಲೆ ಇಲ್ಲವೆ ಅದರ ಸುತ್ತಲೂ ಹರಿದಾಡುತ್ತಿರುತ್ತವೆ. ಕೆಲವೊಮ್ಮೆ ಹೇಗಾದರು ಮಾಡಿ ಒಳಗೆ ನುಸುಳಿರುತ್ತವೆ.
ನಾವು ಗಡಿಬಿಡಿಯಲ್ಲಿ ನೋಡದೆ ಕಾಫಿ, ಟೀಗೆ ಅಥವಾ ಯಾವುದಾದರು ಪದಾರ್ಥಕ್ಕೆ ಸಕ್ಕರೆ ಹಾಕಿದರೆ ಅದರಲ್ಲೀ ಇರುವೆಗಳು ಇರುವುದು ಕಾಣಿಸುತ್ತವೆ. ಹಾಗೆ ಈ ಇರುವೆಗಳನ್ನು ನೀವು ಒಮ್ಮೆ ಓಡಿಸಿದರೆ ಮತ್ತೆ ಮತ್ತೆ ಬಂದು ಸೇರಿಕೊಳ್ಳುತ್ತವೆ. ನೀವು ಯಾವುದೇ ಉಪಾಯ ಮಾಡಿದ್ರೂ ಕೂಡ ಇರುವೆಗಳಿಂದ ಮುಕ್ತಿ ಪಡೆಯುವುದು ಸುಲಭದ ಮಾತಲ್ಲ.
ಇರುವೆಗಳು ಬರುತ್ತವೆ ಎಂದು ನೀವು ಹಲವು ಬಾರಿ ಸಕ್ಕರೆ ಡಬ್ಬಿಯನ್ನು ಬದಲಾಯಿಸಿರಬಹುದು. ಕೆಲವೊಮ್ಮೆ ಇದು ಫಲ ನೀಡಿರಲಿದೆ. ಆದ್ರೆ ಬಹುತೇಕ ಸಮಯದಲ್ಲಿ ಹೇಗಾದರು ಮಾಡಿ ಇರುವೆಗಳು ಸಕ್ಕರೆ ಡಬ್ಬಿಯೊಳಗೆ ನುಸುಳಿಯೇ ನುಸುಳಿರುತ್ತೆವೆ. ಹಾಗಾದ್ರೆ ನಾವಿಂದು ಈ ಇರುವೆಗಳಿಂದ ಪಾರಾಗುವುದು ಹೇಗೆ? ಸಕ್ಕರೆ ಡಬ್ಬಿಯನ್ನು ಇರುವೆ ಮುಕ್ತವಾಗಿಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಸಕ್ಕರೆ ಡಬ್ಬಕ್ಕೆ ಲವಂಗ ಹಾಕಿ
ಸಕ್ಕರೆ ಡಬ್ಬಿಯೊಳಗೆ ಇರುವೆ ಸೇರಬಾರದು ಎಂದರೆ ಅದರ ಒಳಗೆ ಮೂರರಿಂದ ನಾಲ್ಕು ಲವಂಗವನ್ನು ಹಾಕಿಡಿ. ಇದರ ಸುವಾಸನೆಯುಕ್ತ ಅಂಶ ಇರುವೆಗಳಿಗೆ ಸಹಿಸಲು ಆಗುವುದಿಲ್ಲ. ಹಾಗೆ ಟೀ ಕೂಡ ಲವಂಗದ ಸುವಾಸನೆಯಿಂದ ಕೂಡಿರುವುದು. ಆದ್ರೆ ಇರುವೆಗಳಂತು ಎಂದಿಗೂ ಈ ಲವಂಗ ಇದ್ದ ಕಡೆ ಸುಳಿಯುವುದಿಲ್ಲ.
ಬೋರಾಕ್ಸ್ ಪೌಡರ್ ಸಕ್ಕರೆ ಮಿಶ್ರಣ
ಅಂಗಡಿಗಳಲ್ಲಿ ಬೋರಾಕ್ಸ್ ಪೌಡರ್ ಸಿಗುತ್ತದೆ. ಒಂದು ಸ್ಪೂನ್ ಬೋರಾಕ್ಸ್ ಹಾಗೂ ಒಂದು ಸ್ಪೂನ್ ಸಕ್ಕರೆ ಹಾಕಿ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ ದ್ರಾವಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಇರುವೆಗಳ ಗೂಡು ಇರುವ ಕಡೆ ಅಥವಾ ಅವುಗಳು ಬರುವ ಕಡೆಗಳಲ್ಲಿ ಸಿಂಪಡಿಸಿದರೆ ಸಾಕು ಇನ್ನೆಂದು ಇರುವೆಗಳು ಬರುವುದಿಲ್ಲ.
ಚಕ್ಕೆ ಅಥವಾ ದಾಲ್ಚಿನ್ನಿ
ನೀವು ಅಡುಗೆಗೆ ಬಳಸುವ ಚಕ್ಕೆಯಲ್ಲಿ ಅತ್ಯಂತ ಗಾಢವಾದ ಸುವಾಸನೆ ಇರುತ್ತದೆ. ಇದನ್ನು ಸಕ್ಕರೆ ಡಬ್ಬದಲ್ಲಿ ಹಾಕಿ ಮಿಕ್ಸ್ ಮಾಡಿದರೆ ಮತ್ತೆಂದು ಈ ಇರುವೆಗಳು ಸಕ್ಕರೆ ಡಬ್ಬಕ್ಕೆ ಸುಳಿವುಯುವುದಿಲ್ಲ.
ವಿನೆಗರ್ ಲಿಂಬೆ ಹುಳಿ
ನೀವು ವಿನೆಗರ್ ಹಾಗೂ ನಿಂಬೆ ಹುಳಿಯ ಮಿಶ್ರಣ ಮಾಡಿ ಸಕ್ಕರೆ ಡಬ್ಬ ಇಡುವ ಸ್ಥಳವನ್ನು ಒಂದು ಹತ್ತಿ ಅಥವಾ ಬಟ್ಟೆಯಿಂದ ಒರೆಸಿಕೊಂಡು ಡಬ್ಬದ ಸುತ್ತ ಹನಿಯನ್ನು ಸಿಂಪಡಿಸಿ ಇಟ್ಟರೆ ಇನ್ನೆಂದು ಇರುವೆಗಳು ಆ ಕಡೆ ಸುಳಿಯುವುದೇ ಇಲ್ಲ.



Click it and Unblock the Notifications
