Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಕಟ್ಟಿಕೊಂಡ ಸಿಂಕ್ ಒಂದು ಮೊಟ್ಟೆ ಬಳಸಿ ಸರಿ ಮಾಡಿ..! ಇಲ್ಲಿದೆ ಸಿಂಪಲ್ ಟಿಪ್ಸ್..!
ಮನೆಯ ಅಡುಗೆ ಮನೆಯಲ್ಲಿ ಇರುವ ಸಿಂಕ್ ಒಂದಲ್ಲಾ ಒಂದು ಸಮಸ್ಯೆ ತರುತ್ತದೆ. ಕೆಲವೊಮ್ಮೆ ನೀರು ಹೋಗುವುದಿಲ್ಲ, ಲೀಕ್ ಆಗುವುದು, ನಿಧಾನವಾಗಿ ನೀರು ಹೊರಹೋಗುವುದು. ಕಸ ಇಲ್ಲದಿದ್ದರೂ ನೀರು ಕೆಳಗೆ ಹೋಗದೆ ನಿಂತಲ್ಲೆ ನಿಲ್ಲುವುದು, ಕಲೆಗಳಾಗುವುದು ಹೀಗೆ ಒಂದಲ್ಲಾ ಒಂದು ಸಮಸ್ಯೆಗೆ ಒಳಗಾಗುತ್ತಲೇ ಇರುತ್ತದೆ.
ಆದ್ರೆ ಇದೆಲ್ಲಾ ಸಮಸ್ಯೆಗಳಿಗಿಂತ ದೊಡ್ಡ ಸಮಸ್ಯೆ ಎಂದರೆ ಅದು ನೀರು ಕಟ್ಟಿಕೊಳ್ಳುವುದು. ಒಮ್ಮೆ ಸಿಂಕ್‌ನಲ್ಲಿ ನೀರು ಕಟ್ಟಿಕೊಳ್ಳಲು ಆರಂಭವಾದರೆ ತಲೆನೋವು ಆರಂಭವಾದಂತೆಯೇ ಸರಿ. ಏಕೆಂದರೆ ನಿತ್ಯ ಅಡುಗೆ ಮನೆಯಲ್ಲಿ ಪಾತ್ರೆಗಳು ಸೇರಿ ಎಲ್ಲಾ ವಸ್ತುಗಳನ್ನು ನಾವು ಸುಲಭವಾಗಿ ಅಲ್ಲಿಯೇ ತೊಳೆಯುತ್ತೇವೆ. ಒಮ್ಮೆ ನೀರು ತುಂಬಿಕೊಂಡರೆ ಈ ಕೆಲಸವೇ ದೊಡ್ಡ ಹಿಂಸೆ ತರುತ್ತವೆ.

ಹೀಗಾಗಿ ಸಿಂಕ್ ಕಟ್ಟಿಕೊಳ್ಳದಂತೆ ಬಹಳ ಜಾಗರೂಕತೆ ವಹಿಸಬೇಕಾಗುತ್ತದೆ. ಎಷ್ಟೇ ಜಾಗೃತೆ ವಹಿಸಿದರು ಕೆಲವೊಮ್ಮೆ ಸಿಂಕ್ ಕಟ್ಟಿಕೊಳ್ಳುತ್ತದೆ. ಸಿಂಕ್ ಪೈಪ್‌ನಲ್ಲಿ ಕಸಿ ಕಟ್ಟಿಕೊಂಡರೆ ಅದನ್ನು ತೆಗೆಯಲು ಪ್ಲಂಬರ್ ಬರಬೇಕಾಗುತ್ತದೆ, ನೀವು ಎಷ್ಟೇ ಪ್ರಯತ್ನ ಮಾಡಿದರೂ ಈ ಕಟ್ಟಿದ ಕಸ ತೆಗೆಯಲು ಆಗದು. ಆದರೆ ಪ್ಲಂಬರ್ ಒಮ್ಮೆ ಬಂದರೆ ಆತನಿಗೆ ದುಬಾರಿ ಶುಲ್ಕ ನೀಡಲೇಬೇಕು.
ಇದಿಷ್ಟೆ ಅಲ್ಲ ಮಾರುಕಟ್ಟೆಯಲ್ಲಿ ಹಲವು ರೀತಿ ವಸ್ತುಗಳು ಸಿಂಕ್ ಲೀಕೇಜ್, ಕಟ್ಟಿಕೊಳ್ಳುವುದನ್ನು ಸರಿ ಮಾಡಲು ಬಂದಿವೆ. ಆದ್ರೆ ಯಾವುದು ಸಹ ಸರಿಯಾಗಿ ಕೆಲಸ ಮಾಡೋದಿಲ್ಲ. ಆದ್ರೆ ನಾವಿಂದು ಕಟ್ಟಿದ ಸಿಂಕ್ ಅನ್ನು ಕ್ಷಣದಲ್ಲಿ ಹೇಗೆ ಸರಿ ಮಾಡಬಹುದು ಎಂಬುದನ್ನು ವಿಡಿಯೋ ಸಾಕ್ಷಿ ಮೂಲಕ ನಿಮಗೆ ತಿಳಿಸಲಿದ್ದೇವೆ.
ಈ ಸಿಂಕ್ ಕಟ್ಟಿಕೊಂಡರೆ ತೆರೆವು ಮಾಡಲು ಸಾಹಸ ಮಾಡುವ ಅಗತ್ಯವಿಲ್ಲ ಮನೆಯಲ್ಲೇ ಸಿಗುವ ವಸ್ತು ಬಳಸಿ ಸುಲಭವಾಗಿ ಸಿಂಕ್ ಸರಿ ಮಾಡಬಹುದು. ಹಾಗಾದ್ರೆ ಕಟ್ಟಿಕೊಂಡ ಸಿಂಕ್ ಸರಿ ಮಾಡುವುದು ಹೇಗೆ? ಯಾವ ವಸ್ತುಗಳ ಬಳಸಬೇಲು ಎಂಬುದನ್ನು ತಿಳಿದುಕೊಳ್ಳಿ.
ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಒಂದು ಮೊಟ್ಟೆಯನ್ನು ಒಡದು ಹಾಕಿಕೊಳ್ಳಿ. ಇದನ್ನು ಮಿಕ್ಸ್ ಮಾಡಬೇಡಿ, ಮೊಟ್ಟೆ ಒಡೆದು ಹಾಕಿ ಹಾಗೆಯೆ ಬಿಡಿ. ಇನ್ನೊಂದು ಗ್ಲಾಸ್‌ನಲ್ಲಿ ವಿನೆಗರ್ ಹಾಗೂ ಮತ್ತೊಂದು ಗ್ಲಾಸ್‌ನಲ್ಲಿ ಸ್ವಲ್ಪ ಬೇಕಿಂಗ್ ಸೋಡಾ ತೆಗೆದುಕೊಳ್ಳಿ. ಯಾವುದನ್ನು ಮಿಕ್ಸ್ ಮಾಡಬೇಡಿ ಹಾಗೆಯೆ ಬೇರೆ ಬೇರೆಯಾಗಿ ಇಡಿ.
ಈಗ ಒಡೆದುಕೊಂಡಿದ್ದ ಮೊಟ್ಟೆಯನ್ನು ಹಾಗೆಯೇ ಸಿಂಕ್‌ನಲ್ಲಿ ನೀರು ಹೀಗಲು ಇರುವ ಸ್ಥಳದಲ್ಲಿ ಹಾಕಿ. ಒಂದೆರಡು ನಿಮಿಷ ಬಿಟ್ಟು ಅದೇ ಜಾಗಕ್ಕೆ ಬೇಕಿಂಗ್ ಸೋಡಾ ಹಾಕಿಕೊಳ್ಳಿ. ಇದಾದ ಮೇಲೆ ಅದರ ಮೇಲೆ ವಿನೆಗರ್ ಅನ್ನು ಸುರಿಯಿರಿ. ವಿನೆಗರ್ ಹಾಕಿದ ತಕ್ಷಣ ಸಿಂಕ್‌ನಲ್ಲಿ ರಾಸಾಯನಿಕ ಕ್ರಿಯೆ ಉಂಟಾಗುತ್ತದೆ. ಸಿಂಕ್‌ನಲ್ಲಿ ನೊರೆ ಹೊರಡುತ್ತದೆ. ಈ ವೇಳೆ ನಿಮ್ಮ ಸಿಂಕ್ ಪೈಪ್‌ನಲ್ಲಿರುವ ಕಸವನ್ನು ಕರಗಿಸಲು ಆರಂಭಿಸುತ್ತದೆ.
ಕೆಲವೇ ನಿಮಿಷದಲ್ಲಿ ಸಿಂಕ್‌ನಲ್ಲಿರುವ ನೀರು ನಿಧಾನವಾಗಿ ಖಾಲಿಯಾಗಲು ಆರಂಭವಾಗುತ್ತದೆ. ಎಲ್ಲಾ ನೀರು ಖಾಲಿಯಾದ ಬಳಿಕ ಒಮ್ಮೆ ಸಿಂಕ್‌ಗೆ ನೀರು ಬಿಟ್ಟು ತೊಳೆದು ಬಿಡಿ. ಇಷ್ಟೇ ಸಿಂಪಲ್ ಟಿಪ್ಸ್ ಮೂಲಕ ಕಟ್ಟಿಕೊಂಡ ಸಿಂಕ್ ಸರಿ ಮಾಡಬಹುದು. ನಿಮ್ಮ ಮನೆಯಲ್ಲೂ ಸಿಂಕ್ ಕಟ್ಟಿಕೊಂಡಿದ್ದರೆ ಅಥವಾ ಈ ಟಿಪ್ಸ್ ಇಷ್ಟವಾದರೆ ಬೇರೆಯವರಿಗೂ ತಿಳಿಸಿ ನೋವು ಪ್ರಯೋಗ ಮಾಡಿ ನೋಡಿ.
ಈ ರೀತಿ ನಿಮಿಷದಲ್ಲಿ ಸಿಂಕ್ ಕ್ಲೀನ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದ್ದು ಭಾರೀ ಗಮನ ಸೆಳೆದಿದೆ. ಇಷ್ಟೊಂದು ಸುಲಭವಾಗಿ ಕಟ್ಟಿರುವ ಸಿಂಕ್ ಸರಿಪಡಿಸಬಹುದೇ ಎಂದು ನೋಡಿದವರು ಅಚ್ಚರಿ ಹೊರಹಾಕಿದ್ದಾರೆ.



Click it and Unblock the Notifications
