Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
Kitchen Hacks: ಸಿಂಕ್ ಕಟ್ಟಿಕೊಂಡರೆ ಈ ಟ್ರಿಕ್ಸ್ ಬಳಸಿ, ಥಟ್ ಅಂತ ರೆಡಿಯಾಗುತ್ತೆ!
ಅಡುಗೆ ಮನೆಯನ್ನು ಯಾವಾಗಲು ಶುದ್ಧವಾಗಿ ಕ್ಲೀನ್ ಆಗಿ ಹಾಗೆ ವ್ಯವಸ್ಥಿತ ರೀತಿಯಲ್ಲಿ ಇಟ್ಟುಕೊಳ್ಳುವುದು ಪ್ರತಿಯೊಬ್ಬ ಮಹಿಳೆಯ ಬಯಕೆ ಆಗಿರಲಿದೆ. ಹಾಗೆ ಇದಕ್ಕಾಗಿ ವಾರಕ್ಕೊಮ್ಮೆಯಾದರು ಅವರು ಇಡೀ ಅಡುಗೆ ಮನೆಯನ್ನು ಮತ್ತೆ ನೀಟಾಗಿ ಜೋಡಿಸುವುದು, ತೊಳೆಯುವುದು, ಒರೆಸುವುದು ಮಾಡುತ್ತಾರೆ. ಹಾಗೆ ಒಲೆ ಸೇರಿ ಕೆಲವೊಂದು ಪರಿಕರಗಳನ್ನು ಅವರು ಕ್ಲೀನ್ ಮಾಡುತ್ತಾ ಇರುವುದು ನೋಡಬಹುದು.
ಆದ್ರೆ ಅಡುಗೆ ಮನೆಯಲ್ಲಿ ಗೃಹಿಣಿಯರಿಗೆ ಯಾವಾಗಲು ಕಿರಿಕಿರಿ ಉಂಟು ಮಾಡುವ ಒಂದು ಅಂಶ ಅಂದರೆ ಅದು ಸಿಂಕ್. ಅಡುಗೆ ಮನೆಯಲ್ಲಿರುವ ಸಿಂಕ್ ಯಾವಾಗಲು ಶುದ್ಧವಾಗಿರಬೇಕು ಎಂದು ಅವರು ಪದೇ ಪದೇ ನೀರು ಹಾಕಿ, ಸೋಪಿನ ಪುಡಿ, ಲಿಕ್ವಿಡ್ ಹಾಕಿ ವಾಷ್ ಮಾಡುತ್ತಿರುತ್ತಾರೆ. ಹಾಗೆ ಹಲವು ಬಾರಿ ಸಿಂಕ್ ಅನ್ನು ಬಳಸಬೇಕಾಗುತ್ತದೆ. ಹೀಗಾಗಿ ಸಿಂಕ್ ಕ್ಲೀನ್ ಆಗಿ ಇಟ್ಟುಕೊಳ್ಳಲು ಮುಂದಾಗುತ್ತಾರೆ.

ಆದ್ರೆ ಈ ಸಿಂಕ್ ಯಾವಾಗಲು ಕಟ್ಟಿಕೊಳ್ಳುವುದು ಅಥವಾ ನೀರು ನಿಧಾನವಾಗಿ ಹೊರಹೋಗುವಂತಹ ಸಮಸ್ಯೆಗೆ ಒಳಗಾಗುತ್ತಲೇ ಇರುತ್ತದೆ. ನೀವು ಎಷ್ಟೇ ಕ್ಲೀನ್ ಮಾಡಿ ಇಟ್ಟರೂ ಅಥವಾ ಸಿಂಕ್ ಅಲ್ಲಿ ಬಿದ್ದ ಆಹಾರಗಳು ಕಸಗಳನ್ನು ತೆಗೆಯುತ್ತಿದ್ದರೂ ಕೂಡ ಸಿಂಕ್ ಆಗಾಗ ಕಟ್ಟಿಕೊಳ್ಳುವುದು ನೋಡಬಹುದು. ಸಿಂಕ್ ಪೈ್ ಮಾತ್ರವಲ್ಲದೆ ಅದರಿಂದ ನೀರು ಹೊರಹೋಗುವ ಜಾಗವ ಬಂದ್ ಆಗಿ ಸಮಸ್ಯೆ ತರುತ್ತದೆ.
ಕೆಲವೊಮ್ಮೆ ಸಿಂಕ್ ದಿಢೀರ್ ಬ್ಲಾಕ್ ಆಗುವ ಮೂಲಕ ಸಮಸ್ಯೆ ತಂದಿಡಲಿದೆ. ಇದು ಹಲವರಿಗೆ ಅಡುಗೆ ಕೆಲಸಗಳಿಗೆ ಅಡ್ಡಿ ಉಂಟು ಮಾಡಲಿದೆ. ನೀವು ಕಟ್ಟಿದ ಈ ಸಿಂಕ್ ಅನ್ನು ಸರಿಪಡಿಸಲು ಹಲವು ರೀತಿ ಹರಸಾಹಸ ಮಾಡಿರುತ್ತೀರಿ. ಕೋಲುಗಳಿಂದ, ಬ್ರಷ್‌ನಿಂದ ಸೇರಿ ಹಲವು ವಸ್ತುಗಳ ಬಳಸಿಕೊಂಡು ಸ್ವಚ್ಛಗೊಳಿಸಲು ಪ್ರಯತ್ನಿಸಿರಬಹುದು. ಆದ್ರೆ ನಾವಿಂದು ಸುಲಭ ಮಾರ್ಗದಲ್ಲಿ ಕಟ್ಟಿಕೊಂಡ ಸಿಂಕ್ ಅನ್ನು ತೆರವು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಹಾರ್ಪಿಕ್ ಅಡುಗೆ ಸೋಡಾ
ಸಿಂಕ್ ಕಟ್ಟಿದ್ದರೆ ಮೊದಲು ಕಟ್ಟಿರುವ ನೀರನ್ನು ಸಂಪೂರ್ಣವಾಗಿ ತೆಗೆದು ಹೋರಹಾಕಿ. ಸಿಂಕ್‌ನಲ್ಲಿ ನೀರು ಇಲ್ಲದಂತೆ ಮಾಡಿ ಈಗ ಒಂದು ಸ್ಪೂನ್ ಅಡುಗೆ ಸೋಡಾವನ್ನು ಸಿಂಕ್‌ನ ಮಧ್ಯದಲ್ಲಿ ಹೋಲುಗಳ ಬಳಿ ಹಾಕಿಕೊಳ್ಳಿ. ಅನಂತರ ಇದರ ಮೇಲೆ 2 ಸ್ಪೂನ್ ಹಾರ್ಪಿಕ್ ಹಾಕಿ 15 ನಿಮಿಷ ಬಿಡಬೇಕು. ಇದು ರಾಸಾಯನಿಕ ಕ್ರಿಯೆಗೆ ಒಳಗಾಗುತ್ತದೆ. ಈಗ ಇದರ ಮೇಲೆ ಬಿಸಿ ನೀರನ್ನು ಹಾಕಬೇಕು. ಕುದಿಬರುವ ನೀರು ಹಾಕಬೇಡಿ. ಇದರಿಂದ ಕೆಳಗಿನ ಸಿಂಕ್ ಪೈಪ್ ಸುಡಬಹುದು. ಹದ ಬಿಸಿ ಇರುವ ನೀರನ್ನು ಎತ್ತರದಿಂದ ಸುರಿಯಿರಿ. ಈ ರೀತಿ ಮಾಡಿದ್ರೆ ಕಟ್ಟಿರುವ ಸಿಂಕ್ ತೆರೆದುಕೊಳ್ಳುತ್ತದೆ.
ಖಾಲಿ ಬಾಟಲಿ ಪರಿಹಾರ
ಈಗ ಒಂದು ಲೀಟರ್ ಅಥವಾ ಅದಕ್ಕಿಂತ ದೊಡ್ಡ ಪ್ಲಾಸ್ಟಿಕ್ ಬಾಟಲಿ ತೆಗೆದುಕೊಳ್ಳಿ. ಅದಕ್ಕೆ ಅರ್ಧದಷ್ಟು ನೀರು ತುಂಬಿಕೊಂಡು ನಂತರ ಸಿಂಕ್ ಹೋಲ್‌ನಲ್ಲಿ ಮಧ್ಯಕ್ಕೆ ಹಿಡಿದು ಜೋರಾಗಿ ಪ್ರೆಸ್ ಮಾಡಬೇಕು. ಈ ರೀತಿ 3ರಿಂದ 4 ಬಾರಿ ಮಾಡಿ ನೋಡಿ. ಇದು ಗಾಳಿ ಮತ್ತು ನೀರು ಪ್ರಷರ್ ಅಲ್ಲಿ ಸಿಕ್ಕಿಕೊಂಡಿರುವ ಕಸ ತೆರವಾಗುತ್ತದೆ.
ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ನೀರು ಹಾಕಿ ಕುದಿಬರಲು ಬಿಡಿ. ನೀರು ಕುದಿಬರಲು ಆರಂಭಿಸಿದಾಗ ಅದಕ್ಕೆ 1 ಸ್ಪೂನ್ ಅಡುಗೆ ಸೋಡಾ ಹಾಕಿ ಬಳಿಕ 1 ಸ್ಪೂನ್ ಉಪ್ಪು ಸಹ ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ಇದರಿಂದ ತಯಾರಾದ ಮಿಶ್ರಣವನ್ನು ಸಿಂಕ್‌ನಲ್ಲಿ ಹಾಕಿ. ಇದು ಗಟ್ಟಿಯಾದ ಕಸವನ್ನು ಕರಗುವಂತೆ ಮಾಡಲಿದೆ.



Click it and Unblock the Notifications
