Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಥಟ್ ಅಂತ ನಿಮಿಷದಲ್ಲಿ ಬೆಳ್ಳುಳ್ಳಿ ಸಿಪ್ಪೆ ಬಿಡಿಸಿ..! ಈ ವಿಡಿಯೋ ವೈರಲ್!
ನೀವು ಅಡುಗೆ ಮನೆಯ ಕೆಲಸಗಳು ಬಹಳ ಸುಲಭವಾಗಿ ಮಾಡಿ ಮುಗಿಸಬೇಕು ಎಂದುಕೊಳ್ಳುತ್ತೀರಿ, ಈಗಂತು ಪ್ರತಿಯೊಂದು ಕೆಲಸಕ್ಕೂ ಒಂದೊಂದು ಗ್ಯಾಜೆಟ್ ಬಂದು ಬಿಟ್ಟಿದೆ. ತರಕಾರಿ ಕತ್ತರಿಸೋದು ಗಂಟೆಗಳ ಕಾಲ ತಗುಲುತ್ತದೆ ಎಂಬ ಆರೋಪಗಳ ನಡುವೆ ಈಗ ಸಣ್ಣಪುಟ್ಟ ವಸ್ತುಗಳನ್ನು ಕತ್ತರಿಸಿಲು ವಸ್ತುಗಳು ಬಂದಿವೆ. ನಿಮಿಷದಲ್ಲಿ ತರಕಾರಿಗಳ ಹೆಚ್ಚಿಬಿಡುತ್ತದೆ.
ಇನ್ನು ಪಾತ್ರೆ ತೊಳೆಯಲು ಸಹ ಡಿಷ್ ವಾಷರ್‌ಗಳು, ಕಸ ಗುಡಿಸಲು ವ್ಯಾಕ್ಯೂಮ್ ಕ್ಲೀನರ್‌ಗಳು, ನೆಲ ಒರೆಸುವ ವಸ್ತುಗಳು, ಹೀಗೆ ನಿತ್ಯದ ಕೆಲಸಗಳು ಸುಲಭವಾಗಲು ಸಮಯ ಉಳಿಸಲು ಒಂದಿಷ್ಟು ಯಂತ್ರಗಳು ಮಾರುಕಟ್ಟೆಯಲ್ಲಿವೆ. ಹೊಸ ಹೊಸ ವಸ್ತುಗಳು ಬರುತ್ತಲೇ ಇವೆ. ಊಟ, ತಿಂಡಿ ಮಾಡಲು, ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತದೆ.

ಈ ಹೊಸ ಹೊಸ ವಿಧಾನಗಳನ್ನು ಗೃಹಿಣಿಯರು ಬಹಳ ಬೇಗ, ಬಹಳ ಅಚ್ಚುಕಟ್ಟಾಗಿ ಅಳವಡಿಸಿಕೊಳ್ಳುತ್ತಾರೆ. ಹಾಗೆ ಅಡುಗೆ ಮನೆಯಲ್ಲಿ ಸುಲಭವಾಗಿ ಅಡುಗೆ ಮಾಡಲು ಹಾಗೂ ಕೆಲಸ ಮಾಡಲು ಹಲವು ಟ್ರಿಕ್ಸ್‌ಗಳನ್ನು ಅವರು ಕಲಿಯಲು ಇಷ್ಟಪಡುತ್ತಾರೆ. ನಾವೀಗ ಆನ್‌ಲೈನ್‌ನಲ್ಲಿ ಇಂತಹ ಸಾವಿರಾರು ಟ್ರಿಕ್ಸ್ ವಿಡಿಯೋಗಳ ನೋಡಬಹುದು. ಕೆಲವೊಂದು ನಿತ್ಯದ ಕೆಲಸಕ್ಕೆ ಬಹಳ ಉಪಕಾರಿಯಾಗಿರುವುದನ್ನು ಸಹ ನಾವು ಗಮನಿಸಬಹುದು.
ಈಗೊಂದು ಇಂತಹದ್ದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಬೆಳ್ಳುಳ್ಳಿ ಸಿಪ್ಪೆಯನ್ನು ಸುಲಭವಾಗಿ ತೆಗೆಯುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ. ನಾವು ಸಹ ಮನೆಯಲ್ಲಿ ಅಡುಗೆ ಮಾಡುವಾಗ ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆಯಲು ಒಂದಿಷ್ಟು ಸಮಯ ತೆಗೆದುಕೊಂಡಿರಬಹುದು. ಇಲ್ಲವೆ ಬೆಳ್ಳುಳ್ಳಿ ಸಿಪ್ಪೆ ತೆಗೆಯುವಾಗ ಬೆಳ್ಳುಳ್ಳಿ ನಷ್ಟಕ್ಕೂ ಕಾರಣವಾಗಿರಬಹುದು.
ಆದ್ರೆ ಈ ವಿಡಿಯೋದಲ್ಲಿ ಸುಲಭವಾಗಿ ಅಂದರೆ ಕ್ಷಣ ಮಾತ್ರದಲ್ಲಿ ಅದರ ಸಿಪ್ಪೆ ತೆಗೆದು ಬಳಸಲು ಯೋಗ್ಯವನ್ನಾಗಿ ಮಾಡುವುದನ್ನು ನಾವು ನೋಡಬಹುದು. ಈ ವಿಡಿಯೋ ನೋಡಿದ ಮಂದಿ ಬೆಳ್ಳುಳ್ಳಿ ಸಿಪ್ಪೆ ತೆಗೆಯುವುದು ಇಷ್ಟೊಂದು ಸುಲಭವಾ ಎಂದು ಪ್ರಶ್ನೆ ಹಾಕಿಕೊಂಡಿದ್ದಾರೆ. ನಾವು ನಿತ್ಯ ಮನೆಯಲ್ಲಿ ಅಡುಗೆಗೆ ಬಳಸು ಬೆಳ್ಳುಳ್ಳಿ ಸಿಪ್ಪೆ ತೆಗೆಯಬೇಕಾದರೆ ಒಂದೊಂದು ಬಾರಿ ಒಂದೊಂದು ವಿಧಾನದಲ್ಲಿ ತೆಗೆದಿರುವತ್ತೇವೆ.
ಕೆಲವೊಮ್ಮೆ ನೆಲದಲ್ಲಿಟ್ಟು ಜಜ್ಜುವುದು, ಪ್ಲಾಸ್ಟಿಕ್‌ಗೆ ಹಾಕಿ ಚೆನ್ನಾಗಿ ಉಜ್ಜುವುದು, ಕಲ್ಲಿನಿಂದ ಜಜ್ಜುವುದು ಹೀಗೆ ಹತ್ತಾರು ವಿಧಾನಗಳ ಮೂಲಕ ಬೆಳ್ಳುಳ್ಳಿ ಸಿಪ್ಪೆ ತೆಗೆಯುತ್ತೇವೆ. ಆದರೆ ಈ ವೇಳೆ ಎದುರಾಗುವ ಬಹುದೊಡ್ಡ ಸಮಸ್ಯೆ ಅಂದ್ರೆ ಬೆಳ್ಳುಳ್ಳಿಯ ಜೊತೆಗೆ ಅದರ ಸಿಪ್ಪೆಯೂ ಸೇರಿಕೊಳ್ಳುವುದು. ಬೆಳ್ಳುಳ್ಳಿ ಸಿಪ್ಪೆಯಿಂದ ಯಾವುದೇ ಹಾನಿ ಇಲ್ಲಿದಿದ್ದರೂ ಅದು ಬಳಕೆ ಯೋಗ್ಯವಲ್ಲ ಅಷ್ಟೆ. ಏಕೆಂದರೆ ನಾವು ಬೆಳ್ಳುಳ್ಳಿಯನ್ನು ತೊಳೆದು ಅಡುಗೆಗೆ ಬಳಸುವುದಿಲ್ಲ. ಹೀಗಾಗಿ ಅದರ ಸಿಪ್ಪೆಯನ್ನು ಅಡುಗೆಗೆ ಬಳಸದಿರುವುದೇ ಉತ್ತಮ.
ಹೀಗಾಗಿ ಬೆಳ್ಳುಳ್ಳಿ ಸಿಪ್ಪೆಯನ್ನು ಸುಲಭವಾಗಿ ತೆಗೆಯಲು ಇಲ್ಲೊಂದು ವಿಡಿಯೋದಲ್ಲಿ ತೋರಿಸಲಾಗಿದೆ. ಬೆಳ್ಳುಳ್ಳಿ ಸಿಪ್ಪೆಯನ್ನು ಬಿಡಿಸಲೆಂದೇ ಒಂದು ಸಣ್ಣ ಚಮುಟ ಹಿಡಿದು ಬೆಳ್ಳುಳ್ಳಿಯ ತಳೆದಲ್ಲಿ ಗಡ್ಡೆಯನ್ನು ಬಿಡಿಸಿಕೊಳ್ಳುತ್ತಾರೆ, ನಂತರ ಒಂದೊಂದೇ ಸಿಪ್ಪೆಯನ್ನು ಬಾಳೆಹಣ್ಣಿನ ಸಿಪ್ಪೆ ಬಿಡಿಸಿದಂತೆ ಬಿಡಿಸಿ ಬೆಳ್ಳುಳ್ಳಿಯನ್ನು ನೀರಿಗೆ ಹಾಕುತ್ತಿರುವುದು ನೋಡಬಹುದು. ಈ ವಿಡಿಯೋವನ್ನ Kendall Sherelle Murray (@kendall.s.murray) ಎಂಬ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಈ ವಿಡಿಯೋ ಹಂಚಿಕೊಂಡ ಬಳಿಕ ಸುಮಾರು 1.3 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸುದ್ದಾರೆ. ಹಾಗೆ ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಇದು ಬೆಳ್ಳುಳ್ಳಿ ಬಿಡಿಸುವ ಸುಲಭದ ವಿಧಾನ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಹಾಗೆ ಈ ವಿಡಿಯೋವನ್ನ ಇತರರಿಗೂ ಹಂಚಿಕೊಂಡಿದ್ದಾರೆ. ನೀವು ಸಹ ಬೆಳ್ಳುಳ್ಳಿ ಸಿಪ್ಪೆ ತೆಗೆಯಲು ಈ ವಿಧಾನವನ್ನು ಬಳಸಿ ನೋಡಿ.



Click it and Unblock the Notifications