Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಫ್ರಿಡ್ಜ್‌ನಲ್ಲಿರುವ ಜಿರಳೆ ಓಡಿಸೋದು ತುಂಬಾನೆ ಸುಲಭ..! ಮನೆಯಲ್ಲೇ ಇದೆ ಮದ್ದು..!
ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇದ್ದರೆ ಎಲ್ಲಾ ಆಯಾಮದಿಂದಲೂ ನಿಮ್ಮ ಅನುಕೂಲಕ್ಕೆ ಬಂದಿರುತ್ತೆ, ನಿಮ್ಮ ಮನೆಯಲ್ಲಿ ಉಳಿದ ಎಲ್ಲಾ ವಸ್ತುಗಳು ಕೊನೆಯದಾಗಿ ಫ್ರಿಡ್ಜ್ ಸೇರುತ್ತವೆ. ಈಗ ಎಂತಹ ಮಧ್ಯಮವರ್ಗದ ಕುಟುಂಬದವರು ಕೂಡ ಫ್ರಿಡ್ಜ್ ಹೊಂದಿರುತ್ತಾರೆ. ದಿನಸಿ, ಹಾಲು, ಮೊಸರು ಸೇರಿ ಯಾವುದೇ ವಸ್ತು ಹಾಳಾಗಬಾರದು ಎಂದು ಮನೆಯಲ್ಲಿ ಬಳಸುತ್ತಾರೆ.
ಹೆಚ್ಚಿನದಾಗಿ ನಾವು ತರಕಾರಿಗಳು ಹಾಳಾಗದಂತೆ ಇಡಲು ಫ್ರಿಡ್ಜ್ ಬಳಸುವುದೇ ಹೆಚ್ಚು, ಇದು ಬಿಟ್ಟರೆ ಅಳಿದುಳಿದ ಸಾರು, ಪಲ್ಯ, ತಿಂಡಿ ಹೀಗೆ ಏನನ್ನಾದರು ಇಡುತ್ತಿರುತ್ತೇವೆ. ಇನ್ನು ಫ್ರಿಡ್ಜ್ ಒಮ್ಮೆ ಖಾಲಿ ಮಾಡಿ ಅದನ್ನು ಸ್ವಚ್ಛ ಮಾಡುವುದು ಅಂದ್ರೆ ಯಾರಿಗಾದರು ದೊಡ್ಡ ಸವಾಲು ಇದ್ದಂತೆ. ಏಕೆಂದರೆ ಫ್ರಿಡ್ಜ್ ಒಳಗಿರುವ ಎಲ್ಲಾ ವಸ್ತುಗಳ ತೆಗೆದು ಮತ್ತೆ ಜೋಡಿಸುವುದು ತುಂಬ ಕಷ್ಟದ ಕೆಲಸ.

ಹೀಗಾಗಿ ಜನ ಫ್ರಿಡ್ಜ್ ಕ್ಲೀನ್ ಮಾಡುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ ಫ್ರಿಡ್ಜ್‌ನಲ್ಲಿ ಜಿರಳೆಗಳು ಹುಟ್ಟಿಕೊಳ್ಳುತ್ತವೆ. ಫ್ರಿಡ್ಜ್‌ನಲ್ಲಿ ಸಣ್ಣ ಪುಟ್ಟ ಆಹಾರ ವಸ್ತುಗಳನ್ನು ತಿಂದು ಅವು ಫ್ರಿಡ್ಜ್ ಅನ್ನೇ ಮನೆಯನ್ನಾಗಿಸಿರುತ್ತವೆ, ಅವುಗಳಿಗೆ ಕಡಿಮೆ ಜಾಗ, ಎಂತಹ ಕಠಿಣ ಪರಿಸ್ಥಿತಿಯಲ್ಲೂ ಅವು ಬದುಕುವುದರಿಂದ ಫ್ರಿಡ್ಜ್‌ನಲ್ಲಿ ಎಷ್ಟೇ ತಂಪಿನ ವಾತಾವರಣ ಇದ್ದರೂ ಬದುಕುತ್ತವೆ.
ನೀವು ಫ್ರಿಡ್ಜ್ ಬಾಗಿಲು ತೆರೆದಾಗ ಒಂದೆರಡು ಜಿರಳೆಗಳು ಅವುಗಳ ಮರಿಗಳು ಓಡುವುದನ್ನು ಗಮನಿಸಿರಬಹುದು. ಆದ್ರೆ ಇವುಗಳನ್ನು ತಡೆಯುವುದು ಹೇಗೆ? ಫ್ರಿಡ್ಜ್‌ನೊಳಗೆ ಜಿರಳೆ ಔಷಧಿ ಹೊಡೆದರೆ ಆಹಾರಗಳು, ದಿನ ಬಳಕೆ ವಸ್ತುಗಳು ಕೂಡ ಹಾಳಾಗುತ್ತವೆ. ಆದ್ರೆ ನೈಸರ್ಗಿಕ ವಿಧಾನದ ಮೂಲಕ ಅವುಗಳನ್ನು ಶಾಶ್ವತವಾಗಿ ಫ್ರಿಡ್ಜ್‌ನಿಂದ ಹೊರ ಹಾಕುವುದು ಹೇಗೆ ಎಂಬುದು ನಿಮಗೆ ಗೊತ್ತಾ?
ಕರ್ಪೂರ ಮತ್ತು ಊದಿನ ಕಡ್ಡಿ
ಮನೆ ವಸ್ತುಗಳ ಬಳಸಿ ಜಿರಣೆಗಳಿಗೆ ಕಡಿವಾಣ ಹಾಕಬೇಕಿದ್ದರೆ ಕರ್ಪೂರ ಹಾಗೂ ಊದಿನಕಡ್ಡಿ ಅಥವಾ ಗಂಧದ ಕಡ್ಡಿಯಿಂದ ಸುಲಭವಾಗಿ ಈ ರೀತಿ ಮಾಡಿ. ಈ ಎರಡು ವಸ್ತುಗಳ ಸುವಾಸನೆಯಿಂದ ಜಿರಳೆಗಳು ದೂರ ಉಳಿಯುತ್ತವೆ. ಹಾಗಾದ್ರೆ ಇದನ್ನು ಮಾಡುವುದು ಹೇಗೆ? ಮೊದಲು ಒಂದು ಬೌಲ್ ತೆಗೆದುಕೊಂಡು 6 ಕರ್ಪೂರ್ ಹಾಕಿಕೊಳ್ಳಿ. ಹಾಗೆ 4 ಗಂಧದ ಕಡ್ಡಿಯನ್ನು ಬಿಡಿಸಿ ಅದರ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಸಣ್ಣದಾಗಿ ಅದನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ನೀರು ಹಾಕಿ ಮುಚ್ಚಳ ಮುಚ್ಚಿ ಒಂದೆರಡು ಗಂಟೆ ಹಾಗೆಯೆ ಇಡಿ.
ಸ್ವಲ್ಪ ಕಾಲದ ನಂತರ ಈ ನೀರನ್ನು ಜರಡಿ ಹಿಡಿದು ಬರಿ ನೀರನ್ನು ಮಾತ್ರ ತೆಗೆದುಕೊಳ್ಳಿ. ನಂತರ ಈ ನೀರನ್ನು ಒಂದು ಬಾಟಲಿಗೆ ಹಾಕಿಟ್ಟುಕೊಳ್ಳಿ. ನಂತರ ಸ್ವಲ್ಪ ಹತ್ತಿ ಉಂಡೆ ತೆಗೆದುಕೊಂಡು ಈ ಹತ್ತಿಯನ್ನು ಮಿಶ್ರಣದ ನೀರಿನಲ್ಲಿ ಅದ್ದಿ ಫ್ರಿಡ್ಜ್‌ನ ಒಂದು ಮೂಲೆಯಲ್ಲಿ ಇಡಿ. ನಂತರ ಹತ್ತಿ ಒಣಗಿದರೆ ಮತ್ತೆ ಅದಕ್ಕೆ ಈ ಮಿಶ್ರಣದ ನೀರು ಹಾಕುತ್ತಾ ಇರಿ. ಒಂದು ವಾರದಲ್ಲಿ ಫ್ರಿಡ್ಜ್‌ನಿಂದ ಎಲ್ಲಾ ಜಿರಳೆಗಳು ಜಾಗ ಖಾಲಿ ಮಾಡುತ್ತವೆ. ಬರಿ ಫ್ರಿಡ್ಜ್ ಮಾತ್ರವಲ್ಲ ಜಿರಣೆ ಓಡಾಡುವ ಯಾವುದೇ ಜಾಗದಲ್ಲಿ ಇದನ್ನು ಇಟ್ಟರೂ ಅಲ್ಲಿ ಜಿರಳೆ ನೋಡಲು ಸಿಗುವುದಿಲ್ಲ.
ಶಾಂಪೂ ಪರಿಹಾರ
ಒಂದು ಬೌಲ್‌ಗೆ ನೀರು ಹಾಕಿ ಅದಕ್ಕೆ ವಿನೆಗರ್ ಹಾಕಿ ಬಳಿಕ ಯಾವುದಾದರೊಂದು ಶಾಂಪೂ ಒಡೆದು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಿಕ್ಸ್ ಮಾಡಿದ ಬಳಿಕ ಒಂದು ಬಾಟಲಿಗೆ ಹಾಕಿಟ್ಟುಕೊಳ್ಳಿ. ನಂತರ ಒಮದು ಹತ್ತಿ ಉಂಡೆ ತೆಗೆದುಕೊಂಡು ಈ ದ್ರಾವಣ ಬೆರೆಸಿ ಜೀರಳೆ ಇರುವ ಫ್ರಿಡ್ಜ್‌ನಲ್ಲಿ ಐದಾರು ಕಡೆ ಇಡಿ. ಒಂದೆರಡು ದಿನದಲ್ಲಿ ಜಿರಳೆಗಳು ಫ್ರಿಡ್ಜ್‌ನಿಂದ ಮಾಯವಾಗಿರುತ್ತವೆ.



Click it and Unblock the Notifications
