Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಕಾವಲಿ ಮೇಲಿನ ಹಳೆ ಜಿಡ್ಡು, ಒಡೆದ ಬಕೆಟ್ 5 ನಿಮಿಷದಲ್ಲಿ ಸರಿ ಮಾಡಿ..! ಉಪ್ಪು-ಶಾಂಪು ಇದ್ದರೆ ಸಾಕು..!
ನಾವು ಅಡುಗೆ ಮನೆಯಲ್ಲಿ ಹತ್ತಾರು ರೀತಿಯ ವಸ್ತುಗಳನ್ನು ಸ್ವಚ್ಛ ಮಾಡೋದು ಅದನ್ನು ಸುರಕ್ಷಿತವಾಗಿ ಇಡುವ ಕುರಿತಂತೆ ಯಾವಾಗಲೂ ಯೋಚಿಸುತ್ತೇವೆ. ಅದರಂತೆ ಕೆಲವೊಂದು ವಸ್ತುಗಳನ್ನು ಸ್ವಚ್ಛ ಮಾಡೋದು ಹಾಗೆ ಬಾಳಿಕೆ ಬರುವಂತೆ ಇಡುವುದು ಸವಾಲಿನ ಕೆಲಸ. ಆದ್ರೆ ಕೆಲವೊಂದು ಟ್ರಿಕ್‌ಗಳು ನಮಗೆ ಗೊತ್ತಾಗಿದ್ದರೆ ಇದನ್ನು ಮಾಡೋದು ಸಿಕ್ಕಾಪಟ್ಟೆ ಸುಲಭ.
ಅದರಲ್ಲೂ ನಾವು ತಳ ಹಿಡಿದ, ಜಿಡ್ಡು ಹಿಡಿದ ಪಾತ್ರೆಗಳ ಬೆಳಗಿಸಲು ಪರದಾಡುತ್ತೇವೆ. ಮನೆಯಲ್ಲಿ ಸ್ಟೌ ಸ್ವಚ್ಛ ಮಾಡೋಕೆ ಕಷ್ಟಪಡುತ್ತೇವೆ, ಹಾಘೆ ದೋಸೆ ಕಾವಲಿ, ರೊಟ್ಟಿ ಕಾವಲಿಗಳು, ಪಾನ್‌ಗಳು, ಹೀಗೆ ಕೆಲವೊಂದು ವಸ್ತುಗಳನ್ನು ಸ್ವಚ್ಛ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತೇವೆ. ಅಷ್ಟು ಸಮಯ ತೆಗೆದುಕೊಂಡರು ಕೂಡ ಇದು ಸ್ವಚ್ಛ ಆಗೋದು ಕನಸಿನ ಮಾತು.

ಆದ್ರೆ ನಾವಿಂದು ಕೆಲವು ಕಿಚನ್ ಟಿಪ್ಸ್‌ಗಳ ಮೂಲಕ ನಿಮ್ಮ ಕೆಲವೊಂದು ಕಷ್ಟಕರ ಕೆಲಸವನ್ನು ಸುಲಭವಾಗಿಸುವ ಪ್ರಯತ್ನ ಮಾಡಲಿದ್ದೇವೆ. ಅದರಲ್ಲಿ ದೋಸೆ ಕಾವಲಿಗೆ ಅಂಟಿರುವ ಜಿಡ್ಡನ್ನು ಸುಲಭವಾಗಿ ತೆಗೆಯುವುದು ಹೇಗೆ ಎಂಬುದನ್ನು ಮತ್ತು ಒಡೆದು ಹೋಗಿರುವ ಪ್ಲಾಸ್ಟಿಕ್ ಬಕೆಟ್, ಟಬ್, ಮಗ್ ಅನ್ನು ಸರಿ ಮಾಡುವುದು ಹೇಗೆ ಎಂಬುದನ್ನು ತಿಳಿಯುವ ಪ್ರಯತ್ನ ಮಾಡೋಣ.
ದೋಸೆ ಕಾವಲಿ ಜಿಡ್ಡು ತೆಗೆಯುವುದು ಹೇಗೆ?
ಗೃಹಿಣಿಯರಲ್ಲಿ ಕಾಡುವ ಪ್ರಮುಖ ಸಮಸ್ಯೆ ಏನೆಂದರೆ ದೋಸೆ ಕಾವಲಿಗೆ ಹಿಡಿದಿರುವ ಜಿಡ್ಡು ತೆಗೆಯುವುದು ದೊಡ್ಡ ಸಾಹಸ ಮಾಡಿದಂತೆ. ಏಕೆಂದರೆ ಈ ಜಿಡ್ಡು ಹಲವು ದಿನಗಳಿಂದ ತೊಳೆಯದೆ ಬಿಡುವುದರಿಂದ ಮತ್ತಷ್ಟು ಕಠಿಣವಾಗುತ್ತದೆ. ಯಾವುದೇ ಸೋಪು ಅಥವಾ ಲಿಕ್ವಿಡ್ ಬಳಸಿ ಹಲವು ಬಾರಿ ನೀವು ಶಕ್ತಿ ಮೀರಿ ತೊಳೆದರು ಕೂಡ ನಿಮಗೆ ನೆಮ್ಮದಿ ಆಗುವುದಿಲ್ಲ.
ಹಾಗಾದ್ರೆ ಈ ಜಿಡ್ಡನ್ನು ಒಂದು ನಿಮಿಷದಲ್ಲಿ ಹೇಗೆ ತೆಗೆಯಬಹುದು ಎಂಬುದನ್ನು ನಾವಿಂದು ಹೇಳುತ್ತೇವೆ ಕೇಳಿ. ಮೊದಲು ಈ ಕಾವಲಿಯನ್ನು ಒಲೆ ಮೇಲೆ ಇಟ್ಟು ಚೆನ್ನಾಗಿ ಬಿಸಿ ಮಾಡಿ. ಬಳಿಕ ಇದರ ಮೇಲೆ ಯಾವುದಾದರೊಂದು ಶಾಂಪು ಅನ್ನು ಒಡೆದು ಹಾಕಿ ಚೆನ್ನಾಗಿ ಹರಡಿಕೊಳ್ಳಿ. ಅದು ಕುದಿಯಲು ಆರಂಭಿಸಿದಾಗ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿ ಸುತ್ತಲು ಸವರಿಕೊಳ್ಳಿ. ಕಾವಲಿ ಚೆನ್ನಾಗಿ ಕುದಿಯಲು ಆರಂಭಿಸಿ ಅದರ ಜಿಟ್ಡು ಬಿಡಲು ಆರಂಭಿಸಿದಾಗ ಒಲೆ ಆಫ್ ಮಾಡಿ ಕಾವಲಿ ತೆಗೆದು ತಣ್ಣೀರಿನಲ್ಲಿ ಸಾಮಾನ್ಯ ಸೋಪು ಅಥವಾ ಲಿಕ್ವಿಡ್‌ನಿಂದ ತೊಳೆಯಿರಿ. ಇಷ್ಟು ಮಾಡಿದರೆ ಜಿಡ್ಡು ಮಾಯವಾಗುತ್ತದೆ.
ಒಡೆದ ಪ್ಲಾಸ್ಟಿಕ್ ವಸ್ತು ಮರುಬಳಸಿ..!
ಮನೆಯಲ್ಲಿರುವ ಪ್ಲಾಸ್ಟಿಕ್ ವಸ್ತಿಗಳು ಸಣ್ಣದಾಗಿ ಒಡೆಯುವುದು ಇಲ್ಲವೆ ಕ್ರ್ಯಾಕ್ ಬಂದರೆ ಅದನ್ನು ಬದಿಗಿಡುತ್ತೇವೆ. ಆದರೆ ಅದನ್ನು ಮರುಬಳಕೆ ಮಾಡಬಹುದು. ನೀವು ಒಡೆದಿರುವ ಬಕೆಟ್, ಡಬ್, ಮಗ್ ಯಾವುದೇ ಇದ್ದರೂ ಅದನ್ನು ತೆಗೆದುಕೊಂಡು ಹೊರಗಿನಿಂದ ಒಂದು ಸ್ಪೂನ್ ಉಪ್ಪು, ಒಂದು ಸ್ಪೂನ್ ಸೋಡಾ ಪುಡಿ ಒಡೆದ ಜಾಗದಲ್ಲಿ ಹಾಕಿಕೊಳ್ಳಿ. ನಂತರ 5 ರೂಪಾಯಿಗೆ ಸಿಗುವ ಫೆವಿಕ್ವಿಕ್ ಗಮ್ ಅನ್ನು ನಿಧಾನವಾಗಿ ಒಡೆದಿರುವ ಜಾಗದ ಮೇಲೆ ಸರಿಯಾಗಿ ಹಾಕಿ ಕೆಲ ಹೊತ್ತು ಒಣಗಲು ಬಿಡಿ.
ಇಷ್ಟು ಮಾಡಿದರೆ ಒಡೆದ ಬಕೆಟ್ ಅನ್ನು ನೀವು ಮತ್ತೆ ಬಳಸಬಹುದು. ಇದಕ್ಕೆ ನೀವು ಅಕ್ಕಿ, ಗೋಧಿ, ಮೆಣಸು, ಕಾಳುಗಳು ಹೀಗೆ ಯಾವುದೇ ವಸ್ತುವನ್ನು ದಾಸ್ತಾನು ಮಾಡಲು ಮತ್ತೆ ಬಳಸಬಹುದು. ಇದೊಂದೆ ಅಲ್ಲ ನೀವು ಎಂ ಸೀಲ್ ಗಮ್ ಅನ್ನು ಸಹ ಬಳಸಿ ಈ ಒಡೆದ ಬಕೆಟ್ ಅಥವಾ ಪ್ಲಾಸ್ಟಿಕ್ ವಸ್ತುಗಳನ್ನು ಮತ್ತೆ ಬಳಸಬಹುದು.



Click it and Unblock the Notifications
