Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ನೀರು ಬಳಸದೆ ಗ್ಯಾಸ್ ಸ್ಟೌ ಹೊಳೆಯುವಂತೆ ಮಾಡಿ..! ಈ ಉಪಾಯ ನಿಮಗೆ ಗೊತ್ತಾ?
ಗೃಹಿಣಿಯರು ಮನೆಯ ಕ್ಲೀನಿಂಗ್‌ಗೆ ಹೆಚ್ಚು ಒತ್ತು ನೀಡುತ್ತಾರೆ. ಅದರಲ್ಲೂ ಅಡುಗೆ ಮನೆಯ ಕ್ಲೀನಿಂಗ್ ಅಂದ್ರೆ ಎಲ್ಲರಿಗೂ ದೊಡ್ಡ ಸವಾಲು. ಏಕೆಂದರೆ ಅಡುಗೆ ಮನೆಯಲ್ಲಿ ಆಗುವ ಕಲೆಗಳು ಮನೆಯ ಬೇರೆ ಯಾವುದೇ ಜಾಗದಲ್ಲೂ ನಾವು ನೋಡಲು ಸಾಧ್ಯವಿಲ್ಲ. ಅಡುಗೆ ಮನೆ ಸದಾ ಕೆಲಸದಿಂದ ತುಂಬಿರೋದ್ರಿಂದ ಅಲ್ಲಿ ಕೊಳೆಗಳಾಗುವುದು ಕಾಮನ್.
ಅಡುಗೆ ಮನೆಯಲ್ಲಿ ಬರಿ ಪಾತ್ರೆಗಳು, ನೆಲ ಮಾತ್ರ ಕಲೆಗಳಾಗುವುದಿಲ್ಲ, ಬದಲಿಗೆ ನಾವು ಬಳಸುವಂತಹ ಹಲವು ವಸ್ತುಗಳು ಕಲೆಗಳಿಂದ ತುಂಬಿಕೊಳ್ಳುತ್ತದೆ. ಹಾಗೆ ಗ್ಯಾಸ್ ಸ್ಟೌ ಕಲೆಯಾಗುವಷ್ಟು ಬೇರೆ ಯಾವುದೇ ವಸ್ತು ಬಹುಬೇಗ ಕಲೆಗಳಿಂದ ತುಂಬುವುದಿಲ್ಲ. ಏಕೆಂದರೆ ಮಸಾಲೆಗಳು, ಎಣ್ಣೆ ಪದಾರ್ಥ, ಹಾಲು, ಟೀ ಹೀಗೆ ಒಂದಲ್ಲಾ ಒಂದು ರೀತಿ ಕಲೆಯಾಗುತ್ತೆ.

ನಾವು ಆಗಿಂದಾಗ ಈ ಗ್ಯಾಸ್ ಸ್ಟೌ ಅನ್ನು ಕ್ಲೀನ್ ಮಾಡಿದರೂ ಕೂಡ ಕಲೆಗಳು ಉಳಿದುಬಿಡುತ್ತವೆ. ಹಾಗೆ ಜಿಡ್ಡು ಕಲೆ ಗಟ್ಟಿಯಾಗಿ ಸ್ಟೌ ಹಳೆಯದರಂತೆ ಆಗುತ್ತದೆ. ಬರ್ನರ್‌ಗಳಲ್ಲಿ ಸಿಲುಕುವ ಕಲೆಗಳು ಅದರ ಉರಿಯನ್ನು ಕಡಿಮೆ ಮಾಡುವುದು ಕೂಡ ನಾವು ನೋಡಬಹುದು. ಆದ್ರೆ ಇದನ್ನು ಕ್ಲೀನ್ ಮಾಡುವುದು ಕೂಡ ದೊಡ್ಡ ಸವಾಲಿನ ಕೆಲಸವೇ ಸರಿ.
ನಾವು ನೀರು ಹಾಗೂ ಸಾಮಾನ್ಯ ಸೋಪನ್ನು ಬಳಸಿ ಸ್ಟೌ ಅನ್ನು ಕ್ಲೀನ್ ಮಾಡುತ್ತೇವೆ. ಇದು ಬಹಳ ಸುಲಭದ ಕೆಲಸವಲ್ಲ. ಗ್ಯಾಸ್ ಸ್ಟೌ ಮೂಲೆ ಮೂಲೆಯನ್ನು ಕ್ಲೀನ್ ಮಾಡಬೇಕು ಅಂದ್ರೆ ಬಹಳ ಕಷ್ಟಪಡಬೇಕಾಗುತ್ತದೆ. ಆದ್ರೆ ನಾವಿಂದು ಹೇಳುವ ರೀತಿಯಲ್ಲಿ ನೀವು ಸ್ಟೌ ಕ್ಲೀನ್ ಮಾಡಿದರೆ ಅತ್ಯಂತ ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಬಹುದಾಗಿದೆ.
ಹಾಗಾದ್ರೆ ಅತ್ಯಂತ ಸುಲಭವಾಗಿ ಇಡೀ ಗ್ಯಾಸ್ ಸ್ಟೌ ಅನ್ನು ಕ್ಲೀನ್ ಮಾಡುವುದು ಹೇಗೆ? ಏನು ಮಾಡಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಮೊದಲಿಗೆ ಬರ್ನರ್ ಅನ್ನು ಕ್ಲೀನ್ ಮಾಡುವ ಕುರಿತು ತಿಳಿಯೋಣ.
ಬರ್ನರ್ ಕ್ಲೀನ್ ಮಾಡುವ ಉಪಾಯ
ಮೊದಲು ಬರ್ನರ್ ಅನ್ನು ಒಂದು ಬೌಲ್‌ಗೆ ಅಥವಾ ಪಾತ್ರೆಯಲ್ಲಿ ಹಾಕಿ ಅದು ಮುಚ್ಚುವಷ್ಟು ನೀರು ಹಾಕಿ. ಬಳಿಕ ಅದಕ್ಕೆ ಒಂದು ಶಾಂಪೂ ಪ್ಯಾಕೆಟ್ ಒಡೆದು ಹಾಕಿಕೊಂಡು ಬಳಿಕ ಒಂದು ಇನೋ ಪೌಡರ್ ಹಾಕಿ ಚೆನ್ನಾಗಿ ಕಲಸಿ ಹಾಗೆಯೇ ಬಿಡಿ. ತುಂಬಾ ದೊಡ್ಡ ಪಾತ್ರೆಯಲ್ಲಿ ನೀವು ಈ ಮಿಶ್ರಣ ಮಾಡಿದರೆ ಸ್ಟೌ ಮೇಲಿನ ಎರಡು ಕಡೆಯ ರಾಡ್‌ಗಳನ್ನು ಕೂಡ ನೆನೆಸಬಹುದು.
ಈಗ ಗ್ಯಾಸ್ ಸ್ಟೌವ್‌ನ ಮೇಲೆ ಉಪ್ಪನ್ನು ಹಾಕಿಕೊಳ್ಳಿ. ಎಲ್ಲಾ ಕಡೆ ಉಪ್ಪು ಹರಡಿಕೊಂಡು ಅದು ನೆನೆಯಲು ನೀರು ಅಥವಾ ಯಾವುದೇ ಲಿಕ್ವಿಡ್ ಇದ್ದರೆ ಅದನ್ನು ನೀರಿನೊಂದಿಗೆ ಬೆರೆಸಿ ಚಿಮುಕಿಸಿಕೊಳ್ಳಿ. ಅನಂತರ ಬಟ್ಟೆ ಬ್ಯಾಗ್ (ಟಿಷ್ಯೂ ಬ್ಯಾಗ್) ಕತ್ತರಿಸಿಕೊಂಡು ಅದರಿಂದ ಒರೆಸಬೇಕು. ಇದರಲ್ಲಿ ಬಹುಬೇಗ ಸ್ಟೌ ಸ್ವಚ್ಛವಾಗುತ್ತೆ.
ಹಾಗೆ ಸ್ಟೌ ಅನ್ನು ಮತ್ತೊಮ್ಮೆ ಶುದ್ಧ ನೀರನ್ನು ಬಳಸಿ ಒರೆಸಿಕೊಂಡರೆ ಕಲೆಗಳು ಮಾಯವಾಗುತ್ತೆ. ನೀವು ಕೂಡ ಒಮ್ಮೆ ಈ ರೀತಿ ಸುಲಭವಾಗಿ ಸ್ಟೌ ಅನ್ನು ಕ್ಲೀನ್ ಮಾಡಿ ನೊಡಿ.
ಈಗ ನೀರಿನಲ್ಲಿ ನೆನೆಸಿಟ್ಟುರುವ ಬರ್ನರ್ ಅನ್ನು ಮಿಶ್ರಣದಿಂದ ತೆಗದಿಟ್ಟು ಯಾವುದಾದರು ಲಿಕ್ವಿಡ್ ಬಳಸಿ ಬ್ರಷ್‌ನಿಂದ ಉಜ್ಜಿಕೊಂಡರೆ ಸಾಕಾಗುತ್ತದೆ. ಬರ್ನರ್ ಕ್ಲೀನ್ ಆಗುವುದಲ್ಲದೆ ಉರಿ ಹಚ್ಚಾಗುತ್ತದೆ.



Click it and Unblock the Notifications
