Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
Kitchen Hacks: ಬೆಳ್ಳುಳ್ಳಿ ಸಿಪ್ಪೆ ಬಿಡಿಸುವ ಸುಲಭದ 4 ಟ್ರಿಕ್ಸ್ ಗೊತ್ತಾ?
Kitchen Hacks: ಅಡುಗೆ ಮನೆಯಲ್ಲಿ ಎಷ್ಟೊಂದು ಕೆಲಸಗಳ ನಡುವೆ ಗೃಹಿಣಿಯರು ಹೆಚ್ಚು ಸಮಯ ಅಡುಗೆ ಮನೆಯಲ್ಲೇ ಕಳೆಯಬೇಕಾಗುತ್ತದೆ. ನಿತ್ಯವೂ ಅಡುಗೆ ಮನೆಯಲ್ಲಿ ಕೆಲಸ ಮಾಡುವುದು ಗೃಹಿಣಿಯರಿಗೆ ನಿತ್ಯದ ಟಾಸ್ಕ್. ಅಡುಗೆ ಮನೆಯ ಒಂದೊಂದು ಕೆಲಸಗಳು ಕೂಡ ಗೃಹಿಣಿಯರ ಸಮಯ ಅಲ್ಲಿಯೇ ಕಳೆಯುವಂತೆ ಮಾಡುತ್ತವೆ. ಬೆಳಗ್ಗೆ ತಿಂಡಿ ಮಾಡುವುದರಿಂದ ಹಿಡಿದು ರಾತ್ರಿಯ ಊಟದ ವರೆಗೂ ಗೃಹಿಣಿಯರು ಅಡುಗೆ ಮನೆಯಲ್ಲೇ ಕಳೆಯಬೇಕಾಗುತ್ತದೆ.
ಹಾಗೆ ಬೆಳಗ್ಗೆ ತಿಂಡಿ ಗಡಿಬಿಡಿಯಲ್ಲಿ ಮಾಡಿ ಮುಗಿಸುವಾಗಲು ಹಲವು ಕೆಲಸಗಳ ಮಾಡಬೇಕಾಗುತ್ತೆ, ಹಾಗೆ ಮಧ್ಯಾಹ್ನದ ಕೆಲಸ ಮಾಡಿ ಮುಗಿಸುವಾಗ 2 ಗಂಟೆ ಮುಗಿಯುತ್ತೆ. ಮತ್ತೆ ರಾತ್ರಿಯ ಅಡುಗೆ ಆರಂಭಿಸುತ್ತೀರಿ. ಈ ಕೆಲಸಗಳ ನಡುವೆ ನೀವು ಅದೆಷ್ಟು ತರಕಾರಿ ಹೆಚ್ಚಬೇಕಾಗುತ್ತದೆ. ಪ್ರತಿ ಅಡುಗೆಗೆ ಮುನ್ನ ತರಕಾರಿಗಳ ಹೆಚ್ಚಿಕೊಳ್ಳುವುದು, ಅಡುಗೆಗೆ ಸಿದ್ದತೆ ಮಾಡಿಕೊಳ್ಳುವುದು ಕಾಮನ್.

ಹಾಗೆ ನಿತ್ಯದ ಅಡುಗೆಗೆ ನೀವು ಈರುಳ್ಳಿ, ಬೆಳ್ಳುಳ್ಳಿ ಬಳಸುವುದು ಕಾಮನ್. ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದೆ ಯಾವುದೇ ಅಡುಗೆ ನಡೆಯೋದಿಲ್ಲ. ಆದ್ರೆ ಈ ಬೆಳ್ಳುಳ್ಳಿ ಬಿಡಿಸುವುದು ಅಂದರೆ ದೊಡ್ಡ ಕೆಲಸವಾಗುತ್ತದೆ. ಗಡಿಬಿಡಿಯಲ್ಲಿ ಬೆಳ್ಳುಳ್ಳಿ ಸಿಪ್ಪೆ ಬಿಡಿಸಿ ಖಾದ್ಯಗಳಿಗೆ ಬಳಸುವುದು ಕಷ್ಟವಾಗುತ್ತೆ. ನೀವು ಬೆಳ್ಳುಳ್ಳಿ ಸಿಪ್ಪೆ ಬಿಡಿಸಲಾಗದೆ ಅದನ್ನು ಜಜ್ಜಿ ಹಾಗೆಯೇ ಬಳಸಿಕೊಳ್ಳುತ್ತೀರಿ.
ಇನ್ನು ಹಲವು ಬಾರಿ ಬೆಳ್ಳುಳ್ಳಿ ಬಿಡಿಸಲು ಮುಂದಾಗಲೆಲ್ಲ ಬೆಳ್ಳುಳ್ಳಿ ಕಸದ ಜೊತೆಗೆ ಬೆರೆತು ಪುಡಿ ಪುಡಿಯಾಗುವುದು ನೋಡಬಹುದು. ಹಾಗಾದ್ರೆ ಬೆಳ್ಳುಳ್ಳಿ ಬಿಡಿಸುವ ಸುಲಭದ ಮಾರ್ಗ ಯಾವುದು ಎಂಬುದು ನಿಮಗೆ ಗೊತ್ತಾ? ನಾವಿಂದು ಸುಲಭವಾಗಿ ಬೆಳ್ಳುಳ್ಳಿ ಬಿಡಿಸಲು 4 ಟಿಪ್ಸ್ ಹೇಳುತ್ತೇವೆ ನೋಡಿ. ಈ ರೀತಿ ಮಾಡಿದ್ರೆ ನಿಮಿಷದಲ್ಲಿ ಬೆಳ್ಳುಳ್ಳಿ ಸಿಪ್ಪೆಯನ್ನು ಸುಲಿಯಬಹುದು.
ಬಿಸಿ ನೀರಿನ ತಂತ್ರ ನಿಮಗೆ ಗೊತ್ತಾ?
ಬೆಳ್ಳುಳ್ಳಿ ಬಿಡಿಸಲು ನೀವು ಹಲವು ಬಗೆಯ ತಂತ್ರ ಮಾಡಿರಬಹುದು ಆದ್ರೆ ಎಂದಾದರು ಬಿಸಿ ನೀರಿನ ತಂತ್ರ ಟ್ರೈ ಮಾಡಿದ್ದೀರಾ? ಹೌದು ಒಂದು ಬೌಲ್‌ನಲ್ಲಿ ಬಿಸಿ ನೀರು ಹಾಕಿಕೊಂಡು ಅದಕ್ಕೆ ಬೆಳ್ಳುಳ್ಳಿಯನ್ನು ಹಾಕಿಕೊಳ್ಳಿ. ಸುಮಾರು 30 ನಿಮಿಷಗಳ ಕಾಲ ಹಾಗೆಯೆ ಬಿಡಿ. ಅನಂತರ ನೀರನ್ನು ಬಸಿದುಕೊಂಡು ಸಿಪ್ಪೆಯನ್ನು ಸುಲಭಾಗಿ ಕೈಯಿಂದಲೇ ಸುಲಿಯಬಹುದು. ಇಲ್ಲವೆ ಇದು ಗ್ಲಾಸ್‌ನಲ್ಲಿ ಹಾಕಿ ಅಲುಗಾಡಿಸಿ ನಂತರ ಸುಲಭಗಾಗಿ ಇದು ಸಿಪ್ಪೆ ಬಿಡುತ್ತದೆ.
ಪ್ಲಾಸ್ಟಿಕ್ ಕವರ್
ನೀವು ಬೆಳ್ಳುಳ್ಳಿ ಸಿಪ್ಪೆ ಬಿಡಿಸಲು ಒಂದು ಪ್ಲಾಸ್ಟಿಕ್ ಬಳಸುವುದು ಹೇಗೆ ಅನ್ನೋದು ಗೊತ್ತಾ? ಒಂದು ಪ್ಲಾಸ್ಟಿಕ್ ಕವರ್ ತೆಗೆದುಕೊಂಡು ಬೆಳ್ಳುಳ್ಳಿಗಳನ್ನು ಅದರ ಒಳಗೆ ಹಾಕಿ. ಬಳಿಕ ಕೈಯಿಂದ ಬಿಗಿಯಾಗಿ ಹಿಡಿದು ಯಾವುದಾದರು ವಸ್ತುವಿನಿಂದ ಚೆನ್ನಾಗಿ ಜಜ್ಜಿಕೊಳ್ಳಿ. ಬೆಳ್ಳುಳ್ಳಿ ಹಾಗೂ ಸಿಪ್ಪೆ ಬೇರೆ ಬೇರೆ ಆಗುವಂತೆ ಜಜ್ಜಿ ಬಳಿಕ ಒಂದು ತಟ್ಟೆ ಮೇಲೆ ಹಾಕಿಕೊಂಡು ಗಾಳಿಗೆ ಹಿಡಿದರೆ ಬೆಳ್ಳುಳ್ಳಿ ಸಿಪ್ಪೆ ಬೇರೆಯಾಗಿರುತ್ತೆ.
ಮೈಕ್ರೋವೇವ್ ತಂತ್ರ
ನಿಮ್ಮ ಮನೆಯಲ್ಲಿ ಮೈಕ್ರೋವೇವ್ ಇದ್ದರೆ ಬೆಳ್ಳುಳ್ಳಿ ಸಿಪ್ಪೆ ಬಿಡಿಸುವುದು ಬಹಳ ಸುಲಭ. ಬೆಳ್ಳುಳ್ಳಿಗಳನ್ನು ತಟ್ಟೆಯಲ್ಲಿ ಹಾಕಿ ಮೈಕ್ರೋವೇವ್ ಒಳಗೆ 30 ಸೆಕೆಂಡ್ ಬಿಸಿ ಮಾಡಿ, ನಂತರ ಹೊರೆಗೆ ತೆಗೆದು ಕೈಯಿಂದಲೇ ಉಜ್ಜಿದರೆ ಸಿಪ್ಪೆ ಬಿಡಿಸಿಕೊಳ್ಳುತ್ತದೆ. ಇದು ಅತ್ಯಂತ ಸುಲಭದ ಮಾರ್ಗವಾಗಿದೆ.
ಮಿಕ್ಸಿ ಮತ್ತು ಕತ್ತರಿಸುವ ತಂತ್ರ
ಬೆಳ್ಳುಳ್ಳಿಯನ್ನು ಬ್ಲೇಡ್ ಇಲ್ಲದೆ ಇರುವ ಮಿಕ್ಸಿ ಜಾರ್‌ಗೆ ಹಾಕಿ ಕೆಲ ಸುತ್ತು ಹೊಡೆಸಿದರೆ ಸುಲಭವಾಗಿ ಸಿಪ್ಪೆ ತೆಗೆಯಬಹುದು. ಹಾಗೆ ಬೆಳ್ಳುಳ್ಳಿಯನ್ನು ಒಂದು ಚಾಕುವಿನಿಂದ ಗಡ್ಡೆ ಸಮೇತ ಕತ್ತರಿಸಕೊಳ್ಳಬೇಕು. ಅದರ ಮೇಲ್ಬಾಗದಲ್ಲಿ ಕತ್ತರಿಸಿಕೊಂಡು ಎಲ್ಲಾ ಸಿಪ್ಪೆಗಳನ್ನು ನೇರವಾಗಿ ಮೇಲಿನಿಂದ ಕೆಳಗೆ ಎಳೆದರೆ ಸುಲಭವಾಗಿ ಬಿಸಿಕೊಳ್ಳುತ್ತದೆ.



Click it and Unblock the Notifications
