Latest Updates
-
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ
ಗ್ಯಾಸ್ ಸಿಲಿಂಡರ್ ಇಟ್ಟು ಕಲೆ ಆಗಿದ್ಯಾ..? ಹೀಗೆ ಮಾಡಿದ್ರೆ 5 ನಿಮಿಷದಲ್ಲಿ ಕಲೆ ತೆಗೆಯಬಹುದು!
ಅಡುಗೆ ಮನೆ ಅಂದ ಮೇಲೆ ಅಲ್ಲಿ ಹತ್ತಾರು ಕಲೆಗಳು ಇರುವುದು ಸಹಜ. ಅಡುಗೆ ಮನೆಯಲ್ಲಿ ಎಣ್ಣೆ ಜಿಡ್ಡು, ಕೊಳೆ, ಕಲೆ, ಮಸಾಲೆ ಪದಾರ್ಥದಿಂದ ಉಂಟಾಗಿರುವ ಕಲೆಗಳಿರುವುದು ಸಹಜವೇ. ಆದ್ರೆ ಕೆಲವೊಂದು ಕಲೆಗಳು ಎಷ್ಟು ತೊಳೆದರೂ, ಯಾವುದೇ ಲಿಕ್ವಿಡ್ ಹಾಕಿದರು ಸಹ ಹೋಗುವುದಿಲ್ಲ. ಅದ್ರಲ್ಲಿ ಎಲ್‌ಪಿಜಿ ಗ್ಯಾಸ್ ಇಟ್ಟರೆ ಆ ಜಾಗದಲ್ಲಿ ಆಗುವ ಕಲೆ ಮಾತ್ರ ಯಾವುದೇ ಕಾರಣಕ್ಕೂ ಹೋಗುವುದಿಲ್ಲ ಎಂಬಂತಾಗುತ್ತದೆ.
ಹಾಗಾದ್ರೆ ಗ್ಯಾಸ್ ಇಟ್ಟು ಮನೆಯ ನೆಲದಲ್ಲಿ, ಟೈಲ್ಸ್ ಮೇಲೆ ಕಬ್ಬಿಣ ಹಿಡಿದ ಕಲೆಯಾಗುತ್ತದೆ. ಈ ಕಲೆ ಎಷ್ಟ ಗಾಢವಾಗುತ್ತಾ ಹೋಗುತ್ತೆ ಅಂದರೆ ನಿತ್ಯವು ನೀವು ಒರೆಸಿದರೂ ಅದು ಹೋಗುವುದಿಲ್ಲ. ಈ ತುಕ್ಕಿನ ಕಲೆ ಅಷ್ಟೊಂದು ಗಾಢವಾಗಿ ಮೂಡಿರುತ್ತದೆ. ಹಾಗೆ ಒಂದು ಕಡೆ ಅಲ್ಲ ಹಲವು ಕಡೆಯಲ್ಲಿ ಗೆರೆಗಳು ಮೂಡಿರುತ್ತದೆ.

ಈ ಕಪ್ಪು ಬಣ್ಣದಿಂದ ಕೂಡಿದ ಗೆರೆಗಳ ತೆಗೆಯುವುದು ಅಷ್ಟೊಂದು ಸುಲಭವಲ್ಲ. ನೀವು ಸುಲಭವಾಗಿ ಇದನ್ನು ತೆಗೆಯಲು ಬರುವುದಿಲ್ಲ. ಎಷ್ಟೇ ಪ್ರಯತ್ನ ಮಾಡಿದರು ಸಹ ಅಲ್ಪ ಸ್ವಲ್ಪ ಕಲೆಯಂತು ಉಳಿದುಬಿಡುತ್ತದೆ. ನಾವು ಒಂದೇ ಕಡೆ ಯಾವಾಗಲು ಗ್ಯಾಸ್ ಸಿಲಿಂಡರ್ ಇಡುವುದರಿಂದ ಈ ರೀತಿ ಕಲೆ ಆಗುತ್ತದೆ. ಹಾಗಾದ್ರೆ ಈ ಕಲೆಯನ್ನು ತೆಗೆಯುವುದು ಹೇಗೆ? ಸುಲಭವಾಗಿ ತೆಗೆಯಲು ಕೆಲವು ವಿಧಾನವನ್ನು ನಾವು ಹೇಳುತ್ತೇವೆ ನೋಡಿ.
ಟೂತ್ ಪೇಸ್ಟ್ ಮತ್ತು ನಿಂಬೆ ರಸ
ಒಂದು ಕಪ್‌ನಲ್ಲಿ ನಿಂಬೆ ರಸ ತೆಗೆದುಕೊಂಡು ಅದಕ್ಕೆ ಸ್ವಲ್ಪವೇ ಸ್ವಲ್ಪ ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದು ಲಿಕ್ವಿಡ್ ರೀತಿ ಬದಲಾಗುತ್ತದೆ. ಬಳಿಕ ಗ್ಯಾಸ್ ಸಿಲಿಂಡರ್ ಇಟ್ಟಿದ್ದರಿಂದ ಆಗಿರುವ ಕಲೆಯ ಮೇಲೆ ಹಾಕಿ ಚೆನ್ನಾಗಿ ಹರಡಿ, ಬಳಿಕ 2 ನಿಮಿಷ ಬಿಟ್ಟು ಒಂದು ಬ್ರಷ್‌ನಿಂದ ಚೆನ್ನಾಗಿ ಉಜ್ಜಿ. ನಂತರ ನೀರು ಹಾಕಿ ತೊಳೆಯಿರಿ, ಈ ರೀತಿ ಮಾಡಿದರೆ ಒಂದು ಬಾರಿ ಹೋಗದಿದ್ದರೆ ಮತ್ತೊಂದು ದಿನ ಬಿಟ್ಟು ಇದೇ ರೀತಿ ಮಾಡಿದರೆ ಆ ಕಬ್ಬಿಣದ ತುಕ್ಕಿನ ಕಲೆ ನಿವಾರಣೆಯಾಗಲಿದೆ.
ನಿಂಬೆ ಮತ್ತು ಉಪ್ಪು
ಒಂದು ಬೌಲ್‌ನಲ್ಲಿ ನಿಂಬೆ ರಸವನ್ನು ಹಾಕಿಕೊಂಡು ಅದಕ್ಕೆ ಒಂದು ಸ್ಪೂನ್ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಇದನ್ನು ತುಕ್ಕಿನ ಕಲೆ ಇರುವ ಜಾಗದಲ್ಲಿ ಹಾಕಿ ಬಳಿಕ ಬ್ರಷ್‌ನಿಂದ ಚೆನ್ನಾಗಿ ಉಜ್ಜಿ ನೋಡಿ, ಈ ಕಲೆ ಹೋಗುತ್ತದೆ.
ಅಡುಗೆ ಸೋಡ ಮತ್ತು ವಿನೆಗರ್
ನಿಮ್ಮ ಮನೆಯಲ್ಲಿ ಸಿಗುವಂತಹ ಅಡುಗೆ ಸೋಡಾ ಹಾಗೂ ವಿನೆಗರ್ ಬಳಸಿ ಈ ಕಲೆಯನ್ನ ಹೋಗಲಾಡಿಸಬಹುದು. ಒಂದು ಬೌಲ್‌ನಲ್ಲಿ ಸ್ವಲ್ಪ ಅಡುಗೆ ಸೋಡಾ ತೆಗೆದುಕೊಂಡು ಅದನ್ನು ನೇರವಾಗಿ ಕಲೆಗಳಿರುವ ಸ್ಥಳದಲ್ಲಿ ಹಾಕಿ. ನಂತರ ಒಂದು ಬಟ್ಟೆ ತೆಗೆದುಕೊಂಡು ಅದಕ್ಕೆ ಸ್ವಲ್ಪ ವಿನೆಗರ್ ಅನ್ನು ಹಾಕಿ ನೆನೆಸಿಕೊಳ್ಳಿ. ನಂತರ ಕಲೆಗಳಿರುವ ಜಾಗವನ್ನ ಬಟ್ಟೆಯಿಂದ ಒರೆಸಿದರೆ ಆ ಕಲೆ ಮಾಯವಾಗುತ್ತದೆ.



Click it and Unblock the Notifications
