Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಸಿಹಿ ತಿಂಡಿಗಳನ್ನ ಫ್ರಿಡ್ಜ್‌ನಲ್ಲಿ ಇಡಲೇಬೇಡಿ.! ದೀಪಾವಳಿಗೆ ನೀವು ಯಾವ ಸ್ವೀಟ್ ಮಾಡಿದ್ರಿ.!
ದೀಪಾವಳಿ ಹಬ್ಬದ ಸಮಯದಲ್ಲಿ ಮನೆಯಲ್ಲಿ ಸಂಭ್ರಮ, ಸಡಗರ ಇದ್ದೇ ಇರುತ್ತೆ. ಹಿಂದೂಗಳಿಗೆ ಅತ್ಯಂತ ಪವಿತ್ರ ಹಾಗೂ ಬಹುದೊಡ್ಡ ಹಬ್ಬ ಇದಾಗಿದೆ, ದೀಪಾವಳಿ ಅಂದ್ರೆ ಅಲ್ಲಿ ಪಟಾಕಿ ಇರಲೇಬೇಕು. ಪಟಾಕಿ ಜೊತೆ ಹಬ್ಬದಲ್ಲಿ ಸಿಹಿ ಮಾಡುವುದು ಕೂಡ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಳವಾಗುವಂತೆ ಮಾಡುತ್ತೆ. ಸಿಹಿಯ ರುಚಿ ನಾಲಗೆಗೆ ಬಿದ್ದಾಗ ಊಟ ಮತ್ತಷ್ಟು ರುಚಿಯಾಗುತ್ತೆ.
ಹಾಗೆ ದೀಪಾಳಿಯಲ್ಲಿ ಮಾಡಿದ ಸಿಹಿ ಒಂದಿಷ್ಟು ದಿನ ಇಟ್ಟರೆ ಹಾಳಾಗುತ್ತದೆ ಎಂಬ ಭಯದಲ್ಲಿ ಕಡಿಮೆ ತಿಂಡಿಯನ್ನು ಮಾಡಲು ಮುಂದಾಗುತ್ತೇವೆ. ಆದ್ರೆ ಸುಲಭವಾಗಿ ಮಾಡುವ ಕೆಲವು ಸಿಹಿಗಳನ್ನು ಹೆಚ್ಚು ದಿನ ಇಡಲು ಪರದಾಡಬೇಕಾಗುತ್ತದೆ. ಒಂದಿಷ್ಟು ತಿಂಡಿಗಳು ತಿಂಗಳುಗಳ ಕಾಲ ಇಟ್ಟರು ಹಾಳಾಗುವುದಿಲ್ಲ. ಆದ್ರೆ ಮತ್ತೆ ಕೆಲವು ಸಿಹಿಯು ನಾವು ಅಂದುಕೊಂಡದ್ದಕ್ಕಿಂತ ಕಡಿಮೆ ಸಮಯದಲ್ಲಿ ಹಾಳಾಗುತ್ತದೆ.

ಇದಕ್ಕಾಗಿ ನಾವು ಫ್ರಿಡ್ಜ್ ಅನ್ನು ನಂಬಿಕೊಂಡಿರುತ್ತೇವೆ. ಅಂದ್ರೆ ನಾವು ಸಿಹಿಯನ್ನು ಫ್ರಿಡ್ಜ್‌ನಲ್ಲಿಟ್ಟು ಒಂದಿಷ್ಟು ದಿನ ಸವಿಯಲು ಮುಂದಾಗುತ್ತೇವೆ. ಆದರೆ ಈ ಫ್ರಿಡ್ಜ್‌ನಲ್ಲಿಟ್ಟ ವಸ್ತುಗಳು ಕೂಡ ಆರೋಗ್ಯಕ್ಕೆ ಹಾನಿ ಮಾಡುತ್ತವೆ ಎಂಬುದು ನಿಮಗೆ ತಿಳಿದಿದ್ಯಾ? ಹೌದು ಕೆಲವೊಂದು ಆಹಾರಗಳು ನಾವು ಫ್ರಿಡ್ಜ್‌ನಲ್ಲಿ ಇಟ್ಟಾಗಲು ಕೂಡ ಅವು ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತವೆ.
ಇನ್ನು ಕೆಲವೊಂದು ಸ್ವೀಟ್‌ಗಳನ್ನು ನಾವು ಫ್ರಿಡ್ಜ್‌ನಲ್ಲಿ ಇಟ್ಟಾಗಲೂ ಕೂಡ ಅವು ಬಹುಬೇಗ ಕೆಡುತ್ತವೆ. ಇಲ್ಲವೆ ನಮ್ಮ ಆರೋಗ್ಯಕ್ಕೆ ಹಾನಿ ಮಾಡುವಂತಹ ಬ್ಯಾಕ್ಟಿರಿಯಾಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಅಂದರೆ ನಾವು ಯಾವ ಸ್ವೀಟ್ ಅನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಸಮಸ್ಯೆಯಾಗಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಚಾಕೋಲೆಟ್‌ನಿಂದ ಮಾಡಿದ ಯಾವುದಾದರು ತಿಂಡಿ
ನೀವು ಚಾಕೋಲೆಟ್ ಬಳಸಿ ಯಾವುದಾರು ತಿಂಡಿಯನ್ನು ಮಾಡಿದ್ದರೆ ಅದನ್ನು 2 ದಿನಕ್ಕೂ ಹೆಚ್ಚು ದಿನ ಫ್ರಿಡ್ಜ್‌ನಲ್ಲಿ ಇಡಬೇಡಿ. ಚಾಕೋಲೆಟ್ ಬಹುಬೇಗ ರಾಸಾಯನಿಕ ಕ್ರಿಯೆಗೆ ಒಳಗಾಗುತ್ತದೆ. ನೀವು ಯಾವುದಾದರು ಚಾಕೋಲೆಟ್ ಫ್ರಿಡ್ಜ್‌ನಲ್ಲಿ ಇಟ್ಟಾಗ ಅದರ ಮೇಲೆ ಬಿಳಿ ಬಣ್ಣ ಮೂಡಲು ಆರಂಭಿಸಿದರೆ ಆ ಸಿಹಿ ಸವಿಯಲು ಉತ್ತಮವಲ್ಲ ಎಂದರ್ಥ.
ಬೆಣ್ಣೆಯಿಂದ ಮಾಡಿದ ಸ್ವೀಟ್‌ಗಳು
ಸಾಮಾನ್ಯವಾಗಿ ಸಿಹಿಗಳ ಮಾಡುವಾಗ ಬೆಣ್ಣೆ ಬಳಸುತ್ತೇವೆ. ಆದ್ರೆ ಬೆಣ್ಣೆ ಅಂಶ ಇರುವ ಸ್ವೀಟ್‌ಗಳನ್ನು ಫ್ರಿಡ್ಜ್‌ನಲ್ಲಿ ಇಡಬಾರದು. ಬೆಣ್ಣೆಯ ತಿಂಡಿಗಳು ಫ್ರಿಡ್ಜ್‌ನಲ್ಲಿ ಇಟ್ಟಾಗ ಗಟ್ಟಿಯಾಗುವುದನ್ನು ನೀವು ಗಮನಿಸಿರಬಹುದು. ಹಾಗೆ 2 ದಿನದ ಬಳಿಕ ಫ್ರಿಡ್ಜ್‌ನಲ್ಲಿ ಇಟ್ಟರೆ ಅದು ಸೇವನೆಗೆ ಯೋಗ್ಯವಾಗಿ ಉಳಿಯುವುದಿಲ್ಲ.
ಆಲಿವ್ ಆಯಿಲ್ ಬಳಸಿ ಮಾಡಿದ ಸಿಹಿ
ಆಲಿವ್ ಆಯಿಲ್ ಬಳಸಿ ನೀವು ಯಾವುದಾದರು ಸಿಹಿ ತಿಂಡಿ ಮಾಡಿದ್ದರೆ ಅದನ್ನು ಹೆಚ್ಚು ದಿನ ಫ್ರಿಡ್ಜ್‌ನಲ್ಲಿ ಇಡಲು ಸಾಧ್ಯವಿಲ್ಲ. ಇದು ಬಹುಬೇಗ ಹಾಳಾಗುತ್ತದೆ. ಹಾಗೆ ಇದನ್ನು ಇಟ್ಟ ಬಳಿಕ ಎಣ್ಣೆ ಒಂದು ರೀತಿಯ ವಾಸನೆ ಬರುವ ರೀತಿ ಬದಲಾಗುತ್ತದೆ.
ಚೀನಿಕಾಯಿಯ ಹಲ್ವಾ
ಚೀನಿಕಾಯಿಯಲ್ಲಿ ಮಾಡುವ ಹಲ್ವಾ ಎಷ್ಟೊಂದು ಸಿಹಿಯಾಗಿರುತ್ತೆ ಅನ್ನೋದನ್ನು ನಾವು ನೋಡಿದ್ದೇವೆ. ಈ ಹಲ್ವಾಗೆ ನೀವು ಡ್ರೈ ಫ್ರೂಟ್ಸ್ ಹಾಕಿದ್ದರೆ ಅದನ್ನು ಹೆಚ್ಚು ದಿನ ಫ್ರಿಡ್ಜ್‌ನಲ್ಲಿ ಇಡಬೇಡಿ.
ಜೇನು ತುಪ್ಪ
ಮೊದಲು ಜೇನು ತುಪ್ಪವನ್ನೇ ಫ್ರಿಡ್ಜ್‌ನಲ್ಲಿ ಇಡಬಾರದು. ಅದನ್ನು ಹೊರಗಡೆ ಇಟ್ಟರೂ ಕೂಡ ಬಹಳ ಬೇಗ ಹಾಳಾಗುವುದಿಲ್ಲ. ಜೇನುತುಪ್ಪ ಹಾಕಿ ಯಾವುದಾರು ಸಿಹಿ ಮಾಡಿದ್ದರೂ ಕೂಡ ಅದನ್ನು ಫ್ರಿಡ್ಜ್‌ನಲ್ಲಿ ಇಡಬೇಡಿ.
ಇದಿಷ್ಟು ಪದಾರ್ಥಗಳಿಂದ ಮಾಡಿದ ಸಿಹಿ ತಿಂಡಿ ಮಾತ್ರವಲ್ಲ ಕೆಲವೊಂದು ಸಿಹಿಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಅಪಾಯಕಾರಿಯಾಗಲಿದೆ. ಹೀಗಾಗಿ ಫ್ರಿಡ್ಜ್‌ನಲ್ಲಿ ಇಡುವ ಬದಲು ಗಾಳಿ ಆಡದ ಡಬ್ಬದಲ್ಲಿ ಹಾಕಿ ಗಟ್ಟಿಯಾಗಿ ಮುಚ್ಚಿ ಇಟ್ಟು ಸವಿಯಬಹುದು.
(ಈ ಮೇಲೆ ನೀಡಲಾಗಿರುವ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯ ಸತ್ಯಾಸತ್ಯತೆ ಬಗ್ಗೆ ಲೇಖಕರಾಗಲಿ, ವೆಬ್‌ಸೈಟ್ ಆಗಲಿ ಖಾತರಿ ಪಡಿಸಿರುವುದಿಲ್ಲ)



Click it and Unblock the Notifications
