Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಗಿಡಗಳಿಗೆ ಟೀ ಪುಡಿ ಹಾಕುವುದು ಉತ್ತಮವೇ? ಟೀ ಪುಡಿಯಿಂದ ಗೊಬ್ಬರ ಮಾಡೋದು ಹೇಗೆ?
ನಾವು ಮನೆಯಲ್ಲಿ ಜಾಗ ಇಲ್ಲದಿದ್ದರೂ ಸಹ ಸಣ್ಣದಾಗಿ ಒಂದಿಷ್ಟು ಜಾಗದಲ್ಲಿ ಹೂವಿನ ಗಿಡಗಳು, ಅಲಂಕಾರಿಕ ಗಿಡಗಳು ಹಾಗೆನೆ ಸುಂದರವಾಗಿ ಕಾಣಿಸಲು ಒಂದಿಷ್ಟು ಗಿಡಗಳ ಬೆಳೆಸುತ್ತೇವೆ. ಅದು ಟೆರೆಸ್ ಮೇಲೆ, ಮನೆಯ ಕಿಟಗಕಿಗಳ ಬಳಿ, ಸಿಟ್‌ಔಟ್ ಬುಡದಲ್ಲಿ ಹೀಗೆ ನಗರ ಪ್ರದೇಶದಲ್ಲಿ ಸಿಕ್ಕ ಸಿಕ್ಕ ಸಣ್ಣ ಪುಟ್ಟ ಜಾಗದಲ್ಲಿ ಗೃಹಿಣಿಯರು ಗಿಡಗಳನ್ನ ಪಾಟ್‌ನಲ್ಲಿ ಬೆಳೆಸುತ್ತಾರೆ.
ಆದರೆ ಈ ಗಿಡಗಳಿಗೆ ನೀವು ಏನು ಹಾಕುತ್ತೀರಿ. ಹೆಚ್ಚೆಂದರೆ ನೀರು, ಅಳಿದುಳಿದ ಹೂವಿನ ಕಸ, ಆಗಾಗ ಮಣ್ಣು ಸಹ ಹಾಕಬಹುದು. ಆದ್ರೆ ಇದು ಗಿಡಗಳ ಬೆಳವಣಿಗೆಗೆ ಬೇಕಾಗಿವ ಸಾರಗಳನ್ನು ನೀಡುವುದಿಲ್ಲ. ನೈಸರ್ಗಿಕವಾಗಿ ಮಣ್ಣಿನಲ್ಲಿ ಅವುಗಳಿಗೆ ಸಿಗುವಷ್ಟು ಪೋಷಕಾಂಶಗಳು ಈ ಇಲ್ಲಿ ಸಿಗುವುದಿಲ್ಲ.

ಆದ್ರೆ ನಾವು ಕೆಲವರು ಈ ಗಿಡಗಳಿಗೆ ಟೀ ಪುಡಿಯನ್ನು ಹಾಕುವುದು ನೋಡಿರುತ್ತೇವೆ, ನಾವು ಸಹ ಮನೆಯಲ್ಲಿರುವ ಸಣ್ಣ ಪುಟ್ಟ ಗಿಡಗಳ ಬುಡಕ್ಕೆ ಉಳಿದ ಟೀ ಪುಡಿಯನ್ನು ಹಾಕುತ್ತೇವೆ. ಗಿಡಗಳ ಬೆಳವಣಿಗೆಗೆ ಟೀ ಪುಡಿ ಉತ್ತಮ ಎಂಬುದು ವಾದವಾಗಿದೆ. ಹೀಗಾಗಿ ಟೀ ಮಾಡಿದ ಬಳಿಕ ಕೊನೆಯಲ್ಲಿ ಉಳಿಯುವ ಪುಡಿಯನ್ನು ಗಿಡಗಳಿಗೆ ಹಾಕುತ್ತೇವೆ.
ಹಾಗಾದ್ರೆ ಈ ಟೀ ಪುಡಿ ಗಿಡಗಳಿಗೆ ಹಾಕುವುದರಿಂದ ನಿಜವಾಗಲು ಪ್ರಯೋಜನವಿದ್ಯಾ? ಈ ಟೀ ಪುಡಿಯಲ್ಲಿ ಯಾವ ಅಂಶ ಇರುತ್ತದೆ? ಏಕೆ ಹಾಕಬೇಕು ಎಂಬ ಕುರಿತು ನಾವಿಂದು ತಿಳಿದುಕೊಳ್ಳೋಣ.
ಈ ಟೀ ಪುಡಿಗಳು ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ ನಿಂದ ಸಮೃದ್ಧವಾಗಿರುತ್ತವೆ. ಇದು ಮಣ್ಣಿನಲ್ಲಿ ಫಲವತ್ತತೆ ಹೆಚ್ಚಿಸುವುದು ಮಾತ್ರವಲ್ಲ ಆಮ್ಲಜನಕ ಹೆಚ್ಚಾಗಲು ಕಾರಣವಾಗುತ್ತದೆ. ಇದರಿಂದ ಗಿಡಗಳ ಬೇರುಗಳು ಹೆಚ್ಚು ಆಳಕ್ಕೆ ಬೆಳೆಯಲು ಹಾಗೂ ಅಗತ್ಯ ಪೋಷಕಾಂಶ ಹೀರಿಕೊಳ್ಳಲು ಸಹಕಾರಿಯಾಗಲಿದೆ. ಇದು ಗಿಡಗಳ ಆರೋಗ್ಯದ ದೃಷ್ಟಿಯಿಂದ ಉತ್ತಮ ಅಭ್ಯಾಸವಾಗಿದೆ.
ಟೀ ಪುಡಿಯಿಂದ ಗೊಬ್ಬರ ತಯಾರಿಸುವುದು ಹೇಗೆ?
ಇನ್ನು ಈ ಗಿಡಗಳಿಗೆ ಟೀ ಪುಟಿ ಹಾಕುವುದು ಉತ್ತಮ ಅಭ್ಯಾಸವೇ. ಆದರೆ ಬರೀ ಟೀ ಪುಡಿಯನ್ನು ಹಾಗೆಯೆ ಗಿಡಗಳಿಗೆ ಹಾಕುವ ಬದಲಾಗಿ ಅದಕ್ಕೆ ಕೆಲವೊಂದು ವಸ್ತು ಮಿಕ್ಸ್ ಮಾಡಿದರೆ ಒಳ್ಳೆಯ ಸಾವಯವ ಗೊಬ್ಬರವಾಗಲಿದೆ. ಹಾಗಾದ್ರೆ ಮನೆಯಲ್ಲಿ ಹೇಗೆ ಟೀ ಪುಡಿ ಬಳಸಿ ಗೊಬ್ಬರ ಮಾಡಿಕೊಳ್ಳುವುದು ಎಂಬುದನ್ನು ನಾವಿಂದು ನೋಡೋಣ.
ಮೊದಲು ಒಂದು ಕಪ್‌ನಲ್ಲಿ ಬಳಸಿದ ಟೀ ಪುಡಿ ತೆಗೆದುಕೊಳ್ಳಿ. ಬಳಿಕ ಇದಕ್ಕೆ ಒಂದು ಚಮಚ ದಾಲ್ಚಿನ್ನಿ, 1 ಕಪ್‌ನಲ್ಲಿ ಸೋಡಾ ವಾಟರ್ ಹಾಕಿಕೊಳ್ಳಿ. ನಂತರ ಸಂಪೂರ್ಣ ಮಿಶ್ರಣ ಆಗುವವರೆಗೂ ಮಿಕ್ ಮಾಡಿಕೊಳ್ಳಿ. ಸ್ವಲ್ಪ ನೀರು ನೀರಾಗಿ ಈ ಮಿಶ್ರಣ ಇರಲಿ. ಇದನ್ನು ಎರಡು ವಾರಕ್ಕೆ ಒಮ್ಮೆ ಗಿಡಗಳ ಬುಕ್ಕೆ ಹಾಕುತ್ತಾ ಇರಿ. ಇದರಿಂದ ನಿಮ್ಮ ಗಿಡಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಸಿಗುತ್ತವೆ.
ಇದರಿಂದ ಏನು ಲಾಭ?
ಟೀ ಪುಡಿ ಹಾಗೂ ದಾಲ್ಚಿನ್ನಿಯ ಈ ನೀರಿನಿಂದ ರಂಜಕ ಹಾಗೂ ಸಾರಜನಕದ ಅಂಶ ಗಿಡಗಳಿಗೆ ಸುಲಭವಾಗಿ ಸಿಗುತ್ತದೆ. ನೀರಿನ ಬದಲು ಸೋಡಾ ಬೆರೆಸುವುದರಿಂದ ರಾಸಾಯನಿಕ ಕ್ರಿಯೆ ಒಳಗಾಗಿ ಇದು ಕೀಟಗಳ ದಾಳಿ ತಪ್ಪಿಸುತ್ತದೆ. ಗಿಡಗಳ ಬೇರುಗಳಿಗೆ ಅಂಟಿಕೊಳ್ಳುವ ಕೀಟಗಳ ಶಮನ ಮಾಡಲು ಇದು ಸಹಕಾರಿಯಾಗುತ್ತದೆ. ಹೀಗಾಗಿ ಈ ಮಿಶ್ರಣವು ಗಿಡಗಳಿಗೆ ಸೂಕ್ತ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
ಉಳಿದ ಟೀ ನೀರು ಬಳಸಬಾರದು: ಇನ್ನು ಹಲವರು ಮನೆಯಲ್ಲಿ ಉಳಿದಿದ್ದ ಟೀ ಅಥವಾ ಕಾಫಿಯನ್ನು ತಣ್ಣಗಾಗಿದೆ ಎಂದು ಗಿಡಗಳ ಬುಡಕ್ಕೆ ಹಾಕುತ್ತಾರೆ ಈ ರೀತಿ ಮಾಡಬಾರದು. ಇದರಿಂದ ಗಿಡಗಳು ಸಾಯಲಿವೆ.



Click it and Unblock the Notifications
