Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಬಾಳೆಹಣ್ಣು ಹಾಳಾಗದಂತೆ ತಡೆಯಲು ಟಿಪ್ಸ್
ಒಂದು ಗೊನೆ ಅಥವಾ ಒಂದು ಚಿಪ್ಪು ಬಾಳೆ ಹಣ್ಣು ಮನೆಯಲ್ಲಿರುತ್ತದೆ. ಅಷ್ಟೇನು ಹಣ್ಣಾಗಿರಲ್ಲ ಅಂತ ಅದರತ್ತ ಗಮನ ಕೊಟ್ಟಿರಲ್ಲ, ಮಾರನೇಯ ದಿನ ನೋಡಿದರೆ ಎಲ್ಲಾ ಹಣ್ಣಾಗಿರುತ್ತೆ. ಅಷ್ಟೂ ಬಾಳೆಹಣ್ಣು ತಿನ್ನಲು ಸಾಧ್ಯವಾಗುವುದಿಲ್ಲ, ನಾಳೆಗೆ ಇಡೋಣ ಅಂದ್ರೆ ಅಷ್ಟೊತ್ತಿಗೆ ಅದು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ, ಅದು ತಿನ್ನಲು ಇಷ್ಟವಾಗಲ್ಲ, ಸುಮ್ಮನೆ ಬಿಸಾಡಬೇಕಾಗುತ್ತೆ.

ಕೈ ಸುಡುವ ರೇಟ್‌ನಲ್ಲಿ ಕೊಂಡ ಹಣ್ಣುಗಳನ್ನು ಬಿಸಾಡಲು ಹೊಟ್ಟೆ ಉರಿಯುತ್ತೆ, ಆದರೆ ನೀವು ಬಾಳೆಹಣ್ಣು ಹಾಳಾಗದಂತೆ ಈ ಕೆಳಗಿನ ಟಿಪ್ಸ್ ಬಳಸಿ ತಡೆಯಬಹುದಾಗಿದೆ. ಬನ್ನಿ ಅವು ಏನು ಎಂದು ನೋಡೋಣ:

1. ಬಾಳೆಹಣ್ಣನ್ನು ನೇತು ಹಾಕಿ
ಬಾಳೆಕಾಯಿಯನ್ನು ಗಿಡದಿಂದ ಕಡಿದ ಬಳಿಕ ಅದು ಹಣ್ಣಾಗಲು ಆರಂಭಿಸುತ್ತದೆ. ನೀವು ಕೊನೆ ಕಡಿದು ಹಾಗೇ ಇಟ್ಟರೆ ಬೇಗನೆ ಹಣ್ಣಾಗುತ್ತದೆ, ಅದೇ ನೇತು ಹಾಕಿದರೆ ಎಲ್ಲಾ ಹಣ್ಣು ಒಟ್ಟಿಗೆ ಹಣ್ಣಾಗುವುದಿಲ್ಲ.

2. ಬಾಳೆಕಾಯಿ ಕೊಂಡುಕೊಳ್ಳಿ
ನೀವು ಬಾಳೆಹಣ್ಣು ಕೊಳ್ಳುವ ಬದಲು ಸ್ವಲ್ಪ ಕಾಯಿ ಇರುವುದನ್ನು ಕೊಂಡು ತಂದು ಹಣ್ಣು ಮಾಡುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಎರಡು ಪ್ರಯೋಜನ:
1. ಬಾಳೆಹಣ್ಣು ಹಣ್ಣಾಗಿ ಹಾಳಾಗುವುದನ್ನು ತಡೆಯಬಹುದು
2. ನೀವೇ ಹಣ್ಣು ಮಾಡುವುದರಿಂದ ಅದಕ್ಕೆ ಹಣ್ಣಾಗಲು ರಾಸಾಯನಿಕ ಬಳಸಿರಬಹುದು ಎಂಬ ಆತಂಕವೂ ಬೇಡ.

3. ಅದರ ದಂಟನ್ನು ಪ್ಲಾಸ್ಟಿಕ್ ಕವರ್‌ನಿಂದ ಸುತ್ತಿ
ಇನ್ನು ಬಾಳೆ ಚಿಪ್ಪನ ಬುಡವನ್ನು ನೀವು ಪ್ಲಾಸ್ಟಿಕ್ ಕವರ್‌ನಿಂದ ಸುತ್ತಿಡುವುದರಿಂದ ಬೇಗನೆ ಕಪ್ಪಾಗುವುದನ್ನು ತಡೆಯಬಹುದು.

4. ಹಣ್ಣಾದ ಬಾಳೆಹಣ್ಣನ್ನು ಫ್ರಿಡ್ಜ್‌ನಲ್ಲಿಡಿ
ಬಾಳೆಹಣ್ಣನ್ನು ಫ್ರಿಡ್ಜ್‌ನಲ್ಲಿ ಇಡುವುದು ಒಳ್ಳೆಯ ಆಯ್ಕೆ ಅಲ್ಲ... ಆದರೆ ಬಾಳೆಹಣ್ಣು ತುಂಬಾ ಹಣ್ಣಾದಾಗ, ಅದನ್ನು ನಾಳೆ, ನಾಡಿದ್ದು ಬಳಸಲು ಬೇಕು ಎಂದರೆ ಫ್ರಿಡ್ಜ್‌ನಲ್ಲಿಡಿ. ಆದರೆ ಸ್ವಲ್ಪ ಹಣ್ಣಾದ ಬಾಳೆಹಣ್ಣು ಇಡಬೇಡಿ. ಇಡುವುದಾದರೆ ತುಂಬಾ ಹಣ್ಣಾದ ಬಾಳೆಹಣ್ಣು ಅಷ್ಟೇ ಇಡಿ.

5. ಹಣ್ಣನ್ನು ಫ್ರೀಜ್ ಮಾಡುವುದು
ಬಾಳೆಹಣ್ಣು ತುಂಬಾ ಹಣ್ಣಾಗಿದ್ದರೆ ನಾಳೆ ಅದರಿಂದ ಏನಾದರೂ ಡೆಸರ್ಟ್ ಮಾಡುವುದಾದರೆ ಅದರ ಸಿಪ್ಪೆ ಸುಲಿದು ಕತ್ತರಿಸಿ, ಫ್ರಿಡ್ಜ್‌ನಲ್ಲಿಟ್ಟು ಬಳಸಬಹುದು. ಇದನ್ನು ರಸಾಯನ, ಫ್ರೂಟ್ ಸಲಾಡ್, ಬಾಳೆ ಹಣ್ಣಿನ ಜ್ಯೂಸ್ ಮಾಡಲು ಬಳಸಬಹುದು. ಈ ರೀತಿ ಫ್ರೀಜ್ ಮಾಡಿಟ್ಟರೆ ನೀವು ಒಂದು ವಾರದವರೆಗೂ ಬಳಸಬಹುದು.

6. ಬಾಳೆಹಣ್ಣಿನ ಬಾಕ್ಸ್ ಕೊಳ್ಳಿ
ನೀವು ಬಾಳೆಹಣ್ಣನ್ನು ಲಂಚ್ ಬಾಕ್ಸ್ ಜೊತೆ ಕೊಂಡೊಯ್ಯ ಬಯಸುವುದಾದರೆ ಅದು ಕಿವುಚಿ ಹೋಗುವ ಸಾಧ್ಯತೆ ಹೆಚ್ಚು, ಅಲ್ಲದೆ ಅಂಥ ಬಾಳೆಹಣ್ಣು ತಿನ್ನಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಬಾಳೆಹಣ್ಣಿನ ಬಾಕ್ಸ್ ಇದೆ. ಅದರಲ್ಲಿ ಇಟ್ಟರೆ ಹಾಳಾಗುವುದಿಲ್ಲ.



Click it and Unblock the Notifications
