Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಲು ಅಡುಗೆ ಮನೆಯ ವಾಸ್ತು ಹೀಗಿರಲಿ
ವಾಸ್ತುಶಾಸ್ತ್ರದ ಪ್ರಕಾರ ಸಣ್ಣದು ಅಥವಾ ದೊಡ್ಡದು ಯಾವುದೇ ಆಗಿರಲಿ ಉಪಕರಣವನ್ನು ಅದರ ವಿನ್ಯಾಸಕ್ಕೆ ಅನುಗುಣವಾಗಿ ನಿರ್ಧಿಷ್ಟವಾಗಿರುವ ಜಾಗದಲ್ಲೇ ಇಡಬೇಕು ಎಂದು ಹೇಳಲಾಗುತ್ತದೆ. ಹಾಗೆ ವಾಸ್ತುವನ್ನು ಮನೆಯಲ್ಲಿ ಅಳವಡಿಸಿಕೊಳ್ಳುವುದರಿಂದ ಧನಾತ್ಮಕ ಶಕ್ತಿಯು ಮನೆಯೊಳಗೆ ಪಸರಿಸುತ್ತದೆ ಎಂಬುದೊಂದು ನಂಬಿಕೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಅದರಲ್ಲೂ ಪ್ರಮುಖ ಅಪಾರ್ಟ್ಮೆಂಟ್ ಗಳಲ್ಲಿ ನಮಗೆ ಆಯ್ಕೆಗಳು ಕಡಿಮೆ ಇರುತ್ತದೆ. ಅದರಲ್ಲೂ ಪ್ರಮುಖವಾಗಿ ಅಡುಗೆ ಮನೆ ಮತ್ತು ಅಡುಗೆ ಮನೆ ಸಾಮಗ್ರಿಗಳನ್ನು ಇಡುವುದಕ್ಕೆ ಆಯ್ಕೆಗಳು ಕಡಿಮೆ ಇರುತ್ತದೆ. ಕೆಲವೊಮ್ಮೆ ಅಡುಗೆ ಮನೆಗಳು ಅಪಾರ್ಟ್ಮೆಂಟ್ ಗಳಲ್ಲಿ ಮೊದಲೇ ಡಿಸೈನ್ ಮಾಡಿರುತ್ತಾರೆ. ಕೆಲವರು ವಾಸ್ತು ವಿಚಾರಗಳನ್ನು ನೋಡಿರಬಹುದು ಆದರೆ ಇನ್ನೂ ಕೆಲವರು ವಾಸ್ತು ಪ್ರಕಾರ ಅಡುಗೆ ಮನೆಯನ್ನು ನಿರ್ಮಿಸದೇ ಇರುವ ಸಾಧ್ಯತೆಯೂ ಇರುತ್ತದೆ.

ಒಂದು ವೇಳೆ ನೀವು ಕೂಡ ವಾಸ್ತುಪ್ರಕಾರ ನಿರ್ಮಿಸದ ಮನೆಯಲ್ಲಿ ವಾಸವಿದ್ದೀರಾದರೆ ಕೆಲವು ಸಿಂಪಲ್ ಸಲಹೆಗಳು ನಿಮ್ಮ ಅಡುಗೆ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಕೆಲವು ಕಣ್ಣಿಗೆ ಕಾಣಬಹುದಾದ ಮತ್ತು ಸರಳವಾಗಿರುವ ಬದಲಾವಣೆಯನ್ನು ಅಡುಗೆ ಮನೆಯಲ್ಲಿ ಮಾಡಿಕೊಳ್ಳುವುದರಿಂದಾಗಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಸದ್ಯ ಇರುವ ಅಡುಗೆಮನೆಯ ಡಿಸೈನ್ ಅನ್ನು ಹೆಚ್ಚು ಬದಲಾವಣೆ ಮಾಡದೆ ಸಣ್ಣಪುಟ್ಟ ಬದಲಾವಣೆಗಳಿಂದಾಗಿ ಅನಾದಿಕಾಲದಿಂದ ನಂಬಿಕೆಯಲ್ಲಿ ವಾಸ್ತು ಶಾಸ್ತ್ರದ ಲಾಭವನ್ನು ಪಡೆದು ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ. ಮೊದಲು ವಿಚಾರಗಳನ್ನು ವಿಮರ್ಷಿಸೋಣ ನಂತರ ಏನು ಮಾಡಬೇಕು ಮತ್ತು ಅಡುಗೆ ಮನೆಯಲ್ಲಿ ಏನನ್ನು ಮಾಡಬಾರದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ ಎಂಬ ಬಗ್ಗೆ ತಿಳಿಸಿಕೊಡುತ್ತೇವೆ. ಮುಂದೆ ಓದಿ.
ಮಾಡಬೇಕಾಗಿರುವ ಅಂಶಗಳು:

1. ಗ್ಯಾಸ್ ಒಲೆ
ಗ್ಯಾಸ್ ಒಲೆ ಬೆಂಕಿಯನ್ನು ಸೂಚಿಸುತ್ತದೆ ಮತ್ತು ಬೆಂಕಿ ಅಧಿದೇವತೆ ಇರುವ ಜಾಗದಲ್ಲಿ ಅದನ್ನು ಇಡಬೇಕಾಗುತ್ತದೆ. ವಾಸ್ತು ಪ್ರಕಾರ ಅಡುಗೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಗ್ಯಾಸ್ ಒಲೆಯನ್ನು ಇಡಬೇಕು. ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುವುದಕ್ಕಾಗಿ ನೀವು ಪೂರ್ವ ದಿಕ್ಕಿಗೆ ಎದುರಾಗಿ ಅಡುಗೆ ಮಾಡಬೇಕು. ಇನ್ನು ಬೆಂಕಿಯ ಅಂಶ ಮತ್ತು ನೀರಿನ ಅಂಶವನ್ನು ಒಂದಕ್ಕೊಂದು ಸಮನಾಂತರವಾಗಿರುವಂತೆ ಇಡಬಾರದು. ಯಾಕೆಂದರೆ ಇವರೆಡೂ ಕೂಡ ವಿರುದ್ಧವಾಗಿರುವ ಅಂಶಗಳು ಹಾಗಾಗಿ ಇವುಗಳು ವ್ಯಕ್ತಿಯ ವರ್ತನೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಇದು ಕುಟುಂಬ ಸದಸ್ಯರ ನಡುವೆ ಆಗಾಗ ಜಗಳ ಅಥವಾ ಬಿರುಕು ಉಂಟು ಮಾಡುವ ಸಾಧ್ಯತೆ ಇರುತ್ತದೆ.

2. ಅಡುಗೆಮನೆ
ವಾಸ್ತುಪ್ರಕಾರ ಯಾವುದೇ ಮನೆಯ ಅಡುಗೆ ಮನೆ ಆಗ್ನೇಯ ದಿಕ್ಕಿನಲ್ಲಿ ಇರಬೇಕು. ಒಂದು ವೇಳೆ ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ ಮಾಡುವುದಕ್ಕೆ ಯಾವುದೇ ಅವಕಾಶವಿಲ್ಲ ಎಂದಿಟ್ಟುಕೊಳ್ಳಿ ಆಗ ನೀವು ವಾಸ್ತುಪ್ರಕಾರ ವಾಯುವ್ಯ ದಿಕ್ಕನ್ನು ಕೂಡ ಅಡುಗೆಮನೆ ನಿರ್ಮಿಸುವುದಕ್ಕೆ ಆಯ್ಕೆ ಮಾಡಿಕೊಳ್ಳಬಹುದು.

3. ರೆಫ್ರಿಜರೇಟರ್
ರೆಫ್ರಿಜರೇಟರ್ ಅನ್ನು ವಾಸ್ತುಪ್ರಕಾರ ಆಗ್ನೇಯ, ಉತ್ತರ, ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಇರಿಸಬಹುದು. ನೈರುತ್ಯ ಮತ್ತು ಈಶಾನ್ಯ ದಿಕ್ಕುಗಳಲ್ಲಿ ಯಾವುದೇ ಕಾರಣಕ್ಕೂ ರೆಫ್ರಿಜರೇಟರ್ ಅನ್ನು ಇಡಬೇಡಿ.

4. ಕಿಟಕಿಗಳು
ಪ್ರತಿಯೊಂದು ಅಡುಗೆ ಮನೆಯೂ ಪೂರ್ವಕ್ಕೆ ಕನಿಷ್ಠ ಒಂದು ಕಿಟಕಿಯನ್ನಾದರೂ ಹೊಂದಿರಬೇಕು. ಸೂರ್ಯನ ಬೆಳಗಿನ ಕಿರಣಗಳು ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿರುತ್ತದೆ. ಅವುಗಳು ಅಡುಗೆ ಮನೆಯನ್ನು ಬೆಳಗುತ್ತವೆ ಮತ್ತು ಅಡುಗೆ ಮನೆ ಸುಂದರವಾಗಿರುವಂತೆ ಮಾಡುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಬೆಳಗಿನ ಸೂರ್ಯನ ಕಿರಣಗಳು ಅಡುಗೆ ಮನೆಯನ್ನು ತಲುಪುದರಿಂದಾಗಿ ನಿಮ್ಮ ವಿದ್ಯುತ್ ಉಳಿತಾಯವೂ ಆಗುತ್ತದೆ. ಅಡುಗೆ ಮನೆಯಲ್ಲಿ ಕಿಟಕಿ ಇರುವುದರಿಂದಾಗಿ ವೆಂಟಿಲೇಷನ್ ಸಮಸ್ಯೆ ಆಗುವುದಿಲ್ಲ. ಅಡುಗೆ ಮನೆಯ ದಕ್ಷಿಣ ದಿಕ್ಕಿನಲ್ಲಿ ಎಕ್ಸಾಸ್ಟ್ ಫ್ಯಾನ್ ಗಳನ್ನು ಸಹ ಇರಿಸಬಹುದು.

5. ಪಾತ್ರೆಗಳ ಸಂಗ್ರಹ
ವಾಸ್ತು ಪ್ರಕಾರ ಅಡುಗೆ ಮನೆ ಅಸ್ತವ್ಯಸ್ತವಾಗಿರಬಾರದು. ಪ್ರತಿಯೊಂದು ಪಾತ್ರೆಗಳನ್ನು ಶಿಸ್ತಾಗಿ ಕಪಾಟುಗಳಲ್ಲಿ ವಾಸ್ತುವಿಗೆ ಅನುಗುಣವಾಗಿಯೇ ಇಡಬೇಕು. ಬೀರುಗಳನ್ನು ದಕ್ಷಿಣ ಅಥವಾ ಪಶ್ಚಿಮ ಗೋಡೆಗಳಲ್ಲಿ ನಿರ್ಮಿಸುವುದು ಸೂಕ್ತವಾದದ್ದಾಗಿರುತ್ತದೆ.

6. ಸಿಂಕ್
ವಾಸ್ತುಪ್ರಕಾರ ಈಶಾನ್ಯ ದಿಕ್ಕಿನಲ್ಲಿ ನೀರಿನ ಉಪಕರಣಗಳು, ನೀರಿನ ಬಾಟಲಿಗಳು ಅಥವಾ ನೀರಿನ ಸಿಂಕ್ ನ್ನು ಅಳವಡಿಸುವುದು ಸೂಕ್ತ. ವಾಸ್ತು ತತ್ವಗಳ ಪರಿಣಾಮವನ್ನು ಅಧಿಕಗೊಳಿಸುವ ನಿಟ್ಟಿನಲ್ಲಿ ಹಸಿರು, ಕಿತ್ತಳೆ ಅಥವಾ ಹಳದಿ ಬಣ್ಣದಿಂದ ಕೂಡಿದ ಅಡುಗೆ ಚಪ್ಪಡಿಗಳನ್ನು ಆರಿಸಿಕೊಳ್ಳುವುದು ಸೂಕ್ತ. ಅಡುಗೆ ಮನೆಯಲ್ಲಿರುವ ನೀರಿನ ಅಂಶವನ್ನು ಸಮತೋಲನದಲ್ಲಿ ಇರಿಸಿಕೊಂಡರೆ ಮನೆಯಲ್ಲಿ ಸಾಮರಸ್ಯವನ್ನು ಕಾಪಾಡಿಕೊಂಡು ಸಂಪತ್ತಿನಲ್ಲಿ ಏಳಿಗೆಯನ್ನು ಕಾಣಬಹುದು ಎಂದು ಹೇಳುತ್ತದೆ ವಾಸ್ತುಶಾಸ್ತ್ರ.

7. ಗೋಡೆಯ ಬಣ್ಣ
ಹಳದಿ, ಕೇಸರಿ ಮತ್ತು ಕೆಂಪು ವರ್ಣವು ಅಡುಗೆ ಮನೆಯ ಬಣ್ಣವಾಗಿದ್ದರೆ ಒಳಿತು ಎನ್ನುತ್ತದೆ ವಾಸ್ತುಶಾಸ್ತ್ರ.

8. ವಿದ್ಯುತ್ ಉಪಕರಣಗಳು
ಪ್ರತಿಯೊಂದು ಅಡುಗೆ ಮನೆಯೂ ಹಲವು ವಿದ್ಯುತ್ ಉಪಕರಣಗಳನ್ನು ಹೊಂದಿರುತ್ತದೆ. ಓವನ್ ಗಳು, ಮೈಕ್ರೋವೇವ್ ಗಳು, ಹೀಟರ್ ಗಳು, ಮಿಕ್ಸಿ,ಗ್ರೈಂಡರ್, ಇತ್ಯಾದಿ ಇತ್ಯಾದಿಗಳು. ಗ್ಯಾಸ್ ಒಲೆಗಳಂತೆ ಇವುಗಳನ್ನು ಕೂಡ ಆಗ್ನೇಯ ದಿಕ್ಕಿನಲ್ಲಿ ಇರಿಸುವುದರಿಂದಾಗಿ ಅಡುಗೆ ಮನೆಗೆ ಹೆಚ್ಚಿನ ಲಾಭವನ್ನು ಪಡೆಯಬಹುದು.

9. ಧಾನ್ಯಗಳ ಬಾಕ್ಸ್ ಗಳು
ವಾಸ್ತು ಪ್ರಕಾರ ಧಾನ್ಯಗಳು, ಬೇಳೆಕಾಳುಗಳು ಮತ್ತು ಮಸಾಲೆಗಳನ್ನು ಸಂಗ್ರಹಿಸಲು ಬಳಸುವ ಎಲ್ಲಾ ಪಾತ್ರೆಗಳನ್ನು ಅಡುಗೆ ಮನೆಯಲ್ಲಿ ದಕ್ಷಿಣ ಅಥವಾ ಪಶ್ಚಿಮ ದಿಕ್ಕುಗಳಲ್ಲಿ ಇಡಬೇಕು ಎಂದು ಹೇಳಲಾಗುತ್ತದೆ. ಏಕೆಂದರೆ ಇವುಗಳನ್ನು ಮನೆಯಲ್ಲಿ ಹೇರಳವಾಗಿ ಆಕರ್ಷಿಸುತ್ತವೆಯಂತೆ.

10. ಸ್ವಚ್ಛತೆ
ಅಡುಗೆ ಚಪ್ಪಡಿ, ಅಡುಗೆ ಮನೆ ಪಾತ್ರೆಗಳು ಮತ್ತು ನೆಲವನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಆರೋಗ್ಯಕರ ಮತ್ತು ವಾಸ್ತುತತ್ವಗಳಿಗೆ ಅನುಗುಣವಾಗಿರುವ ಅಂಶವಾಗಿದೆ. ಸ್ವಚ್ಛವಾಗಿರುವ ನೆಲವು ಧನಾತ್ಮಕ ಪರಿಣಾಮವನ್ನು ನೀಡುತ್ತದೆ ಮತ್ತು ಮನೆಯಲ್ಲಿ ವಾಸಿಸುವವರ ಮನಸ್ಸನ್ನು ಅಧ್ಬುತವಾಗಿರುವಂತೆ ನೋಡಿಕೊಳ್ಳುತ್ತದೆ. ಯಾವ ವ್ಯಕ್ತಿಗಳು ಸ್ವಚ್ಛವಾಗಿರುವ ಜಾಗದಲ್ಲಿ ವಾಸಿಸುತ್ತಾರೋ ಅವರು ಸ್ವಚ್ಛವಿರದ ವಾತಾವರಣದಲ್ಲಿ ವಾಸಿಸುವ ವ್ಯಕ್ತಿಗಳಿಗಿಂತ ಹೆಚ್ಚು ಸಂತೋಷವಾಗಿರುತ್ತಾರೆ ಮತ್ತು ಒತ್ತಡ ಮುಕ್ತರಾಗಿರುತ್ತಾರೆ ಎನ್ನುತ್ತದೆ ವಾಸ್ತುಶಾಸ್ತ್ರ.

ಮಾಡಬಾರದ ಅಂಶಗಳು
ಅಡುಗೆ ಮನೆ ವಿಚಾರದಲ್ಲಿ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ದೂಷಿಸಿಕೊಳ್ಳುವಾಗ ನೀವು ಸ್ವಲ್ಪ ಯೋಚಿಸಬೇಕಾಗಿರುವ ಅಂಶವೇನೆಂದರೆ ವಾಸ್ತು. ಹೌದು ವಾಸ್ತು ಪ್ರಕಾರ ಕೆಲವು ಪ್ರಮುಖ ಅಂಶಗಳನ್ನು ನೀವು ಅಡುಗೆ ಮನೆಯಲ್ಲಿ ಮಾಡಲೇಬಾರದು. ಈ ಕೆಳಗೆ ನಾವು ತಿಳಿಸಿರುವ ಅಂಶಗಳನ್ನು ಅನುಸರಿಸಿ ನೀವು ನಿಮ್ಮ ಅಡುಗೆ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
• ಪೂಜಾ ಸ್ಥಳದ ಮೇಲೆ ಅಥವಾ ಕೆಳಗೆ ಅಡುಗೆ ಮನೆಯ ನಿರ್ಮಾಣ ಇರಕೂಡದು.
• ಅಡುಗೆ ಮನೆಯ ಪ್ರವೇಶ ದ್ವಾರದ ಬಳಿಯೇ ಗ್ಯಾಸ್ ಒಲೆ ಇರಬಾರದು
• ಅಡುಗೆ ಮನೆಯ ಬಾಗಿಲು ಮೂಲೆಯಲ್ಲಿ ಇರಬಾರದು.
• ಮನೆಯ ಈಶಾನ್ಯ ದಿಕ್ಕಿನಲ್ಲಿ ಅಡುಗೆ ಮನೆಯನ್ನು ನಿರ್ಮಿಸಬಾರದು
• ಅಡುಗೆ ಮಾಡುವಾಗ ಪಶ್ಚಿಮಕ್ಕೆ ಮುಖ ಮಾಡುವಂತಿರಬಾರದು. ಒಂದು ವೇಳೆ ಹಾಗಿದ್ದಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳಾಗುವ ಸಾಧ್ಯತೆ ಇರುತ್ತದೆ.
• ಕಪ್ಪು ವರ್ಣದಲ್ಲಿ ಅಡುಗೆ ಮನೆಯ ಗೋಡೆಗಳನ್ನು ನಿರ್ಮಿಸಬೇಡಿ.
• ಮನೆಯ ಈಶಾನ್ಯ ದಿಕ್ಕಿನಲ್ಲಿ ರೆಫ್ರಿಜರೇಟರ್ ಅನ್ನು ಇರಿಸಬೇಡಿ.
• ಮಲಗುವ ಕೋಣೆಯ ಕೆಳಗೆ ಅಥವಾ ಮೇಲೆ ಅಡುಗೆ ಮನೆ ಇರಬಾರದು.
• ಶೌಚಾಲಯದ ಮೇಲೆ ಅಥವಾ ಕೆಳಗೆ ಅಡುಗೆ ತಯಾರಿಸುವ ಯಾವುದೇ ವಸ್ತುಗಳನ್ನು ಇರಿಸುವಂತೆ ಮನೆಯನ್ನು ಡಿಸೈನ್ ಮಾಡಬೇಡಿ.
• ನೈರುತ್ಯ ದಿಕ್ಕಿನಲ್ಲಿ ಅಡುಗೆ ಮನೆ ನಿರ್ಮಿಸಿದರೆ ಮನೆಯ ಸದಸ್ಯರ ನಡುವೆ ಜಗಳಕ್ಕೆ ಕಾರಣವಾಗುತ್ತದೆ.



Click it and Unblock the Notifications











