Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ವಾಸ್ತುದೋಷ ನಿವಾರಿಸಿ, ಸಂಪತ್ತು ವೃದ್ಧಿಗಾಗಿ ಫೆಂಗ್‌ಶುಯಿ ಪರಿಹಾರ
ಮನೆ ವಾಸ್ತುಪ್ರಕಾರ ಇರಬೇಕು, ವಾಸ್ತ ದೋಷವಿದ್ದರೆ ಅಂಥ ಮನೆಯಲ್ಲಿ ವಾಸುವವರಿಗೆ ಒಳಿತು ಉಂಟಾಗುವುದಿಲ್ಲ ಎಂದು ಹೇಳುವುದನ್ನು ಕೇಳಿರಬಹುದು. ವಾಸ್ತು ಶಾಸ್ತ್ರವು ಮನೆಯನ್ನು ವಾಸ್ತು ನೋಡಿ ಕಟ್ಟುವುದು ಒಳ್ಳೆಯದು ಎಂದು ಹೇಳುತ್ತಾರೆ. ಆದ್ದರಿಂದಲೇ ಮನೆಕಟ್ಟುವಾಗ ವಾಸ್ತು ಪ್ರಕಾರನೇ ಕಟ್ಟುತ್ತಾರೆ.

ವಾಸ್ತು ಅಥವಾ ಫೆಂಗ್‌ಶುಯಿ ಎನ್ನುವುದು ಯಾವುದೇ ಧರ್ಮಕ್ಕೆ ಸಂಬಂಧಪಟ್ಟ ವಿಷಯವಲ್ಲ, ಅವುಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿ ಹೇಳಲಾಗುತ್ತದೆ. ಭೂಮಿ, ನೀರು, ಗಾಳಿ, ಬೆಂಕಿ ಹಾಗೂ ಆಕಾಶ ಇವುಗಳ ಪ್ರಯೋಜನವನ್ನು ಪಡೆಯುವುದು ಹೇಗೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ.
ನಾವು ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಸರಿಯಾಗಿ ಇಡದೇ ಹೋದರೆ ಆಗ ವಾಸ್ತುದೋಷ ಉಂಟಾಗಿ ಇದರಿಂದಾಗಿ ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ ಉಂಟಾಗುವುದು. ವಾಸ್ತುದೋಷ ಸರಿಪಡಿಸುವುದರಿಂದ ಎಲ್ಲವೂ ಸರಿಹೋಗುವುದು ಎಂದು ಹೇಳಲಾಗುವುದು. ಇಲ್ಲಿ ನಾವು ವಾಸ್ತುದೋಷ ಸರಿಪಡಿಸಲು ಫೆಂಗ್‌ಶುಯಿ ಹೇಳಿರುವ ಪರಿಹಾರದ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:

ಅಕ್ವೆರಿಯಂ
ಮನೆಯ ಹಾಲ್ ಅಕ್ವೆರಿಯಂ ಇದ್ದರೆ ಅದರಲ್ಲಿ ಓಡಾಡುವ ಮೀನುಗಳನ್ನು ನೋಡುವುದೇ ಚೆಂದ. ಅವುಗಳ ಓಡಾಟ ನೋಡುತ್ತಿದ್ದರೆ ಒಂದು ಕ್ಷಣ ಎಲ್ಲಾ ಮರೆತು ನಿರಾಳವಾಗುತ್ತೇವೆ ಅಲ್ವಾ? ಅಕ್ವೆರಿಯಂ ಅನ್ನು ಮನೆಯ ಹಾಲ್‌ನ ಆಗ್ನೇಯ ಭಾಗದಲ್ಲಿ ಇಟ್ಟರೆ ಮನೆಗೆ ತುಂಬಾ ಅದೃಷ್ಟವೆಂದು ಹೇಳಲಾಗುವುದು. ಅದರಲ್ಲೂ ಆಯತಾಕಾರದ ಅಕ್ವೆರಿಯಂ ಇಡುವುದು ಒಳ್ಳೆಯದು. ಇನ್ನು ರೌಂಡ್ ಶೇಪ್‌ನ ಅಕ್ವೆರಿಯಂ ಅನ್ನು ಉತ್ತರ ಭಾಗದಲ್ಲಿ ಇಡುವುದು ಒಳ್ಳೆಯದು.

ಗಿಡಗಳು
ಆಗ್ನೇಯು ದಿಕ್ಕಿನಲ್ಲಿ ಹಸಿರು ತುಂಬಿದ್ದರೆ ಸಂಪತ್ತು ಕೂಡ ತುಂಬುವುದು. ಆದ್ದರಿಂದ ಮನೆಯ ಆಗ್ನೇಯ ದಿಕ್ಕಿನಲ್ಲಿ ಗಿಡಗಳನ್ನು ಬೆಳೆಸಿ. ಇನ್ನು ಮನೆಯ ಒಳಗಡೆ ಇಡುವಂಥ ಗಿಡವನ್ನು ಕೂಡ ಆಗ್ನೇಯ ದಿಕ್ಕಿನಲ್ಲಿ ಇಡುವುದು ಶ್ರೇಷ್ಠ ಎಂದು ಫೆಂಗ್‌ಶುಯಿ ಶಾಸ್ತ್ರ ಹೇಳುತ್ತದೆ.

ಗಡಿಯಾರ
ಮನೆಯಲ್ಲಿ ಗಡಿಯಾರ ಇದ್ದೇ ಇರುತ್ತದೆ, ಅದರಲ್ಲೂ ಚಿಕ್ಕ ಗಡಿಯಾರದ ಸುತ್ತ ಇರುವ ವಿವಿಧ ವಿನ್ಯಾಸದ ಫ್ರೇಮ್‌ಗಳು ಗಮನವನ್ನು ಸೆಳೆಯುತ್ತದೆ. ಪೆಂಡ್ಯೂಲ್ಯೂಮ್ ಗಡಿಯಾರವಿದ್ದರೆ ಅದನ್ನು ಹಾಲ್‌ನ ವಾಯುವ್ಯ ದಿಕ್ಕಿನಲ್ಲಿ ಇಡುವುದರಿಂದ ಅದು ನಿಮಗೆ ಪ್ರಯಾಣದ ಯೋಗವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಗಡಿಯಾರವನ್ನು ಡೈನಿಂಗ್ ಟೇಬಲ್ ಸಮೀಪ ಮಾತ್ರ ಇಡಲೇಬೇಡಿ.

ಗಾಳಿ ಮತ್ತು ಬೆಳಕು
ನಿಮ್ಮ ಮನೆಯಲ್ಲಿ ಗಾಳಿ ಹಾಗೂ ಬೆಳಕು ಚೆನ್ನಾಗಿ ಬೀಳುವಂತೆ ಇರಲಿ, ಇದು ಆರೋಗ್ಯದ ದೃಷ್ಟಿಯಿಂದಲೂ ಬಹು ಮುಖ್ಯ. ಫೆಂಗ್‌ಶುಯಿ ಶಕ್ತಿ ಆಕರ್ಷಿಸಲು ಕಿಟಕಿಯನ್ನುತೆರೆದಿಡಬೇಕು. ದಿನಾ ಸಾಧ್ಯವಾಗದಿದ್ದರೆ ಸಮಯ ಸಿಕ್ಕಾಗ ತೆರೆದು ಶುದ್ಧಗಾಳಿ ಒಳ ಬರಲು ಅನುವು ಮಾಡಿಕೊಡಬೇಕು. ಇನ್ನು ಸೂರ್ಯನ ಕಿರಣಗಳು ಮನೆಯೊಳಗೆ ಬೀಳುವಂತೆ ಇರಲಿ.

ಖುಷಿ ನೀಡುವ ಚಿತ್ರಗಳು
ಮನೆಯ ಗೋಡೆಗಳಲ್ಲಿ ಮನಸ್ಸಿಗೆ ಮುದ ನೀಡುವ ಚಿತ್ರಗಳನ್ನು ಇಡಬೇಕು. ಅದರಲ್ಲೂ ಅಡುಗೆ ಕೋಣೆಯಲ್ಲಿ ಕ್ರಿಯೇಟಿವ್ ಚಿತ್ರಗಳು, ಲಿವಿಂಗ್ ರೂಮ್ ಹಾಗೂ ಪೂರ್ವ ಭಾಗದಲ್ಲಿ ಮನಸ್ಸಿಗೆ ಮುದ ನೀಡುವ ಚಿತ್ರಗಳನ್ನು ತೂಗಿ ಹಾಕಿ.

ಹಸಿರನ್ನು ತುಂಬಾ ಬಳಸಿ
ಹಸಿರಿಗೆ ಗುಣ ಪಡಿಸುವ ಶಕ್ತಿ ಇದೆ. ಇದನ್ನು ಪೂರ್ವಭಾಗದಲ್ಲಿ ಬಳಸಿ. ಹಸಿರು ಬಣ್ಣದ ಚಿತ್ರಗಳನ್ನು ಪೂರ್ವ, ಆಗ್ನೇಯ ಹಾಗೂ ದಕ್ಷಿಣ ಭಾಗದಲ್ಲಿ ಬಳಸಿ. ಆದರೆ ಉತ್ತರ ಭಾಗದಲ್ಲಿ ಕಡು ಬಣ್ಣ ಬಳಸಬೇಡಿ.

ಹರಿಯುವ ನೀರಿನ ಚಿತ್ರ
ಫೆಂಗ್‌ಶುಯಿ ಪ್ರಕಾರ ಹರಿಯುವ ನೀರಿನ ಚಿತ್ರ ಹಾಕುವುದು ಒಳ್ಳೆಯದು. ಕೆರೆ ಅಥವಾ ಹಳ್ಳಗಳ ಚಿತ್ರದ ಬದಲು ಹರಿಯುವ ನದಿ, ಧುಮ್ಮಿಕ್ಕುವ ಜಲಪಾತದ ಚಿತ್ರ ಹಾಕುವುದು ಒಳ್ಳೆಯದು. ಚಿತ್ರದಲ್ಲಿ ಹರಿಯುವ ನೀರಿನ ಚಿತ್ರಣ ಶುಭ್ರವಾಗಿರಲಿ.

ಮೇಣದ ಬತ್ತಿ
ಫೆಂಗ್‌ಶುಯಿ ಪ್ರಕಾರ ಮೇಣದ ಬತ್ತಿ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ, ಮೇಣದ ಬತ್ತಿಯ ದೀಪ ಮಾನಸಿಕ ಒತ್ತಡ ಕೂಡ ಕಡಿಮೆ ಮಾಡುತ್ತದೆ. ಫೆಂಗ್‌ಶುಯಿ ಪ್ರಕಾರ ಮೇಣದ ಬತ್ತಿಯನ್ನು ದಕ್ಷಿಣ, ಆಗ್ನೇಯ ಹಾಗೂ ವಾಯುವ್ಯ ಹಾಗೂ ಮಧ್ಯಭಾಗದಲ್ಲಿ ಹಚ್ಚಿಡಬೇಕು. ಬಣ್ಣದ ಮೇಣದ ಬತ್ತಿಗಳನ್ನು ನೋಡುತ್ತಿದ್ದರೆ ಮನಸ್ಸು ನಿರಾಳ ಅನಿಸುವುದು.

ಮುರಿದು ಹೋಗಿರುವುದನ್ನು ಸರಿಪಡಿಸಿ
ಮನೆಯ ಬಾಗಿಲು, ಕಿಟಕಿ ಮುಂತಾದ ವಸ್ತುಗಳು ಮುರಿದಿದ್ದರೆ ಅದನ್ನು ಸರಿಪಡಿಸಿ. ಮನೆಯಲ್ಲಿ ಮುರುಕುಲು ವಸ್ತುಗಳು ಇದ್ದರೆ ಕಷ್ಟ ಕೂಡ ಅಧಿಕವಾಗುವುದು ಎಂದು ಹೇಳಲಾಗುವುದು.

ಮನೆಯನ್ನು ಸ್ವಚ್ಛವಾಗಿ, ಸುಂದರವಾಗಿಡಿ
ಮನೆ ಚಿಕ್ಕದಿರಲಿ, ದೊಡ್ಡದಿರಲಿ ಸ್ವಚ್ಛವಾಗಿ, ಸುಂದರವಾಗಿ ಇಡಿ. ದಿನಾ ಮನೆ ಗುಡಿಸಿ, ಮನೆಯ ಮೂಲೆ, ಮೂಲೆಯಲ್ಲಿ ದೂಳು ನಿಲ್ಲಲು ಬಿಡಬೇಡಿ. ಮನೆಯಲ್ಲಿದ್ದಾಗ ಒಳ್ಳೆಯ ಸಂಗೀತ ಆಲಿಸಿ, ಇವೆಲ್ಲಾ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವುದು.
ಸ್ಪಟಿಕ ಬಳಸಿ
ಮನೆಯಲ್ಲಿ ಸ್ಪಟಿಕದ ಕಲ್ಲುಗಳನ್ನು ಇಡುವುದರಿಂದ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಸಾವಿರಕ್ಕೂ ಅಧಿಕ ವರ್ಷಗಳಿಂದ ಶಕ್ತಿಯನ್ನು ಆಕರ್ಷಿಸಲು ಸ್ಪಟಿಕವನ್ನು ಬಳಸಲಾಗುವುದು. ಫೆಂಗ್‌ಶುಯಿ ಶಾಸ್ತ್ರದಲ್ಲಿ ಸ್ಪಟಿಕಕ್ಕೆ ತುಂಬಾ ಮಹತ್ವವಿದೆ.



Click it and Unblock the Notifications