Latest Updates
-
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ
ವಾಸ್ತು ಪ್ರಕಾರ ದಂಪತಿ ನಡುವೆ ಅನುರಾಗ ಹೆಚ್ಚಲು ಬೆಡ್‌ರೂಂ ಹೇಗಿರಬೇಕು?
ಪರಸ್ಪರ ಪ್ರೀತಿ, ಆರೈಕೆ, ಗೌರವ ಇದ್ದರೆ ಮಾತ್ರ ದಂಪತಿ ನಡುವೆ ಆರೋಗ್ಯ ಸಂಬಂಧ ಉಳಿಯಲು ಸಾಧ್ಯ. ದಾಂಪತ್ಯ ಜೀವನ ಆರೋಗ್ಯಕರವಾಗಿದ್ದರೆ ಮಾತ್ರ ಆ ಮನೆಯಲ್ಲಿ ಪ್ರೀತಿ ಇರಲು ಸಾಧ್ಯ, ಒಳ್ಳೆಯ ವಾತಾವರಣ ಇರಲು ಸಾಧ್ಯ. ಇಲ್ಲದಿದ್ದರೆ ಸದಾ ಕಿತ್ತಟ, ಮನಸ್ತಾಪಗಳಿಮದ ಮನಸ್ಸಿನ ನೆಮ್ಮದಿಯೇ ದೂರಾಗಿರುತ್ತದೆ.
ವಾಸ್ತುಗೂ ನಿಮ್ಮ ರೊಮ್ಯಾಂಟಿಕ್ ಲೈಫ್‌ಗೂ ಸಂಬಂಧವಿದೆ ಎನ್ನುತ್ತದೆ ವಾಸ್ತುಶಾಸ್ತ್ರ. ನೀವು ವಾಸ್ತು ನಂಬುವುದಾದರೆ ನಿಮ್ಮ ರೊಮ್ಯಾಂಟಿಕ್ ಜೀವನ ಮತ್ತಷ್ಟು ಸುಮಧುರವಾಗಿಸಲು ವಾಸ್ತುಶಾಸ್ತ್ರದ ಪ್ರಕಾರ ಬೆಡ್ ರೂಂ ಹೇಗಿರಬೇಕು ಎಂದು ನೋಡೋಣ ಬನ್ನಿ:

1. ಮಾಸ್ಟರ್ ಬೆಡ್‌ರೂಂನಲ್ಲಿ ಬೆಡ್‌ನ ಸ್ಥಾನ
ಮನೆಯಲ್ಲಿ ಮಾಸ್ಟರ್ ಬೆಡ್‌ರೂಂನಲ್ಲಿ ಬೆಡ್ ದಕ್ಷಿಣ ಅಥವಾ ನೈರುತ್ಯ ಭಾಗದಲ್ಲಿ ಇರಬೇಕು, ಇವೆರಡರ ಮಧ್ಯ ಇರಬಾರದು, ಇದ್ದರೆ ಸಂಬಂಧದಲ್ಲಿ ಋಣಾತ್ಮಕ ಅಂಶಗಳು ಗ ಹೆಚ್ಚುವುದು.

2. ಮಾಸ್ಟರ್ ಬೆಡ್ ರೂಂನ ದಿಕ್ಕು
ವಾಸ್ತು ಶಾಸ್ತ್ರ ಪ್ರಕಾರ ಬೆಡ್ ರೂಂ ನೈರುತ್ಯ ದಿಕ್ಕಿನಲ್ಲಿರಬೇಕು, ಹೋಗಿದ್ದರೆ ಗಂಡ-ಹೆಂಡತಿ ನಡುವೆ ಕೆಮಿಸ್ಟ್ರಿ ಚೆನ್ನಾಗಿರುತ್ತದೆ. ಸಂಬಂಧದಲ್ಲಿ ಸಮತೋಲನವಿರುತ್ತದೆ.
ಅಲ್ಲದೆ ಬೆಡ್‌ರೂಂ ಸಾಮಾನ್ಯವಾಗಿ ಇರುವ ಶೇಪ್‌ನಲ್ಲಿ ಇರಬೇಕು, ಯಾವುದೇ ಮೂಲೆ ಅಥವಾ ಕಾರ್ನರ್ ಇವೆಲ್ಲಾ ಇರಬಾರದು.

3. ಮೆಟಲ್ ಬೆಡ್ ಬಳಸಬೇಡಿ
ಮೆಟಲ್ ಬೆಡ್ ನಿದ್ದೆಗೆ ಭಂಗ ಉಂಟು ಮಾಡುವುದು ಹಾಗೂ ದಂಪತಿಯಲ್ಲಿ ಒತ್ತಡ ಹೆಚ್ಚಿಸುವುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮಂಚದ ಮೇಲೆ ಅದಕ್ಕೆ ಹೊಂದುವ ಒಂದು ಬೆಡ್ ಇರಲಿ, ಎರಡು ಬೆಡ್‌ಗಳನ್ನು ಜೋಡಿಸಿ ಹಾಕಬೇಡಿ. ಅಲ್ಲದೆ ಬೆಡ್ ಅನ್ನು ಬಾಗಿಲಿನ ಮುಂದುಗಡೆ ಇಡಬೇಡಿ.

4. ಬೆಡ್‌ರೂಂನಲ್ಲಿ ಬಳಸುವ ಬಣ್ಣ
ಬೆಡ್‌ರೂಂನ ಗೋಡೆಯ ಬಣ್ಣ ಆಕರ್ಷಕವಾಗಿರಬೇಕು. ಪಿಂಕ್ ಅಥವಾ ಪೀಚ್ ಬಣ್ಣ ನೈರುತ್ಯ ದಿಕ್ಕಿಗೆ ಬಳಸಿ, ಪಿಂಕ್ ಅಥವಾ ಕೆಂಪು ಬಣ್ಣವನ್ನು ಬೆಡ್ ರೂಂ ಬಳಸಿದರೆ ಬೆಡ್‌ರೂಂ ರೊಮ್ಯಾಂಟಿಕ್ ಆಗಿರುತ್ತದೆ.

5. ಹೆಂಡತಿ ಗಂಡನ ಎಡ ಭಾಗದಲ್ಲಿ ಮಲಗಬೇಕು
ವಾಸ್ತು ಶಾಸ್ತ್ರ ಪ್ರಕಾರ ಹೆಂಡತಿ ಗಂಡನ ಎಡಭಾಗದಲ್ಲಿ ಮಲಗಿದರೆ ಒಳ್ಳೆಯದಂತೆ. ಅಲ್ಲದೆ ಬೆಡ್‌ರೂಂನಲ್ಲಿ ವಸ್ತುಗಳನ್ನು ಚೆಲ್ಲಾಪಿಲ್ಲಿಯಲ್ಲಿ ಇಡದೆ ಒಪ್ಪವಾಗಿ, ಆಕರ್ಷಕವಾಗಿ ಇರುವಂತೆ ಇಡಿ.

6. ಬೆಡ್‌ರೂಂನಲ್ಲಿರುವ ಕನ್ನಡಿ
ಮನೆಯ ಬೆಡ್‌ರೂಂನಲ್ಲಿ ಕನ್ನಡಿಯನ್ನು ಇಡುವಾಗ ಸರಿಯಾದ ಕಡೆಯೇ ಇಡಿ. ಕನ್ನಡಿಯಲ್ಲಿ ಮಂಚದ ಪ್ರತಿಬಿಂಬ ಬೀಳುವಂತೆ ಇಡಲೇಬಾರದು. ಇದರಿಂದ ಸಂಂಬಧದ ಮೇಲೆ ಕೆಟ್ಟ ಪರಿಣಾಮ ಬೀರುವುದು ಮಾತ್ರವಲ್ಲ ಆರೋಗ್ಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುವುದು. ಬೆಡ್‌ರೂಂನಲ್ಲಿ ಕನ್ನಡಿ ಇಡದಿರುವುದೇ ಒಳ್ಳೆಯದು.

7. ಬೆಡ್‌ರೂಂ ಅನ್ನು ಅಂದವಾಗಿ ಇಡಿ
ಮನೆಯ ಈಶಾನ್ಯ ದಿಕ್ಕಿನಲ್ಲಿ ಚೆಲ್ಲಾಪಿಲ್ಲಿಯಾಗಿ ವಸ್ತುಗಳನ್ನು ಇಡದಂತೆ ಎಚ್ಚರವಹಿಸಿ. ಉತ್ತರ ಭಾಗದಲ್ಲಿ ಬಿಳಿ, ನೈರುತ್ಯ ಭಾಗದಲ್ಲಿ ಪಪರ್ಲ್, ಕೆಂಪು ಹೂಗಳ ಗಿಡವನ್ನು ಬೆಳೆಸಿ.

8. ದೇವರ ಫೋಟೋಗಳನ್ನು ಬೆಡ್‌ರೂಂನಲ್ಲಿ ಇಡಬೇಡಿ
ದೇವರ ಫೋಟೋಗಳನ್ನು ಬೆಡ್‌ರೂಂನಲ್ಲಿ ಇಡಬೇಡಿ, ಕುಟುಂಬದ ಫೋಟೋವನ್ನು ಪೂರ್ವ ದಿಕ್ಕಿನಲ್ಲಿ ಇಡಿ.
ಈ ವಾಸ್ತು ಟಿಪ್ಸ್ ದಂಪತಿ ನಡುವೆ ಅನುರಾಗ ಹೆಚ್ಚಿಸುವುದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.



Click it and Unblock the Notifications











