Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮನೆಯ ಶೌಚಾಲಯದ ಸ್ವಚ್ಛತೆ ಹತ್ತು ಮಂದಿ ಮೆಚ್ಚುವಂತಿರಲಿ!
ಮನೆಯ ಶುಭ್ರತೆಯಲ್ಲಿ ನೀವು ಹೆಚ್ಚುವರಿ ಕಾಳಜಿಯನ್ನು ವಹಿಸಬೇಕಾಗುತ್ತದೆ. ಮನೆಯಲ್ಲಿ ಮಕ್ಕಳಿದ್ದರಂತೂ ಮನೆಯ ಸ್ವಚ್ಛತೆಯೆಡೆಗೆ ನೀವು ಹೆಚ್ಚುವರಿ ಗಮನವನ್ನು ಹರಿಸಬೇಕಾಗುತ್ತದೆ. ಮನೆಯ ಸ್ವಚ್ಛತೆಯಲ್ಲಿ ಬಚ್ಚಲು ಮತ್ತು ಶೌಚಾಲಯದ ಸ್ವಚ್ಛತೆ ಕೂಡ ಸೇರಿದೆ. ಈ ಜಾಗ ಶುಭ್ರವಿಲ್ಲದಿದ್ದರೆ ಮನೆಯನ್ನು ಪ್ರವೇಶಿಸುವ ಸೊಳ್ಳೆ, ಜಿರಳೆಗಳಿಗೆ ಇದು ಆಶ್ರಯತಾಣವಾಗಿ ಮಾರ್ಪಡುತ್ತದೆ ಮತ್ತು ನೀವು ಇವುಗಳ ನಿಯಂತ್ರಣವನ್ನು ಮಾಡದೇ ಇದ್ದಲ್ಲಿ ರೋಗಗಳು ಬೇಗನೇ ಮನೆಯವರಿಗೆ ಹರಡಿಬಿಡುತ್ತದೆ.
ಇನ್ನು ನಿಮ್ಮ ಬಚ್ಚಲು ಮನೆ ಮತ್ತು ಶೌಚಾಲಯವನ್ನು ಸ್ವಚ್ಛಗೊಳಿಸುವ ಬ್ರಶ್ ಅನ್ನು ಒಮ್ಮೆ ಬಳಸಿದ ನಂತರ ಅದನ್ನು ನೀಟಾಗಿ ತೊಳೆದಿಡುವ ಅಭ್ಯಾಸವನ್ನು ಮಾಡಿಕೊಳ್ಳಿ. ನೀವು ಶೌಚಾಲಯ ತೊಳೆದ ಬ್ರಶ್ ಅನ್ನು ಬ್ಲೀಚ್ ದ್ರಾವಣದಲ್ಲಿ ಮುಳುಗಿಸಿಡಿ ರಾತ್ರಿ ಪೂರ್ತಿ ಇದು ನೆನೆಯಲಿ ಮರುದಿನ ನಿಮಗೆ ಆಶ್ಚರ್ಯ ಕಾದಿರುತ್ತದೆ. ನಿಮ್ಮ ಬ್ರಶ್ ಸ್ವಚ್ಛವಾಗಿರುತ್ತದೆ. ಅಂತೆಯೇ ಶೌಚಾಯಲದ ಹಿಂಭಾಗದ ಗೋಡೆಯನ್ನು ಸ್ವಚ್ಛ ಮಾಡುವುದು ಕೂಡ ಸವಾಲಿನ ಕೆಲಸವೇ ಆಗಿದೆ.

ಇದಕ್ಕಾಗಿ ಇದನ್ನು ಒರೆಸುವ ಬದಲು ಸೋಂಕುನಿವಾರಕವನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿ ಅದನ್ನು ಸ್ಪ್ರೇ ಮಾಡಿ ಸೋಂಕು ನಿವಾರಕ ರಾತ್ರಿ ಪೂರ್ತಿ ಸೋಂಕುನಿವಾರಕವನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಕೊಂಡು ಅದನ್ನು ಸ್ಪ್ರೇ ಮಾಡಿ ರಾತ್ರಿಪೂರ್ತಿ ಹಾಗೆಯೇ ಬಿಡಿ. ಇದರಿಂದ ಕೊಳೆ ಇರುವ ಭಾಗವನ್ನು ಸುಲಭವಾಗಿ ಸ್ವಚ್ಛ ಮಾಡಬಹುದು. ಅಂತೆಯೇ ಸ್ವಚ್ಛಕವನ್ನು ಗೋಡೆಯ ಮೇಲೆ ಹಾಕಿ ಅದನ್ನು ಹಾಗೆಯೇ ಬಿಡಬಹುದು ಕೂಡ. ನಂತರ ಇದನ್ನು ಸ್ವಚ್ಛ ಬಟ್ಟೆಯಿಂದ ಒರೆಸಿಕೊಳ್ಳಿ. ಗೋಡೆ ಹೊಳೆಯುವವರೆಗೆ ಇದನ್ನು ಮಾಡುತ್ತಿರಿ. ಒಮ್ಮೊಮ್ಮೆ ರಿಮ್‌ನಲ್ಲಿ ಕೊಳೆ ಇದ್ದಾಗ ಅದು ಚೆನ್ನಾಗಿ ಸ್ವಚ್ಛ ಮಾಡುವುದಿಲ್ಲ. ಆದ್ದರಿಂದ ಇದನ್ನು ಸಾಧ್ಯವಾದಷ್ಟು ನೀವು ಚೆನ್ನಾಗಿ ಸ್ವಚ್ಛ ಮಾಡಬೇಕು.
ಬ್ರಶ್
ನಿಮ್ಮ ಟಾಯ್ಲೆಟ್ ರಿಮ್ ಅನ್ನು ಸ್ವಚ್ಛ ಮಾಡುವ ಬ್ರಶ್ ಅನ್ನೇ ಆರಿಸಿ. ನೀವು ರಿಮ್‌ಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಇದನ್ನು ಸ್ವಚ್ಛ ಮಾಡಬೇಕು. ಅಂತೆಯೇ ಗ್ಲೌಸ್ ಬಳಸುವುದನ್ನು ಮರೆಯಬೇಡಿ. ಅಂತೆಯೇ ಇದನ್ನು ಸ್ವಚ್ಛ ಮಾಡುವ ಕಿಟ್ ಕೂಡ ನಿಮ್ಮಲ್ಲಿರಬೇಕು.
ಬಿಳಿ ವಿನೇಗರ್
ನಿಮ್ಮ ಫ್ಲಶ್ ಟ್ಯಾಂಕ್‌ಗೆ ಬಿಳಿ ವಿನೇಗರ್ ಅನ್ನು ಹಾಕಿ ಮತ್ತು ಇದು ಸುವಾಸನೆ ಬೀರುವವರೆಗೆ ಫ್ಲಶ್ ಮಾಡಿ. ನಿಮ್ಮ ಸ್ಯಾನಿಟರಿ ವೇರ್‌ನಲ್ಲಿ ಯಾವುದಾದರೂ ಗಾಢ ನೀರು ಡಿಪಾಸಿಟ್ ಆಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇದೊಂದು ಉತ್ತಮ ಸೋಂಕುನಿವಾರಕವಾಗಿದ್ದು ಕೊಳೆಯನ್ನು ಶೀಘ್ರದಲ್ಲಿಯೇ ನಿವಾರಿಸುತ್ತದೆ. ಫ್ಲಶ್ ಟ್ಯಾಂಕ್‌ಗೆ ವಿನೇಗರ್ ಅನ್ನು ಸುರಿಯುವುದು ನಿಮ್ಮ ವಾರಾಂತ್ಯದ ಶೌಚಾಲಯ ಸ್ವಚ್ಛತೆ ಕೆಲಸವನ್ನು ಸುಲಭಗೊಳಿಸುತ್ತದೆ. ವಿನೇಗರ್ ಜೊತೆಗೆ ಸಿಟ್ರೋನೆಲ್ಲಾ ಅಥವಾ ಇಕ್ಯುಲಿಪ್ಟಸ್ ಆಯಿಲ್ ಅನ್ನು ಸೇರಿಸಿಕೊಳ್ಳಿ ಇದರಿಂದ ಸುವಾಸನೆ ಹಾಗೆಯೇ ಇರುತ್ತದೆ.
ಸರಿಯಾಗಿ ಫ್ಲಶ್ ಮಾಡಿ
ನಿಮ್ಮ ಟಾಯ್ಲೆಟ್ ಅಥವಾ ಶೌಚಾಲಯವನ್ನು ನೀಟಾಗಿ ಇರಿಸಬೇಕು ಎಂದಾದಲ್ಲಿ ಸರಿಯಾಗಿ ಫ್ಲಶ್ ಮಾಡುವುದು ಅತ್ಯವಶ್ಯಕ. ನೀಟಾಗಿ ಫ್ಲಶ್ ಮಾಡುವುದರ ಜೊತೆಗೆ ಫ್ಲಶ್ ಮಾಡಿರುವುದು ಸರಿಯಾಗಿದೆಯೇ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ನೀವು ಫ್ಲಶ್ ಮಾಡಿದಂತೆಲ್ಲಾ ಶೌಚಾಲಯವು ಸಣ್ಣ ಕಣಗಳನ್ನು ಸಿಂಪಡಿಸುವ ಅಭ್ಯಾಸವನ್ನು ಹೊಂದಿರುತ್ತದೆ. ಹಲ್ಲುಜ್ಜುವ ಬ್ರಶ್‌ಗಳಲ್ಲಿ ಇದನ್ನು ಸಂಶೋಧಕರು ಕಂಡುಕೊಂಡಿದ್ದು ಇದು ಎಲ್ಲಿಂದ ಆಗಮಿಸುತ್ತಿದೆ ಎಂಬುದು ಅವರಿಗೆ ಇನ್ನೂ ತಿಳಿದು ಬಂದಿಲ್ಲ. ಇದು ಫ್ಲಶ್ ಮಾಡಿದಾಗಲೆಲ್ಲಾ ಇವುಗಳು ಹೊರಕ್ಕೆ ಬರುತ್ತಲೇ ಇರುತ್ತವೆ. ಆದ್ದರಿಂದ ಸೂಕ್ತವಾಗಿ ಶೌಚಾಲಯದ ಸ್ವಚ್ಛತೆಯನ್ನು ಮಾಡಬೇಕು.



Click it and Unblock the Notifications


