Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಿಕ್ಕದಾದ ಚೊಕ್ಕದಾದ ಮನೆಯ ಸುಂದರತೆಗಾಗಿ ಸರಳ ಟಿಪ್ಸ್
ದೊಡ್ಡ ಅಂತಸ್ತಿರುವ ಬಂಗಲೆಗಿಂತಲೂ ಸಣ್ಣದಾದ ಅಚ್ಚುಕಟ್ಟಾದ ಮನೆಗೆ ಪ್ರಾಶಸ್ತ್ಯ ನೀಡುವ ಸರಳ ಜನರೂ ಇದ್ದಾರೆ. ಮನೆ ಎನ್ನುವುದು ಐಷಾರಾಮವನ್ನು ತೋರಿಸುವ ಭೋಗ್ಯ ವಸ್ತುವಾಗಿರದೇ ನಿತ್ಯವೂ ಮನಶಾಂತಿಯನ್ನು ನೀಡುವ ತೃಪ್ತಿ ಸೂಚಕವಾಗಿರಬೇಕು ಎಂದು ನಂಬುವವರೂ ಇದ್ದಾರೆ. ಮನೆಕಟ್ಟಲು ಪಡುವ ಕಷ್ಟಕ್ಕಿಂತಲೂ ಆ ಕಷ್ಟದ ಹಿಂದಿರುವ ಕನಸುಗಳ ನೇಯ್ಗೆಯೇ ಸುಂದರ ಮನೆಗೆ ಅಡಿಪಾಯವಿದ್ದಂತೆ.

ಸಣ್ಣ ಸಂಸಾರಕ್ಕೆ ಚಿಕ್ಕ ಚೊಕ್ಕ ಅರಮನೆ ಸಾಕು ಎಂಬಂತೆ ಸಣ್ಣ ಮನೆಯೇ ಚೆಂದ ಎಂಬುದು ಹಲವರ ನಂಬಿಕೆ. ಆದರೆ ಮನೆ ಸಣ್ಣದಿರಲಿ ದೊಡ್ಡದಿರಲಿ ನಾವು ಹೆಚ್ಚು ಪ್ರಾಮುಖ್ಯತೆ ಕೊಡಬೇಕಾಗಿರುವುದು ಮನೆಯನ್ನು ನಾವು ಹೇಗೆ ಇಟ್ಟುಕೊಳ್ಳುತ್ತೇವೆ ಎನ್ನುವುದಕ್ಕಾಗಿದೆ. ಹಾಗಿದ್ದರೆ ಸಣ್ಣ ಮನೆಯನ್ನು ಚೊಕ್ಕವಾಗಿ ಅಂದವಾಗಿ ಇರಿಸಿಕೊಳ್ಳುವುದು ಹೇಗೆ ಎಂಬುದಕ್ಕೆ ಪೂರಕವಾಗಿ ಇಂದಿನ ಲೇಖನದಲ್ಲಿ ಕೆಲವೊಂದು ಮುಖ್ಯ ಸಂಗತಿಗಳನ್ನು ನಾವು ಹಂಚಿಕೊಳ್ಳಲಿದ್ದೇವೆ.
ಪ್ರತಿಯೊಂದು ಕೊಠಡಿಯೂ ಅದರದ್ದೇ ಆದ ವಿನ್ಯಾಸಗಳನ್ನು ಪಡೆದುಕೊಂಡಿರುವುದರಿಂದ ಹೆಚ್ಚಿನ ಮುತುವರ್ಜಿ ವಹಿಸಿ ಇವುಗಳ ಅಲಂಕಾರಗಳನ್ನು ನಾವು ಮಾಡಬೇಕಾಗುತ್ತದೆ. ಎಲ್ಲೆಂದರಲ್ಲಿ ಪೀಠೋಪಕರಣಗಳನ್ನು ತುರುಕದೇ ಅಸ್ಥೆಯಿಂದ ಕೊಠಡಿಗಳ ಅಲಂಕಾರವನ್ನು ಮಾಡಿದರೆ ಆಯಿತು ನಿಮ್ಮ ಸಣ್ಣ ಮನೆ ಕೂಡ ಅರಮನೆಯಾಗುವುದರಲ್ಲಿ ಸಂದೇಹವೇ ಬೇಡ.
ಕೊಠಡಿಗಳಲ್ಲಿ ಅನಗತ್ಯ ವಸ್ತುಗಳನ್ನು ತುಂಬದಿರಿ
ನಿಮ್ಮ ಮಲಗುವ ಕೋಣೆಯೇ ಆಗಿರಲಿ ಇಲ್ಲವೇ ನಡುಮನೆಯೇ ಆಗಿರಲಿ, ಯಾವಾಗಲೂ ಸೂಕ್ತವಾಗಿರುವ ಪೀಠೋಕರಣಗಳನ್ನೇ ಆಯ್ಕೆಮಾಡಿಕೊಳ್ಳಿ. ಇದರಿಂದ ಕೊಠಡಿ ತುಂಬಿದಂತೆ ಕಾಣುವುದಿಲ್ಲ. ಹೆಚ್ಚು ವಿನ್ಯಾಸವುಳ್ಳ ಸೋಫಾ ಸೆಟ್ಸ್ ಅನ್ನು ಬಳಸಿ ಕೊಠಡಿಯನ್ನು ತುಂಬಿಸದಿರಿ.
ಮಲಗುವ ಕೋಣೆಯ ಅಂದ
ಸಣ್ಣ ಮನೆಗಳಿಗೆ ಫ್ಲೋರ್ ವಿನ್ಯಾಸಗಳನ್ನು ನೀವು ಮಾಡುತ್ತೀರಿ ಎಂದಾದಲ್ಲಿ, ನಿಮ್ಮ ಮಲಗುವ ಕೋಣೆಯಲ್ಲಿ ಬೆಡ್ ಹಾಕಿಸಿಕೊಳ್ಳಿ. ಎಲ್ಸಿಡಿ ಟಿವಿಗಳಂತಹ ಪರ್ಯಾಯ ವ್ಯವಸ್ಥೆಯನ್ನು ಮಾಡಿ ಕೊಠಡಿಯನ್ನು ಅಚ್ಚುಕಟ್ಟಾಗಿಸಿ. ಇನ್ನು ಕುಳಿತುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದಾದಲ್ಲಿ ಬೀನ್ ಬ್ಯಾಗ್ ಇದಕ್ಕೆ ಸೂಕ್ತ.
ಕರ್ಟನ್ಗಳ ಮೇಲೆ ಗಮನ ಹರಿಸಿ
ಸಣ್ಣ ಬಚ್ಚಲುಮನೆಯನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ ಒಂದೇ ಬಣ್ಣವನ್ನು ಬಳಸಿ ಬಚ್ಚಲು ಮನೆಯನ್ನು ಸಿಂಗರಿಸಿ. ಗೋಡೆಯ ಬಣ್ಣ ತಿಳಿಯಾಗಿದೆ ಎಂದಾದಲ್ಲಿ, ನೆಲಕ್ಕೆ ಮಂದ ಟೈಲ್ಸ್ಗಳನ್ನು ಬಳಸಿ. ಅಂತೆಯೇ ಕೊಮೊಡೊ, ಬೇಸಿನ್ಸ್ ಇದಕ್ಕೂ ಇದೇ ಬಣ್ಣವನ್ನು ಬಳಸಿ. ಇದು ಸಣ್ಣ ಮನೆಗೆ ಪೂರಕವಾಗಿರುವ ಅಲಂಕಾರಗಳಾಗಿವೆ.
ಲಿವಿಂಗ್ ರೂಮ್ ಅಂದಗೊಳಿಸಿ



Click it and Unblock the Notifications



