Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಮನೆಯ ಸ್ವಚ್ಛತೆಗೆ, ಒಂದಿಷ್ಟು ನೈಸರ್ಗಿಕ ಪರಿಹಾರೋಪಾಯ
ಮನೆ ಎಂದರೆ ಅದು ಬರಿ ಹೊರಗಿನ ನೋಟಕ್ಕೆ ಮಾತ್ರವೇ ಸುಂದರ ಸೌಧವಾಗಿರದೇ ಒಳಗಡೆಯೂ ಅರಮನೆಯಂತೆ ಅಲಂಕೃತವಾಗಿ ಮನಸೂರೆಗೊಂಡಿರಬೇಕು. ಇದಕ್ಕೆಂದು ನೀವು ಮನೆಯ ಅಲಂಕಾರಕ್ಕಾಗಿ ದುಬಾರಿ ವಸ್ತುಗಳನ್ನು ಖರೀದಿಸಿ ಅದನ್ನು ಜೋಡಿಸಿ ಸಿಂಗಾರಗೊಳಿಸುವುದಲ್ಲ. ಮನೆಯ ಸ್ವಚ್ಛತೆಯನ್ನು ನೀಟಾಗಿ ಕಾಪಾಡಿಕೊಳ್ಳುವುದಾಗಿದೆ.
ಅದರಲ್ಲೂ ಸಣ್ಣ ಮಕ್ಕಳು ಇದ್ದ ಮನೆ ಕೇಳಬೇಕೇ..? ತಮ್ಮ ತುಂಟಾಟದ ನಡುವೆ ಆಹಾರ ಪದಾರ್ಥಗಳನ್ನು ಮನೆ ತುಂಬಾ ಬಿಸಾಡಿ, ಮನೆಯನ್ನು ಇನ್ನಷ್ಟು ಕೊಳಕು ಮಾಡಿ ಬಿಡುತ್ತಾರೆ. ಇಷ್ಟು ಸಾಲದೆಂಬಂತೆ ಹೊರಗಡೆಯ ಕೊಳೆ, ಧೂಳು, ಕೆಸರು ಮೆಟ್ಟಿಕೊಂಡು ಮನೆಯೊಳಗೆ ಅಡಿ ಇಟ್ಟಾಗ ಮನೆ ಹೊಲಸಾಗುತ್ತದೆ. ಆಗ ಮನೆಯ ಸ್ವಚ್ಛತೆಯ ಜವಬ್ದಾರಿ ಮನೆಯೊಡತಿಯ ಮೇಲಿರುತ್ತದೆ. ಆ ಸಂದರ್ಭದಲ್ಲಿ ಆಗಾಗ್ಗೆಯಾದರೂ ಮನೆಯ ಸ್ವಚ್ಛತೆಯನ್ನು ಮಾಡಬೇಕಾಗುತ್ತದೆ. ಸ್ವಚ್ಛತೆಯೇ ಮನೆಯ ನಿಜವಾದ ಶಕ್ತಿ
ಮನೆಯ ಸ್ವಚ್ಛತೆ ಕೊಂಚ ಕಷ್ಟದ ಕೆಲಸವಾದರೂ ಇದರಿಂದ ನಿಮ್ಮ ದೇಹಕ್ಕೆ ವ್ಯಾಯಾಮ ದೊರಕುವುದು ಖಂಡಿತ. ಸ್ವಚ್ಛತೆಯ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ಉತ್ಪನ್ನಗಳನ್ನು ಬಳಸುವುದಕ್ಕಿಂತ ಸರಳವಾಗಿ ಮನೆಯ ಸ್ವಚ್ಛತೆಯನ್ನು ನೈಸರ್ಗಿಕ ವಿಧಾನದಲ್ಲೇ ಮಾಡಬಹುದಾಗಿದೆ. ಟಿವಿಯಲ್ಲಿ ಬರುವ ಮನೆ ಸ್ವಚ್ಛಕ ಉತ್ಪನ್ನಗಳು ಮೇಲ್ನೋಟಕ್ಕೆ ಮನೆಯನ್ನು ಥಳಥಳ ಹೊಳೆಯುವಂತೆ ಮಾಡಿದರೂ ಮುಕ್ಕಾಲು ಪಾಲು ಇದು ರಾಸಾಯನಿಕಗಳ ಆಗರವಾಗಿರುತ್ತದೆ. ಮನೆಯ ಸ್ವಚ್ಛತೆ- ಮೋಡಿ ಮಾಡುವ ಅಂಟುವಾಳ ಕಾಯಿ!
ಮಕ್ಕಳಿರುವ ಮನೆಗಳಲ್ಲಿ ಈ ರಾಸಾಯನಿಕಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು. ಏಕೆಂದರೆ ಅವರುಗಳು ನೆಲದಲ್ಲಿ ಬಿದ್ದಂತಹ ಆಹಾರ ವಸ್ತುಗಳನ್ನೇ ಅಧಿಕವಾಗಿ ಸೇವಿಸುವುದರಿಂದ ಈ ರಾಸಾಯನಿಕಗಳ ಪರಿಣಾಮ ಅವರ ಮೇಲಾಗುವುದು ಖಂಡಿತ. ರಾಸಾಯನಿಕ ಸ್ವಚ್ಛಕಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ನೈಸರ್ಗಿಕ ವಿಧಾನಗಳನ್ನೇ ಆಯ್ದುಕೊಳ್ಳಿ. ಹಾಗಿದ್ದರೆ ತಡಮಾಡದೇ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡಿರುವ ಮಾಹಿತಿಗಳನ್ನು ನೋಡಿ ಮನೆಯನ್ನು ಸ್ವಚ್ಛಗೊಳಿಸಿ...

ಬೇಕಿಂಗ್ ಸೋಡಾ
ಗ್ರೀಸ್ ಕಲೆಗಳು ಮತ್ತು ನೆಲದಲ್ಲಿ ಉಂಟಾದ ತರಚು ಕಲೆಗಳು ಮನೆಯ ಅಂದವನ್ನು ಕೆಡಿಸಿಬಿಡುತ್ತವೆ. ಈ ಕಲೆಗಳನ್ನು ಹೋಗಲಾಡಿಸುವುದು ಅಷ್ಟೊಂದು ಸುಲಭದ ಮಾತಲ್ಲ. ನಿಮ್ಮ ಅಡುಗೆ ಮನೆಯಲ್ಲಿ ಬೇಕಿಂಗ್ ಸೋಡಾ ಇದೆಯೇ? ಕಲೆಗಳ ಮೇಲೆ ಬೇಕಿಂಗ್ ಸೋಡಾವನ್ನು ಸಿಂಪಡಿಸಿ ಮತ್ತು ಒದ್ದೆ ಬಟ್ಟೆಯಿಂದ ಅದನ್ನು ಒರೆಸಿ. ಉಗುರು ಬೆಚ್ಚಗಿನ ನೀರಿನಲ್ಲಿ ಬಟ್ಟೆ ಒದ್ದೆಮಾಡಲು ಮಾತ್ರ ಮರೆಯದಿರಿ.

ವಿನೇಗರ್
ನೆಲದ ಮೇಲೆ ಬಳಸಬಹುದಾದ ನೈಸರ್ಗಿಕ ಪರಿಹಾರಗಳಲ್ಲಿ ವಿನೇಗರ್ ಕೂಡ ಒಂದು. ಅರ್ಧ ಕಪ್‌ನಷ್ಟು ಡಿಸ್ಟೆಲ್ಡ್ ಬಿಳಿ ವಿನೇಗರ್ ಅನ್ನು ಅರ್ಧ ಬಕೇಟ್ ನೀರಿಗೆ ಹಾಕಿ. ಇದಕ್ಕೆ ಲಿಂಬೆ ರಸವನ್ನು ಸೇರಿಸಿ ದ್ರಾವಣವನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಬಹುದು. ಈ ವಿಧಾನವನ್ನು ಬಳಸಿಕೊಂಡು ಕೊಳೆಯಾದ ನೆಲವನ್ನು ಒರೆಸಿ.

ಆಲೀವ್ ಆಯಿಲ್
ನಿಮ್ಮ ಮನೆಯ ನೆಲವನ್ನು ಆಯಿಲ್ ಎಣ್ಣೆ ಇನ್ನಷ್ಟು ಎಣ್ಣೆಯುಕ್ತಗೊಳಿಸಬಹುದು ಎಂಬುದು ನಿಮ್ಮ ಯೋಚನೆಯಾಗಿರಬಹುದು. ಆದರೆ ನೆಲವನ್ನು ಸ್ಚಚ್ಛಗೊಳಿಸುವ ವಿಷಯದಲ್ಲಿ ಆಲೀವ್ ಎಣ್ಣೆ ಅತ್ಯಂತ ಪರಿಣಾಮಕಾರಿಯಾದುದು. ಆಲೀವ್ ಆಯಿಲ್ ಹಾಗೂ ವಿನೇಗರ್ ಅನ್ನು ಬಳಸಿಕೊಂಡು ದ್ರಾವಣವನ್ನು ಸಿದ್ಧಪಡಿಸಿಕೊಳ್ಳಿ ಮತ್ತು ಇದನ್ನು ಬಳಸಿ ನೆಲವನ್ನು ಒರೆಸಿ. ಇದು ನೆಲವನ್ನು ಹೊಳೆಯಿಸುವುದು ಮಾತ್ರವಲ್ಲದೆ ನೆಲದ ಸಾಮಾಗ್ರಿಯನ್ನು ಮಾಯಿಶ್ಚರೈಸ್ ಮಾಡುತ್ತದೆ

ಡಿಶ್ ಸೋಪ್
ಡಿಶ್ ಸೋಪ್ ನೈಸರ್ಗಿಕ ಪರಿಹಾರಕವಲ್ಲದಿದ್ದರೂ ಮನೆಯ ಸ್ವಚ್ಛತೆಯ ವಿಷಯದಲ್ಲಿ ಇದು ಪರಿಣಾಮಕಾರಿಯಾದುದು. ಮೃದುವಾಗಿರುವ ಸೋಪ್ ಅನ್ನು ಇದಕ್ಕಾಗಿ ಬಳಸಿಕೊಳ್ಳಿ ಅಂತೆಯೇ ಎಲ್ಲಾ ಪ್ರಕಾರದ ನೆಲವನ್ನು ಸ್ವಚ್ಛಗೊಳಿಸಲೂ ಇದು ಸಹಕಾರಿಯಾಗಿದೆ. ಈ ಸೋಪಿನಿಂದ ದ್ರಾವಣವನ್ನು ಸಿದ್ಧಪಡಿಸಿಕೊಳ್ಳಿ ಅದಕ್ಕೆ ಲಿಂಬೆ ರಸ ಮತ್ತು ವಿನೇಗರ್ ಅನ್ನು ಮಿಶ್ರ ಮಾಡಿ ನಂತರ ನೆಲವನ್ನು ಸ್ವಚ್ಛಗೊಳಿಸಿ.

ರೈ ಬ್ರೆಡ್
ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ನೆಲದಲ್ಲಿ ಅವರುಗಳು ಚಿತ್ರ ಬಿಡಿಸುವುದು ಸಹಜವೇ ಆಗಿದೆ. ಈ ಕಲೆಗಳನ್ನು ತೆಗೆಯುವುದು ಹೇಗೆ ಎಂಬ ಚಿಂತೆ ನಿಮ್ಮದಾಗಿದ್ದರೆ ಇಲ್ಲಿದೆ ಸಲಹೆ. ರೈ ಬ್ರೆಡ್ ಅನ್ನು ಸ್ಲೈಸ್‌ನಂತೆ ತುಂಡರಿಸಿಕೊಳ್ಳಿ ಮತ್ತು ಕಲೆಗಳಿರುವ ನೆಲದಲ್ಲಿ ಅದರಿಂದ ಒರೆಸಿ. ಕಲೆಗಳು ಮಾಯವಾಗುವುದನ್ನು ನೀವು ನೋಡಬಹುದಾಗಿದೆ.



Click it and Unblock the Notifications











