ಮರಹುಳುಗಳಿಂದ ಪೀಠೋಪಕರಣಗಳ ಸಂರಕ್ಷಣೆ ಹೇಗೆ?

By Jaya subramanya

ಮನೆಯ ಪೀಠೋಪಕರಣಗಳ ಅಂದಕ್ಕೆ ನೀವು ಹೆಚ್ಚಿನ ಗಮನವನ್ನು ನೀಡಿದಂತೆ ಅದು ಬಹುಕಾಲ ಬಾಳಿಕೆ ಬರುವಂತೆ ಮಾಡಬಹುದಾಗಿದೆ. ಮರದ ಪೀಠೋಪಕರಣಗಳು ನಿಮ್ಮ ಚೆಂದದ ಮನೆಯ ಸೌಂದರ್ಯವನ್ನು ಇಮ್ಮಡಿಸುವಂತೆ ಅದರ ಸ್ವಚ್ಛತೆ ಮತ್ತು ಬಾಳಿಕೆಯ ಕಡೆಗೂ ನೀವು ಗಮನ ನೀಡಬೇಕಾದ್ದು ಅನಿವಾರ್ಯವಾಗಿದೆ. ದುಬಾರಿ ಬೆಲೆ ನೀಡಿ ಖರೀದಿಸಿದ ಮರದ ಪೀಠೋಪಕರಣ ಹಾಳಾಗುತ್ತಿದೆ ಇಲ್ಲವೇ ಕುಂಬಾಗುತ್ತಿದೆ ಎಂದಾಗ ನಿಜಕ್ಕೂ ಇದು ಭರಿಸಲಾಗದ ನಷ್ಟವಾಗಿ ಪರಿಣಮಿಸುತ್ತದೆ.

How To Get Rid Of Woodworms?

ಅದರಲ್ಲೂ ಮರಹುಳುಗಳು ಮರದ ಪೀಠೋಪಕರಣಗಳನ್ನು ಹಾಳು ಮಾಡುವ ಬದ್ಧವೈರಿಗಳು ಎಂದೆನಿಸಿವೆ. ಪೀಠೋಪಕರಣಗಳನ್ನು ಆಳದಿಂದಲೇ ಹಾಳುಗೆಡವಿ ಅದು ಕುಂಬಾಗುವಂತೆ ಇವುಗಳು ಮಾಡುತ್ತವೆ. ಆದರೆ ಇವುಗಳನ್ನು ನೀವು ಹೀಗೆಯೇ ಬಿಟ್ಟರೆ ನಿಮ್ಮ ಪೀಠೋಪಕರಣಗಳನ್ನು ಮೂಲೆಗೆ ಹಾಕುವ ಪರಿಸ್ಥಿತಿ ನಿಮಗೆ ಒದಗಿಬರಬಹುದು. ಆದರೆ ಹೀಗೆ ಆಗುವ ಮುನ್ನವೇ ನೀವು ಕೆಲವೊಂದು ಎಚ್ಚರಿಕೆಗಳನ್ನು ತೆಗೆದುಕೊಂಡಾಗ ಮರಹುಳುಗಳ ಉಪಟಳದಿಂದ ಪೀಠೋಪಕರಣಗಳ ಸಂರಕ್ಷಣೆಯನ್ನು ನಡೆಸಬಹುದಾಗಿದೆ. ಕೆಳಗೆ ನಾವು ನೀಡಿರುವ ಕೆಲವೊಂದು ಸಲಹೆಗಳು ಮರಹುಳುಗಳಿಂದ ನಿಮ್ಮ ಮನೆಯ ಪೀಠೋಪಕರಣಗಳನ್ನು ಸಂರಕ್ಷಿಸಲು ಸಹಕಾರಿ ಎಂದೆನಿಸಲಿದೆ. ಮರದ ಪೀಠೋಪಕರಣಗಳಿಗೆ ಹೊಸ ಲುಕ್ ನೀಡಲು ಟಿಪ್ಸ್

ಮರಹುಳುಗಳ ಪ್ರಸ್ತುತಿ
ನಿಮ್ಮ ಪೀಠೋಪಕರಣಗಳಲ್ಲಿ ಮರಹುಳುಗಳು ಎಲ್ಲಿವೆ ಎಂಬುದನ್ನು ಮೊದಲು ಕಂಡುಕೊಳ್ಳಿ. ಪೀಠೋಪಕರಣಗಳ ಸುತ್ತಲಿನ ವಲಯವನ್ನು ಪರಿಶೀಲನೆ ಮಾಡುವ ಮೂಲಕ ಇದನ್ನು ಕಂಡುಕೊಳ್ಳಬಹುದಾಗಿದೆ. ಸಣ್ಣ ಸಣ್ಣ ತೂತುಗಳಲ್ಲಿ ಇವುಗಳು ಯಾವಾಗಲೂ ಇರುತ್ತವೆ. ಮರದ ಮೇಲ್ಮೈಯಲ್ಲಿ ನಿಮಗೆ ಇದನ್ನು ಕಂಡುಕೊಳ್ಳಬಹುದಾಗಿದೆ. ಮರದ ಪೀಠೋಪಕರಣಗಳ ಮೇಲ್ಮೈಯಲ್ಲಿ ಇವುಗಳು ಸಾಲಾಗಿ ಇರುತ್ತವೆ. ಸಣ್ಣ ಭಾಗದಲ್ಲಿ ನಿಮಗೆ ಈ ರೀತಿಯ ವ್ಯತ್ಯಾಸವನ್ನು ಕಂಡುಕೊಳ್ಳಬಹುದಾಗಿದೆ. ಆದ್ದರಿಂದ ಈ ಜಾಗದಲ್ಲಿ ಕೂಡಲೇ ನೀವು ಕ್ರಮ ತೆಗೆದುಕೊಳ್ಳಬಹುದು.

ನಷ್ಟದ ಪ್ರಮಾಣವನ್ನು ಕಂಡುಕೊಳ್ಳಿ

ಹೆಚ್ಚಿನ ಸಂದರ್ಭಗಳಲ್ಲಿ ಮರಹುಳುಗಳನ್ನು ಮರದ ಮೇಲ್ಭಾಗದಲ್ಲಿ ಕೂಡ ನಿಮಗೆ ಕಾಣಬಹುದು. ಮಧ್ಯಭಾಗ ಮತ್ತು ಸಂಪರ್ಕ ಭಾಗಕ್ಕೆ ಇವುಗಳು ತೊಂದರೆಯನ್ನು ಉಂಟುಮಾಡಿರುವುದಿಲ್ಲ. ಕೆಲ ಸಂದರ್ಭಗಳಲ್ಲಿ ಮರವನ್ನು ನಮಗೆ ಬದಲಾಯಿಸಬಹುದಾಗಿದೆ. ಮರ ತುಂಡು ತುಂಡಾಗಿ ಬೀಳುತ್ತಿದೆ ಎಂದಾದಲ್ಲಿ ಪೀಠೋಪಕರಣಗಳನ್ನು ಇವುಗಳು ಬಹುಭಾಗ ಅಕ್ರಮಿಸಿಕೊಂಡಿವೆ ಎಂದಾಗಿದೆ ಅಂತೆಯೇ ಪೀಠೋಪಕರಣವನ್ನು ಕಾಪಾಡಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಒದಗಿಬರುತ್ತದೆ.

ಕೀಟನಾಶಕಗಳನ್ನು ಬಳಸುವುದು ಹೇಗೆ?
ಮಾರುಕಟ್ಟೆಯಲ್ಲಿ ಮರಹುಳುಗಳ ನಿಯಂತ್ರಣಕ್ಕಾಗಿ ಹಲವಾರು ಔಷಧಗಳು ದೊರೆಯಲಿವೆ. ಇದರಿಂದ ಪೀಠೋಪಕರಣಗಳನ್ನು ಕಾಪಾಡಿಕೊಳ್ಳಬಹುದಾಗಿದೆ. ಆದರೆ ಈ ಕ್ರಿಮಿನಾಶಕಗಳು ಬಲವಾದ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ ಅಂತೆಯೇ ಇವುಗಳು ನಿಮ್ಮ ಆರೋಗ್ಯದ ಮೇಲೂ ದುಷ್ಪರಿಣಾಮವನ್ನು ಬೀರಬಹುದು. ಇದನ್ನು ಸಿಂಪಡಿಸುವ ಮುನ್ನ ನೀವು ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಔಷಧವನ್ನು ಸಿಂಪಡಿಸುವ ಮುನ್ನ ಮುಖಕ್ಕೆ ಮಾಸ್ಕ್ ಅನ್ನು ಧರಿಸಿ ಅಂತೆಯೇ ಗ್ಲೌಸ್ ಮತ್ತು ಕನ್ನಡಕಗಳನ್ನು ಬಳಸಿಕೊಳ್ಳಿ. ಇವುಗಳು ನಿಮ್ಮ ಮುಖ ಮತ್ತು ಕಣ್ಣುಗಳಿಗೆ ಉಂಟಾಗುವ ಹಾನಿಯನ್ನು ತಡೆಯುತ್ತದೆ. ಮರದ ಪೀಠೋಪಕರಣಗಳ ನಿರ್ವಹಣೆ ಹೇಗಿರಬೇಕು?

ಔಷಧವನ್ನು ನೀವೇ ಸಿದ್ಧಪಡಿಸಿಕೊಳ್ಳುವುದು ಹೇಗೆ
ಔಷಧಗಳು ಯಾವಗಲೂ ದಪ್ಪನೆಯ ರೂಪದಲ್ಲಿ ಇರುವುದರಿಂದ ಇದಕ್ಕೆ ನೀರನ್ನು ಬೆರೆಸಿ ಅದನ್ನು ಸಮನಾಗಿಸಿಕೊಳ್ಳಿ. ಉತ್ಪನ್ನದ ಮೇಲೆ ಬರೆದಿರುವ ಸೂಚನೆಗಳನ್ನು ಕಡ್ಡಾಯವಾಗಿ ಓದಿಕೊಳ್ಳಿ. ಕ್ರಿಮಿನಾಶಕವನ್ನು ನೇರವಾಗಿ ಬಳಸದೇ ಕೆಳಗೆ ನಾವು ತಿಳಿಸಿರುವ ಮಾಹಿತಿಯ ಮೇರೆಗೆ ಬಳಸಿ

ಪಂಪ್ ಸ್ಪ್ರೇಯರ್‎ಗೆ ರಾಸಾಯನಿಕ ದ್ರಾವಣವನ್ನು ವರ್ಗಾಯಿಸಿ
ಪ್ಲೇನ್ ಪಂಪ್ ಸ್ಪ್ರೇಯರ್ ಅನ್ನು ಬಳಸುವುದು ಮರಹುಳುಗಳ ದಾಳಿಯಿಂದ ಸಂರಕ್ಷಿಸಿಕೊಳ್ಳುವ ಉತ್ತಮ ವಿಧಾನವಾಗಿದೆ. ಪಂಪ್ ಸ್ಪ್ರೇಯರ್‎ಗೆ ಔಷಧವನ್ನು ವರ್ಗಾಯಿಸಿದ ನಂತರ ಅದರ ಮುಚ್ಚಳವನ್ನು ಬಿಗಿಯಾಗಿ ಭದ್ರಪಡಿಸಿಕೊಳ್ಳಿ ಮರಹುಳುಗಳು ಇರುವಂತಹ ಸ್ಥಳ ಇಲ್ಲವೇ ಹಾಳಾಗಿರುವ ಪೀಠೋಪಕರಣದ ಭಾಗಕ್ಕೆ ಸ್ಪ್ರೇ ಮಾಡಿ. ಪೀಠೋಪಕರಣದ ಸುತ್ತಲೂ ರಾಸಾಯನಿಕವನ್ನು ಸಿಂಪಡಿಸಿ ಇದರಿಂದ ಆ ಜಾಗಕ್ಕೆ ಮರುಹುಳುಗಳು ಬರದಂತೆ ನೋಡಿಕೊಳ್ಳಬಹುದಾಗಿದೆ. ಔಷಧವನ್ನು ಸಿಂಡಪಸಿದ ನಂತರ ಅದನ್ನು ಒಣಗಲು ಬಿಡಿ. ಪೀಠೋಪಕರಣಗಳ ಆಳಕ್ಕೆ ಔಷಧ ಇಳಿದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಇದು ಸಹಕಾರಿಯಾಗಿರುತ್ತದೆ.

X
Desktop Bottom Promotion