Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ಸಣ್ಣ ಅಡುಗೆ ಕೋಣೆಯಲ್ಲೂ ಮಾಡಿ ಕಮಾಲಿನ ಕೈಚಳಕ!
ಗೃಹಿಣಿಯರಿಗೆ ತಮ್ಮ ಅಡುಗೆ ಮನೆ ಎಂಬುದು ಬರಿಯ ಆಹಾರವನ್ನು ಮಾತ್ರ ತಯಾರಿಸುವ ಸ್ಥಳವಾಗಿರುವುದಿಲ್ಲ. ತಮ್ಮ ಮನೆಮಂದಿಯ ಆರೋಗ್ಯವನ್ನು ಕಾಪಾಡುವ, ರುಚಿಯಾದ ಶುಚಿಯಾದ ಭಕ್ಷ್ಯ ಭೋಜನಗಳನ್ನು ತಯಾರಿಸುವ ಈ ಜಾಗ ಅವರಿಗೆ ಪೂಜನೀಯವಾಗಿರುತ್ತದೆ. ಆದ್ದರಿಂದಲೇ ಅವರುಗಳು ಅಡುಗೆ ಮಾಡುವುದರ ಜೊತೆಗೆ ಅಲ್ಲಿನ ಸ್ವಚ್ಛತೆಗೂ ಪ್ರಾಮುಖ್ಯತೆಯನ್ನು ನೀಡುತ್ತಾರೆ.

ಮನೆಯಲ್ಲಿರುವ ಗೃಹಿಣಿಯರಿಗೆ ಅಡುಗೆ ಮನೆಯ ಕ್ಲೀನಿಂಗ್ ಪ್ರಮುಖ ಕೆಲಸವಾಗಿರುವುದಿಲ್ಲ. ಆದರೆ ಕೆಲಸಕ್ಕೆ ಹೋಗುವ ಹೆಂಗಳೆಯರಿಗೆ ಅಡುಗೆ ಮಾಡುವುದೇ ಹರಸಾಹಸವಾಗಿರುವಾಗ ಅಡುಗೆ ಮನೆಯನ್ನು ಸ್ವಚ್ಛಗೊಳಿಸುವುದು ತಲೆನೋವಿನ ಕೆಲಸವಾಗಿರುತ್ತದೆ. ಅಚ್ಚುಕಟ್ಟಾದ ಅಡುಗೆಮನೆಯ ಅಂದಕ್ಕಾಗಿ ಟಾಪ್ ಸಲಹೆಗಳು
ಹಾಗಿದ್ದರೆ ಈ ತಲೆನೋವಿಗೆ ಉಪಶಮನವನ್ನು ನೀಡುವ ಪರಿಹಾರದೊಂದಿಗೆ ನಾವು ಬಂದಿದ್ದೇವೆ. ಈ ಕೆಲಸ ಅಷ್ಟೇನೂ ತಲೆನೋವಿದ್ದಲ್ಲ. ಕೆಲವೊಂದು ವ್ಯವಸ್ಥೆಗಳನ್ನು ನಿಯೋಜಿಸುವುದರ ಮೂಲಕ, ನಿಯಮಗಳನ್ನು ಪಾಲಿಸುವುದರ ಮೂಲಕ ಅಡುಗೆ ಮನೆಯನ್ನು ವ್ಯವಸ್ಥಿತಿವಾಗಿ ಇರಿಸಿಕೊಳ್ಳಬಹುದಾಗಿದೆ. ಬನ್ನಿ ಅದೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.
ಗೋಡೆಗಳನ್ನು ಬಳಸಿಕೊಳ್ಳಿ
ನಿಮ್ಮ ಪ್ಲಾಟ್ಫಾರ್ಮ್ನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಜೋಡಿಸುವುದರ ಬದಲಿಗೆ ಗೋಡೆಗಳನ್ನು ಬಳಸಿಕೊಳ್ಳಿ. ಸ್ವಚ್ಛ ಬಟ್ಟೆಗಳು, ಸ್ಪೂನ್ಗಳು, ಕಟ್ಟಿಂಗ್ ಬೋರ್ಡ್, ಹುಕ್ಸ್ನೊಂದಿಗಿರುವ ಪ್ಯಾನ್ಸ್, ಚಾಕು ಅಥವಾ ಲೈಟರ್ಗಳನ್ನು ತೂಗುಹಾಕಿ. ಇದಕ್ಕೆ ಗೋಡೆಯನ್ನು ಬಳಸಿ. ಅಡುಗೆಯ ಬಳಿಕ, ಮನೆ ಸಾಮಗ್ರಿಗಳ ಸ್ವಚ್ಛತೆ ಹೀಗಿರಲಿ
ಪರಿಕರಗಳನ್ನು ಜೋಡಿಸಿ
ನಿಮ್ಮ ಅಡುಗೆ ಮನೆಯಲ್ಲಿ ಸಾಕಷ್ಟು ಪರಿಕರಗಳಿರುತ್ತವೆ. ಇವುಗಳಲ್ಲಿ ಹೆಚ್ಚಿನದನ್ನು ನೀವು ಬಳಸಿರುವುದಿಲ್ಲ. ನಿಮ್ಮ ಅಡುಗೆ ಮನೆಯಲ್ಲಿ ಪರಿಕರಗಳನ್ನು ಜೋಡಿಸುವಾಗ ಅವುಗಳನ್ನು ನೀವು ಹೇಗೆ ಬಳಸುತ್ತೀರಿ ಎಂಬುದನ್ನು ಆಧರಿಸಿ ಅವುಗಳನ್ನು ಬಳಸಿ.
ಸಿಂಕ್ನ ಕೆಳಗಿನ ಸ್ಥಳವನ್ನು ಬಳಸಿಕೊಳ್ಳಿ
ಸಿಂಕ್ನ ಕೆಳಗಿರುವ ಜಾಗವನ್ನು ಸಣ್ಣ ಅಡುಗೆ ಮನೆಯಲ್ಲಿ ಬಳಸಿಕೊಳ್ಳಬಹುದಾಗಿದೆ. ಇಲ್ಲಿ ಸಣ್ಣ ಕ್ಯಾಬಿನೇಟ್ ಡೋರ್ ಅನ್ನು ಅಳವಡಿಸುವುದರ ಮೂಲಕ ವಸ್ತುಗಳನ್ನು ಇರಿಸಿಕೊಳ್ಳಬಹುದಾಗಿದೆ. ಸ್ವಚ್ಛಮಾಡುವ ಬ್ರಶ್ಗಳು, ದ್ರಾವಣಗಳು ಮತ್ತು ಲೋಶನ್ಗಳು ಅಥವಾ ಇತರ ಸ್ವಚ್ಛತಾ ಸಾಮಾಗ್ರಿಗಳನ್ನು ಈ ಸ್ಥಳದಲ್ಲಿ ಇರಿಸಿ.
ಕ್ಯಾಬಿನೇಟ್ ಮೇಲೆ
ಸಣ್ಣ ಅಡುಗೆ ಕೋಣೆಯಲ್ಲಿ ನಿಮಗೆ ಸ್ಥಳಾವಕಾಶ ಕೂಡ ಕಡಿಮೆ ಇರುತ್ತದೆ. ನಿಮ್ಮ ಸಣ್ಣ ಅಡುಗೆ ಕೋಣೆಯನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ನೀವು ಅರಿತಿದ್ದರೆ, ಇಲ್ಲಿದೆ ಉತ್ತಮ ಉಪಾಯ! ಕ್ಯಾಬಿನೇಟ್ ಮೇಲ್ಭಾಗವನ್ನು ಅಲ್ಲಿನ ಸ್ಥಳವನ್ನು ಅರಿತುಕೊಂಡು ವಸ್ತುಗಳನ್ನು ಇರಿಸಲು ಬಳಸಿಕೊಳ್ಳಿ
ಬಾಸ್ಕೆಟ್ಗಳು ಮತ್ತು ಹೋಲ್ಡರ್ಗಳು
ನಿಮ್ಮ ಕ್ಯಾಬಿನೇಟ್ಗಳ ಬದಿಯಲ್ಲಿ ಬಾಸ್ಕೆಟ್ಸ್ ಅಥವಾ ಹೋಲ್ಡರ್ಗಳನ್ನು ಇರಿಸಿಕೊಳ್ಳಿ. ನಿಮ್ಮ ಸಣ್ಣ ಅಡುಗೆ ಮನೆಯಲ್ಲಿ ಇದೊಂದು ಉತ್ತಮ ಸಂಗ್ರಹಣಾ ಸ್ಥಳವಾಗಿ ಕಾರ್ಯನಿರ್ವಹಿಸಲಿದೆ. ಇಂತಹವುಗಳನ್ನು ಇಲ್ಲಿ ಅಳವಡಿಸಿಕೊಳ್ಳುವುದು ನಿಮ್ಮ ಸಾಕಷ್ಟು ವಸ್ತುಗಳನ್ನು ಇಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಲೇಜಿ ಸುಸಾನ್ ಕ್ಯಾಬಿನೇಟ್
ಲೇಜಿ ಸುಸಾನ್ ಕ್ಯಾಬಿನೇಟ್ ಅನ್ನು ಅಳವಡಿಸುವುದು ಅದ್ಭುತ ಉಪಾಯವಾಗಿದೆ. ನಿಮ್ಮ ಕ್ಯಾಬಿನೇಟ್ಗಳ ಮೂಲೆಯನ್ನು ಇಲ್ಲಿ ಬಳಸಿಕೊಳ್ಳಬಹುದು. ದೊಡ್ಡ ಅಡುಗೆ ಮನೆಯ ಪರಿಕರಗಳನ್ನು ಇರಿಸಲು ಇದು ನಿಮಗೆ ಸ್ಥಳಾವಕಾಶವನ್ನು ಒದಗಿಸುತ್ತದೆ. ಜಾಗ ಸಿಕ್ಕಂತೆ, ವಸ್ತುಗಳನ್ನು ಜೋಡಿಸಿಕೊಳ್ಳಲು ಸಣ್ಣ ವಿಭಾಗಗಳನ್ನಾಗಿ ಮಾಡಿಕೊಳ್ಳಬಹುದಾಗಿದೆ. ಅಡುಗೆ ಸೋಡಾದಿಂದ ಅಡುಗೆ ಮನೆ ಸಿಂಕ್ ಶುಚಿಗೊಳಿಸುವುದು
ಫೋಲ್ಡ್ ಮಾಡಬಹುದಾದ ಟೇಬಲ್
ಬ್ರೇಕ್ಫಾಸ್ಟ್ ಟೇಬಲ್ ಬೇಡ ಎಂದಾದಲ್ಲಿ ನಿಮ್ಮ ಸಣ್ಣ ಅಡುಗೆ ಕೋಣೆಯಲ್ಲಿ ಇದನ್ನು ಇರಿಸಿಕೊಳ್ಳಬೇಡಿ. ಫೋಲ್ಡ್ ಮಾಡಬಹುದಾದ ಕುರ್ಚಿಯನ್ನು ಗೋಡೆಯಲ್ಲಿ ಅಳವಡಿಸಿ ಮತ್ತು ನಿಮಗೆ ಬೇಕಾದಾಗ ಇದನ್ನು ಬಳಸಿಕೊಳ್ಳಬಹುದಾಗಿದೆ. ಅಡುಗೆ ಕೋಣೆಯಲ್ಲಿ ನಿಮ್ಮ ಕುಟುಂಬದ ಸ್ವಲ್ಪ ಹೊತ್ತು ಕಳೆಯಲು ಇಲ್ಲಿ ಅನುಕೂಲಕರವಾಗಿರುತ್ತದೆ.



Click it and Unblock the Notifications
















