Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಹಣ್ಣು, ತರಕಾರಿಗಳನ್ನು ಬಳಸುವ ಮುನ್ನ ಸ್ವಚ್ಛತೆ ಹೀಗಿರಲಿ
ಹಣ್ಣು ತರಕಾರಿಗಳಲ್ಲಿರುವ ಪೋಷಕಾಂಶಗಳ ಬಗ್ಗೆ ಅಂತೂ ನಿಮಗೆ ಗೊತ್ತೇ ಇದೆ ಅಲ್ಲವೇ..? ಆದಷ್ಟು ಪೋಷಕಾಂಶ ಭರಿತ ತರಕಾರಿ ಮತ್ತು ಹಣ್ಣುಗಳನ್ನು ನಿತ್ಯ ಜೀವನದಲ್ಲಿ ಸೇವಿಸುವುದರಿಂದ ರೋಗಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಅಂತೆಯೇ ಬೊಜ್ಜಿನಂತಹ ದೈಹಿಕ ಸಮಸ್ಯೆಯನ್ನು ದೂರವಾಗಿಸಬಹುದು ಎಂಬುದು ವೈದ್ಯ ಲೋಕದ ಸಲಹೆಯಾಗಿದೆ. ಆದರೆ ನೀವು ತಿನ್ನುವ ತರಕಾರಿ ಮತ್ತು ಹಣ್ಣುಗಳು ಎಷ್ಟು ಸ್ವಚ್ಛವಾಗಿದೆ ನಿಮ್ಮ ಆರೋಗ್ಯದ ಮೇಲೆ ಇವುಗಳ ರಾಸಾಯನಿಕ ಅಂಶಗಳು ಹೇಗೆ ಪ್ರತೀಕೂಲ ಪರಿಣಾಮವನ್ನು ಬೀರಬಲ್ಲವು ಎಂಬುದನ್ನು ನೀವು ಅರಿತಿದ್ದೀರಾ?

ರೈತರು ತಮ್ಮ ಬೆಳೆ ಬೆಳೆಯುವಾಗ ಅವುಗಳ ರಕ್ಷಣೆಗಾಗಿ ಹಣ್ಣು ಮತ್ತು ತರಕಾರಿಗಳ ಮೇಲೆ ರಾಸಾಯನಿಕ ಔಷಧಗಳನ್ನು ಸಿಂಪಡಿಸುತ್ತಾರೆ. ಆದರೆ ಇದು ನಮ್ಮ ಆರೋಗ್ಯದ ಮೇಲೆ ಎಷ್ಟು ಕೆಟ್ಟದ್ದು ಎಂಬುದು ನಿಮಗೆ ತಿಳಿದಿದೆಯೇ? ಇವುಗಳು ನೇರವಾಗಿ ನಮ್ಮ ದೇಹವನ್ನು ಸೇರುವುದರಿಂದ ಕ್ಯಾನ್ಸರ್‌ನಂತಹ ರೋಗಗಳು ನಮ್ಮನ್ನು ಕಾಡುತ್ತದೆ. ಅಂತೆಯೇ ನಮ್ಮ ನರಗಳು, ಜೀರ್ಣಾಂಗ ವ್ಯವಸ್ಥೆಯ ಮೇಲೆ ಇದು ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ ನೀವು ಬಳಸುವ ಹಣ್ಣು ತರಕಾರಿಗಳನ್ನು ಸಾಕಷ್ಟು ಚೆನ್ನಾಗಿ ತೊಳೆದು ನಂತರವಷ್ಟೇ ಅವುಗಳನ್ನು ಬಳಸಬೇಕು.
ಬರಿಯ ನೀರು ಹಾಕಿ ತೊಳೆಯುವುದರಿಂದ ಮಾತ್ರವೇ ಇವುಗಳನ್ನು ಸ್ವಚ್ಛಗೊಳಿಸಿದಂತೆ ಆಗುವುದಿಲ್ಲ, ಬದಲಿಗೆ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಕೆಲವೊಂದು ಸಲಹೆಗಳನ್ನು ಪಾಲಿಸಿಕೊಂಡು ಈ ತರಕಾರಿ ಮತ್ತು ಹಣ್ಣುಗಳನ್ನು ತೊಳೆದುಕೊಳ್ಳಿ. ಅಡುಗೆ ಮನೆಯಲ್ಲೇ ದೊರೆಯುವ ಸಾಮಾಗ್ರಿಗಳಿಂದ ಈ ಹಣ್ಣು ತರಕಾರಿಗಳ ಸ್ವಚ್ಛತೆಯನ್ನು ಮಾಡಿಕೊಳ್ಳಬಹುದಾಗಿದೆ. ಹಾಗಿದ್ದರೆ ಬನ್ನಿ ಆ ವಿಧಾನಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ನಿಂದ ಅರಿತುಕೊಳ್ಳೋಣ. ವಿನೇಗರ್ ಬಳಸಿ ತರಕಾರಿಗಳನ್ನು ತೊಳೆಯುವುದು ಹೇಗೆ?
ವಿನೇಗರ್‌ನಿಂದ
ಹಣ್ಣು ಮತ್ತು ತರಕಾರಿಗಳಲ್ಲಿರುವ ಕ್ರಿಮಿನಾಶಕಗಳನ್ನು ಕೊಲ್ಲುವ ಗುಣವನ್ನು ವಿನೇಗರ್ ಹೊಂದಿದೆ. ಸಿಂಕ್‌ಗೆ ನೀರು ತುಂಬಿಸಿಕೊಂಡು ಇದಕ್ಕೆ ಒಂದು ಚಮಚದಷ್ಟು ವಿನೇಗರ್ ಅನ್ನು ಹಾಕಿ. ಸ್ವಲ್ಪ ಹೊತ್ತು ಈ ದ್ರಾವಣದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಬಿಡಿ ನಂತರ ಚೆನ್ನಾಗಿ ಪುನಃ ತೊಳೆದುಕೊಂಡು ಸ್ವಚ್ಛ ಪಾತ್ರೆಯಲ್ಲಿ ಹಾಕಿ.
ಬೇಕಿಂಗ್ ಸೋಡಾ
ಪರಿಣಾಮಕಾರಿಯಾಗಿ ಹಣ್ಣು ಮತ್ತು ತರಕಾರಿಗಳಲ್ಲಿರುವ ರಾಸಾಯನಿಕ ಅಂಶಗಳನ್ನು ಹೋಗಲಾಡಿಸಲು ಬೇಕಿಂಗ್ ಸೋಡಾ ಸಹಕಾರಿಯಾಗಿದೆ. ದೊಡ್ಡ ಪಾತ್ರೆಗೆ 5 ಲೋಟ ನೀರು ಹಾಕಿ ಇದಕ್ಕೆ 4 ಚಮಚದಷ್ಟು ಬೇಕಿಂಗ್ ಸೋಡಾವನ್ನು ಬೆರೆಸಿ. ನಂತರ ಹಣ್ಣು ಮತ್ತು ತರಕಾರಿಗಳನ್ನು ಈ ದ್ರಾವಣದಲ್ಲಿ ಹಾಕಿಡಿ. 15 ನಿಮಿಷಗಳ ತರುವಾಯ ಅವನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಿ. ಯಾವುದೇ ಭಯವಿಲ್ಲದೆ ಹಣ್ಣು ಮತ್ತು ತರಕಾರಿಗಳ ಸೇವನೆಯನ್ನು ನಿಮಗೆ ಮಾಡಬಹುದಾಗಿದೆ.
ಅರಿಶಿನ ಹಾಕಿದ ನೀರು
ಅರಿಶಿನ ಮಸಾಲೆ ಪದಾರ್ಥವಾಗಿದ್ದು ಕ್ರಿಮಿಗಳ ನಾಶಕ್ಕೆ ಸಹಕಾರಿಯಾಗಿದೆ. ಕುದಿಯುತ್ತಿರುವ ನೀರಿಗೆ 5 ಚಮಚದಷ್ಟು ಅರಶಿನ ಹುಡಿಯನ್ನು ಹಾಕಿ. ಈ ನೀರಿಗೆ ಹಣ್ಣು ಮತ್ತು ತರಕಾರಿಯನ್ನು ಹಾಕಿ. ಸ್ವಲ್ಪ ಹೊತ್ತು ಕಳೆದ ನಂತರ ಇವುಗಳನ್ನು ತೊಳೆದುಕೊಂಡು ಬೇರೆ ಪಾತ್ರೆಗೆ ವರ್ಗಾಯಿಸಿಕೊಳ್ಳಿ. ಹಣ್ಣು ಮತ್ತು ತರಕಾರಿಗಳನ್ನು ಸ್ವಚ್ಛವಾಗಿಸುವ ವಿಧಾನಗಳಲ್ಲಿ ಇದೂ ಕೂಡ ಒಂದು.
ಉಪ್ಪು
ಕಲ್ಲುಪ್ಪು ಕೀಟನಾಶಕದ ನಿವಾರಣೆಗೆ ಹೆಚ್ಚು ಸಹಕಾರಿಯಾಗಿದೆ. ಶುದ್ಧವಾದ ನೀರಿಗೆ ಒಂದು ಕಪ್ ಉಪ್ಪನ್ನು ಹಾಕಿ ನಂತರ ಈ ದ್ರಾವಣಕ್ಕೆ ಹಣ್ಣು ಮತ್ತು ತರಕಾರಿಗಳನ್ನು ಹಾಕಿ. ಇದನ್ನು 10 ನಿಮಿಷಗಳ ಕಾಲ ಮುಳುಗಿಸಿಡಿ. ನಂತರ ಇವುಗಳನ್ನು ಉಪ್ಪು ನೀರಿನಿಂದ ತೆಗೆದು ಸ್ವಚ್ಛ ನೀರಿಗೆ ಹಾಕಿ. ತರಕಾರಿ ತೊಳೆಯುವುದು ಎಂದರೆ ನೀರು ಕುಡಿದಷ್ಟು ಸುಲಭವಲ್ಲ!
ಸಿಪ್ಪೆಯನ್ನು ತೆಗೆಯುವುದು
ಈ ವಿಧಾನಗಳನ್ನು ಅನುಸರಿಸಿಕೊಂಡು ಹಣ್ಣು ಮತ್ತು ತರಕಾರಿಗಳನ್ನು ಸ್ವಚ್ಛಗೊಳಿಸಬಹುದಾದರೂ ಆದಷ್ಟು ಅವುಗಳ ಸಿಪ್ಪೆಯನ್ನು ತೆಗೆದು ಬಳಸುವುದೂ ಇನ್ನಷ್ಟು ಒಳ್ಳೆಯ ವಿಧಾನವಾಗಿದೆ. ಇದೂ ಕೂಡ ರಾಸಾಯನಿಕ ಅಂಶವನ್ನು ಹೋಗಲಾಡಿಸಲು ಸಹಕಾರಿಯಾಗಿದೆ.



Click it and Unblock the Notifications














