Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಅಡುಗೆ ಮನೆಯಲ್ಲಿ ಇರುವೆಗಳ ಕಾಟವೇ? ಇನ್ನು ಚಿಂತೆ ಬಿಡಿ!
ಪಾಪ ಸಣ್ಣ ಸಣ್ಣ ಇರುವೆಗಳು ಏನು ಮಾಡುತ್ತದೆ ಎಂದು ಕೆಲವೊಮ್ಮೆ ನಮಗೆ ಅನಿಸುತ್ತದೆ. ಇದು ನಿಜ. ಆದರೆ ಒಂದು ಇರುವೆ ಏನೂ ಮಾಡಲ್ಲವೆಂದು ಅಂದುಕೊಂಡರೂ ಅದರ ಸೈನ್ಯವನ್ನೇ ಕಟ್ಟಿಕೊಂಡು ಬಂದಾಗ ನಮಗೆ ತೊಂದರೆ ಇಲ್ಲದಿಲ್ಲ. ಅದರಲ್ಲೂ ಅಡುಗೆ ಮನೆಯಲ್ಲಿ ಇರುವೆಗಳಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ.
ಸಿಹಿ ಪದಾರ್ಥ ಹಾಗೂ ಇತರ ಸಾಮಗ್ರಿಗಳನ್ನು ಅದು ಸುತ್ತಿಕೊಳ್ಳುತ್ತದೆ. ಇದರಿಂದ ಅಡುಗೆ ಮಾಡುವುದೇ ಕಷ್ಟವಾಗಬಹುದು. ಇನ್ನು ಕೆಲವೊಮ್ಮೆ ಮಾಡಿಟ್ಟ ಬಿಸಿ ಅಡುಗೆಯ ಮುಚ್ಚಲ ಸ್ವಲ್ಪ ತೆರೆದಿದ್ದರೂ ಇರುವೆಗಳು ಅಲ್ಲಿಗೆ ದಾಳಿ ಮಾಡುತ್ತವೆ.

ಇವುಗಳನ್ನು ಕೊಲ್ಲಲು ನಮಗೆ ಮನಸ್ಸು ಬರುವುದಿಲ್ಲ. ಇಂತಹ ಸಮಯದಲ್ಲಿ ಏನು ಮಾಡಬೇಕು ಎನ್ನುವುದನ್ನು ಯೋಚಿಸಬೇಕು. ಕೆಲವೊಂದು ಮನೆಮದ್ದನ್ನು ಬಳಸಿಕೊಂಡು ಇರುವೆಗಳನ್ನು ಓಡಿಸಬಹುದಾಗಿದೆ. ಈ ಮನೆಮದ್ದಿನಲ್ಲಿರುವ ಆ್ಯಸಿಡ್ ಗುಣಗಳು ಕೀಟಗಳನ್ನು ದೂರ ಓಡಿಸುತ್ತದೆ. ಇದಕ್ಕಾಗಿ ಅಡುಗೆ ಮನೆಗೆ ಸ್ವಲ್ಪ ಇದನ್ನು ಸಿಂಪಡಣೆ ಮಾಡಿದರೆ ಕೇವಲ ಅರ್ಧ ಗಂಟೆಯಲ್ಲಿ ಇರುವೆ, ಜಿರಳೆ ಮತ್ತು ಹಲ್ಲಿಯಂತಹ ಕೀಟಗಳು ದೂರವಾಗುವುದು.
ರಾತ್ರಿ ಮಲಗುವುದಕ್ಕೆ ಮೊದಲು ಕೆಳಗೆ ಸೂಚಿಸಿರುವ ಮದ್ದನ್ನು ಸಿಂಪಡಿಸಿದೆ ಮರುದಿನ ಬೆಳಗ್ಗೆ ನಿಮ್ಮ ಅಡುಗೆ ಕೋಣೆ ಕೀಟಗಳಿಂದ ಮುಕ್ತವಾಗಿರುತ್ತದೆ. ಇರುವೆ ಹಾಗೂ ಇನ್ನಿತರ ಕೀಟಗಳನ್ನು ಓಡಿಸಲು ನೀವು ಬಳಸಬಹುದಾದ ಮದ್ದಿನ ಬಗ್ಗೆ ಗಮನಹರಿಸಿ. ಜೇನಿಗೆ ಇರುವೆ ಬರದಂತೆ ತಡೆಯುವುದು ಹೇಗೆ?
ನಿಂಬೆರಸ
ಅಡುಗೆಕೋಣೆಯಲ್ಲಿರುವ ಕೀಟಗಳನ್ನು ಓಡಿಸಲು ಅತ್ಯಂತ ಶಕ್ತಿಶಾಲಿ ಮದ್ದೆಂದರೆ ಅದು ನಿಂಬೆರಸ. ನಿಂಬೆರಸವನ್ನು ತೆಗೆದು ಅದಕ್ಕೆ ಒಂದು ಚಮಚ ಉಪ್ಪು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಂಡು ಇರುವೆಗಳು ಇರುವ ಜಾಗಕ್ಕೆ ಸಿಂಪಡಿಸಿ. ಕೆಲವೇ ಸಮಯದಲ್ಲಿ ಇರುವೆಗಳು ಅಲ್ಲಿಂದ ಜಾಗ ಖಾಲಿ ಮಾಡಿರುವುದನ್ನು ನೀವು ನೋಡಬಹುದು. ಈ ಮದ್ದು ಖಂಡಿತವಾಗಿಯೂ ನಿಮಗೆ ನೆರವಾಗುವುದು.
ದಾಲ್ಚಿನಿ ಚಕ್ಕೆ ಹುಡಿ
ಅಡುಗೆಕೋಣೆಯಲ್ಲಿರುವ ಇರುವೆಗಳನ್ನು ಓಡಿಸಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ಇರುವೆಗಳು ಇರುವ ಜಾಗಕ್ಕೆ ದಾಲ್ಚಿನಿ ಚಕ್ಕೆ ಹುಡಿಯನ್ನು ರಾತ್ರಿ ಮಲಗುವ ಮೊದಲು ಸಿಂಪಡಿಸಿ, ಬೆಳಿಗ್ಗೆ ನೀವು ಅಡುಗೆ ಮನೆಗೆ ಹೋಗುವಾಗ ಎಲ್ಲಾ ಇರುವೆಗಳು ಮಾಯವಾಗಿರುತ್ತದೆ. ಇರುವೆ ಬಾರದಿರಲು ಕಾಫಿ ಪುಡಿ ಹಾಕಿದರೆ ಸಾಕು
ಕರಿಮೆಣಸಿನ ಹುಡಿ
ದಾಲ್ಚಿನಿ ಚಕ್ಕೆ ಹುಡಿಯಂತೆ ಕರಿಮೆಣಸಿನ ಹುಡಿ ಕೂಡ ತುಂಬಾ ಒಳ್ಳೆಯದು. ಒಂದು ಚಮಚ ಕರಿಮೆಣಸಿನ ಹುಡಿಯನ್ನು ಒಂದು ಲೋಟ ಬಿಸಿನೀರಿಗೆ ಹಾಕಿಕೊಳ್ಳಿ. ಇರುವೆಗಳನ್ನು ಕಂಡಾಗ ಇದನ್ನು ನೇರವಾಗಿ ಅದರ ಮೇಲೆ ಸಿಂಪಡಿಸಿ. ಈ ಮದ್ದು ಇರುವೆಗಳಿಂದ ಮುಕ್ತಿ ನೀಡುವುದು.
ವಿನೇಗರ್
ಇರುವೆಗಳನ್ನು ಓಡಿಸಲು ಕಪ್ಪು ವಿನೇಗರ್ ತುಂಬಾ ಪ್ರಭಾವಿಯಾಗಿ ಕೆಲಸ ಮಾಡುತ್ತದೆ. ಅಡುಗೆ ಮನೆಗೆ ಇರುವೆಗಳು ಬರುವುದನ್ನು ತಡೆಯಲು ನೇರವಾಗಿ ಇರುವೆಗಳ ಮೇಲೆ ವಿನೇಗರ್ ಸಿಂಪಡಿಸಿ. ಇರುವೆಗಳು ವಿನೇಗರ್‌ನ ವಾಸನೆಗೆ ದೂರ ಹೋಗುತ್ತದೆ. ಇದು ಇರುವೆಗಳನ್ನು ಓಡಿಸಲು ಸುಲಭ ವಿಧಾನ. ಮನೆಯಲ್ಲಿ ಇರುವೆಗಳ ಕಾಟವೇ? ಚಿಂತಿಸಬೇಡಿ ಇಲ್ಲಿದೆ ಪರಿಹಾರ



Click it and Unblock the Notifications




