Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಣಜಗಳ ಹುಟ್ಟಡಗಿಸುವ ನೈಸರ್ಗಿಕ ಮನೆಮದ್ದುಗಳು
ನಿಮ್ಮ ಮನೆಯ ಸುತ್ತಮುತ್ತ ನೀವು ಕಣಜಗಳ ಗೂಡು ಕಂಡೀರುತ್ತೀರಿ ಅಲ್ಲವೇ? ಆ ಗೂಡುಗಳ ಬಳಿ ಹೋಗಿ ಅದನ್ನು ನಾಶಮಾಡಲು ಹೊರಟಾಗ ಅವುಗಳ ದಾಳಿಗೆ ನೀವು ತುತ್ತಾಗಿರುವುದು ಖಂಡಿತ. ಕಣಜಗಳು ಒಮ್ಮೆ ಕಚ್ಚಿದವೆಂದರೆ ಅವುಗಳ ನೋವು ವಿಪರೀತವಾಗಿರುತ್ತದೆ. ಇವುಗಳ ಕಚ್ಚಿದ ಜಾಗದಲ್ಲಿ ಕೂಡಲೇ ದದ್ದು ಉಂಟಾಗುತ್ತದೆ. ಕಣಜಗಳ ಕಚ್ಚುವಿಕೆಯು ಹೆಚ್ಚಿನವರಿಗೆ ಅಲರ್ಜಿಯನ್ನು ಉಂಟುಮಾಡುತ್ತದೆ. ಇವುಗಳಿಂದ ತಪ್ಪಿಸಿಕೊಳ್ಳಬೇಕು ಎಂದಾದಲ್ಲಿ ಇವುಗಳ ಗೂಡುಗಳನ್ನು ನಾಶ ಮಾಡುವುದೇ ಉಳಿದಿರುವ ಒಂದೇ ದಾರಿಯಾಗಿದೆ.
ಈ ಸಣ್ಣ ಕೀಟಗಳು ಜೇನ್ನೊಣಗಳಂತೆ ಕಂಡರೂ, ಜೇನ್ನೊಣಗಳಿಗಿಂತ ಭಿನ್ನವಾಗಿ ಇವಿರುತ್ತವೆ. ಜೇನ್ನೊಣಗಳಿಗೆ ಹಾನಿ ಉಂಟಾದಾಗ ಮಾತ್ರವೇ ಅವುಗಳು ಕಚ್ಚುತ್ತವೆ. ಆದರೆ ಕಣಜ ಕಚ್ಚುವುದನ್ನೇ ಉದ್ದೇಶವಾಗಿಸಿಕೊಂಡು ದಾಳಿಯನ್ನು ಮಾಡಿಬಿಡುತ್ತವೆ. ಕಣಜಗಳ ಕಡಿತದಿಂದ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗವೆಂದರೆ ಅವುಗಳನ್ನು ನಾಶ ಮಾಡುವುದಾಗಿದೆ. ಅವುಗಳ ಗೂಡುಗಳನ್ನು ಸುರಕ್ಷಿತವಾಗಿ ಕೆಲವೊಂದು ಮನೆಮದ್ದುಗಳನ್ನು ಅನುಸರಿಸುವುದರ ಮೂಲಕ ನಾಶ ಮಾಡಬಹುದಾಗಿದೆ. ಇದರಿಂದ ನಿಮಗೂ ಹಾನಿಯುಂಟಾಗುವುದಿಲ್ಲ.

ಕಣಜಗಳು ಆಕರ್ಷಿತವಾಗುವುದು ಗಾಢವಾದ ಬಣ್ಣಗಳು, ಆಹಾರಗಳಿಗಾಗಿದೆ. ಸುಗಂಧ ಭರಿತ ಸಿಹಿತಿಂಡಿಗಳು ಮತ್ತು ತೋಟದಲ್ಲಿರುವ ಹೂವುಗಳು ಹಾಗೂ ಸುಗಂಧಗಳಿಗೆ ಇವುಗಳು ಬೇಗನೇ ಆಕರ್ಷಿತವಾಗಿಬಿಡುತ್ತವೆ. ನಿಮ್ಮ ಹೂದೋಟಕ್ಕೆ ಕಣಜಗಳ ಬರುವಿಕೆಯನ್ನು ತಡೆಗಟ್ಟಲು ಕೀಟನಾಶಕಗಳನ್ನು ವಾರಕ್ಕೊಮ್ಮೆಯಾದರೂ ನೀವು ಸಿಂಪಡಿಸಲೇಬೇಕು. ಹಾಗಿದ್ದರೆ ಇಂದಿನ ಲೇಖನದಲ್ಲಿ ಕಣಜಗಳಿಂದ ಸಂರಕ್ಷಣೆಯನ್ನು ಪಡೆದುಕೊಳ್ಳಲು ಅನುಸರಿಸಬೇಕಾದ ಮನೆಮದ್ದುಗಳ ಕಡೆಗೆ ಗಮನ ಹರಿಸೋಣ.
ಕಾಳುಮೆಣಸಿನ ಸ್ಪ್ರೇ
ಕಣಜಗಳ ನಿವಾರಣೆಗಾಗಿ ಮಾರುಕಟ್ಟೆಯಲ್ಲಿ ಸ್ಪ್ರೇ ದೊರೆಯುತ್ತಿದ್ದರೂ ನಿಮ್ಮದೇ ನೈಸರ್ಗಿಕ ವಿಧಾನದಿಂದ ಈ ಸ್ಪ್ರೇಯನ್ನು ತಯಾರಿಸಿಕೊಳ್ಳಬಹುದು. ಒಂದು ಕಪ್ ನೀರಿನಲ್ಲಿ 6 ಚಮಚ ಕಾಳುಮೆಣಸಿನ ಹುಡಿಯನ್ನು ತೆಗೆದುಕೊಳ್ಳಿ ಇದಕ್ಕೆ 3 ಚಮಚ ಮೆಣಸಿನ ಹುಡಿಯನ್ನು ಸೇರಿಸಿ. ನಂತರ ಇದನ್ನು ಸ್ಪ್ರೇ ಬಾಟಲಿಗೆ ಹಾಕಿ. ಕಣಜಗಳ ಗೂಡಿಗೆ ಈ ಸ್ಪ್ರೇಯನ್ನು ಸಿಂಪಡಿಸಿ.
ಈರುಳ್ಳಿ ರಸ
ಈರುಳ್ಳಿಯು ಆಸಿಡ್ ಅಂಶವನ್ನು ಒಳಗೊಂಡಿರುವುದರಿಂದ ಕಣಜಗಳನ್ನು ಶೀಘ್ರವಾಗಿ ನಿವಾರಿಸುತ್ತದೆ. ಈ ರಸಕ್ಕೆ ಉಪ್ಪನ್ನು ಸೇರಿಸಿಕೊಳ್ಳಿ ಇದು ಇನ್ನಷ್ಟು ಆಸಿಡ್ ಆಗಿ ಈ ದ್ರಾವಣವನ್ನು ಪರಿವರ್ತಿಸುತ್ತದೆ. ಕಣಜಗಳ ಗೂಡಿಗೆ ಈ ರಸವನ್ನು ಸಿಂಪಡಿಸಿ.
ಲಿಂಬೆ ಮತ್ತು ಬೇಕಿಂಗ್ ಸೋಡಾ
ಆಸಿಡ್ ಅಂಶವಿರುವ ವಸ್ತುಗಳಿಗೆ ಕಣಜಗಳು ಬೇಗನೇ ಸಾಯುತ್ತವೆ. ಇದಕ್ಕಾಗಿ ಲಿಂಬೆಯನ್ನು ಒಂದು ಉತ್ತಮ ಕಣಜ ನಿವಾರಕವಾಗಿ ನಿಮಗೆ ಬಳಸಿಕೊಳ್ಳಬಹುದು. ಪಾತ್ರೆಯಲ್ಲಿ ಲಿಂಬೆ ರಸವನ್ನು ಸೇರಿಸಿ ಇದಕ್ಕೆ ಬೇಕಿಂಗ್ ಸೋಡಾವನ್ನು ಮಿಶ್ರ ಮಾಡಿಕೊಳ್ಳಿ. ಕಣಜಗಳ ಗೂಡಿಗೆ ಈ ಸ್ಪ್ರೇಯನ್ನು ನೇರವಾಗಿ ಹೊಡೆಯಿರಿ ಗೂಡಿನಲ್ಲಿ ಕಣಜವಿದ್ದರೆ ಅವುಗಳು ಕೂಡಲೇ ಸಾಯುತ್ತವೆ.
ವಿನೇಗರ್, ಸೋಡಾ ಮತ್ತು ಸಕ್ಕರೆ
ಈ ಮೂರು ಮಿಶ್ರಣಗಳು ಆಸಿಡಿಕ್ ಸ್ವಭಾವವನ್ನು ಒಳಗೊಂಡಿದ್ದು ಇವುಗಳನ್ನು ಮಿಶ್ರ ಮಾಡಿಕೊಂಡು ಸ್ಪ್ರೇಯನ್ನು ತಯಾರಿಸಿಕೊಳ್ಳಬಹುದು. ಇವುಗಳ ಸಿಂಪಡಣೆಯಿಂದ ಕಣಜಗಳು ನಿಮ್ಮ ಮನೆಗೆ ದಾಳಿ ಮಾಡಲಾರವು. ಒಂದು ಪಾತ್ರೆಯಲ್ಲಿ ವಿನೇಗರ್ ಮತ್ತು ಸಕ್ಕರೆಯನ್ನು ಹಾಕಿ. ವಿನೇಗರ್ನಲ್ಲಿ ಸಕ್ಕರೆ ಕರಗುವವರೆಗೆ ಮಿಶ್ರ ಮಾಡಿಕೊಳ್ಳಿ. ಮಿಶ್ರಣ ಚೆನ್ನಾಗಿ ಹೊಂದಿಕೆಯಾದ ನಂತರ ಸೋಡಾವನ್ನು ಇದಕ್ಕೆ ಹಾಕಿ. ಇದನ್ನು ಖಾಲಿ ಬಾಟಲ್ಗೆ ಹಾಕಿ. ಸ್ಪ್ರೇಯನ್ನು ಚೆನ್ನಾಗಿ ಕುಲುಕಿಸಿ ಕಣಜಗಳ ಗೂಡಿಗೆ ಇದನ್ನು ಬಿಡಿ.ಲಿಂಬೆ ರಸ ಮತ್ತು ವಿನೇಗರ್
ಸ್ಪ್ರೇ ತಯಾರಿಸಿಕೊಳ್ಳಲು ಲಿಂಬೆ ರಸ ಮತ್ತು ವಿನೇಗರ್ ಅನ್ನು ಬಳಸಿಕೊಳ್ಳಬಹುದಾಗಿದೆ. ಈ ಮೊದಲೇ ತಿಳಿಸಿರುವ ಇತರ ಉತ್ಪನ್ನಗಳಿಗೆ ಹೋಲಿಸಿದಾಗ ಇವುಗಳು ಅಷ್ಟೊಂದು ಪರಿಣಾಮಕಾರಿಯಲ್ಲ. ಅದಾಗ್ಯೂ ಗೂಡುಗಳಲ್ಲಿರುವ ಕಣಜಗಳ ಮೊಟ್ಟೆಯನ್ನು ನಾಶ ಮಾಡಲು ಈ ದ್ರಾವಣವನ್ನು ಬಳಸಿಕೊಳ್ಳಬಹುದಾಗಿದೆ.



Click it and Unblock the Notifications




