Latest Updates
-
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು
ಮನೆಯ ಶೌಚಾಲಯ ಸ್ವಚ್ಛತೆಗೆ ಇಲ್ಲಿದೆ ಸಿಂಪಲ್ ಟಿಪ್ಸ್
ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮೊದಲಾಗಿ ನಾವು ಶೌಚಾಲಯವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ಶೌಚಾಲಯದ ಸ್ವಚ್ಛತೆಗೆ ನಾವು ಮಾರುಕಟ್ಟೆಯಿಂದ ರಾಸಾಯನಿಕಯುಕ್ತ ಕ್ಲೀನರ್ ಅನ್ನು ತರುತ್ತೇವೆ. ಆದರೆ ಕ್ಲೀನರ್ ಅನ್ನು ತೆಗೆದುಕೊಳ್ಳುವಾಗ ಯಾವತ್ತಾದರೂ ಅದರಲ್ಲಿರುವ ಲೇಬಲ್ ಅನ್ನು ನಾವು ಓದಿದ್ದೇವೆಯಾ? ಇಲ್ಲವೆಂದಾದರೆ ಅದನ್ನು ಓದುವುದು ಅತ್ಯಗತ್ಯವಾಗಿದೆ. ಅದರಲ್ಲೂ ಮನೆಯಲ್ಲಿ ಮಕ್ಕಳು ಇದ್ದವರು ಇದನ್ನು ಕಡ್ಡಾಯವಾಗಿ ಓದಲೇಬೇಕು.
ಯಾಕೆಂದರೆ ಇದರಲ್ಲಿ ಹಲವಾರು ರೀತಿಯ ರಾಸಾಯನಿಕಗಳನ್ನು ಸೇರಿಸಿರುತ್ತಾರೆ. ಇದರಿಂದ ಮಕ್ಕಳು ಹಾಗೂ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು. ಇಂತಹ ರಾಸಾಯನಿಕಗಳನ್ನು ಬಳಸುವ ಬದಲು ಮನೆಯಲ್ಲೇ ತಯಾರಿಸಿದ ಕ್ಲೀನರ್ ಅನ್ನು ಬಳಸಿದರೆ ಅದರಿಂದ ಆರೋಗ್ಯಕ್ಕೂ ಯಾವುದೇ ತೊಂದರೆ ಉಂಟಾಗದು. ಇಲ್ಲಿ ಕೊಟ್ಟಿರುವಂತಹ ಕೆಲವೊಂದು ಕ್ಲೀನರ್‌ಗಳನ್ನು ನೀವು ಆಯ್ಕೆ ಮಾಡಿಕೊಂಡು ನಿಯಮಿತವಾಗಿ ಬಳಸಿಕೊಳ್ಳಿ.

ಬಿಳಿ ವಿನೇಗರ್
ವಿನೇಗರ್ ಅನ್ನು ಕೋಳಿ ಮಾಂಸದ ಅಡುಗೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಇದರಿಂದ ನಿಮ್ಮ ಶೌಚಾಲಯವು ಸ್ವಚ್ಛವಾಗುತ್ತದೆ ಎಂದು ನಿಮಗೆ ತಿಳಿದಿದೆಯಾ? ಇದರಲ್ಲಿರುವ ಆ್ಯಸಿಡ್ ಗುಣವು ಕಳೆಗಳನ್ನು ತೆಗೆದುಹಾಕುತ್ತದೆ. ಇದು ವಾಸನೆಯನ್ನು ದೂರ ಅಟ್ಟುತ್ತದೆ. ಆರೋಗ್ಯದ ದೃಷ್ಟಿಯಿಂದ ಇದನ್ನು ಬಳಸುವುದು ತುಂಬಾ ಸುರಕ್ಷಿತ.
ಟ್ರೀ ಟ್ರೀ ಎಣ್ಣೆ
ವಿನೇಗರ್ ಮತ್ತು ಬೇಕಿಂಗ್ ಸೋಡಾ
ಹೊಳೆಯುವ ಟಾಯ್ಲೆಟ್ ಸೀಟ್ ನಿಮಗೆ ಬೇಕಾಗಿದ್ದರೆ ಬೇಕಿಂಗ್ ಸೋಡಾ ಮತ್ತು ಬಿಳಿ ವಿನೇಗರ್ ನ್ನು ಮಿಶ್ರಣ ಮಾಡಿಕೊಂಡು ಅದನ್ನು ಟಾಯ್ಲೆಟ್ ಸೀಟ್ ಮೇಲೆ ಸಿಂಪಡಿಸಿ. ಶೌಚಾಲಯದ ನೆಲವನ್ನು ತೊಳೆಯಲು ಇದನ್ನು ಬಳಸಬಹುದು. ಸಿಂಪಡಿಸಿದ ಬಳಿಕ ಕೆಲವು ನಿಮಿಷ ಬಿಟ್ಟು ತೊಳೆಯಿರಿ.
ಉತ್ತಮ ದರ್ಜೆಯ ಸೋಪ್
ಯಾವುದೇ ಹಾನಿಕಾರವಿಲ್ಲದೆ ಶೌಚಾಲಯ ಸ್ವಚ್ಛ ಮಾಡಲು ಬಯಸುತ್ತಿದ್ದೀರಾ? ಹಾಗಾದರೆ ¼ ಕಪ್ ಉತ್ತಮ ದರ್ಜೆಯ ಸೋಪ್, ಅದಕ್ಕೆ ¾ ಕಪ್ ನೀರು, 2 ಚಮಚ ಬೇಕಿಂಗ್ ಸೋಡಾ ಮತ್ತು 10 ಹನಿ ಎಣ್ಣೆ ಹಾಕಿದ ಮಿಶ್ರಣವನ್ನು ಟಾಯ್ಲೆಟ್ ಗೆ ಹಾಕಿ ಬ್ರಶ್ ನಿಂದ ಉಜ್ಜಿದರೆ ನಿಮ್ಮ ಟಾಯ್ಲೆಟ್ ಫಲಫಲ ಹೊಳೆಯುವುದು. ರೋಗರುಜಿನಗಳು ಹರಡಲು ಶೌಚಾಲಯಗಳೇ ಮೂಲ ಕಾರಣ! ರೋಗರುಜಿನಗಳು ಹರಡಲು ಶೌಚಾಲಯಗಳೇ ಮೂಲ ಕಾರಣ!
ಶೌಚಾಲಯವನ್ನು ಸ್ವಚ್ಛ ಮಾಡಬಲ್ಲ ಮನೆಯಲ್ಲಿ ತಯಾರಿಸಿ ಟಾಯ್ಲೆಟ್ ಕ್ಲೀನರ್‌ಗಳ ಬಗ್ಗೆ ಇಲ್ಲಿ ಹೇಳಿದ್ದೇವೆ. ದುರ್ವಾಸನೆಯನ್ನು ದೂರ ಮಾಡಲು ಟಾಯ್ಲೆಟ್ ರಿಫ್ರೆಶ್ನರ್ ಅನ್ನು ಬಳಸಿ. ವಿವಿಧ ಸುಗಂಧಗಳಲ್ಲಿ ರಿಫ್ರೆಶ್ನರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಿಂದ ಶೌಚಾಲಯ ಸ್ವಚ್ಛವಾಗಿರುವುದು ಮಾತ್ರವಲ್ಲದೆ ದುರ್ವಾಸನೆಯೂ ದೂರವಾಗುವುದು.



Click it and Unblock the Notifications


