Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಮನೆಯ ಹಳೆಯ ಪೀಠೋಪಕರಣಗಳಿಗೆ ಹೊಸ ಲುಕ್ ನೀಡಿ!
ಒಂದು ವೇಳೆ ನೀವು ನಿಮ್ಮ ಮನೆಯ ಅಂದವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಲ್ಲಿ, ನಿಮ್ಮ ಮನೆಯ ಪೀಠೋಪಕರಣಗಳನ್ನು ಬಿಟ್ಟು ಇದನ್ನು ಮಾಡಲು ಸಾಧ್ಯವಿಲ್ಲ. ಆದರೆ ನಿಮ್ಮ ಮನೆಯಲ್ಲಿರುವ ಹಳೆಯ ಪೀಠೋಪಕರಣಗಳಿಗೆ ಹೊಸ ಲುಕ್ ನೀಡಬಹುದೆ? ಎಂಬುದು ನಿಮ್ಮ ಪ್ರಶ್ನೆಯಾಗಿದ್ದಲ್ಲಿ, ಅದಕ್ಕೆ ಮಾರ್ಗೋಪಾಯಗಳಿವೆ ಎಂಬುದು ನಮ್ಮ ಉತ್ತರ.
ವಿಶೇಷವಾಗಿ ಹಳೆಯ ಕಾಲದ ಪೀಠೋಪಕರಣಗಳು ತುಂಬಾ ದುಬಾರಿಯಾಗಿರುವುದರಿಂದ, ಕೆಲವೊಂದು ಉಪಾಯಗಳ ಮೂಲಕ ನಿಮ್ಮ ಮನೆಯ ಪೀಠೋಪಕರಣಗಳಿಗೆ ಹಾಗೆ ಕಾಣುವಂತಹ ಸ್ಪರ್ಶವನ್ನು ನೀಡಬಹುದು.
ಇದೆಲ್ಲಕ್ಕಿಂತ ಮುಖ್ಯವಾಗಿ ಕಾಲನ ಹೊಡೆತದಿಂದ ಯಾರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನೀವು ಹತ್ತು ವರ್ಷದ ಹಿಂದೆ ತಂದ ಡೈನಿಂಗ್ ಟೇಬಲ್ ಇಂದು ಹಳೆಯದಾಗಿದೆ. ಜೊತೆಗೆ ತನ್ನ ಬಣ್ಣ ಮತ್ತು ಪಾಲಿಷ್ ಕಳೆದುಕೊಂಡಿದೆ. ಅದನ್ನು ಸುಮ್ಮನೆ ಗುಜರಿಗೆ ಬಿಸಾಕುವ ಬದಲಿಗೆ ಅದಕ್ಕೆ ನೀವೇ ಪಾಲಿಷ್ ಮಾಡಿ. ಅದರ ಹೊಳಪನ್ನು ಮರಳಿ ತನ್ನಿ. ಆಗ ಅದಕ್ಕೆ ಹೊಸ ರೀತಿಯ ಕಳೆ ದೊರೆಯುತ್ತದೆ.

ಒಂದು ವೇಳೆ ನಿಮ್ಮ ಮನೆಯಲ್ಲಿ ಮಕ್ಕಳು ಇದ್ದಲ್ಲಿ, ಅವರನ್ನು ಸುಮ್ಮನೆ ಇರಿಸಲು ಮತ್ತು ನಿಮ್ಮ ಪೀಠೋಪಕರಣಗಳನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಮ್ಮ ಪೀಠೋಪಕರಣಗಳನ್ನು ಅಂದವಾಗಿ ಕಾಣಿಸಲು ನಿಮಗೆ ಕೆಲವೊಂದು ವಿಚಾರಗಳು ತಿಳಿದಿರಬೇಕು.
ಹಾಗಾದರೆ ಪೀಠೋಪಕರಣಗಳನ್ನು ಹೇಗೆ ಹೊಸದಾದ ಮತ್ತು ಸುಂದರವಾದ ಲುಕ್ ನೀಡುವುದು ಎಂಬ ನಿಮ್ಮ ಪ್ರಶ್ನೆಗೆ, ನಮ್ಮ ಉತ್ತರ ಸ್ವಲ್ಪ ಸೃಜನಶೀಲತೆಯನ್ನು ಬಳಸಿ ಎಂಬುದಾಗಿದೆ. ನಿಮಗೆ ಹಳೆಯದಾಗಿ ಕಾಣುವ ಕಾಫಿ ಟೇಬಲಿನ ಮೇಲೆ ಗಾಜನ್ನು ಇರಿಸುವ ಮೂಲಕ ಅದನ್ನು ಸುಂದರವಾದ ಸೆಂಟರ್ ಟೇಬಲ್ ಆಗಿ ಪರಿವರ್ತಿಸಬಹುದು. ಹೀಗೆ ನಿಮ್ಮ ಮನೆಯ ಅಂದವನ್ನು ಹೆಚ್ಚಿಸಬಹುದು, ಜೊತೆಗೆ ಆಂಟಿಕ್ ರೀತಿಯ ಮೆರಗನ್ನು ಸಹ ನೀಡಬಹುದು. ಬನ್ನಿ ಮುಂದೆ ಮತ್ತಷ್ಟು ಸಲಹೆಗಳನ್ನು ನೋಡೋಣ.
ನಿಮ್ಮ ಮನೆಯ ಹಳೆಯ ಪೀಠೋಪಕರಣಗಳಲ್ಲಿ ಗೆರೆಗಳು ಹೆಚ್ಚಾಗಿ ಇದ್ದಲ್ಲಿ, ಅದನ್ನು ಮುಚ್ಚಲು ಆದಷ್ಟು ಪ್ರಯತ್ನಿಸಿ. ಆಗ ಅದಕ್ಕೆ ಹೊಸ ಲುಕ್ ದೊರೆಯುತ್ತದೆ. ಕಡುಗಪ್ಪು ಬಣ್ಣದಲ್ಲಿರುವ ಪೀಠೋಪಕರಣಗಳ ಮೇಲಿನ ಗೆರೆಗಳನ್ನು ಕಾಫಿಯ ಗಸಿಯಿಂದ ಮುಚ್ಚಿ. ಅದನ್ನು 10 ನಿಮಿಷ ಬಿಡಿ, ನಂತರ ಮೃದುವಾದ ಬಟ್ಟೆಯಿಂದ ಅದನ್ನು ಒರೆಸಿ ತೆಗೆಯಿರಿ. ತಿಳಿ ಬಣ್ಣದ ಪೀಠೋಪಕರಣಗಳಿಗೆ ವಾಲ್‍ನಟ್ ಬೀಜಗಳನ್ನು ಬಳಸಿ ಗೆರೆಗಳನ್ನು ಮುಚ್ಚಿ.
ಬಣ್ಣ
ಬಣ್ಣ ಬಳಿಯುವ ಮೂಲಕ ನಿಮ್ಮ ಮನೆಯ ಪೀಠೋಪಕರಣಗಳಿಗೆ ಹೊಸ ಲುಕ್ ನೀಡಬಹುದು. ಸ್ವಲ್ಪ ರಸ್ಟ್ ಅಥವಾ ಕಂದು ಬಣ್ಣದ ಶೇಡ್‍ಗಳನ್ನು ಇವುಗಳಿಗೆ ನೀಡುವ ಮೂಲಕ, ಅವುಗಳಿಗೆ ಸಾಂಪ್ರದಾಯಿಕ ಲುಕ್ ನೀಡಬಹುದು.
ಪೀಠೋಪಕರಣಗಳ ಕಲೆ ಹೋಗಲಾಡಿಸಲು
ನಿಮ್ಮ ಪೀಠೋಪಕರಣಗಳ ಮೇಲೆ ಇರುವ ಕಲೆಗಳನ್ನು ನಿವಾರಿಸಿ. ಅದರ ಕಾಫಿ, ತಿಂಡಿ ಇತ್ಯದಿ ಕಲೆಗಳು ಇರಬಹುದು. ಅದನ್ನು ಹೋಗಲಾಡಿಸಿ. ಇದಕ್ಕಾಗಿ ಕ್ಯನೊಲಾ ಎಣ್ಣೆ, ವಿನಿಗರ್ ಬಳಸಿ. ¼ ಕಪ್ ಕ್ಯನೊಲಾ ಎಣ್ಣೆಯ ಜೊತೆಗೆ ¾ ವಿನಿಗರ್ ಮಿಶ್ರಣ ಮಾಡಿಕೊಳ್ಳಿ. ಇದನ್ನು ಹತ್ತಿ ಬಟ್ಟೆಯಿಂದ ಕಲೆಗಳಿರುವ ಭಾಗಕ್ಕೆ ಲೇಪಿಸಿ. ಆಗ ನೀವು ಬದಲಾವಣೆಯನ್ನು ಕಾಣುತ್ತೀರಿ.
ಬಿಳಿ ಬಣ್ಣ
ನಿಮ್ಮ ಕಿಟಕಿಯ ಕರ್ಟನ್‍ಗಳು ಕಡು ಬಣ್ಣದಿಂದ ಕೂಡಿದ್ದರೆ, ನಿಮ್ಮ ಪೀಠೋಪಕರಣಗಳಿಗೆ ಬಿಳಿಯ ಬಣ್ಣವನ್ನು ಬಳಿಯಿರಿ. ಇದರಿಂದ ನಿಮ್ಮ ಕೋಣೆಗೆ ಆಂಟಿಕ್ ಲುಕ್ ದೊರೆಯುತ್ತದೆ. ಇದರಿಂದ ನಿಮ್ಮ ಕೋಣೆ ಅದ್ಭುತ ಸೌಂದರ್ಯದಿಂದ ಮಿನುಗುತ್ತದೆ.
ಬಿರುಕುಗಳಿಂದ ಮುಕ್ತಿ ಪಡೆಯಿರಿ
ಒಂದು ವೇಳೆ ನಿಮ್ಮ ಪೀಠೋಪಕರಣಗಳಲ್ಲಿ, ಬಿರುಕುಗಳು ಕಂಡು ಬಂದರೆ, ಅದರ ಮೇಲೆ ಪಾಲಿಷ್ ಮಾಡುವುದರಿಂದ ಪ್ರಯೋಜನವಾಗುವುದಿಲ್ಲ. ಹಾಗಾದರೆ ಪರಿಹಾರವೇನು? ಅದಕ್ಕೆ ಒಂದು ಉಪಾಯವಿದೆ. ವಾರ್ನಿಷ್ ಜೊತೆಗೆ ನೇಲ್ ಪಾಲಿಷ್ ಬೆರೆಸಿ. ಅದನ್ನು ಬಿರುಕುಗಳಿರುವ ಭಾಗದಲ್ಲಿ ಲೇಪಿಸಿ 10 ನಿಮಿಷ ಬಿಡಿ. ಇದು ಯಾವಾಗ ಒಣಗುತ್ತದೆಯೋ, ಆಗ ಆ ಭಾಗವನ್ನು ಸ್ಯಾಂಡ್ ಪೇಪರಿನಿಂದ ಉಜ್ಜಿ, ಮೃದುವಾದ ಫಿನಿಷ್ ನೀಡಿ.



Click it and Unblock the Notifications
