Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪೀನಟ್ ಬಟರ್‌ನಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯೇ?
ಇದುವರೆಗೆ ಪಾಶ್ಚಾತ್ಯ ದೇಶಗಳಲ್ಲಿ ಜನಪ್ರಿಯವಾಗಿದ್ದ ಶೇಂಗಾ-ಬೆಣ್ಣೆಯ ಮಿಶ್ರಣವಾದ ಪೀನಟ್ ಬಟರ್ ಈಗ ಭಾರತದಲ್ಲಿಯೂ ಲಭ್ಯವಾಗತೊಡಗಿದೆ. ಬೆಳಗ್ಗಿನ ಉಪಾಹಾರಕ್ಕೆ ಹೆಚ್ಚಿನ ಸಮಯವಿಲ್ಲದವರಿಗೆ ಹೇಳಿ ಮಾಡಿಸಿದ ಆಹಾರವಾದ ಇದು ಆರೋಗ್ಯಕರವೂ ಪೌಷ್ಠಿಕವೂ ಆಗಿದೆ. ಸಿದ್ಧ ರೂಪದಲ್ಲಿ ಬ್ರೆಡ್, ಚಪಾತಿ, ರೊಟ್ಟಿಗಳೊಡನೆ ಸೇವಿಸಲು ಸಾಧ್ಯವಿರುವ ಈ ಖಾದ್ಯ ಮಕ್ಕಳಿಂದ ಹಿರಿಯರಿಗೆ ಇಷ್ಟವಾಗುತ್ತದೆ. ಆದರೆ ಇದರ ಉಪಯೋಗ ತಿನ್ನುವುದರ ಹೊರತಾಗಿ ಇನ್ನೂ ಹಲವು ವಿಧಗಳಲ್ಲಿ ಆಗುತ್ತದೆ ಎಂಬ ಬಗ್ಗೆ ನಿಮಗೆ ಮಾಹಿತಿಯಿತ್ತೇ? ಪೀನಟ್ ಬಟರ್ ನ ಆರೋಗ್ಯಕಾರಿ ಪ್ರಯೋಜನಗಳು
ಸೋಜಿಗ ವಿಷಯವೆಂದರೆ ಈ ಖಾದ್ಯ ಸೌಂದರ್ಯ ಪ್ರಸಾಧನವಾಗಿ, ಗೃಹದ ಸ್ವಚ್ಛತೆಯ ಸಹಿತ ಇನ್ನೂ ಹಲವಾರು ವಿಧದಲ್ಲಿ ಉಪಯೋಗಕ್ಕೆ ಬರುತ್ತದೆ. ಮನೆಯಲ್ಲಿ ಉಪಯೋಗವಾಗುವ ಹಲವಾರು ಹಾನಿಕಾರಕ ರಾಸಾಯನಿಕಗಳ ಬದಲಿಗೆ ಈ ಪೀನಟ್ ಬಟರ್ ಉಪಯೋಗಿಸಿ ಅದರ ಮೂಲಕ ಆರೋಗ್ಯ ಮತ್ತು ನೈರ್ಮಲ್ಯವನ್ನು ಕಾಪಾಡಬಹುದು.
ಗೃಹಬಳಕೆ ಮತ್ತು ಗೃಹದ ಅಭಿವೃದ್ಧಿಯಲ್ಲಿ ಈ ವಸ್ತುವನ್ನು ವಿವಿಧ ರೀತಿಯಲ್ಲಿ ಬಳಸಬಹುದಾಗಿದ್ದು ಇದರ ಅಪಾರ ಉಪಯೋಗಗಳನ್ನು ಅರಿತವರು ತಮ್ಮ ದಿನಸಿ ವಸ್ತುಗಳ ಜೊತೆಗೇ ಪೀನಟ್ ಬಟರ್ ಅನ್ನು ಕೊಳ್ಳಲು ಮರೆಯುವುದಿಲ್ಲ. ಬನ್ನಿ, ಇದರ ಉಪಯೋಗಗಳೇನು ಎಂಬುದನ್ನು ಇಂದು ಅರಿಯೋಣ..

ಕೈಯಲ್ಲಿನ ದುರ್ವಾಸನೆಯನ್ನು ನಿವಾರಿಸುತ್ತದೆ
ಈ ಗುಣ ಗೃಹಿಣಿಯರಿಗೊಂದು ವರದಾನವಾಗಿದೆ. ಸಾಮಾನ್ಯವಾಗಿ ಅಡುಗೆಮನೆಯಲ್ಲಿ ತರಕಾರಿ ಈರುಳ್ಳಿ, ಮೀನು ಇತ್ಯಾದಿಗಳನ್ನು ಕತ್ತರಿಸುವ ಮೂಲಕ ಗೃಹಿಣಿಯರ ಕೈಗಳಲ್ಲಿ ದುರ್ವಾಸನೆ ಕೂಡಿರುತ್ತದೆ. ವಿಶೇಷವಾಗಿ ಮೀನಿನ ದುರ್ವಾಸನೆ ಸೋಪಿನಿಂದಲೂ ಸುಲಭವಾಗಿ ಹೋಗುವುದಿಲ್ಲ. ಇದನ್ನು ನಿವಾರಿಸಲು ಕೊಂಚ ಪೀನಟ್ ಬಟರ್ ಕೈಗಳಿಗೆ ಸವರಿ ಉಜ್ಜಿಕೊಂಡರೆ ಸಾಕು, ದುರ್ವಾಸನೆ ಮಾಯವಾಗುತ್ತದೆ.

ಸೀಡಿಗಳ ಗೆರೆಗಳನ್ನು ಸರಿಪಡಿಸುತ್ತದೆ
ನಿಮ್ಮ ಹಳೆಯ ಸೀಡಿಗಳಲ್ಲಿ ಗೀರು ಬಿದ್ದಿದ್ದು ಪ್ಲೇ ಆಗುವಾಗ ತಡೆತಡೆದು ಆಗುತ್ತದೆಯೇ, ಇದಕ್ಕೆ ಕೊಂಚ ಪ್ರಮಾಣದ ಪೀನಟ್ ಬಟರ್ ಹಾಕಿ ಸ್ವಚ್ಛ ಮತ್ತು ಒಣ ಬಟ್ಟೆಯಿಂದ ನಯವಾಗಿ ಒರೆಸಿ ನಿವಾರಿಸಿ. ಬಳಿಕ ಸೀಡಿ ಯಾವುದೇ ಅಡೆತಡೆಯಿಲ್ಲದೇ ಪ್ಲೇ ಆಗುತ್ತದೆ.

ರತ್ನಗಂಬಳಿಯಲ್ಲಿ ಅಂಟಿಕೊಂಡಿದ್ದ ಬಬ್ಬಲ್ ಗಂ ತೆಗೆಯುತ್ತದೆ
ರತ್ನಗಂಬಳಿಗೆ ಬಲವಾಗಿ ಅಂಟಿಕೊಂಡಿದ್ದ ಬಬ್ಬಲ್ ಗಂ ತೆಗೆಯುವುದು ಸುಲಭದ ಮಾತಲ್ಲ. ಇದಕ್ಕೆ ಕೊಂಚ ತಾಳ್ಮೆ ಮತ್ತು ಕೊಂಚ ಪೀನಟ್ ಬಟರ್ ಅಗತ್ಯ. ಕೈಯಿಂದ ಎಷ್ಟು ತೆಗೆಯಲು ಸಾಧ್ಯವೋ ಅಷ್ಟು ನಿವಾರಿಸಿ ಉಳಿದ ಭಾಗಕ್ಕೆ ಪೀನಟ್ ಬಟರ್ ಸವರಿ. ಕೊಂಚ ಹೊತ್ತಿನ ಬಳಿಕ ಇದು ಸುಲಭವಾಗಿ ನಿವಾರಿಸಲು ಬರುತ್ತದೆ.

ಇರುವೆಗಳನ್ನು ದೂರವಾಗಿಸುತ್ತದೆ
ನಿಮ್ಮ ಮನೆಗೆ ಕರೆಯದೇ ಇರುವೆಗಳು ಅತಿಥಿಗಳಾಗಿ ಬರುತ್ತಿವೆಯೇ? ಇದಕ್ಕಾಗಿ ಎರಡು ದೊಡ್ಡ ಚಮಚ ಪೀನಟ್ ಬಟರ್ ಮತ್ತು ಅರ್ಧ ಚಿಕ್ಕ ಚಮಚ ಅಡುಗೆ ಸೋಡಾ ಮತ್ತು ಒಂದು ಚಿಕ್ಕ ಚಮಚ ಬೋರಾಕ್ಸ್ ಪುಡಿ ಸೇರಿಸಿ ಮಿಶ್ರಣ ಮಾಡಿ. ಇರುವೆಗಳು ಬರುವ ರಸ್ತೆಯಲ್ಲಿ ಈ ಮಿಶ್ರಣವನ್ನು ಉದುರಿಸಿ. ಇರುವೆಗಳು ಈ ಲಕ್ಷ್ಮಣ ರೇಖೆಯನ್ನು ದಾಟದೇ ಹಿಂದೆ ಹೋಗುತ್ತವೆ.

ಚರ್ಮದ ಮತ್ತು ವಿನೈಲ್ ಪರಿಕರಗಳನ್ನು ಸ್ವಚ್ಛಗೊಳಿಸುತ್ತದೆ
ವಿನೈಲ್ ಮತ್ತು ಚರ್ಮದ ಪರಿಕರಗಳನ್ನು ಸ್ವಚ್ಛಗೊಳಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಕೊಂಚವೇ ಹೆಚ್ಚು ಪ್ರಬಲವಾದ ರಾಸಾಯನಿಕಗಳು ಚರ್ಮದ ವಸ್ತುಗಳ ಮೇಲ್ಮೆಯ ಹೊಳಪನ್ನು ಕುಂದಿಸಬಹುದು. ಆದರೆ ಪೀನಟ್ ಬಟರ್ ಬಳಸಿದರೆ ಯಾವುದೇ ಹಾನಿಯಿಲ್ಲದೇ ಸ್ವಚ್ಛಗೊಳಿಸಲು ಸಾಧ್ಯ. ಅಲ್ಲದೇ ಹೊಳಪನ್ನೂ ನೀಡಬಹುದು. ಇದಕ್ಕಾಗಿ ಕೊಂಚವೇ ಪ್ರಮಾಣವನ್ನು ಪರಿಕರದ ಮೇಲೆ ಹಚ್ಚಿ ಸ್ವಚ್ಛವಾದ ಬಟ್ಟೆ ಉಪಯೋಗಿಸಿ ವೃತ್ತಾಕಾರದಲ್ಲಿ ಸವರುತ್ತಾ ಬನ್ನಿ. ಇದರೊಂದಿಗೆ ಕೊಂಚ ಸುಗಂಧದ್ರವ್ಯವನ್ನು ಸೇರಿಸಿದರೆ ಶೇಂಗಾದ ಪರಿಮಳವನ್ನು ಕಡಿಮೆ ಮಾಡಬಹುದು.



Click it and Unblock the Notifications