Latest Updates
-
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ!
ದುರ್ವಾಸನೆ ಬೀರುವ ಬಾತ್‌ರೂಮ್‍ನ ಸ್ವಚ್ಛತೆಗೆ ಸರಳ ಟಿಪ್ಸ್
ಸಾಮಾನ್ಯವಾಗಿ ಒಂದು ಮನೆಯ ಸ್ವಚ್ಛತೆಯನ್ನು ಅವರ ಶೌಚಾಲಯದ ಸ್ಥಿತಿಯ ಮೂಲಕ ಅಳೆಯುವುದು ಹಿರಿಯರು ಅನುಸರಿಸಿಕೊಂಡು ಬಂದಂತಹ ರೀತಿ. ಏಕೆಂದರೆ ಮನೆಯನ್ನು ಚೊಕ್ಕಟವಾಗಿಟ್ಟುಕೊಳ್ಳಲು ಸಾಕಷ್ಟು ಸಮಯಾವಕಾಶ ದೊರಕದೇ ಇದ್ದರೂ ಶೌಚಾಲಯವನ್ನು ಕಡ್ಡಾಯವಾಗಿ ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಮನೆಯವರು ವಹಿಸುವ ಕಾಳಜಿಯನ್ನು ಹಿರಿಯರು ಗಮನಿಸುತ್ತಾರೆ.
ಮನೆ ಎಂದರೆ ಎಲ್ಲರಿಗೂ ತಮ್ಮ ಪಾಲಿನ ಸ್ವರ್ಗವಾಗಿದೆ. ದಿನದ ಜಂಜಾಟಗಳಿಂದ ಸಂಜೆ ಮನೆಗೆ ಹಿಂದಿರುಗಿದ ಬಳಿಕ ಇಡಿಯ ಮನೆಯನ್ನು ಸ್ವಚ್ಛಗೊಳಿಸಲು ತ್ರಾಣವಿಲ್ಲದಿದ್ದರೂ ಶೌಚಾಲಯವನ್ನು ಮಾತ್ರ ಕಡ್ಡಾಯವಾಗಿ ದಿನಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಲೇಬೇಕು. ಆಗಲೇ ದುರ್ಗಂಧದಿಂದ ಪೂರ್ಣವಾಗಿ ಮುಕ್ತಿ ದೊರಕುತ್ತದೆ.

ಹೌದು, ಬಾತ್‌ರೂಮಿನಿಂದ ಬರುವ ದುರ್ವಾಸನೆಯನ್ನು ಯಾರೂ ಸಹ ಸಹಿಸಿಕೊಳ್ಳಲು ಸಾಧ್ಯವಿರುವುದಿಲ್ಲ. ಅದರಲ್ಲಿಯೂ ಮನೆಗೆ ಅತಿಥಿಗಳು ಬಂದಾಗ, ಇದರಿಂದ ತೀವ್ರತರದಲ್ಲಿ ಮುಜುಗರವುಂಟಾಗುತ್ತದೆ. ಒಂದು ವೇಳೆ ನಿಮ್ಮ ಬಾತ್‌ರೂಮ್ ತಾಜಾತನದಿಂದ ಒಳ್ಳೆಯ ಸುವಾಸನೆಯಿಂದ ಕೂಡಿರಬೇಕು ಎಂದಾದಲ್ಲಿ, ಅದಕ್ಕೆ ಅಗತ್ಯವಾಗಿರುವ ಕೆಲವೊಂದು ಪದಾರ್ಥಗಳನ್ನು ಮತ್ತು ಅದನ್ನು ಬಳಸಿಕೊಂಡು, ಬಾತ್‍ರೂಮ್ ದುರ್ವಾಸನೆಯನ್ನು ನಿವಾರಿಸಿಕೊಳ್ಳುವ ಬಗೆಯನ್ನು ನಾವು ಇಂದು ನಿಮಗೆ ಹೇಳಿಕೊಡುತ್ತೇವೆ.
ನಾವು ಇಂದು ತಿಳಿಸಿಕೊಡುತ್ತಿರುವ ಮಾರ್ಗಗಳು, ದುರ್ವಾಸನೆಯನ್ನು ಹೋಗಲಾಡಿಸುವ ಜೊತೆಗೆ, ನಿಮ್ಮ ಶೌಚಾಲಯವು ಶುಭ್ರವಾಗಿ ಕಾಣುವಂತೆ ಮಾಡುತ್ತದೆ. ಕಮೋಡ್ ಮೇಲೆ ಇರುವ ಕಲೆಗಳು, ಇತ್ಯಾದಿಗಳು ಸಹ ಈ ಪರಿಹಾರಗಳ ಮೂಲಕ ನಿವಾರಿಸಿಕೊಳ್ಳಬಹುದು. ಬನ್ನಿ ಇನ್ನು ತಡ ಮಾಡದೆ ಆ ಪರಿಹಾರ ಮಾರ್ಗಗಳು ಯಾವುವು ಎಂದು ತಿಳಿದುಕೊಂಡು ಬರೋಣ. ಮನೆಯ ಬಾತ್‌ರೂಮ್ ಸ್ವಲ್ಪ ದೊಡ್ಡದಾಗಿ ಕಾಣುವಂತೆ ಮಾಡಬೇಕೇ?
ಲಿಂಬೆರಸ
ಅಡುಗೆ ಸೋಡಾ ಬಳಸಿ
ವಿನೀಗರ್
ಕಪ್ಪು ಅಥವಾ ಆಪಲ್ ಸಿಡೆರ್ ವಿನೀಗರ್ ಅನ್ನು ನಿಮ್ಮ ಬಾತ್‍ರೂಮ್ ತೊಳೆಯಲು ಬಳಸಿಕೊಳ್ಳಬಹುದು. ಇದರ ಸುವಾಸನೆಯು ಬಾತ್‍ರೂಮಿನ ದುರ್ಗಂಧವನ್ನು ಹೋಗಲಾಡಿಸಿದರೆ, ಇದರಲ್ಲಿರುವ ರಾಸಾಯನಿಕ ಅಂಶಗಳು, ಬಾತ್‌ರೂಮಿನ ಕಲೆಗಳನ್ನು ನಿವಾರಿಸಿ, ಫಳಫಳ ಹೊಳೆಯುವಂತೆ ಮಾಡುತ್ತದೆ.
ಸೋಪ್ ವಾಟರ್
ಇದು ಅತ್ಯಂತ ಸುಲಭವಾದ ಪರಿಹಾರವಾಗಿದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ಸೋಪ್ ನೀರನ್ನು ನಿಮ್ಮ ಬಾತ್‌ರೂಮಿನ ನೆಲದ ಮೇಲೆ ಹಾಕಿ ತೊಳೆಯಿರಿ ಸಾಕು. ಸ್ವಲ್ಪ ಸುವಾಸನೆಯಿರುವ ಸೋಪನ್ನು ಇದಕ್ಕಾಗಿ ಬಳಸಿದರೆ ನಿಮಗೆ ಮತ್ತಷ್ಟು ಸಹಾಯವಾಗಬಹುದು. ಸ್ನಾನದ ಕೊಠಡಿಯನ್ನು ಅಂದವಾಗಿಸಲು ಸರಳ ಟಿಪ್ಸ್
ಉಪ್ಪು
ಕಿಟಕಿಗಳನ್ನು ತೆರೆದಿಡಿ
ಸಾಮಾನ್ಯವಾಗಿ ಎಲ್ಲಾ ಶೌಚಾಲಯದಲ್ಲಿಯೂ ಕಿಟಕಿಯನ್ನು ನೀಡಲಾಗಿದ್ದರೂ ಕೆಲವೊಮ್ಮೆ ದುರ್ಗಂಧದ ಇದರ ಮೂಲಕ ಹೊರಹೋಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ದುರ್ಗಂಧ ಹಾಗೆ ಉಳಿದು ಬಿಡುತ್ತದೆ. ಇದಕ್ಕಾಗಿ ನೀವು ಮನೆಯಲ್ಲಿರದ ಸಮಯದಲ್ಲಿ ಶೌಚಾಲಯದ ಬಾಗಿಲು ಮತ್ತು ಕಿಟಕಿಗಳನ್ನು ಪೂರ್ಣವಾಗಿ ತೆರೆದಿಟ್ಟು ಹೋಗುವುದರಿಂದ ತಾಜಾಹವೆ ಒಳಬರುತ್ತದೆ ಮತ್ತು ದುರ್ಗಂಧ ಕಿಟಕಿಯ ಮೂಲಕ ಹೊರಹೋಗುತ್ತದೆ.



Click it and Unblock the Notifications



