Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ನವರಾತ್ರಿ ಹಬ್ಬಕ್ಕೆ ''ರಂಗೋಲಿ''ಯ ರಂಗು..!
ನವರಾತ್ರಿ ಎಂದರೆ 'ಒಂಬತ್ತು ಭರವಸೆಯ ರಾತ್ರಿಗಳು' ಎಂದರ್ಥ. ಶಕ್ತಿ ಅಥವಾ ಸಾಮರ್ಥ್ಯದ ದೇವಿಯಾಗಿರುವ ದುರ್ಗಾಮಾತೆಯನ್ನು ಈ ಒಂಬತ್ತೂ ದಿನಗಳನ್ನು ಭಕ್ತಿ ಮತ್ತು ಕಟ್ಟುಪಾಡಿನ ಮೂಲಕ ಪೂಜಿಸಿ ಉಪವಾಸ ಆಚರಿಸುವ ಮೂಲಕ ದುರ್ಗೆಯ ಅನುಗ್ರಹ ಪಡೆಯಬಹುದು, ತನ್ಮೂಲಕ ಜೀವನದಲ್ಲಿ ಎದುರಾಗುವ ಯಾವುದೇ ತೊಂದರೆ ಅಥವಾ ಕಷ್ಟಗಳನ್ನು ಎದುರಿಸಲು ಶಕ್ತಿ ಮತ್ತು ಸಾಮರ್ಥ್ಯಗಳನ್ನು ಪಡೆಯಬಹುದು. ಮನೆಯ ಸೊಬಗನ್ನು ಹೆಚ್ಚಿಸುವ ರಂಗು ರಂಗಿನ ರಂಗೋಲಿ!
ಭಾರತದಲ್ಲಿ ಆಚರಿಸಲಾಗುವ ಅಸಂಖ್ಯಾತ ಹಬ್ಬಗಳಲ್ಲಿ ಪ್ರಮುಖವಾದವು ಎಂದೆರೆ ನವರಾತ್ರಿ ಮತ್ತು ದಸರಾ. ಇವೆರಡೂ ಹಬ್ಬಗಳು ಒಂದಾದ ಬಳಿಕ ಇನ್ನೊಂದು ಬರುವ ಕಾರಣ ರಜಾದಿನಗಳೂ ಸಾಲಾಗಿ ದೊರೆತು ಇಡಿಯ ದೇಶವೇ ಸಂತೋಷ ಮತ್ತು ಸಂಭ್ರಮದಲ್ಲಿ ಮುಳುಗುತ್ತದೆ. ಈ ಸಂಭ್ರವನ್ನು ಹೆಚ್ಚಿಸಲು ಅಡುಗೆ ಮನೆಯಲ್ಲಿ ವಿಶೇಷ ತಿಂಡಿಗಳು ತಯಾರಾದರೆ ಮನೆಯ ಅಂಗಳದಲ್ಲಿ ವರ್ಣ ಮತ್ತು ವಿವಿಧ ವಿನ್ಯಾಸದ ರಂಗೋಲಿಗಳು ಮನೆಯ ಅಂದವನ್ನು ಹೆಚ್ಚಿಸುತ್ತವೆ.
ವಿಶೇಷವಾಗಿ ಮನೆಯ ಪ್ರಧಾನ ಬಾಗಿಲ ಎದುರು ಅಥವಾ ಹೊಸ್ತಿಲಿನಲ್ಲಿ ಬಿಡಿಸುವ ರಂಗೋಲಿ ಅತಿಥಿಗಳಿಗೆ ಆದರದ ಸ್ವಾಗತ ಕೋರುತ್ತದೆ. ವಾಸ್ತವವಾಗಿ ರಂಗೋಲಿ ಮಹಾರಾಷ್ಟ್ರ ರಾಜ್ಯದಲ್ಲಿ ಮೊದಲು ಪ್ರಾರಂಭವಾಗಿ ನಂತರ ಇಡಿಯ ದೇಶದಲ್ಲಿ ವ್ಯಾಪಿಸಿತು ಎಂದು ಹೇಳಲಾಗುತ್ತದೆ. ಒಂದು ವೇಳೆ ನೀವು ಇನ್ನೂ ಹಳೆಯ ಕಾಲಾ ಇಪ್ಪತ್ತನಾಲ್ಕು ಚುಕ್ಕಿಗಳ ನಕ್ಷತ್ರದ ರಂಗೋಲಿಯಿಂದ ಮುಂದೆ ಬಂದಿಲ್ಲದೇ ಇದ್ದರೆ ಕೆಳಗಿನ ಸ್ಲೈಡ್ ಶೋ ನಿಮಗೆ ಸುಂದರವಾದ, ಆಧುನಿಕ ಮತ್ತು ಎಲ್ಲರ ಮನಸೆಳೆಯುವ ರಂಗೋಲಿಯನ್ನು ಬಿಡಿಸಲು ನೆರವು ನೀಡುತ್ತದೆ...

ಮನಸೆಳೆಯುವ ಸಾಂಪ್ರಾದಾಯಿಕ ರಂಗೋಲಿ
ಹಬ್ಬದ ಇತರ ಕೆಲಸಗಳಲ್ಲಿ ಮಗ್ನರಾಗಿದ್ದುದರ ಕಾರಣ ರಂಗೋಲಿಗೆ ಹೆಚ್ಚಿನ ಸಮಯವಿಲ್ಲದವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಸಾಧಾರಣವಾದ ಒಂದೇ ಬಣ್ಣದ ಬದಲು ಪ್ರಖರವಾದ ಕೆಂಪು ಮತ್ತು ಹಸಿರು ಬಣ್ಣಗಳನ್ನು ಬಳಸಿ ಸುಲಭ ಮತ್ತು ಸಾಂಪ್ರಾದಾಯಿಕವಾದ ವಿನ್ಯಾಸ ರಚಿಸಿ. ಅಂಚುಗಳಲ್ಲಿ ದಪ್ಪನೆಯ ರೇಖೆಯಿರುವಂತೆ ವೃತ್ತಾಕಾರದಲ್ಲಿ ರಂಗೋಲಿ ರಚಿಸಿ. ಎರಡು ವೃತ್ತಗಳ ನಡುವಣ ಕಾಲಿಜಾಗದಲ್ಲಿ ಬಣ್ಣದ ಪುಡಿ ತುಂಬಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮನಸೆಳೆಯುವ ಸಾಂಪ್ರಾದಾಯಿಕ ರಂಗೋಲಿ
ದಪ್ಪನೆಯ ರೇಖೆಯ ಮೇಲೆ ಚಿಕ್ಕ ಮಣಿಗಳನ್ನು ಅಥವಾ ಹೊಳೆಯುವ ದೊಡ್ಡ ಬಿಲ್ಲೆಗಳನ್ನು ಜೋಡಿಸಿ. ನಡುವೆ ನಿಮ್ಮ ನೆಚ್ಚಿನ ಕುಂಡವನ್ನಿರಿಸಿ. ಇದು ಚಿಕ್ಕದಾದರೂ ಚೊಕ್ಕ ಮತ್ತು ಸುಂದರವಾದ ರಂಗೋಲಿಯಾಗಿದ್ದು ಅಕ್ಕಪಕ್ಕದವರು ಸಾಕಷ್ಟು ಸಮಯ ವ್ಯಯಿಸಿ ಮಾಡಿದ ರಂಗೋಲಿಗಳಿಗೆ ಸ್ಪರ್ಧೆ ನೀಡುವಂತಿರುತ್ತದೆ.

ಹೂವಿನ ರಂಗೋಲಿ
ಒಂದು ವೇಳೆ ನಿಮ್ಮ ಮನೆಯಲ್ಲಿ ಹೂಗಿಡಗಳಿದ್ದು ಆ ದಿನ ಪೂಜೆಗೂ ಸಾಕಾಗಿ ಮಿಗುವಷ್ಟಿದ್ದರೆ ಹೂವಿನ ರಂಗೋಲಿ ಸೂಕ್ತವಾದ ಆಯ್ಕೆಯಾಗಿದೆ. ಮಾರುಕಟ್ಟೆಯಲ್ಲಿ ಹೂವು ಅಗ್ಗವಾಗಿದ್ದರೂ ಇದನ್ನು ಅನುಸರಿಸಬಹುದು. ಇದಕ್ಕಾಗಿ ಪ್ರಖರ ಹಳದಿ, ಕಿತ್ತಳೆ, ಕೆಂಪು, ಗುಲಾಬಿ ಪಕಳೆಗಳಿರುವ ಹೂವುಗಳನ್ನು ಆರಿಸಿ. ಹೂವಿನ ಗಿಡಗಳ ಹಸಿರುವ ಎಲೆಗಳನ್ನೂ ಅಲಂಕಾರಕ್ಕಾಗಿ ಬಳಸಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೂವಿನ ರಂಗೋಲಿ
ದೊಡ್ಡ ದೊಡ್ಡ ಖಾಲಿಜಾಗವಿರುವಂತೆ ದಪ್ಪನೆಯ ರೇಖೆಗಳಲ್ಲಿ ಸುಂದರ ವಿನ್ಯಾಸವನ್ನು ಆಯ್ಕೆ ಮಾಡಿ ಪ್ರತಿ ಖಾಲಿಜಾಗದಲ್ಲಿ ಒಂದೊಂದು ಬಣ್ಣದ ಪಕಳೆಗಳನ್ನು ತುಂಬಿಸಿದರಾಯಿತು, ಕೆಲವೇ ನಿಮಿಷಗಳಲ್ಲಿ ಮನಸೆಳೆಯುವ ರಂಗೋಲಿ ಸಿದ್ಧ. ಇದರ ಕೆಳಗೆ ಶುಭ ದಸರಾ ಥವಾ ಶುಭ ನವರಾತ್ರಿ ಎಂದು ಬರೆದು ನಿಮ್ಮ ಆತ್ಮೀಯರಿಗೆ ಶುಭ ಕೋರಬಹುದು.
ವಿಶೇಷ ಸೂಚನೆ: ನಿಮ್ಮ ಅಂಗಳದಲ್ಲಿ ಆಡುವ ಗಾಳಿ ಪ್ರಬಲವಾಗಿದ್ದರೆ ಅಥವಾ ವಾಹನಗಳು ಓಡಾಡುತ್ತಿದ್ದರೆ ಈ ರಂಗೋಲಿ ಸೂಕ್ತವಲ್ಲ.

ದುರ್ಗಾಮಾತೆಯ ನೆಚ್ಚಿನ ರಂಗೋಲಿ
ಹಿಂದೂಧರ್ಮೀಯರು ಅತಿ ಹೆಚ್ಚಾಗಿ ಪೂಜಿಸುವ ದುರ್ಗಾಮಾತೆಯ ನವರೂಪಗಳನ್ನು ಒಂಬತ್ತು ದಿನ ಆಚರಿಸುವ ನವರಾತ್ರಿಗೆ ಈ ಒಂಬತ್ತು ರೂಪಗಳನ್ನು ಪ್ರತಿನಿಧಿಸುವ ರಂಗೋಲಿ ಹೆಚ್ಚು ಸಾಂದರ್ಭಿಕವಾಗಿದೆ. ಈ ರಂಗೋಲಿಯನ್ನು ಬಿಡಿಸುವ ಮೂಲಕ ನಿಮ್ಮ ಅತಿಥಿಗಳಿಗೆ ನವರಾತ್ರಿಯ ಮಹತ್ವವನ್ನು ರಂಗೋಲಿಯ ಚಿತ್ತಾರದ ಮೂಲಕ ವಿವರಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಬಹುದು. ಮುಖ ಪ್ರಖರ ಹಳದಿ, ದೊಡ್ಡ ಕಣ್ಣುಗಳು ಮತ್ತು ಆಕೆಯ ಅಲಂಕಾರಕ್ಕಾಗಿ ಹಳದಿ ಮತ್ತು ಕೆಂಪುಬಣ್ಣದ ಆಭರಣಗಳ ವಿನ್ಯಾಸವನ್ನು ಬಿಡಿಸಿ.

ದಾಂಡಿಯಾ ರಂಗೋಲಿ
ಗುಜರಾತ್ ರಾಜ್ಯದ ಸಾಂಪ್ರಾದಾಯಿಕ ನೃತ್ಯವಾದ ದಾಂಡಿಯಾ ನೃತ್ಯ ನವರಾತ್ರಿಯ ವಿಶೇಷವಾಗಿದೆ. ಎರಡು ಕೋಲುಗಳನ್ನು ಲಯಬದ್ದವಾಗಿ ಬಡಿಯುತ್ತಾ ಹಿರಿಯ ಕಿರಿಯರೆಂಬ, ಗಂಡು ಹೆಣ್ಣು ಎಂಬ ಬೇಧವಿಲ್ಲದೇ ನರ್ತಿಸುವ ಈ ನೃತ್ಯ ಅತ್ಯಂತ ಮನಮೋಹಕವಾಗಿದ್ದು ನವರಾತ್ರಿಯಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದೆ. ಈ ವರ್ಷವಂತೂ ಅಹ್ಮದಾಬಾದ್ ನ ಒಂದು ಸ್ಥಳದಲ್ಲಿ ದಾಖಲೆ ನಾಲ್ಕೂವರೆ ಸಾವಿರ ಜನ ಒಂದು ತಪ್ಪಿಲ್ಲದೇ ದಾಂಡಿಯಾ ಆಡಿ ಸಂಭ್ರಮಿಸಿದ್ದಾರೆ. ಈ ಸಂಭ್ರವಮನ್ನು ನಿಮ್ಮ ಮನೆಯಂಗಳದಲ್ಲಿ ಮೂಡಿಸಲು ದೊಡ್ಡ ವೃತ್ತದೊಳಗೆ ಚಿಕ್ಕ ವೃತ್ತ ಮೂಡಿಸಿ ಅದರೊಳಗೆ ದಾಂಡಿಯಾ ಕೋಲುಗಳನ್ನು ಬಿಡಿಸಿ. ಪ್ರತಿ ಎರಡು ಕೋಲುಗಳು ಕತ್ತರಿಯಾಕಾರದಲ್ಲಿರಲಿ. ಬಳಿಕ ವೃತ್ತಗಳನ್ನು ಕೆಂಪು ಮತ್ತು ಹಳದಿ ಬಣ್ಣಗಳಿಂದ ತುಂಬಿ. ದಾಂಡಿಯಾ ಕೋಲುಗಳಿಗೆ ಹಸಿರು ಮತ್ತು ನೀಲಿ ಬಣ್ಣಗಳನ್ನು ನೀಡಿ.

ಸಲಹೆ:
1) ನಿಮ್ಮ ರಂಗೋಲಿ ಮನೆಯ ಹೊಸ್ತಿಲಲ್ಲಿದ್ದರೂ ಅತಿಥಿಗಳು ಮತ್ತು ಮನೆಯವರು ಓಡಾಡಲು ಸಾಕಾಗುವಷ್ಟು ಜಾಗವನ್ನು ಮೊದಲೇ ಬಿಡುವುದು ಅಗತ್ಯ.
2) ನಿಮ್ಮ ರಂಗೋಲಿಯನ್ನು ದಾರಿಹೋಕರು ಅಥವಾ ವಿಶೇಷವಾಗಿ ವೇಗವಾಗಿ ಓಡುವ ಮಕ್ಕಳು ತುಳಿದು ಹಾಳುಮಾಡದಂತೆ ಎಚ್ಚರ ವಹಿಸಿ. ಸಾಧ್ಯವಾದರೆ ಅಕ್ಕಪಕ್ಕ ಹೂವಿನ ಕುಂಡಗಳಲ್ಲಿರಿಸಿ ಅಂದವನ್ನು ಹೆಚ್ಚಿಸುವ ಜೊತೆಗೇ ಓಡುವ ಮಕ್ಕಳಿಗೆ ತಡೆ ನೀಡಿದಂತೆಯೂ ಆಗುತ್ತದೆ.
3) ಪರಿಸರ ಸ್ನೇಹಿ ಬಣ್ಣ ಮತ್ತು ಪುಡಿಗಳನ್ನೇ ಬಳಸಿ. ರಾಸಾಯನಿಕ ಬಣ್ಣ ಬೇಡ. ಏಕೆಂದರೆ ನಿಮ್ಮ ಹಬ್ಬದ ಸಂಭ್ರಮ ಮುಗಿದ ಬಳಿಕ ಬಾವಿ, ಕೆರೆ, ನದಿ ಅಥವಾ ಅಂತರ್ಜಲದಲ್ಲಿ ಸೇರಿ ಕುಡಿಯುವ ನೀರನ್ನು ಕಲುಷಿತಗೊಳಿಸುವ ಸಾಧ್ಯತೆ ಇದೆ.

ಸಲಹೆ:
4) ಅಕ್ಕಪಕ್ಕದ ಎಲ್ಲರ ರಂಗೋಲಿಗಳನ್ನು ಮುಕ್ತಮನಸ್ಸಿನಿಂದ ಪ್ರಶಂಸಿಸಿ, ಯಾರ ರಂಗೋಲಿಯನ್ನೂ ಕಳಪೆ ಎಂದು ಹೀಯಾಳಿಸಬೇಡಿ, ಅಥವಾ ಹೋಲಿಸಬೇಡಿ. ಪ್ರತಿಯೊಬ್ಬರ ಮನೆಯ ರಂಗೋಲಿಯೂ ಸುಂದರವೇ ಎಂಬ ವಿಶಾಲ ಮನೋಭಾವ ಪ್ರಕಟಿಸಿ. ಇದು ದುರ್ಗಾಮಾತೆಗೂ ಇಷ್ಟವಾದ ಕಾರ್ಯವಾಗಿದ್ದು ನಿಮಗೆ ನೆಮ್ಮದಿಯ ವರದಾನವನ್ನು ನೀಡುತ್ತಾಳೆ.
5) ಧಿಡೀರನೇ ವಿನ್ಯಾಸ ಮೂಡಿಸುವ ರಂಗೋಲಿ ಪರಿಕರ ಬಳಕೆ ಬೇಡ. ಏಕೆಂದರೆ ರಂಗೋಲಿ ಬಿಡಿಸುವ ಶ್ರಮವೇ ಮನೆಯಾಕೆಯ ಸಂಭ್ರಮಕ್ಕೆ ನಿಜವಾದ ಕಾರಣವಾಗಿದ್ದು ಕೃತಕ ವಿನ್ಯಾಸ ಈ ಸಂಭ್ರಮವನ್ನು ಕಿತ್ತುಕೊಂಡು ಬಿಡುತ್ತದೆ.



Click it and Unblock the Notifications











