Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಅಡುಗೆ ಮಾಡುವುದು ಇನ್ನು ನೀರು ಕುಡಿದಷ್ಟು ಸುಲಭ!
ದಿನಾ ಬೆಳಿಗಿನ ಜಾವದ ತಿಂಡಿ, ಮಧ್ಯಾಹ್ನದ ಹಾಗೂ ರಾತ್ರಿಯ ಊಟ ತಯಾರು ಮಾಡುವಷ್ಟರಲ್ಲಿ ಸುಸ್ತೋ ಸುಸ್ತು ಎಂದೆನಿಸಿ ಬಿಡುತ್ತದೆ ಅಲ್ಲವೇ? ಹೌದು ಇದೇ ಸಮಸ್ಯೆಯಿಂದಾಗಿ ದಿನಾಪೂರ್ತಿ ಅಡುಗೆಮನೆಯಲ್ಲೇ ಸಮಯ ಕಳೆಯುವಂತಾಗುತ್ತದೆ ಅಲ್ಲದೆ ಇದರಿಂದ ಬೇಸರದ ಪ್ರಕ್ರಿಯೆ ನಿಮ್ಮನ್ನು ಸುಲಭವಾಗಿ ಆವರಿಸಿಬಿಡುತ್ತದೆ. ಚಿಂತಿಸದಿರಿ ಇಂದು ಬೋಲ್ಡ್ ಸ್ಕೈ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದು ಇದನ್ನು ನಿಮ್ಮ ಅಡುಗೆಮನೆಯಲ್ಲಿ ಅನುಸರಿಸಿದರೆ ಖಂಡಿತವಾಗಿಯೂ ನೀವು ಇನ್ನಷ್ಟು ಉಲ್ಲಾಸಭರಿತವಾಗಿರುವಿರಿ.
ಅಡಿಗೆಮನೆಯಲ್ಲಿ ಮಾಡಬಹುದಾದ ಹಲವಾರು ಭಿನ್ನತೆಗಳು ಮತ್ತು ಸಲಕರಣೆಗಳಿಂದ ನಿಮ್ಮ ಸಮಯವನ್ನು ಆನಂದವಾಗಿ ಕಳೆಯಬಹುದು. ಕೆಲವು ಸಣ್ಣ ಸಣ್ಣ ಬದಲಾವಣೆಗಳಿಂದ ಬಹಳಷ್ಟು ವ್ಯತ್ಯಾಸಗಳನ್ನು ಕಾಣಬಹುದು. ಬುದ್ಧಿವಂತಿಕೆಯ ವಿಧಾನಗಳನ್ನು ಬಳಸಿ, - ಉದಾಹರಣೆಗೆ ಆಹಾರಪದಾರ್ಥಗಳ ಶೇಖರಣೆ, ಶೀತಲೀಕರಣ, ಸಿಪ್ಪೆಸುಲಿಯುವುದು, ರೆಫ್ರಿಜರೇಟರ್ ಇಡುವ ಸ್ಥಳ, ಪುನಃ ಬಿಸಿಮಾಡುವುದು, ಬೇಕಿಂಗ್ ಮತ್ತು ತರಕಾರಿ ಹೆಚ್ಚುವುದು, ಇತ್ಯಾದಿ - ನಿಮ್ಮ ಅಡಿಗೆಮನೆಯ ಪ್ರತಿಯೊಂದು ಭಾಗದಲ್ಲಿ ಅಳವಡಿಸಬಹುದು ಮತ್ತು ಬಳಸಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಅಡಿಗೆಮನೆಯನ್ನು ಸಂಪೂರ್ಣವಾಗಿ ಹಾಗೂ ಹೆಚ್ಚಾಗಿ ಬುದ್ಧಿವಂತಿಕೆಯಿಂದ ಕೂಡಿರುತ್ತವೆ.

ಅಡಿಗೆಮನೆಯ ಭಿನ್ನತೆಗಳು ಮತ್ತು ಬುದ್ಧಿವಂತಿಕೆ ನಿಮ್ಮ ಸುಖ ಜೀವನಕ್ಕೆ ಅಗತ್ಯ ಮತ್ತು ಅವಶ್ಯ. ಅವುಗಳಿಂದ ನಿಮ್ಮ ಜೀವನವು ಮತ್ತೂ ಸುಖಕರವಾಗಿರುತ್ತದೆ ಏಕೆಂದರೆ, ನೀವು ಅಡಿಗೆಮನೆಯಲ್ಲಿದ್ದಾಗ ಅವಸರದಲ್ಲಿರುತ್ತೀರಿ ಮತ್ತು ಕೆಲಸಗಳು ಸುಲಭವಾಗಿ ಸರಿಯಲು ಇಚ್ಛಿಸುತ್ತೀರಿ. ಹಾಗೆ ಮಾಡುವಾಗ ಕೆಲವು ವಿಧಾನಗಳನ್ನು ಪ್ರಯೋಗ ಮಾಡಿ ಕಲಿತುಕೊಳ್ಳುತ್ತೀರಿ.
ಬೆಳ್ಳುಳ್ಳಿಯ ಸಿಪ್ಪೆಯನ್ನು ಸುಲಿಯಲು
ಬೆಳ್ಳುಳ್ಳಿಯ ದಳಗಳನ್ನು ನೀರಿನಲ್ಲಿ ನೆನೆಸಿರಿ ಬೆಳ್ಳುಳ್ಳಿಯ ದಳಗಳ ಸಿಪ್ಪೆಯನ್ನು ಸುಲಿಯಲು ಮತ್ತೊ೦ದು ಸುಲಭೋಪಾಯವು ಯಾವುದೆ೦ದರೆ, ಬಟ್ಟಲೊ೦ದರ ತು೦ಬಾ ತಣ್ಣೀರನ್ನು ತೆಗೆದುಕೊ೦ಡು ಅದರಲ್ಲಿ ಈ ದಳಗಳನ್ನು ಕೆಲಕಾಲದವರೆಗೆ ನೆನೆಸಿಡಬೇಕು. ಆಗ ಸಿಪ್ಪೆಗಳು ತಾವೇ ತಾವಾಗಿ ಬೆಳ್ಳುಳ್ಳಿಯ ದಳಗಳಿ೦ದ ಬೇರ್ಪಡುತ್ತವೆ. ಒ೦ದು ವೇಳೆ ಹಾಗೇನಾದರೂ ಸಿಪ್ಪೆಯು ಬೇರ್ಪಡದೇ ಹೋದರೂ ಕೂಡಾ ಚಿ೦ತಿಸುವ ಅಗತ್ಯವಿಲ್ಲ. ನೀರಿನಲ್ಲಿ ನೆನೆದಿರುವ ದಳಗಳು ಈಗ ಸಾಕಷ್ಟು ನಯವಾಗಿರುತ್ತವೆ ಹಾಗೂ ಈಗ ಇವುಗಳನ್ನಾವರಿಸುವ ಸಿಪ್ಪೆಗಳನ್ನು ವಿಶೇಷ ಪ್ರಯತ್ನದ ಅಗತ್ಯವಿಲ್ಲದೇ ಸುಲಭವಾಗಿ ನಿವಾರಿಸಬಹುದು.
ಈರುಳ್ಳಿಗಳನ್ನು ಹೆಚ್ಚುವ ಮೊದಲು
ಈರುಳ್ಳಿಗಳನ್ನು ಹೆಚ್ಚುವುದಕ್ಕೆ ಮೊದಲು ಇಪ್ಪತ್ತರಿ೦ದ ಮೂವತ್ತು ನಿಮಿಷಗಳ ಕಾಲ ಫ್ರಿಜ್ ನಲ್ಲಿರಿಸಿರಿ. ಹೀಗೆ ಮಾಡಿದಲ್ಲಿ, ಕಿಣ್ವಗಳು ಉತ್ಪತ್ತಿಮಾಡುವ ಆಮ್ಲದ ಪ್ರಮಾಣವು ತಗ್ಗುತ್ತದೆ. ಇದಲ್ಲದೆ ಮತ್ತೊಂದು ಮಾರ್ಗ ವೇನಂದರೆ ಈರುಳ್ಳಿಗಳನ್ನು ನೀರಿನಲ್ಲಿ ಐದರಿ೦ದ ಹತ್ತು ನಿಮಿಷಗಳ ಕಾಲ ನೆನೆಸಿಡಬೇಕು. ಫಲಿತಾ೦ಶವನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ನೀರಿಗೆ ಒ೦ದು ಚಿಟಿಕೆಯಷ್ಟು ಉಪ್ಪನ್ನು ಸೇರಿಸಿರಿ.
ಆಹಾರ ಶೇಖರಣೆ
ಟೊಮೇಟೊ ಕೊಳೆಯದಂತಿರಲು ಅದರ ತೊಟ್ಟಿನ ಸಮೇತ ಮನೆಯೊಳಗಿನ ತಾಪಮಾನದಲ್ಲಿ ಇಟ್ಟು ಸುರಕ್ಷಿತಗೊಳಿಸಿ. ಬಾಳೆಹಣ್ಣಿನ ಕೊನೆಯನ್ನು ಪ್ಲಾಸ್ಟಿಕ್ಕಿನಿಂದ ಸುತ್ತಿಟ್ಟರೆ ಹೆಚ್ಚುಕಾಲವಿಟ್ಟಿರಬಹುದು. ಹಣ್ಣುಗಳನ್ನು ಕಾಗದದ ಚೀಲಗಳಲ್ಲಿಟ್ಟು ಬೇಗ ಹಣ್ಣಾಗುವಂತೆ ಮಾಡಬಹುದು. ಆರಾಮವಾಗಿರುವುದಕ್ಕೆ ಇವೆಲ್ಲ ಅಡಿಗೆಮನೆಯ ಕೆಲವು ಭಿನ್ನತೆಗಳು.
ಪುನಃ ಬಿಸಿಮಾಡುವುದು ಮತ್ತು ಸಂಗ್ರಹಿಸುವುದು
ಪಿಜ್ಜಾ ಅಥವ ಬೆಂದು ಸಿದ್ಧಗೊಳಿಸಿದ ಆಹಾರಗಳನ್ನು ಒಂದು ಕಪ್ ನೀರಿನಲ್ಲಿಟ್ಟು ಮೈಕ್ರೋವೇವ್ ಮಾಡಿದರೆ ಒಣಗುವುದನ್ನು ತಡೆಯುತ್ತದೆ. ಮೈಕ್ರೋವೇವ್ ಮಾಡುವ ಉದ್ದೇಶವೇನೆಂದರೆ ತಣ್ಣಗಿರುವ ಸಿದ್ಧಪಡಿಸಿದ ಆಹಾರಗಳಿಗೆ ಸ್ವಲ್ಪ ತೇವಾಂಶ ಸೇರಿಸುವುದು. ಮೈಕ್ರೋವೇವ್ ಮಾಡಿದಾಗ ಎಲ್ಲ ತೇವಾಂಶವನ್ನು ಹೀರಿಬಿಡುವುದರಿಂದ ಐಸ್ ಗಡ್ಡೆ ಅಥವ ನೀರನ್ನು ಅಂತಹ ಆಹಾರಕ್ಕೆ ಅನುಗುಣವಾಗಿ ಬಳಸಿ. ಈ ಸುಲಭವಾದ ವಿಧಾನಗಳನ್ನು ಅಡಿಗೆಮನೆಯ ಬಳಸಿ ನಿಮ್ಮ ಸಮಯವನ್ನು ಸುಖಮಯವಾಗಿರಿಸಿ



Click it and Unblock the Notifications














