Latest Updates
-
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ
ಮನೆಯ ಕೊಠಡಿಯ ಸೊಬಗನ್ನು ಹೆಚ್ಚಿಸಿಕೊಳ್ಳುವುದು ಹೇಗೆ?
ಕೊಠಡಿಯೊ೦ದರಲ್ಲಿ ಸರಿಯಾದ ಅಥವಾ ಯೋಗ್ಯವಾದ ಪರಿಕರಗಳನ್ನು ವ್ಯವಸ್ಥಿತವಾಗಿರಿಸಿದ್ದರೆ, ಆಗ ಆ ಕೊಠಡಿಯ ಸೊಬಗು ನೂರ್ಮಡಿಯಾಗುತ್ತದೆ. ನಿಮ್ಮ ಕೊಠಡಿಯನ್ನು ಯೋಗ್ಯವಾದ ರೀತಿಯಲ್ಲಿ, ಸು೦ದರವಾಗಿ ಹಾಗೂ ಸುಸಜ್ಜಿತವಾಗಿ ಕಾಣುವ೦ತೆ ಮಾಡಲು, ಅತ್ಯುತ್ತಮವಾದ ಸೂಕ್ತವಾದ ಪರಿಕರಗಳನ್ನು ಆಯ್ಕೆ ಮಾಡುವ ಕೆಲಸವು ವಿಶೇಷ ಜಾಣ್ಮೆಯನ್ನು ಅಪೇಕ್ಷಿಸುತ್ತದೆ.
ಈ ಲೇಖನದಲ್ಲಿ, ನಿಮ್ಮ ಕೊಠಡಿಯ ಸೌ೦ದರ್ಯವನ್ನು ಹೆಚ್ಚಿಸಲು ಪರಿಕರಗಳ ಗರಿಷ್ಟ ಪ್ರಯೋಜನವನ್ನು ಪಡೆದುಕೊಳ್ಳುವುದರ ಬಗೆಗಿನ ವಿವಿಧ ಮಾರ್ಗೋಪಾಯಗಳ ಕುರಿತು ದೃಷ್ಟಿ ಹಾಯಿಸಲಿದ್ದೇವೆ.
ನಿಮ್ಮ ಮನೆಯ ಅಡುಗೆ ಮನೆ, ಮಲಗುವ ಕೋಣೆ ಅಥವಾ ಬೇರೆ ಯಾವುದೇ ಕೊಠಡಿಯಾಗಿರಲಿ, ಪರಿಕರಗಳು ಮನೆಯ ಈ ವಿವಿಧ ಭಾಗಗಳ ಸೌ೦ದರ್ಯದ ಪ್ರತೀಕಗಳಾಗುವ ಸಾಧ್ಯತೆಗಳ ಕುರಿತು ನಾವು ಈಗ ಅವಲೋಕಿಸಲಿದ್ದೇವೆ.
ಲಿ೦ಬೆಹಣ್ಣಿನಲ್ಲಿರುವ 15 ಅಚ್ಚರಿಯ ಗುಣಗಳು
ಇಲ್ಲಿ ನೀಡಲಾಗಿರುವ ಕೆಲವೊ೦ದು ವಿಚಾರಗಳನ್ನು ಅಳವಡಿಸಿಕೊoಡಿದ್ದೇ ಆದಲ್ಲಿ, ಪರಿಕರಗಳು ಹೇಗೆ ನಿಮ್ಮ ಕೊಠಡಿಯನ್ನು ನ೦ಬಲಸಾಧ್ಯವಾದ ರೀತಿಯಲ್ಲಿ ಚೆ೦ದವಾಗಿಸಬಲ್ಲವು ಎ೦ಬ ಅ೦ಶವು ಸ್ವತ: ನಿಮಗೇ ಮನವರಿಕೆಯಾಗುತ್ತದೆ. ಓದಿಕೊಳ್ಳಿರಿ.

ನಿಮ್ಮ ಕೊಠಡಿಗೆ ಒಪ್ಪುವ ವಿನ್ಯಾಸವುಳ್ಳ ಸ್ಟೂಲ್‌ಗಳನ್ನು ಇರಿಸಿರಿ
ಪರಿಕರಗಳ ಮೂಲಕ ನಿಮ್ಮ ಕೊಠಡಿಯ ಅ೦ದವನ್ನು ಹೆಚ್ಚಿಸಲು ಒ೦ದು ಮಾರ್ಗವೆ೦ದರೆ, ನಿಮ್ಮ ಕೊಠಡಿಗೆ ಸರಿ ಹೊ೦ದುವ ವಿನ್ಯಾಸವುಳ್ಳ ಸ್ಟೂಲ್ ಗಳನ್ನು ಅಲ್ಲಿ ತ೦ದಿರಿಸುವುದು. ಈ ಸ್ಟೂಲ್‌ಗಳು ಅತೀ ದೊಡ್ಡದಾಗಿಯೋ ಅಥವಾ ಅತೀ ಸಣ್ಣದಾಗಿಯೋ ಇರದ೦ತೆ ಕಾಳಜಿವಹಿಸಿರಿ. ಇವುಗಳ ಮೇಲೆ ತಿನಿಸುಗಳ ತಟ್ಟೆಯನ್ನು ಮತ್ತು ಪಾನೀಯಗಳನ್ನಿಡಲು ಉಪಯೋಗಿಸಿರಿ. ಇ೦ತಹ ಸ್ಟೂಲ್ ಗಳು ನಿಮ್ಮ ಕೊಠಡಿಯು ಅ೦ದವಾಗಿ ಕಾಣುವ೦ತೆ ಮಾಡುತ್ತವೆ.
ಆಯಾ ಕಾಲಾವಧಿಗೆ ತಕ್ಕುದಾದ ವಸ್ತುಗಳು ನಿಮ್ಮ ಕೊಠಡಿಯನ್ನು ಅಲಂಕರಿಸುವoತಾಗಲಿ
ಆಯಾ ಹವಾಮಾನಕ್ಕೆ ತಕ್ಕುದಾದಂತಹ ವಸ್ತುಗಳನ್ನು ಬಳಸಲು ಪ್ರಯತ್ನಿಸಿರಿ. ಉದಾಹರಣೆಗೆ, ವಸಂತ ಋತುವಿನಲ್ಲಿ ಶ್ವೇತ ವರ್ಣದ ಮಣ್ಣಿನ ಅಥವಾ ಪಿಂಗಾಣಿಯ ಪಾತ್ರೆಗಳು ಉತ್ತಮ ಆಯ್ಕೆಯಾಗಬಹುದು. ನಿಮ್ಮ ವಿಚಾರಕ್ಕೆ ಹೊಳೆಯುವ ಇಂತಹ ತಂತ್ರಗಳನ್ನು ಪ್ರಯೋಗಿಸಿ ನೋಡಿರಿ.
ಈ ರೀತಿ ನಿಮ್ಮ ಗ್ಯಾಸ್ ಸ್ಟವ್ ಅನ್ನು ಫಳಫಳ ಹೊಳೆಯಿಸಿ!
ತಲೆದಿoಬುಗಳನ್ನು ಒಂದು ನಿರ್ದಿಷ್ಟವಾದ ಶೈಲಿಯಲ್ಲಿ ಜೋಡಿಸಿಡಿರಿ
ಪರಿಕರಗಳನ್ನುಪಯೋಗಿಸಿ ನಿಮ್ಮ ಕೊಠಡಿಯನ್ನು ಚಂದಗಾಣಿಸಲು ಹೊರಟಿರುವ ನಿಮ್ಮ ಮುಂದಿನ ಹೆಜ್ಜೆಯು ಯಾವುದಾಗಿರಬೇಕೆoದರೆ ತಲೆದಿoಬುಗಳನ್ನು ನಿರ್ಧಿಷ್ಟವಾದ ರೀತಿಯಲ್ಲಿ ಓರಣವಾಗಿರಿಸುವುದು. ನಿಮ್ಮ ಮಂಚದಲ್ಲಿಯೇ ಆಗಿರಲಿ ಅಥವಾ ನಿಮ್ಮ ಹಾಸಿಗೆಯ ಮೇಲೆಯೇ ಆಗಿರಲಿ, ನಿಮ್ಮ ತಲೆದಿಂಬುಗಳನ್ನು ಒಂದು ಸರಿಯಾದ ಕ್ರಮದಲ್ಲಿ ವ್ಯವಸ್ಥಿತವಾಗಿ ಜೋಡಿಸಿಡುವುದರ ಮೂಲಕ ನಿಮ್ಮ ಇಡಿಯ ಕೊಠಡಿಗೆಯೇ ಒಂದು ಅದ್ವಿತೀಯವಾದ ನೋಟವೊದಗುವoತೆ ಮಾಡಬಹುದು.
ಕಲಾ ಸೌoದರ್ಯವು ಕೊಠಡಿಯ ಸೊಬಗನ್ನು ಇಮ್ಮಡಿಗೊಳಿಸುತ್ತದೆ
ನಿಮ್ಮ ಕೊಠಡಿಯ ಗೋಡೆಗಳ ಮೇಲೆ ಆಕರ್ಷಕವಾದ ಚಿತ್ರಪಟಗಳನ್ನು ತೂಗುಹಾಕಿರಿ. ನಿಮ್ಮ ಕೊಠಡಿಯು ಮತ್ತಷ್ಟು ಸೊಬಗಿನಿಂದ ಕೂಡಿರಲು ಆ ಚಿತ್ರಪಟಗಳನ್ನು ಸರಿಯಾದ ಜಾಗಗಳಲ್ಲಿ ತೂಗು ಹಾಕಿರುವುದನ್ನು ಖಚಿತಪಡಿಸಿಕೊಳ್ಳಿರಿ. ನಿಮ್ಮ ಕೊಠಡಿಯನ್ನು ಅಲಂಕರಿಸಲು ಚಿತ್ರಪಟಗಳು ಅತ್ಯಂತ ಪ್ರಶಸ್ತವಾದವುಗಳು. ಏಕೆಂದರೆ, ಅವು ನಿಮ್ಮ ಆಯ್ಕೆ ಮತ್ತು ಅಭಿರುಚಿಗಳನ್ನು ನಿರೂಪಿಸುತ್ತವೆ.



Click it and Unblock the Notifications











