ವ್ಯಾಕ್ಯೂಮ್‌ ಕ್ಲೀನರ್‌: ಸಾಧಕ ಬಾಧಕಗಳು

By ಲೇಖಕ

ಇವತ್ತು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಂಡುಬರುವ ವ್ಯಾಕ್ಯೂಮ್‌ಕ್ಲೀನರ್‌ ಮೊದಲು ಹೇಗಿತ್ತಪ್ಪಾ ಅಂದರೆ ಅದನ್ನು ಎತ್ತಿ ಸಾಗಿಸುವುದಕ್ಕೇ ಇಬ್ಬರು ಕಟ್ಟಾಳುಗಳು ಬೇಕಿತ್ತು. ಇನ್ನು ಮೂಲೆ ಮೂಲೆ ಹೊಕ್ಕಿ ಸ್ವಚ್ಛಗೊಳಿಸುವುದು ನಂತರದ ಮಾತು! ಆದರೆ ಇವತ್ತು ಬಳಕೆಯಲ್ಲಿರುವ ವ್ಯಾಕ್ಯೂಮ್ ಕ್ಲೀನರ್‌ಗಳು ಸಾಕಷ್ಟು ಬದಲಾಗಿವೆ. ಗಾತ್ರದಲ್ಲಿ ಚಿಕ್ಕದಾದರೂ, ಕ್ಷಮತೆ ಹೆಚ್ಚಿದೆ. ಮತ್ತಷ್ಟು ಸ್ಮಾರ್ಟ್‌ ಆಗುವ ಮೂಲಕ ಬಳಕೆದಾರ ಸ್ನೇಹಿ ಅನ್ನಿಸಿಕೊಂಡಿದೆ. ಇವುಗಳಲ್ಲಿ ಕೆಲವು ಬಾಧಕಗಳೂ ಉಂಟು.

ಎಚ್‌ಇಪಿಎ ಮತ್ತು ಟೆಲಿಸ್ಕೋಪಿಂಗ್ ತಂತ್ರಜ್ಞಾನಗಳ ಅಳವಡಿಕೆಯಿಂದಾಗಿ ಕೇವಲ ದೂಳನ್ನಷ್ಟೇ ಅಲ್ಲ, ಮನೆಯ ವಾತಾವರಣದಲ್ಲಿರುವ ಅಲರ್ಜಿಕಾರಕಗಳನ್ನೂ ಸ್ವಚ್ಚಗೊಳಿಸುತ್ತವೆ. ನಿಮ್ಮ ಹಣಕಾಸಿನ ಸ್ಥಿತಿ ಹಾಗೂ ನಿಮ್ಮ ಆಯ್ಕೆಯನುಸಾರವಾಗಿ ತರಹೇವಾರಿ ಮಾಡೆಲ್‌ಗಳ ವ್ಯಾಕ್ಯೂಮ್‌ ಕ್ಲೀನರ್‌ಗಳು ಲಭ್ಯವಿದೆ. ಇವುಗಳಲ್ಲಿ ಲೋಹ ಅಥವಾ ತುಂಡಾಗದ ಪ್ಲಾಸ್ಟಿಕ್‌ ಬಳಸಿ ತಯಾರಿಸಲಾದ ಕ್ಲೀನರ್‌ಗಳನ್ನು ಖರೀದಿಸಿದರೆ ಹೆಚ್ಚು ಬಾಳಿಕೆ ಬರುತ್ತವೆ.

Vacuum Cleaners Advantages And Disadvantages

ಚಿಕ್ಕ ಡಬ್ಬಿಯ ವ್ಯಾಕ್ಯೂಮ್‌ಗಳು:

ಇತ್ತೀಚೆಗೆ ಬಳಸಲ್ಪಡುತ್ತಿರುವ ಚಿಕ್ಕ ಡಬ್ಬಿಯುಳ್ಳ ವ್ಯಾಕ್ಯೂಮ್‌ ಕ್ಲೀನರ್‌ಗಳು ಒಂದೆಡೆ ನಿಲ್ಲಿಸಿಡಬಹುದಾದ (ಸ್ಥಿರ) ಕ್ಲೀನರ್‌ಗಳಿಗಿಂತ ಉತ್ತಮ ಫಲಿತಾಂಶವನ್ನು ನೀಡುತ್ತವೆ. ಯಾಕೆಂದರೆ ಇವುಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವುದು ಸುಲಭ. ಮಹಡಿ, ಮೆಟ್ಟಿಲುಗಳು, ಖುರ್ಚಿ, ಸೋಪಾದ ಕೆಳಭಾಗಗಳನ್ನೂ ಸುಲಭವಾಗಿ ಇದರ ಮೂಲಕ ಸ್ವಚ್ಛಗೊಳಿಸಬಹುದು. ಇವು ಸ್ಥಿರ ವ್ಯಾಕ್ಯೂಮ್‌ ಕ್ಲೀನರ್‌ಗಳಿಗಿಂಥ ಭಿನ್ನವಾಗಿದ್ದರೂ, ಕಡಿಮೆ ಕ್ಷಮತೆಯ ಕಸದ ಚೀಲದ ಕಾರಣದಿಂದಾತಿ ತುಸು ದುಬಾರಿ ಅನ್ನಿಸುತ್ತದೆ.ಪದೇ ಪದೇ ಬದಲಾಯಿಸುತ್ತಿರಬೇಕಾಗುತ್ತದೆ. ಇವುಗಳಲ್ಲಿರುವ ಕೆಲವು ವಿಶೇಷತೆಗಳು ಎಲ್ಲ ವಾತಾವರಣಕ್ಕೂ ಒಗ್ಗುವುದಿಲ್ಲ. ಹಾರ್ಡ್ ವುಡ್ ಹಾಗೂ ಇತ್ಯಾದಿಗಳನ್ನು ಸ್ವಚ್ಚಗೊಳಿಸಲು ಸಾಧ್ಯವಿಲ್ಲ ಎಂಬುದು ಈ ಉತ್ಪನ್ನದ ಇನ್ನೊಂದು ಬಾಧಕ.

ಅಪ್‌ರೈಟ್‌ ವ್ಯಾಕ್ಯೂಮ್‌:

ಅಪ್‌ರೈಟ್‌ ವ್ಯಾಕ್ಯೂಮ್‌ಳಲ್ಲಿ ಹಲವು ಮಾಧರಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಹಗುರವಾದ ವ್ಯಾಕ್ಯೂಮ್‌ ಕ್ಲೀನರ್‌ ನೂರು ಡಾಲರ್‌ಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಹೆಚ್ಚು ಕ್ಷಮತೆಯುಳ್ಳ ಕ್ಲೀನರ್‌ಗಳು ಬೇಕಿದ್ದರೆ ಒಂದು ಸಾವಿರ ಡಾಲರ್‌ಗಿಂತಲೂ ಹೆಚ್ಚು ಕೊಡಬೇಕಾಗುತ್ತದೆ. ಅಪ್‌ರೈಟ್‌ ವ್ಯಾಕ್ಯೂಮ್‌ ಗಳನ್ನು ಒಂದೆಡೆ ನಿಲ್ಲಿಸಬಹುದಾಗಿದ್ದು, ಕಾರ್ಪೆಟ್‌ಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದಾಗಿದೆ. ಈ ಯಂತ್ರವನ್ನು ಬಳಸಿಕೊಂಡು ಏಣಿ ಹಾಗೂ ಮೇಲ್ಛಾವಣಿಯನ್ನೂ ಸ್ವಚ್ಛಗೊಳಿಸಬಹುದು. ಸೈಕ್ಲೋನ್ ವಾಕ್ಯೂಮ್ ಕ್ಲೀನರ್‌ಗಳೆಂದು ಕರೆಯಲಾಗುವ ಇವುಗಳಲ್ಲಿ ಕಸ ಸಂಗ್ರಹಿಸಲು ಚೀಲ ಇರುವುದಿಲ್ಲ. ಹೀಗಾಗಿ ಧೂಳು ಸಂಗ್ರಹವಾದ ಕಪ್ ಅನ್ನು ಆಗಾಗ ಖಾಲಿ ಮಾಡುತ್ತಲಿರಬೇಕು. ಕಾಲ ಕ್ರಮೇಣ ಇವು ಸ್ವಚ್ಛ ಮಾಡುವ ಅಥವಾ ಧೂಳನ್ನು ಎಳೆದುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಜೊತೆಗೆ ಅಗತ್ಯಕ್ಕೆ ತಕ್ಕಂತೆ ಇವುಗಳನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ಈ ಕಾರಣದಿಂದಾಗಿ ಗ್ರಾಹಕರ ಚಿತ್ತ ಸಹಜವಾಗಿ ಬೇರೆಡೆಗೆ ಹರಿಯುತ್ತದೆ.

ರೊಬೋಟಿಕ್ ವ್ಯಾಕ್ಯೂಮ್:

ರೊಬೋಟಿಕ್ ವ್ಯಾಕ್ಯೂಮ್ ಕ್ಲೀನರ್‌ಗಳು ಬಹು ಬೇಗ ಸ್ವಚ್ಛ ಮಾಡುವುದಕ್ಕೆ ಹೆಸರಾಗಿವೆ. ಇವುಗಳನ್ನು ನೆಲದ ಮೇಲಿಟ್ಟು ಒಂದು ಬಟನ್ ಅದುಮಿ ಬಿಟ್ಟರಾಯಿತು, ಯಾವುದೇ ಶ್ರಮವಿಲ್ಲದೇ ನಿಮ್ಮ ಕೆಲಸ ವನ್ನು ಅಚ್ಚುಕಟ್ಟಾಗಿ ಮುಗಿಸಿಬಿಡುತ್ತವೆ. ೧೦೦೦ ಸಾವಿರ ಡಾಲರ್ ಒಳಗಿನ ಮಾದರಿಗಳು ತಿರುಗುವ ಬ್ರಷ್ ಅನ್ನು ಹೊಂದಿರುತ್ತವೆ. ಇದು ಧೂಳನ್ನು ಹೀರಿಕೊಳ್ಳುವುದರ ಬದಲಾಗಿ ಕಪ್‌ನ ಒಳಗಡೆ ನೂಕುತ್ತದೆ.

ಒಣ ಅಥವಾ ಒದ್ದೆ ವಾಕ್ಯೂಮ್ ಕ್ಲೀನರ್‌ಗಳು ಅಥವಾ ಅಂಗಡಿ ವಾಕ್ಯೂಮ್ ಕ್ಲೀನರ್‌ಗಳನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಸ್ವಚ್ಛಗೊಳಿಸಲು ಉಪಯೋಗಿಸುತ್ತಾರೆ. ಅಂತ್ಯಂತ ಸೂಕ್ಷ್ಮ ವಸ್ತುಗಳನ್ನು ಸ್ವಚ್ಛಗೊಳಿಸಲು ಈ ಬಗೆಯ ವಾಕ್ಯೂಮ್ ಕ್ಲೀನರ್ ಅನ್ನು ಬಳಸಲೇ ಬಾರದು. ಚಿಕ್ಕದಾದ ಡಬ್ಬಿಯನ್ನು ಹೊಂದಿರುವ ಇವು ತಮ್ಮ ಪರಿಧಿಗೆ ಸಿಕ್ಕ ಎಲ್ಲ ವಸ್ತುಗಳನ್ನು ತುಂಬುತ್ತಲೇ ಸಾಗುತ್ತವೆ. ಕಾರ್‌ಗಳನ್ನು ಶುಚಿಗೊಳಿಸಲು ಇದನ್ನು ಬಳಸುತ್ತಾರೆ. ಮನೆಯೊಳಗೆ ಇವುಗಳನ್ನು ಬಳಸಲು ಸಾಧ್ಯವಿಲ್ಲ. ಇವುಗಳ ಬೃಹತ್ ಗಾತ್ರ ಒಂದು ಕಾರಣವಾದರೆ ಧೂಳು ತುಂಬಲು ಚೀಲದ ವ್ಯವಸ್ಥೆ ಇಲ್ಲದಿರುವುದು ಇನ್ನೊಂದು ಕಾರಣ. ಹೀಗಾಗಿ ಅಂಗಡಿ ಹಾಗೂ ಗ್ಯಾರೇಜ್‌ಗಳಲ್ಲಿ ಇದನ್ನು ಬಳಸುವುದನ್ನು ಕಾಣಬಹುದು.

ಒಟ್ಟಿನಲ್ಲಿ ಮನೆ ನಿರ್ವಹಣೆಯ ಸಲುವಾಗಿ ಎಷ್ಟೇ ಯಂತ್ರಗಳು ಬಂದರೂ, ಅವುಗಳಲ್ಲಿ ಲೋಫಗಳಿದ್ದೇ ಇರುತ್ತದೆ. ಅವನ್ನೂ ಒಪ್ಪಿಕೊಂಡು, ಕೆಲವೊಮ್ಮೆ ಸಹಿಸಿಕೊಂಡು ಖರೀದಿಸುವುದಾದರೆ, ಯಂತ್ರಗಳಲ್ಲಿರುವ ವಿಶೇಷ ಸೌಕರ್ಯಗಳು ಮಾತ್ರ ಗ್ರಾಹಕರನ್ನು ಖುಷಿಗೊಳಿಸಿಯಾವು!

Story first published: Tuesday, January 22, 2013, 12:03 [IST]
X
Desktop Bottom Promotion