Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಫ್ಯಾಬ್ರಿಕ್ ಸೋಫಾ ದೀರ್ಘಕಾಲ ಬಾಳಲು ಟಿಪ್ಸ್
ಸೋಫಾ ಆಯ್ಕೆ ಮಾಡುವಾಗ ಮಾಡಬೇಕಾದ ಬಹಳ ಪ್ರಮುಖ ನಿರ್ಧಾರ ಸೋಫಾದ ಕವರಿಂಗ್ ಯಾವುದಾಗಿರಬೇಕು ಎನ್ನುವುದು. ಲೆದರ್ ಮತ್ತು ಫ್ಯಾಬ್ರಿಕ್ ಎರಡೂ ಬಗೆಯ ಸೋಫಾಗಳು ಚಳಿಗಾಲಗಳಲ್ಲಿ ತಮ್ಮದೇ ರೀತಿಯಲ್ಲಿ ಅನುಕೂಲತೆಗಳನ್ನು ಹೊಂದಿದೆ. ಫ್ಯಾಬ್ರಿಕ್ ಪ್ರೇಮಿಗಳಾದರೆ ಅದರ ಸ್ಪರ್ಶ, ವೈವಿಧ್ಯತೆ ಮತ್ತು ವಿವಿಧ ಶ್ರೇಣಿಗಳು ಅದನ್ನೇ ಆಯ್ದು ಕೊಳ್ಳುವಂತೆ ಮಾಡುತ್ತದೆ.
ಕಿಂಗ್ ಫರ್ನೀಚರ್ನ ಟ್ರಿಯಾನ ಒಡೊನೆ ಪ್ರಕಾರ ಫಾಬ್ರಿಕ್ ಆಯ್ಕೆ ಎನ್ನುವುದು ವೈಯುಕ್ತಿಕ ಜೀವನಶೈಲಿ ಮತ್ತು ಪ್ರಾಮುಖ್ಯತೆಗಳಿಗೆ ಸಂಬಂಧಿಸಿದ್ದು. ಫ್ಯಾಬ್ರಿಕ್ ಸೋಫಾ ಕೊಂಡಮೇಲೆ ಅದನ್ನು ಕಾಪಾಡಿಕೊಳ್ಳುವುದನ್ನು ಕಲಿತುಕೊಳ್ಳುವುದು ಮುಖ್ಯ.

1. ಫ್ಯಾಬ್ರಿಕ್ ಸೋಫಾಗಳನ್ನು ನಿಯಮಿತವಾಗಿ ವ್ಯಾಕ್ಯೂಮ್ ಕ್ಲೀನರ್ ಬಳಸಿ ಸ್ವಚ್ಛ ಮಾಡುತ್ತಿರಬೇಕು.
2. ಏನಾದರೂ ಕಲೆಗಳಾದರೆ ತಕ್ಷಣ ಸ್ವಚ್ಛ ಮಾಡಿಬಿಡಬೇಕು. ಅದನ್ನು ಹಾಗೆ ಬಿಟ್ಟರೆ ಕಲೆಗಳನ್ನು ಹೋಗಿಸುವುದು ಕಷ್ಟ.
3. ಕಿಂಗ್ ಕೇರ್ ಫ್ಯಾಬ್ರಿಕ್ ಕ್ಲೀನರ್ ಬಳಸಿ ಸ್ವಚ್ಛ ಉತ್ತಮ. ಮಾಮೂಲಿ ಮನೆ ಸ್ವಚ್ಛ ಮಾಡುವ ಕ್ಲೀನರ್ಗಳನ್ನು ಬಳಸಿದರೆ ಅವು ಫ್ಯಾಬ್ರಿಕ್ಗಳಿಗೆ ಹಾನಿಯುಂಟು ಮಾಡಬಹುದು ಮತ್ತು ಸೋಫಾ ಬಣ್ಣಗೆಡಬಹುದು. ಆದ್ದರಿಂದ ಯಾವಾಗಲೂ ಕ್ಲೀನರ್ ಫ್ಯಾಬ್ರಿಕ್ ಸ್ನೇಹಿಯೇ ನೋಡಿ ಬಳಸಿ.
4. ಚೂಪಾದ ವಸ್ತುಗಳಾದ ಉಂಗುರಗಳು ಅಥವ ಬಕಲ್ಗಳನ್ನು ಸೋಫಾದಿಂದ ದೂರವಿರಿಸಿ. ಇವುಗಳಿಂದ ಸೋಫಾಗೆ ಹಾನಿಯುಂಟಾಗಬಹುದು ಅಥವ ಸೋಫಾ ಹರಿಯುವ ಸಾಧ್ಯತೆಗಳು ಹೆಚ್ಚಿರುತ್ತದೆ.
5. ನಿಯಮಿತವಾಗಿ ಸ್ವಚ್ಛ ಮಾಡುವುದರಿಂದ ಪಿಲ್ಲಿಂಗ್ನಿಂದ ಸೋಫಾವನ್ನು ರಕ್ಷಿಸಬಹುದು. ಒಂದುವೇಳೆ ಪಿಲ್ಲಿಂಗ್ ಉಂಟಾದಲ್ಲಿ ಫ್ಯಾಬ್ರಿಕ್ ಪಿಲ್ ರಿಮೂವರ್ ಬಳಸಿ ಇದನ್ನು ತೆಗೆದು ಹಾಕಿ. ಇದು ಎಲ್ಲ ಡಿಪಾರ್ಟ್ಮೆಂಟಲ್ ಸ್ಟೋರ್ಗಳಲ್ಲಿ ಸಿಗುತ್ತದೆ.
6. ಫ್ಯಾಬ್ರಿಕ್ ಸೋಫಾಗಳ ಮೇಲೆ ಸೂರ್ಯನ ಬೆಳಕು ಬೀಳದಿರುವುದು ಉತ್ತಮ. ನೇರವಾಗಿ ಸೂರ್ಯನ ಬೆಳಕು ಇವುಗಳ ಮೇಲೆ ಬಿದ್ದರೆ ಸೋಫಾದ ಬಣ್ಣ ಮಾಸುತ್ತದೆ ಮತ್ತು ಫ್ಯಾಬ್ರಿಕ್ಗಳು ಕಳೆಕುಂದುತ್ತವೆ.
7. ಫ್ಯಾಬ್ರಿಕ್ ನಿರ್ಮಾಣಹಂತದಲ್ಲೇ ಎಚ್ಚರಿಕೆ ವಹಿಸಿದರೆ ದ್ರವಗಳಿಂದುಂಟಾಗುವ ಹಾನಿಯನ್ನು ತಡೆಯಬಹುದು. ಮತ್ತು ದ್ರವ ಪದಾರ್ಥಗಳು ಚೆಲ್ಲಿದಾಗ ಒಣಗಿಸುವುದು ಸುಲಭವಾಗುತ್ತದೆ.
8. ವೃತ್ತಿಪರ ಅಪ್ಹೋಸ್ಟರಿ ಕ್ಲೀನರ್ಗಳ ಮೂಲಕ ವರ್ಷಕ್ಕೆ ಒಮ್ಮೆಯಾದರೂ ಸೋಫಾ ಸ್ವಚ್ಛ ಮಾಡಿಸುವುದರಿಂದ ಸೋಫಾ ಉತ್ತಮ ಸ್ಥಿತಿಯಲ್ಲಿರುತ್ತದೆ.



Click it and Unblock the Notifications
