Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮನೆ ಶಿಫ್ಟಿಂಗ್ ಮಾಡುವ ಪ್ಲಾನ್ ಇದೆಯೇ?
ಒಂದು ಕಡೆಯಿಂದ ಬೇರೆ ಕಡೆಗೆ ಮನೆ ಶಿಫ್ಟ್ ಮಾಡುವುದು ಸುಲಭದ ಕೆಲಸವಲ್ಲ. ಇಲ್ಲಿಂದ ಸಾಮಾನುಗಳನ್ನು ತೆಗೆದುಕೊಂಡು ಹೋಗಿ, ಹೊಸ ಮನೆಗೆ ಜೋಡಿಸುವಷ್ಟರಲ್ಲಿ ಸಾಕಪ್ಪಾ ಸಾಕು ಎಂದೆನಿಸಿ ಬಿಡುತ್ತದೆ. ಮನೆ ಶಿಫ್ಟಿಂಗ್ ಹೆಚ್ಚು ಶ್ರಮದಾಯಕವಾದ ಕೆಲಸವಾದರೂ ಮೊದಲೇ ಪ್ಲಾನ್ ಮಾಡಿಟ್ಟರೆ ಶ್ರಮ ಸ್ವಲ್ಪ ಕಡಿಮೆಯಾಗುವುದು.
ಆದ್ದರಿಂದ ಮನೆ ಶಿಫ್ಟಿಂಗ್ ಮಾಡುವುದಾದರೆ 2 ವಾರಗಳಿಗಿಂತ ಮುಂಚಿತವಾಗಿಯೇ ಪ್ಲಾನ್ ಮಾಡಬೇಕು. ಆದ್ದರಿಂದ ಇಲ್ಲಿ ನಾವು ಕೆಲವೊಂದು ಟಿಪ್ಸ್ ನೀಡಿದ್ದೇವೆ. ಈ ಟಿಪ್ಸ್ ಮನೆ ಶಿಫ್ಟಿಂಗ್ ಮಾಡುವಾಗ ಸಹಾಯಕ್ಕೆ ಬರುತ್ತದೆ:

ಹೊಸ ಮನೆ ಕಂಫರ್ಟ್ ಇದೆಯೇ ಎಂದು ಡಬಲ್ ಚೆಕ್ ಮಾಡಿ
ಹೊಸ ಮನೆಗೆ ಹೋಗುವಾಗ ಕಂಫರ್ಟ್ ಇದೆಯೇ, ನೀರು ಸರಿಯಾಗಿ ಬರುವುದೇ , ಮನೆಯ ಸುತ್ತ-ಮತ್ತಲಿನ ಪರಿಸರ ಹೇಗಿದೆ, ಮನೆಯ ಯಜಮಾನನ ವರ್ತನೆ ಇವುಗಳೆನ್ನೆಲ್ಲಾ ತಿಳಿದುಕೊಂಡು ಹೋಗುವುದು ಒಳ್ಳೆಯದು. ಇಲ್ಲದಿದ್ದರೆ ಅಲ್ಲಿಗೆ ಹೋದ ಮೇಲೆ ಪರದಾಡಬೇಕಾದ ಪರಿಸ್ಥಿತಿ ಬರಬಹುದು.
ನಂತರ ಮೊದಲು ಲಿಸ್ಟ್ ಮಾಡಿ
ಯಾವ ವಸ್ತುಗಳನ್ನು ಜೊತೆಗೆ ಕೊಂಡೊಯ್ಯಬೇಕು, ಯಾವುದನ್ನು ಬಿಸಾಡಿ ಹೋಗಬೇಕು ಎಂಬುದನ್ನು ವಿಂಗಡಿಸಿ, ಕೊಂಡೊಯ್ಯಬೇಕಾದ ವಸ್ತುಗಳನ್ನು ಲಿಸ್ಟ್ ಮಾಡಿ. ಇನ್ನು ಅವುಗಳಲ್ಲಿ ಗಾಜಿನ ವಸ್ತುಗಳು, ಮುರಿದು ಹೋಗುವಂತಹ ವಸ್ತುಗಳನ್ನು ಗಡಿ ಬಿಡಿಯಿಂದ ಪ್ಯಾಕ್ ಮಾಡುವ ಬದಲು ಮೊದಲೇ ಪ್ಯಾಕ್ ಮಾಡಿ ಇಡುವುದು ಒಳ್ಳೆಯದು.
ಅಡುಗೆ ಮನೆಯ ವಸ್ತುಗಳ ಪ್ಯಾಕಿಂಗ್
ಪಾತ್ರೆಗಳನ್ನು ಮತ್ತು ಡಬ್ಬಿಗಳನ್ನು ಸೆಟ್-ಸೆಟ್ ನಂತೆ ಜೋಡಿಸಿ ಪ್ಯಾಕ್ ಮಾಡಿ. ಇದರಿಂದ ಹೊಸ ಮನೆಯಲ್ಲಿ ಜೋಡಿಸಿಡಲು ಸುಲಭವಾಗುವುದು. ಕೊನೆಯ ಕ್ಷಣದಲ್ಲಿ ಪ್ಯಾಕ್ ಮಾಡುವ ಅಂತ ಯಾವುದೇ ವಸ್ತುವನ್ನು ಇಡಬೇಡಿ.
ಬೆಲೆ ಬಾಳುವ ವಸ್ತುಗಳನ್ನು ಸಾಗಿಸುವಾಗ ಎಚ್ಚರ
ವಸ್ತುಗಳನ್ನು ಸಾಗಿಸಲು ಜನ ಕರೆಯುವುದಾದರೆ ಬೆಲೆ ಬಾಳುವ ವಸ್ತುಗಳನ್ನು ನೀವೇ ಸಾಗಿಸಿ, ಇದರಿಂದ ಕ್ಯಾಮೆರಾ ಕಾಣುತ್ತಿಲ್ಲ, ಮೊಬೈಲ್ ಇಲ್ಲ ಎಂಬ ಪರಿಸ್ಥಿತಿ ಬರುವುದಿಲ್ಲ.
ಆಪ್ತರ ಸಲಹೆ ಕೇಳುವುದು ಒಳ್ಳೆಯದು: ಈ ಸಮಯದಲ್ಲಿ ಆಪ್ತರ ಸಹಾಯ ಕೇಳಿದರೆ ಮನೆ ಶಿಫ್ಟಿಂಗ್ ಮತ್ತಷ್ಟು ಸುಲಭವಾಗುವುದು.
ಒಳ್ಳೆಯದಾಗುತ್ತದೆ ಎಂದು ಹೊಸ ಮನೆಗೆ ಹೋಗಬೇಕು
ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಈ ಮನೆ ಬಿಡಬೇಕಾಗುತ್ತದೆ. ಪರಿಚಯಸ್ಥರನ್ನು ಬಿಟ್ಟು ಅಪರಿಚಿತ ಊರಿಗೆ ಹೋಗುವಾಗ ಬೇಜಾರು ಆಗುತ್ತದೆ, ಅಪರಿಚಿತ ಊರಿನಲ್ಲಿ, ಅಪರಿಚಿತ ಜನರ ಜೊತೆ ಕಳೆಯಬೇಕಲ್ಲಾ ಎಂದು ಭಯಪಡುವ ಬದಲು ಹೊಸ ಮನೆಗೆ ಹೋಗುವಾಗ ಮಾತ್ರ ಹೊಸ ಹುರುಪ್ಪಿನಿಂದ ಹೋಗಿ ಆಗ ಹೊಸ ಜಾಗ ಖಂಡಿತ ನಿಮಗೆ ಹಿಡಿಸುವುದು. ಆಲ್ ದಿ ಬೆಸ್ಟ್.



Click it and Unblock the Notifications
