ಚಳಿಗಾಲಕ್ಕೆ ಮನೆಯನ್ನು ಸಿದ್ಧಗೊಳಿಸಿ

By Hemanth Amin

ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿದೆ. ಶೀತಗಾಳಿ ಈಗಾಗಲೇ ಬೀಸಲು ಆರಂಭಿಸಿದೆ. ವೈಯಕ್ತಿಕವಾಗಿ ಚಳಿಗಾಲ ಎದುರಿಸಲು ಹಲವಾರು ಸಿದ್ಧತೆ ಮಾಡಬೇಕು. ಬೆಚ್ಚಗಿನ ಬಟ್ಟೆಗಳು, ಬಿಸಿಯಾದ ಆಹಾರ ಮತ್ತು ತ್ವಚೆಗೆ ಬೇಕಾದ ಕ್ರೀಮ್ ಮತ್ತು ಮುಲಾಮ್ ಗಳನ್ನು ಶೇಖರಿಸಿಡಬೇಕು. ಆದರೆ ಇದೆಲ್ಲಾ ಮಾಡುವಾಗ ಕೆಲವೊಂದು ಪ್ರಮುಖ ವಿಷಯಗಳನ್ನು ಮರೆಯಬಾರದು.

ವೈಯಕ್ತಿಕ ತಯಾರಿಯಂತೆ ಚಳಿಗಾಲಕ್ಕೆ ಮನೆಯನ್ನು ತಯಾರಾಗಿಡುವುದು ತುಂಬಾ ಮುಖ್ಯ. ಚಳಿಗಾಲಕ್ಕೆ ಅನುಗುಣವಾಗಿ ಮನೆಯನ್ನು ವ್ಯವಸ್ಥೆ ಮಾಡಬೇಕು. ಚಳಿಗಾಲದಲ್ಲಿ ಮನೆ ಬೆಚ್ಚಗೆ ಮತ್ತು ಹಿತಕರವಾಗಿರುವಂತೆ ಮಾಡಬೇಕು. ಹೆಚ್ಚಿನ ಬದಲಾವಣೆಗಳು ಬೇಕಿಲ್ಲ, ಕೆಲವೊಂದು ಟಿಪ್ಸ್ ನಿಂದ ಚಳಿಗಾಲಕ್ಕೆ ಮನೆ ಸಿದ್ಧವಾಗುತ್ತದೆ.

Preparing Home For Winter

ಚಳಿಗಾಲಕ್ಕೆ ಮನೆಯನ್ನು ತಯಾರು ಮಾಡಲು ಕೆಲವೊಂದು ಟಿಪ್ಸ್ ಗಳು ಇಲ್ಲಿವೆ.

1. ಬೆಚ್ಚಗಿರುವಂತೆ ಮಾಡಿ
ಚಳಿಗಾಲ ತುಂಬಾ ಶೀತಮಯ ವಾತಾವರಣ ಸೃಷ್ಟಿಸುತ್ತದೆ ಮತ್ತು ಮನೆಯನ್ನು ಬೀಸಿಯಾಗಿರಿಸಲು ಒಂದು ಹೀಟರ್ ಅಥವಾ ಒಂದು ಕಡೆ ಬೆಂಕಿಗೂಡು ತಯಾರಿಸಿ. ಹೀಟರ್ ಗಳಿಗೆ ಹೆಚ್ಚಿನ ಗ್ಯಾಸ್ ಬೇಕಾಗುತ್ತದೆ. ಇದಕ್ಕಿಂತ ವಿದ್ಯುತ್ ಹೀಟರ್ ಗಳನ್ನು ಬಳಸಿ. ಬೆಂಕಿಗೂಡಿಗೆ ಬೇಕಾಗಿರುವಷ್ಟು ಕಟ್ಟಿಗೆ ಸಂಗ್ರಹಿಸಿಡಿ. ಮನೆಯನ್ನು ಬೀಸಿ ಮಾಡಲು ಸರಳ ವಿಧಾನವೆಂದರೆ ಸೀಲಿಂಗ್ ಫ್ಯಾನ್ ತಿರುಗುವ ದಿಕ್ಕು ಬದಲಾಯಿಸಿ.

2. ದಪ್ಪ ಕರ್ಟನ್ ಬಳಸಿ
ಮನೆಯ ಪ್ರತೀ ಕಿಟಕಿ ಮತ್ತು ಬಾಗಿಲಿಗೆ ದಪ್ಪಗಿರುವ ಕರ್ಟನ್ ಗಳನ್ನು ಉಪಯೋಗಿಸಿ. ಇದರಿಂದ ಮನೆಯೊಳಗೆ ಶೀತಗಾಳಿ ಬರುವುದು ತಪ್ಪುತ್ತದೆ. ಚಳಿಗಾಲದಲ್ಲಿ ಮನೆಯ ಎಲ್ಲಾ ಕಿಟಕಿ ಮತ್ತು ಬಾಗಿಲುಗಳಿಗೆ ದಪ್ಪಗಿನ ಮತ್ತು ಫ್ಯಾನ್ಸಿ ಕರ್ಟನ್ ಗಳನ್ನು ಹಾಕಿ. ದಪ್ಪಗಿನ ಮ್ಯಾಟ್ ಮತ್ತು ಸೋಫಾ ಕುಶನ್ ನ್ನು ಚಳಿಗಾಲದ ತಯಾರಿಗೆ ಬಳಸಿ. ಚಳಿಗಾಲದಲ್ಲಿ ವಾತಾವರಣದಲ್ಲಿ ಮಂಜು ಮುಸುಕಿರುವ ಕಾರಣ ಗಾಢಬಣ್ಣದ ಕರ್ಟನ್ ಗಳನ್ನು ಆಯ್ಕೆ ಮಾಡಿ.

3. ಫರ್ನಿಚರ್
ಮನೆಯ ತುಂಬಾ ಮುಖ್ಯ ಭಾಗ ಫರ್ನಿಚರ್. ಚಳಿಗಾಲಕ್ಕೆ ತಯಾರಾಗಲು ಫರ್ನಿಚರ್ ವ್ಯವಸ್ಥೆ ಮತ್ತು ನಿರ್ವಹಣೆ ತುಂಬಾ ಮುಖ್ಯ. ಗಾಳಿಬೀಸುವ ಸ್ಥಳದಲ್ಲಿ ಫರ್ನಿಚರ್ ಗಳನ್ನು ಇಡಬೇಡಿ. ಹೀಟರ್ ಅಥವಾ ಬೆಂಕಿಗೂಡಿಗೆ ಹತ್ತಿರವಾಗಿ ಫರ್ನಿಚರ್ ಗಳನ್ನು ಜೋಡಿಸಿ. ಎಲ್ಲಾ ಕಿಟಕಿಗಳನ್ನು ಬಿಗಿಯಾಗಿ ಹಾಕಿ. ಇದು ಶೀತಗಾಳಿ ಒಳಬರುವುದನ್ನು ತಡೆಯುತ್ತದೆ. ದೊಡ್ಡ ಫರ್ನಿಚರ್ ತುಂಡುಗಳನ್ನು ಬಳಸಿ ಇದರಿಂದ ಮನೆ ಬೆಚ್ಚಗಿರುತ್ತದೆ. ಬೆಚ್ಚಗಿರುವಂತಹ ವಸ್ತುಗಳನ್ನು ಹೆಚ್ಚಾಗಿ ಬಳಸಿ.

4. ಸೋರಿಕೆ ತಡೆಯಿರಿ
ಪೈಪ್ ಅಥವಾ ಸ್ನಾನ ಗೃಹದ ಯಾವುದೇ ವಸ್ತುಗಳಲ್ಲಿ ಸೋರಿಕೆಯಿದ್ದರೆ ಚಳಿಗಾಲ ಬರುವ ಮೊದಲು ಅದನ್ನು ಸರಿಮಾಡಿ. ಮನೆಯೊಳಗೆ ತಂಪಾದ ನೀರು ಸೋರಿಕೆಯಾದರೆ ಆಗ ಮನೆಯೆಲ್ಲಾ ಶೀತ ವಾತಾವರಣ ಉಂಟಾಗುತ್ತದೆ. ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿರಿಸಬೇಕಾಗಿರುವ ಕಾರಣ ಇಂತಹ ಸಣ್ಣಪುಟ್ಟ ಸೋರಿಕೆಗಳನ್ನು ತಡೆಯಬೇಕು.

5. ನಿರೋಧಕಗಳನ್ನು ಬಳಸಿ
ನಿಮ್ಮ ಪ್ರದೇಶದಲ್ಲಿ ಚಳಿ ತೀವ್ರವಾಗಿದ್ದರೆ ಆಗ ಮನೆ ಮಹಡಿಯ ಕೊಠಡಿ ಮತ್ತು ಇತರ ಕೋಣೆಗಳಲ್ಲಿ ನಿರೋಧಕಗಳನ್ನು ಬಳಸಿ. ನಿರೋಧಕಗಳು ಮನೆಯನ್ನು ಬೆಚ್ಚಗಿರುವಂತೆ ನೋಡಿಕೊಳ್ಳುತ್ತದೆ. ಪರಿಸರ ಸ್ನೇಹಿ ಮತ್ತು ಫಾರ್ಮಾಲ್ಡಿಹೈಡ್ ಮುಕ್ತ ನಿರೋಧಕಗಳು ಬಳಸಿ. ಪೈಪ್ ಗಳು ಶೀತಗಟ್ಟುವುದನ್ನು ತಡೆಯಿರಿ. ದಿನದಲ್ಲಿ ಒಂದು ಸಲ ಬಿಸಿ ನೀರುವ ಬಿಡುವ ಮೂಲಕ ಪೈಪ್ ಗಳು ಶೀತಗಟ್ಟುವುದನ್ನು ತಡೆಯಬಹುದು.

ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿಡಲು ಮತ್ತು ಆರಾಮದಾಯಕವಾಗಿ ವಾಸಿಸಲು ಇವು ಕೆಲವೊಂದು ಟಿಪ್ಸ್ ಗಳು. ಹೆಚ್ಚಿನ ಕುಶನ್ ಮತ್ತು ಬೆಚ್ಚಗಿನ ಮ್ಯಾಟರ್ಸ್ ಗಳನ್ನು ಉಪಯೋಗಿಸಬಹುದು. ವಿದ್ಯುತ್ ಸಾಧನಗಳನ್ನು ಪರಿಶೀಲಿಸಿ ಮತ್ತು ಛಾವಣೆ ಮೇಲಿರುವ ನೀರನ ಜಾಡನ್ನು ಸ್ವಚ್ಛಗೊಳಿಸಿ.

ಮನೆಯನ್ನು ಮೊದಲೇ ಸಜ್ಜುಗೊಳಿಸಿದರೆ ಚಳಿಗಾಲ ತುಂಬಾ ಆರಾಮದಾಯಕವಾಗಿರುತ್ತದೆ. ಬೆಂಕಿಗೂಡಿನ ಬಳಿ ಬೆಚ್ಚಗಿನ ಕುರ್ಚಿಯಲ್ಲಿ ದಪ್ಪಗಿನ ಕಂಬಳಿ ಹೊದ್ದುಕೊಂಡು ಬಿಸಿ ಬಿಸಿಯಾದ ಕಾಫಿಯನ್ನು ಹೀರುವ ಕ್ಷಣ ತುಂಬಾ ವಿಶೇಷವಾದದ್ದು. ಶೀತ ಉಪದ್ರವ ತಡೆಯಲು ನಿಮ್ಮ ಮನೆಯನ್ನು ಸಿದ್ಧಮಾಡಿಕೊಳ್ಳಿ.

Story first published: Tuesday, November 26, 2013, 3:00 [IST]
X
Desktop Bottom Promotion