Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಬಾಡಿಗೆ ಮನೆಯಲ್ಲಿ ಗಮನಿಸಬೇಕಾದ ಅಂಶಗಳಿವು
ಬಾಡಿಗೆ ಮನೆಗೆ ಹೋಗುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಮನೆ ನೋಡಿ ನಮಗೆ ಇಷ್ಟವಾದರೂ ಓನರ್ ಹೇಗೆ , ಮನೆಯಲ್ಲಿ ಯಾವೆಲ್ಲಾ ಸೌಲಭ್ಯವಿದೆ ಎಂದು ನೋಡಬೇಕು. ಕೆಲವೊಮ್ಮೆ ಅರ್ಜೆಂಟ್ ಆಗಿ ನಮಗೆ ಮನೆ ಬೇಕಾಗುತ್ತದೆ, ಹುಡುಕಿದ ಮನೆಗಳಲ್ಲಿ ಸ್ವಲ್ಪ ಬೆಟರ್ ಅನಿಸಿದ ಮನೆಗೆ ಹಿಂದೆ ಮುಂದೆ ನೋಡದೆ ಅಡ್ವಾನ್ಸ್ ಕೊಟ್ಟು ಬಂದು ಬಿಡುತ್ತೇವೆ. ಬಂದ ಸ್ವಲ್ಪ ದಿನದಲ್ಲಿಯೇ ಆ ಮನೆಯಲ್ಲಿ ನೀರಿನ ಸಮಸ್ಯೆ, ಮತ್ಯಾವುದೋ ಸಮಸ್ಯೆ ಕಾಣಿಸಿದರೆ ಪುನಃ ಮನೆ ಬದಲಾಯಿಸಬೇಕು. ಇದರಿಂದ ಪೇಯಿಂಟ್ ಚಾರ್ಜ್, ಬ್ರೋಕರ್ ಚಾರ್ಜ್ ಅಂತ ದುಡ್ಡು ವ್ಯರ್ಥವಾಗುತ್ತದೆ.
ಆದ್ದರಿಂದ ಬಾಡಿಗೆ ಮನೆಗೆ ಹೋಗುವಾಗ ಅಥವಾ ಮನೆಯನ್ನು ಕೊಳ್ಳುವಾಗ ಈ ಕೆಳಗಿನ ಅಂಶಗಳನ್ನು ಗಮನಿಸಿದರೆ ಒಳ್ಳೆಯದು.

ಸ್ವಿಚ್: ಮನೆಯಲ್ಲಿ ಕರೆಂಟ್ ಸ್ವಿಚ್ ಸರಿಯಾಗಿದೆಯೇ? ಒಂದು ವೇಳೆ ಸರಿಯಿಲ್ಲದಿದ್ದರೆ ಅದನ್ನು ಬದಲಾಯಿಸಲು ಹೇಳಿ. ನೀವೇ ಕೊಳ್ಳುವುದಾದರೆ ಅಂತಹ ಸ್ವಿಚ್ ಬೋರ್ಡ್ ಅನ್ನು ಬದಲಾಯಿಸಿ.
ಫ್ಯಾನ್ : ಫ್ಯಾನ್ ಅಥವಾ ಏರ್ ಕಂಡೀಷನರ್ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರೀಕ್ಷಿಸಿ.
ಬಲ್ಭ್: ಎಲ್ಲಾ ಬಲ್ಬ್ ಗಳಿವೆಯೇ ಎಂದು ಪರೀಕ್ಷಿಸಿ. ಇಲ್ಲದಿದ್ದರೆ ಬಿಟ್ಟು ಬರುವಾಗ ಬಲ್ಬ್ ಇರಲಿಲ್ಲ ಅಂದರೆ ಕೇಳಲು ಓನರ್ ಸಿದ್ಧವಿರುವುದಿಲ್ಲ.
ಟ್ಯಾಪ್: ನೀರು ಸರಿಯಾಗಿ ಬರುತ್ತಿದೆಯೇ, ಟ್ಯಾಪ್ ನಲ್ಲಿ ಲೀಕ್ ಇದೆಯೇ ಅನ್ನುವುದನ್ನು ಪರೀಕ್ಷಿಸಿ. ನಿರಿನ ಬಗ್ಗೆ ಅಕ್ಕ-ಪಕ್ಕದವರಲ್ಲಿಯೂ ವಿಚಾರಿಸಿದರೆ ಒಳ್ಳೆಯದು.
ಮನೆಯ ಗಾತ್ರ: ನಿಮ್ಮಲ್ಲಿರುವ ಸಾಮಾನುಗಳನ್ನು ತುಂಬಲು ಈ ಮನೆ ಸಾಕೇ ಎಂದು ನೋಡಿ. ಬಂದ ಮೇಲೆ ಸಾಮಾನು ಇಡಲು ಸ್ಥಳವಿಲ್ಲದೆ ಒದ್ದಾಡುವಂತೆ ಆಗಬಾರದು.
ಕಿಟಕಿ, ವೆಂಟಿಲೇಷನ್ : ಕಿಟಕಿಗಳನ್ನು ಪರೀಕ್ಷಿಸಿ. ಗಾಳಿಯಾಡಲು ಅವಕಾಶವಿದೆಯೇ ಅನ್ನುವುದನ್ನು ಕೂಡ ಪರೀಕ್ಷಿಸಬೇಕು. ನಿಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದೇ? ಗಾಳಿ ಬೆಳಕು ಸರಿಯಾಗಿ ಬರುತ್ತಿದೆಯೇ ಈ ಎಲ್ಲಾ ಅಂಶಗಳನ್ನು ಗಮನಿಸಬೇಕು.
ಬಾಲ್ಕನಿ: ಬಾಲ್ಕನಿ ಇದೆಯೇ, ಮನೆಯ ಮುಂದುಗಡೆ ಸ್ವಚ್ಛವಾಗಿದೆಯೇ ಎಲ್ಲವನ್ನು ಗಮನಿಸಬೇಕು. ನಿಮ್ಮ ಮನೆಯ ಮುಂದೆ ಕಸದ ಬುಟ್ಟಿಯಿದ್ದರೆ ಅಂತಹ ಮನೆಗೆ ಹೋಗದಿರುವುದು ಒಳ್ಳೆಯದು. ಆ ಕಸದ ವಾಸನೆ ಕುಡಿದುಕೊಂಡೇ ಓಡಾಡಬೇಕಾಗುತ್ತದೆ.



Click it and Unblock the Notifications
