Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ವಾಷಿಂಗ್ ಮೆಷಿನ್ ಶುದ್ಧತೆಗೆ 5 ಟಿಪ್ಸ್
ಬಟ್ಟೆಗಳು ಸ್ವಚ್ಛವಾಗದೇ ಹೋದಲ್ಲಿ ನಿಮ್ಮಲ್ಲಿ ಒಂದು ರೀತಿಯ ಮುಜುಗರ ಸದಾ ಇರುತ್ತದೆ. ಯಾರಾದರೂ ನನ್ನ ಬಟ್ಟೆಯ ಮೇಲಿನ ಕಲೆ ನೋಡಿ ಏನಾದರೂ ಅಂದರೆ ಎಂಬ ಅಂಜಿಕೆ ಇರುತ್ತದೆ. ನಾಲ್ಕು ಜನರ ಎದುರಲ್ಲಿ ಹೀಗಾದರೆ ಮತ್ತು ಯಾವಾಗಲೂ ಬಟ್ಟೆ ಸ್ವಚ್ಛವಾಗಿ ಒಗೆಯದವನು / ಒಗೆಯದವಳು ಎಂಬ ಹಣೆ ಪಟ್ಟಿ ಅಂಟಿಕೊಳ್ಳುವ ಸಾಧ್ಯತೆ ಇದೆ. ಇದು ನೀವು ಬಟ್ಟೆ ಧರಿಸಿ ಹೊರಗೇ ಹೋದಾಗಿನ ಮಾತಾಯಿತು. ಆದರೆ ನಿಮ್ಮ ಮನೆಗೆ ಯಾರಾದರೂ ಮೊದಲ ಬಾರಿಗೆ ಬಂದು ನಿಮ್ಮ ಮನೆಯ ಎಲ್ಲಾ ವಸ್ತುಗಳತ್ತ ಒಂದು ಸಹಜ ನೋಟ ಹರಿಸಿದಾಗ ಮೊದಲಿಗೆ ಕಾಣುವುದು ಟಿ.ವಿ. ಫ್ರಿಜ಼್, ಓವನ್, ಹಾಗೂ ಮುಂದೆ ವಾಷಿಂಗ್ ಮೆಷಿನ್. ಟಿ.ವಿ ಯೆ ಮೇಲೆ ಧೂಳಲ್ಲದೇ ಬೇರೇನೂ ಇರದು, ಓವನ್ ಮತ್ತು ಫ್ರಿಜ್ ಆಹಾರ ಸಂಬಂಧೀ ವಸ್ತುಗಳನ್ನು ಸ್ವಚ್ಛವಾಗಿಡುವ ಸಾಧ್ಯತೆಗಳಿವೆ.
ಆದರೆ ವಾಷಿಂಗ್ ಮೆಷಿನ್ ಬಗ್ಗೆ ಸ್ವಲ್ಪ ಅಸಡ್ಡೆ ಸಾಮಾನ್ಯ. ಆದರೆ ಇದರಿಂದಾಗಿ ಅತಿಥಿಗಳ ಮುಂದೆ ನೀವು ನೀಟ್ ಮತ್ತು ಕ್ಲೀನ್ ಆಗಿಲ್ಲ ಎಂಬ ಕಲ್ಪನೆ ಬಂದುಬಿಡುವ ಸಾಧ್ಯತೆ ಇದೆ. ಹಾಗಾಗದಂತೆ ಮಾಡಲು ನಾವು ನಿಮ್ಮ ನೆರವಿಗೆ ಇದ್ದೇವೆ. ಹೆಚ್ಚಿನವರಿಗೆ ಎಲ್ಲಾ ವಸ್ತುಗಳನ್ನು ಸ್ವಚ್ಛವಾಗಿಡಬೇಕು ಎಂಬ ಆಸೆಯೇನೋ ಇರುತ್ತದೆ ಆದರೆ ಹೇಗೆ ಸ್ವಚ್ಛಮಾಡಬೇಕು ಎಂಬ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ವಾಷಿಂಗ್ ಮೆಷೀನ್ ಬಗ್ಗೆಯೂ ಹೀಗೆಯೇ.
ಅದಕ್ಕಾಗಿ ನಾವು ಸುಲಭವಾದ ಐದು ಸೂತ್ರಗಳನ್ನು ಇಲ್ಲ್ಲಿ ನಿಮಗಾಗಿ ತಂದಿದ್ದೇವೆ.

1.ಬಟ್ಟೆ ಒಗೆದ ಸೋಪಿನ ನೀರನ್ನು ಸ್ವಚ್ಛಗೊಳಿಸಿ
ಬಟ್ಟೆ ಒಗೆಯುವವರೆಗೆ ಸೋಪಿನ ನೀರು ಸ್ವಚ್ಛವೇ ಆದರೆ ಬಟ್ಟೆಯ ಕೊಳೆ ಎಲ್ಲಾ ಒಗೆದ ನಂತರ ಆ ನೀರಿನಲ್ಲಿ ಕೀಟಾಣುಗಳು ಹೆಚ್ಚು ಇರುತ್ತವೆ, ಅದನ್ನು ಪ್ರತಿದಿನ ಸ್ವಚ್ಛಗೊಳಿಸಿ. ಹಳೆಯ ಹಲ್ಲುಜ್ಜುವ ಬ್ರಷ್ ನ ಸಹಾಯದಿಂದ ಸೋಪಿನ ಹುಡಿ ಹಾಕುವ ಸ್ಥಳವನ್ನೂ ಸ್ವಚ್ಛಗೊಳಿಸಿ.
2.ಫಿಲ್ಟರ್ ಅನ್ನು ಸ್ವಚ್ಛ ಮಾಡಿ
ಫಿಲ್ಟರ್ ಹೆಚ್ಚಿನ ಕೀಟಾಣುಗಳು ಇರುವ ಎರಡನೆಯ ಸ್ಥಳ. ಫಿಲ್ಟರ್ ನಲ್ಲಿರುವ ಕೊಳೆಯನ್ನು ಆಗಾಗ ಸ್ವಚ್ಛಗೊಳಿಸಿ ಹಾಗೂ ಅದನ್ನು ವಾಷಿಂಗ್ ಮೆಷಿನ್ ನಿಂದ ತೆಗೆದು ಸ್ವಚ್ಛಗೊಳಿಸಿ.
3.ಮೂರನೆಯ ಹಂತ ಡ್ರಮ್
ಹೊರಗಿನಿಂದ ನಿಮ್ಮ ವಾಷಿಂಗ್ ಮೆಷಿನ್ ಬಹಳ ಸ್ವಚ್ಛವಾಗಿ ಕಂಡರೂ ಅದು ಹಾಗಾಗದೇ ಇರುವ ಸಾಧ್ಯತೆಗಳೇ ಹೆಚ್ಚು. ಒಂದು ಮೆಷೀನ್ ಅಂದ ಮೇಲೆ ಅದರಲ್ಲಿ ಸಾಕಷ್ಟು ರಂಧ್ರಗಳು ಮತ್ತು ಒಡಕುಗಳು ಇದ್ದೇ ಇರುತ್ತವೆ. ಇವುಗಳನ್ನೂ ಕ್ಲೀನ್ ಮಾಡದೇ ಹೋದರೇ ಅದು ಮತ್ತೆ ಬಂದು ಸೇರುವುದು ನೀರಿನಲ್ಲಿಯೇ. ಅದಕ್ಕಾಗಿ ಪ್ರತಿ ತಿಂಗಳು ಅಥವಾ ಕನಿಷ್ಟ ಎರಡು ತಿಂಗಳಿಗೆ ಒಮ್ಮೆಯಾದರೂ ಬರಿಯ ನೀರನ್ನಷ್ಟೇ ತುಂಬಿ ವಾಷಿಂಗ್ ಮೆಷಿನ್ಅನ್ನು ಆನ್ ಮಾಡಿ. ಸೋಡಾ ಕ್ರಿಸ್ಟಲ್ಸ್ ಗಳು ಅಥವಾ ಪಾತ್ರೆತೊಳೆಯುವ ರಾಸಾಯನಿಕಗಳು ಇದ್ದರೆ ಅದನ್ನೂ ಬಳಸಬಹುದು. ಇದು ಕೀಟಾಣುಗಳನ್ನು ನಾಶ ಪಡಿಸುತ್ತದೆ, ದುರ್ವಾಸನೆಯನ್ನು ದೂರ ಮಾಡುತ್ತದೆ ಹಾಗೂ ಮಾರ್ಜಕಗಳು ಹೋಗಿ ಒಂದೆಡೆ ಸೇರಿದ್ದರೆ ಅದನ್ನು ನಿರ್ಮೂಲನೆ ಮಾಡುತ್ತದೆ.
4. ದುರ್ವಾಸನೆಯನ್ನು ತಡೆಯಿರಿ
ವಾಷಿಂಗ್ ಮೆಷಿನ್ ಒಳಗೆ ಗಾಳಿಯಾಡದೇ ಇದ್ದರೆ ದುರ್ವಾಸನೆ ಹೆಚ್ಚು. ಹಾಗಾಗಿ ಪ್ರತಿ ಬಾರಿ ಬಳಸಿದ ನಂತರವೂ ಸ್ವಲ್ಪ ಬಾಗಿಲು ತೆರೆದಿಟ್ಟು ಗಾಳಿಯಾಡುವಂತೆ ಎಚ್ಚರ ವಹಿಸಿ.
5. ಸರಿಯಾದ ಮಾರ್ಜಕವನ್ನೇ ಬಳಸಿ
ದ್ರವ್ಯಗಳ ಬದಲಿಗೆ ಪೌಡರ್ ಅನ್ನು ಬಳಸಿ. ದ್ರವ್ಯ ಮಾರ್ಜಕಗಳು ಮೆಷಿನ್ ನ ಒಳಭಾಗದಲ್ಲಿ ಸಂಗ್ರಹವಾಗಿ ದುರ್ವಾಸನೆ ಹೆಚ್ಚಿಸುವ ಸಾಧ್ಯತೆಗಳಿವೆ.



Click it and Unblock the Notifications
