ದಿನಸಿ ಖರೀದಿ ಮಾಡುವಾಗ ಗಮನಿಸಬೇಕಾದ ಅಂಶಗಳು

By Super

ಇದು ಷಾಪಿಂಗ್ ಮಾಲ್ ಗಳ ಕಾಲ. ಎಲ್ಲವೂ ಆಕರ್ಷಕ ಪ್ಯಾಕೆಟ್ ನಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ. ಬರಿಯ ಮಾಲ್ ಗಳಷ್ಟೇ ಅಲ್ಲ ಸಾಮಾನ್ಯ ಅಂಗಡಿಗಳೂ ಈಗ ಇದನ್ನೇ ಅವಲಂಬಿಸಿವೆ. ಸಾಮಾನು ಖರೀದಿಗೆ ಹೋದಾಗ ಯಾವುದನ್ನು ತೆಗೆದುಕೊಳ್ಳಬೇಕು ಯಾವುದು ಬೇಕು ಯಾವುದು ಬೇಡ ಎಂಬ ತೀರ್ಮಾನವೇ ಕಠಿಣ. ಇದು ಕೇವಲ ಬಜೆಟ್ ನ ಪ್ರಶ್ನೆಯಿಂದಲ್ಲ, ಇದರಲ್ಲಿ ನಿಮ್ಮ ಆರೋಗ್ಯದ ಕಾಳಜಿಯೂ ಸೇರಿದೆ.

ನೀವು ಖರೀದಿಸಬೇಕೆಂದಿರುವ ಆಹಾರ ಅಥವಾ ತಿಂಡಿ ಅಥವಾ ತರಕಾರಿ ಎಷ್ಟು ಪ್ರಮಾಣದ ಪೋಷಕಾಂಶಗಳನ್ನು ಹೊಂದಿದೆ ಎಂಬ ಬಗ್ಗೆಯೂ ಮಾಹಿತಿ ಇರಬೇಕು. ಎಲ್ಲಾ ವಿವರಗಳೂ ತಿಂಡಿಯ ಪೊಟ್ಟಣದ ಮೇಲೆಯೇ ಇದ್ದರೂ ಅದರಲ್ಲಿ ಯಾವುದು ಮುಖ್ಯ ಯಾವುದನ್ನು ಹೆಚ್ಚು ಗಮನಿಸಬೇಕು ಎಂಬ ಬಗ್ಗೆ ಮಾಹಿತಿ ಬೇಕು. ಇವೆಲ್ಲಾ ಇದ್ದರೆ ಮಾತ್ರ ಇಂದಿನ ಮಾರುಕಟ್ಟೆಯಲ್ಲಿ ನೀವು ಆರೋಗ್ಯಕರವಾದ ಆಹಾರವನ್ನು ಆರಿಸಲು ಸಾಧ್ಯ

ಅಂಗಡಿಯಲ್ಲಿರುವ ನೋಡಲು ಆಕರ್ಷಕವಾಗಿ ಕಾಣುವ ಎಲ್ಲಾ ತಿಂಡಿಗಳೂ ಆರೋಗ್ಯಕರವಾಗಿರಬೇಕಾಗಿಲ್ಲ. ನೀವು ಆರೋಗ್ಯಕರವಾಗಿರಬೇಕಾದರೆ ನೀವು ಶಾಪಿಂಗ್ ಮಾಡುವಾಗ ನೆನಪಿನಲ್ಲಿಡಬೇಕಾದ ಕೆಲವು ಅಂಶಗಳನ್ನು ಇಲ್ಲಿ ನೀಡಲಾಗಿದೆ.

1.ಹಣ್ಣುಗಳು

1.ಹಣ್ಣುಗಳು

ಹಣ್ಣುಗಳು ಆರೋಗ್ಯಕರ ಆಹಾರ ವಿಧಾನದ ಪ್ರಮುಖ ಅಂಶಗಳಾಗಿವೆ ಆದರೆ ಸರಿಯಾದ ಹಣ್ಣನ್ನು ಆಯ್ಕೆ ಮಾಡುವುದೂ ಅಗತ್ಯ. ಬಾಳೆಹಣ್ಣು ಮತ್ತು ದ್ರಾಕ್ಷೆ ಹಣ್ಣುಗಳನ್ನು ನೀವು ಜಿಮ್ ಗೆ ಹೋಗುವ ಮುನ್ನ ಅಥವಾ ಮನೆಯಿಂದ ಹೊರಗಡೆ ಹೊರಡುವ ಮುನ್ನ ತ್ವರಿತ ಶಕ್ತಿಗಾಗಿ ಸೇವಿಸಬಹುದಾಗಿದೆ. ಸಂರಕ್ಷಿಸಿಟ್ಟ ಹಣ್ಣುಗಳಿಂತ ತಾಜಾ ಹಣ್ಣುಗಳನ್ನೇ ಆಯ್ಕೆ ಮಾಡಿ. ಹೊಸ ಹಣ್ಣುಗಳನ್ನು ಸವಿಯಲು ಹಿಂಜರಿಯಬೇಡಿ.

2.ತರಕಾರಿಗಳು

2.ತರಕಾರಿಗಳು

ತರಕಾರಿಯನ್ನು ಬೇಯಿಸಿ, ಉಪ್ಪು ಹಾಕಿ ಅಥವಾ ಕಾಯಿಸಿ ತಯಾರಿಸಬಹುದು. ಆದರೆ ತರಕಾರಿಗಳ ಸರಿಯಾದ ಪ್ರಮಾಣದ ಮಿಶ್ರಣ ಇದರಲ್ಲಿ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ. ಸಲಾಡ್ ಊಟ ಅಥವಾ ತಿಂಡಿಯ ಜೊತೆಗೆ ಸರಿಯಾದ ಆಯ್ಕೆಯಾಗಿದೆ. ಪಾಲಾಕ್ ಮತ್ತು ಬೀಟ್ರೂಟ್ ನಂತಹ ಆರೋಗ್ಯಕರ ಮತ್ತು ಶಕ್ತಿದಾಯಕ ತರಕಾರಿಗಳನ್ನು ಎಂದಿಗೂ ಬಿಡಬೇಡಿ.

3.ಪ್ರೋಟೀನ್ಸ್

3.ಪ್ರೋಟೀನ್ಸ್

ಮಾಂಸ, ಕೋಳಿ ಮತ್ತು ಮೀನು ಪ್ರೊಟೀನ್ ಗಳ ಆಗರವಾಗಿದೆ. ನೀವು ಸಸ್ಯಾಹಾರಿಯಾಗಿದ್ದಲ್ಲಿ ನಿಮ್ಮ ಆಹಾರದ ಜೊತೆಗೆ ಸ್ವಲ್ಪ ಪ್ರಮಾಣದ ಕಾಳು ಮತ್ತು ಬೀನ್ಸ್ ಅನ್ನು ಸೇರಿಸಿ

4.ಹಾಲಿನ ಉತ್ಪನ್ನಗಳು

4.ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳು ಸೇವಿಸಲೇ ಬೇಕು ಎನ್ನುವ ಪಟ್ಟಿಯಲ್ಲಿ ಇರಬೇಕಾದ ಅಂಶಗಳು. ಕಡಿಮೆ ಕೊಬ್ಬಿನಂಶವಿರುವ ಗಿಣ್ಣು ಮತ್ತು ಹಾಲನ್ನು ಆಯ್ಕೆ ಮಾಡಿ. ಇದನ್ನು ಬೆಳಿಗ್ಗಿನ ತಿಂಡಿಯ ಜೊತೆಗೆ ನಿಯಮಿತವಾಗಿ ಸೇವಿಸಿ.

5.ಧಾನ್ಯಗಳು

5.ಧಾನ್ಯಗಳು

ನೀವು ಬ್ರೆಡ್ ಮತ್ತು ಅನ್ನದ ಬಗ್ಗೆ ಮರೆಯಲು ಸಾಧ್ಯವೇ ಇಲ್ಲ. ಹೆಚ್ಚಾಗಿ ಇಡಿಯ ಗೋಧಿಯ ಬ್ರೆಡ್ ಹಾಗೂ ಕಂದು ಅಕ್ಕಿಯನ್ನು ಆರಿಸಿ ಇವೆರಡು ಆರೋಗ್ಯಕರ ಆಹಾರಗಳು. ಬ್ರೆಡ್ ಖರೀದಿಸುವಾಗ ಯಾವಾಗಲೂ ಅದರ ಮೇಲಿನ ವಿವರಗಳನ್ನು ಓದಿ. ಅದರಲ್ಲಿ ಬಿಳಿಯಾಗಿಸಿದ ಗೋಧಿ ಇದ್ದಿರಬಹುದು ಇದು ಆರೋಗ್ಯಕ್ಕೆ ಅಷ್ಟೊಂದು ಉತ್ತಮವಾದುದಲ್ಲ.

7.ಸಾಧ್ಯವಾದಷ್ಟು ದೂರವಿಡಿ

7.ಸಾಧ್ಯವಾದಷ್ಟು ದೂರವಿಡಿ

ಸಂಸ್ಕರಿಸಿದ ಬಹಳ ದಿನಗಳ ಕಾಲ ಸಂಸ್ಕರಿಸಿ ಇಟ್ಟ ಆಹಾರ ಪದಾರ್ಥಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಿ. ಸೋಡಾ, ಚಿಪ್ಸ್, ಕೇಕ್ಸ್ ಹಾಗೂ ಎಣ್ಣೆಯಲ್ಲಿ ಕಾಯಿಸಿದ ನಿಮ್ಮ ದೇಹಕ್ಕೆ ಮತ್ತು ಆರೋಗ್ಯಕ್ಕೆ ಯಾವುದೇ ರೀತಿಯಲ್ಲೂ ಒಳ್ಳೆಯದಲ್ಲ ಬದಲಾಗಿ ಇವು ನಿಮ್ಮ ದೇಹಕ್ಕೆ ಕ್ಯಾಲೋರಿಗಳನ್ನಷ್ಟೇ ಸೇರಿಸುತ್ತಾ ಹೋಗುತ್ತವೆ. ನಿಮಗೆ ತಿನ್ನಲೇ ಬೇಕು ಎಂದಾದಲ್ಲಿ ಬೇಯಿಸಿದ ತಿಂಡಿಗಳನ್ನು ಆಯ್ಕೆ ಮಾಡಿ. ಅವುಗಳನ್ನೂ ಯಾವಾಗಲಾದರೂ ಒಮ್ಮೆ ಸೇವಿಸಿ ಪ್ರತಿದಿನ ಸೇವನೆಯಿಂದ ದೂರವಿರಿ.

8.ಮುಂದಾಲೋಚನೆ ಮಾಡಿ

8.ಮುಂದಾಲೋಚನೆ ಮಾಡಿ

ಒಂದು ವಾರದ ಆಹಾರ ಪದಾರ್ಥಗಳನ್ನು ಖರೀದಿಸುವ ಮೊದಲು ಸರಿಯಾಗಿ ಯೋಚಿಸಿ ನಿರ್ಧರಿಸಿ. ಖರೀದಿಗೆ ಹೋಗುವ ಮುನ್ನ ಆ ವಾರದಲ್ಲಿ ನೀವು ಮಾಡಲಿರುವ ತಿಂಡಿಗಳ ಬಗ್ಗೆ ಯೋಚಿಸಿ ಪಟ್ಟಿ ಸಿದ್ಧಪಡಿಸಿ. ಇದರಿಂದ ಕಂಡ ಕಂಡದ್ದನ್ನು ಖರೀದಿಸುವ ಗೋಜಿಗೆ ನೀವು ಹೋಗುವುದಿಲ್ಲ. ನೀವು ಸಿದ್ಧ ಪಡಿಸಿದ ಪಟ್ಟಿಯಿಂದ ಹೊರತಾದುದೇನನ್ನೂ ಖರೀದಿಸುವುದಿಲ್ಲ ಎಂಬ ದೃಢ ನಿಶ್ಚಯ ಮಾಡಿ.

9.ಆಹಾರ ಪದಾರ್ಥಗಳ ಮೇಲಿನ ವಿವರಗಳನ್ನು ಓದುವ ಬಗ್ಗೆ ಮಾಹಿತಿ ಇರಲಿ

9.ಆಹಾರ ಪದಾರ್ಥಗಳ ಮೇಲಿನ ವಿವರಗಳನ್ನು ಓದುವ ಬಗ್ಗೆ ಮಾಹಿತಿ ಇರಲಿ

ಆಹಾರ ಪದಾರ್ಥಗಳ ಮೇಲಿನ ವಿವರಗಳಲ್ಲಿ ಇರುವ ಪೋಷಕಾಂಶಗಳನ್ನು ಓದುವ ಅಭ್ಯಾಸ ಮತ್ತು ಯಾವುದನ್ನು ಗಮನಿಸಬೇಕು ಎಂಬುದನ್ನು ತಿಳಿಯಿರಿ. ಒಂದು ಆಹಾರದಲ್ಲಿರುವ ಕ್ಯಾಲರಿ ಎಷ್ಟು, ಪ್ರೊಟೀನ್ ಅಂಶ ಎಷ್ಟಿದೆ ಹಾಗೂ ಕಾರ್ಬೋಹೈಡ್ರೇಟ್ ಎಷ್ಟು ಪ್ರಮಾಣದಲ್ಲಿದೆ ಎಂಬ ಬಗ್ಗೆ ತಿಳಿಯಿರಿ.

ನಿಜವಾಗಿಯೂ ಸಾವಯವ ಆಹಾರ ಪದಾರ್ಥಗಳು ಯಾವುವು ಎಂಬುದನ್ನು ತಿಳಿಯಿರಿ.

ಬಹಳವೇ ಗೊಂದಲ ಹುಟ್ಟಿಸುವ ಪ್ರಾಕೃತಿಕ ಮತ್ತು ಶುದ್ಧ ಎಂಬ ಪದಗಳ ಬಳಕೆಯ ಬಗ್ಗೆ ಸ್ಪಷ್ಟತೆ ಇರಲಿ.

X
Desktop Bottom Promotion