Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮನೆಯಲ್ಲಿ ಜಿರಳೆ ಕಾಟವೇ? ಇಲ್ಲಿದೆ ಪರಿಹಾರ
ಅಡುಗೆ ಮನೆಯಲ್ಲಿ ಜಿರಳೆ ಬಂದು ಸೇರಿದರೆ ಅದನ್ನು ನಾಶ ಮಾಡುವುದು ಕಷ್ಟ. 2-3 ಜಿರಳೆ ಕಂಡರೆ ಮಾರನೇಯ ದಿನ ನೋಡಿದಾಗ ಅದರ ಎರಡು ಪಟ್ಟಾಗಿರುತ್ತದೆ. ಜಿರಳೆ ಸ್ಪ್ರೇ ಹೊಡೆದರೂ ಅವುಗಳನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಿಲ್ಲ, ಜಿರಳೆ ಪೇಸ್ಟ್ ಜಿರಳೆಯನ್ನು ನಾಶ ಮಾಡುವಲ್ಲಿ ಸ್ವಲ್ಪ ಮಟ್ಟಿಗೆ ಪರಿಣಾಮಕಾರಿಯಾಗಿದೆ. ಆದರೆ ಈ ಪೇಸ್ಟ್ ಅನ್ನು ಆಹಾರ ಸಾಮಾಗ್ರಿಗಳ ಹತ್ತಿರ ಇಡಲು ಸಾಧ್ಯವಿಲ್ಲ.
ಇಲ್ಲಿ ನಾವು ಕೆಲವೊಂದು ಟಿಪ್ಸ್ ನೀಡಲಾಗಿದೆ. ಅವುಗಳನ್ನು ಪಾಲಿಸಿದರೆ ಜಿರಳೆ ಬರದಂತೆ ತಡೆಯಬಹುದು.

* ಅಡುಗೆ ಮನೆಯಲ್ಲಿರುವ ಕಬೋರ್ಡ್ ಒಳಗೆ ರೆಡ್ ವೈನ್ ಇಟ್ಟರೆ ಸಾಕು ಜಿರಳೆ ಬರುವುದಿಲ್ಲ. ಸ್ವಲ್ಪ ರೆಡ್ ವೈನ್ ಅನ್ನು ಅಡುಗೆ ಮನೆಯ ಸ್ಲ್ಯಾಬ್ ನ ಕೆಳಗೆ ಚಿಮುಕಿಸಿದರೆ ಜಿರಳೆ ಬರುವುದಿಲ್ಲ.
* ಸಕ್ಕರೆ ಪುಡಿಯನ್ನು ಒಂದು ಬಟ್ಟಲಿನಲ್ಲಿ ಹಾಕಿ ಅದಕ್ಕೆ ಬೋರಿಕ್ ಆಸಿಡ್ ಹಾಕಿ ಮಿಶ್ರ ಮಾಡಿಟ್ಟರೆ ಅದರ ವಾಸನೆಗೆ ಜಿರಳೆ ಅಡುಗೆ ಮನೆ ಕಡೆ ತಿರುಗಿಯೂ ನೋಡುವುದಿಲ್ಲ.
* ಮೊಟ್ಟೆಯ ಚಿಪ್ಪು ಕೂಡ ಮತ್ತೊಂದು ಪರಿಣಾಮಕಾರಿಯಾದ ವಿಧಾನ. ಮೊಟ್ಟೆಯ ಚಿಪ್ಪನ್ನು ಜಿರಳೆ ಬರುವ ಕಡೆ ಇಟ್ಟರೆ ಸಾಕು, ಜಿರಳೆ ಮನೆಯೊಳಗೆ ಬರುವುದಿಲ್ಲ.
* ಜಿರಳೆ ಬರುವ ಕಡೆ, ಸ್ಲ್ಯಾಬ್ ಅಡಿಯಲ್ಲಿ 2 ಲವಂಗವನ್ನು ಪುಡಿ ಮಾಡಿ ಇಡಿ. ಇದನ್ನು ಎರಡು ವಾರಕ್ಕೊಮ್ಮೆ ಬದಲಾಯಿಸಿ.
* ಬೋರಾಕ್ಸ್ ಪುಡಿಯನ್ನು ಬಳಸಿ ಚಿಕ್ಕ-ಚಿಕ್ಕ ಜಿರಳೆಯನ್ನು ಕೊಲ್ಲಬಹುದು. ಪ್ರತೀ 15 ದಿನಕ್ಕೊಮ್ಮೆ ಈ ಪುಡಿಯನ್ನು ಚಿಮುಕಿಸಿದರೆ ಜಿರಳೆ ಬರುವುದೇ ಇಲ್ಲ.
ನಿಮಗೇನಾದರೂ ಜಿರಳೆಯನ್ನು ಹೋಗಲಾಡಿಸುವ ಪರಿಣಾಮಕಾರಿ ವಿಧಾನ ಗೊತ್ತಿದ್ದರೆ ನಮಗೆ ತಿಳಿಸಬಹುದು.



Click it and Unblock the Notifications
