Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಹೈಡ್ರೋಜನ್ ಪರಾಕ್ಸೈಡ್ ಇರುವಾಗ ಕಲೆಯ ಚಿಂತೆ ಏಕೆ?
ಹೈಡ್ರೋಜನ್ ಪರಾಕ್ಸೈಡ್ ಅನ್ನು ಮನೆ ಸ್ವಚ್ಛ ಬಳಸಿದರೆ ಅತ್ಯುತ್ತಮವಾದ ಪ್ರಯೋಜವನ್ನು ಪಡೆಯಬಹುದು. ನಿಮ್ಮ ಮರದ ಉಪಕರಣವನ್ನು ಬರೀ ನೀರು ಹಾಕಿ ತೊಳೆಯುವ ಬದಲು ಹೈಡ್ರೋಜನ್ ಪರಾಕ್ಸೈಡ್ ಬಳಸಿ ತೊಳದರೆ ಹೊಸದಾಗಿ ಕಾಣುವುದು.
ಬರೀ ಮರದ ಉಪಕರಣಗಳನ್ನು ಮಾತ್ರವಲ್ಲ, ಮನೆಯಲ್ಲಿರುವ ಅನೇಕ ಸಾಧನಗಳನ್ನು ಹೈಡ್ರೋಜನ್ ಪರಾಕ್ಸೈಡ್ ಬಳಸಿ ಸ್ವಚ್ಛ ಮಾಡಬಹುದು. ಈ ಕೆಳಗಿನ ವಸ್ತುಗಳನ್ನು ಸ್ವಚ್ಛ ಮಾಡಲು ಹೈಡ್ರೋಜನ್ ಪರಾಕ್ಸೈಡ್ ಬಳಸಿದರೆ ಸ್ವಚ್ಛ ಮಾಡಲು ನೀವೂ ಅಧಿಕ ಶ್ರಮ ಪಡಬೇಕಾಗಿಲ್ಲ, ಆ ವಸ್ತುಗಳು ಬಹಳ ಸ್ವಚ್ಛವಾಗುತ್ತವೆ.

ಕಲೆಯನ್ನು ಹೋಗಲಾಡಿಸಲು
ಬಟ್ಟೆಗೆ ವೈನ್ ಅಥವಾ ಮತ್ತಿತರ ಕಲೆಯಾಗಿದ್ದರೆ ಆ ಭಾಗಕ್ಕೆ ಹೈಡ್ರೋಜನ್ ಪರಾಕ್ಸೈಡ್ ಹಾಕಿ ನಂತರ ಬಟ್ಟೆ ತೊಳೆದು ಕಲೆಯನ್ನು ತೆಗೆಯಬಹುದು. ಸೋಪಿನಿಂದ ಹೋಗಿಸಲು ಅಸಾಧ್ಯವಾದ ಕಲೆಯನ್ನು ಹೈಡ್ರೋಜನ್ ಪರಾಕ್ಸೈಡ್ ಬಳಸಿ ತೆಗೆಯಬಹುದು.
ಟೈಲ್ಸ್ ಸ್ವಚ್ಛ ಮಾಡಲು
ಸ್ವಲ್ಪ ಹೈಡ್ರೋಜನ್ ಪರಾಕ್ಸೈಡ್ ಹಾಗೂ ವಿನಿಗರ್ ಹಾಕಿದ ನೀರಿನಿಂದ ನೆಲ ಒರೆಸಿದರೆ , ನೆಲ ಫಳಫಳ ಹೊಳೆಯುವುದು.
ಸಿಂಕ್ ಕ್ಲೀನ್ ಮಾಡಲು
ಸಿಂಕ್ ಕಲೆ ಹಿಡಿಯದಿರಲು ಹೈಡ್ರೋಜನ್ ಪರಾಕ್ಸೈಡ್ ಬಳಸಿ ಸ್ವಚ್ಛ ಮಾಡಬೇಕು.
ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಬಳಸಬಹುದು
ಅಡುಗೆ ಮನೆಯಲ್ಲಿ ಬ್ಯಾಕ್ಟೀರಿಯಾಗಳ ದಾಳಿಯನ್ನು ತಡೆಯಲು ಹೈಡ್ರೋಜನ್ ಪರಾಕ್ಸೈಡ್ ಅನ್ನು ಸ್ಪ್ರೇ ಮಾಡಿದರೆ ಸಾಕು. ತರಕಾರಿಗಳ ಮೇಲೆ ಇದನ್ನು ಸಿಂಪಡಿಸಿದರೆ ಒಂದು ವಾರದ ನಂತರ ಆ ತರಕಾರಿಗಳನ್ನು ಚೆನ್ನಾಗಿ ತೊಳೆದು ಅಡುಗೆಗೆ ಬಳಸಿ.
ಫ್ರಿಜ್ ಸ್ವಚ್ಛ ಮಾಡಲು
ಫ್ರಿಜ್ ಸ್ವಚ್ಛ ಮಾಡದಿದ್ದರೆ ದುರ್ವಾಸನೆ ಬೀರುತ್ತದೆ. ಹೈಡ್ರೋಜನ್ ಪರಾಕ್ಸೈಡ್ ಬಳಸಿ ಫ್ರಿಜ್ ಸ್ವಚ್ಛ ಮಾಡುವುದರಿಂದ ಫ್ರಿಜ್ ಸ್ವಚ್ಛ ಹಾಗೂ ಸುವಾಸನೆಯಿಂದ ಕೂಡಿರುತ್ತದೆ.
ಟಾಯ್ಲೆಟ್ ಸ್ವಚ್ಛ ಮಾಡಲು
ಟಾಯ್ಲಟ್ ಹಳದಿ ಬಣ್ಣಕ್ಕೆ ತಿರುಗಿದ್ದರೆ ಹೈಡ್ರೋಜನ್ ಪರಾಕ್ಸೈಡ್ ಬಳಸಿ ಸ್ವಚ್ಛ ಮಾಡಿದರೆ ಟಾಯ್ಲೆಟ್ ನಲ್ಲಿರುವ ಕಲೆಯನ್ನು ಹೋಗಲಾಡಿಸಬಹುದು.



Click it and Unblock the Notifications