Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೀಪಾವಳಿ ಬಳಿಕವೂ ಮನೆ ಸ್ವಚ್ಛವಾಗಿರಲಿ
ದೀಪಗಳ ಹಾಗೂ ಪಟಾಕಿಗಳ ಹಬ್ಬ ದೀಪಾವಳಿ ಮತ್ತೆ ಬಂದಿದೆ. ದೀಪಾವಳಿ ಹಬ್ಬ ಧನ್ ತೆರಾಸ್' ನೊಂದಿಗೆ ಆರಂಭವಾಗಿ ಲಕ್ಷ್ಮೀ ಪೂಜೆ'ಯ ಬಳಿಕ ಹಿಂದೂಗಳ ಹೊಸ ವರ್ಷ ಪಾಡ್ವದೊಂದಿಗೆ ಇದು ಕೊನೆಗೊಳ್ಳುತ್ತದೆ. ದೀಪಾವಳಿಯ ಸಮಯದಲ್ಲಿ ಪ್ರತೀ ಮನೆಯ ಅಂಗಳದಲ್ಲಿ ಬಣ್ಣಬಣ್ಣದ ರಂಗೋಲಿಗಳನ್ನು ಹಾಕಲಾಗುತ್ತದೆ. ಮನೆಯನ್ನು ವಿವಿಧ ಬಣ್ಣಗಳ ವಿದ್ಯುತ್ ದೀಪ ಹಾಗೂ ಹೂಗಳಿಂದ ಅಲಂಕರಿಸಲಾಗುತ್ತದೆ. ಪ್ರತೀ ದಿನ ರಾತ್ರಿ ಮನೆಯ ಅಂಗಳದಲ್ಲಿ ಪಟಾಕಿಯ ಸದ್ದು ಮತ್ತು ಬೆಳಕು ಕಾಣಿಸುತ್ತದೆ. ಎಲ್ಲವೂ ರೋಮಾಂಚಕ ಹಾಗೂ ಪ್ರಕಾಶಮಾನವಾಗಿ ಹಬ್ಬದ ವಾತಾವರಣವನ್ನು ನಿರ್ಮಿಸುತ್ತದೆ.
ಆದರೆ ದೀಪಾವಳಿ ಹಬ್ಬ ಮುಗಿದ ಬಳಿಕ ಏನಾಗುತ್ತದೆ? ಜಗಮಗಿಸುತ್ತಿದ್ದ ಅದೇ ಮನೆಯಲ್ಲಿ ಎಲ್ಲೆಡೆ ಹರಡಿದ ರಂಗೋಲಿ ಬಣ್ಣ, ಬಳಸಿದ ಕಾಗದ, ಪ್ಲಾಸ್ಟಿಕ್ ಮತ್ತು ಎಲ್ಲೆಡೆ ಹರಡಿರುವ ಪಟಾಕಿ ಮದ್ದು ಮತ್ತು ಕಾಗದಗಳು, ಮನೆಯನ್ನು ಅಲಂಕರಿಸಲು ಮತ್ತು ಪೂಜೆಗಾಗಿ ತಂದಿದ್ದ ಎಲೆಗಳು ಹಾಗೂ ಒಣಗಿದ ಹೂಗಳು ಕಾಣಸಿಗುತ್ತದೆ. ಇದಕ್ಕೆ ಮತ್ತಷ್ಟು ಸೇರ್ಪಡೆಯೆಂಬಂತೆ ಮನೆಯೊಳಗೆ ಧೂಳು ಹಾಗೂ ಹೊಗೆ ತುಂಬಿರುತ್ತದೆ. ಅಡುಗೆ ಮನೆಯು ಸಂಪೂರ್ಣವಾಗಿ ಅಸ್ತವ್ಯಸ್ತವಾಗಿರುತ್ತದೆ. ದೀಪಾವಳಿ ಹಬ್ಬಕ್ಕಿಂತ ಮೊದಲು ನಾವು ಮನೆಯನ್ನು ತುಂಬಾ ಶೃದ್ಧೆಯಿಂದ ಸ್ವಚ್ಚ ಮಾಡುವಂತೆ ದೀಪಾವಳಿ ಬಳಿಕ ಕೂಡ ಮನೆಯನ್ನು ಸ್ವಚ್ಛ ಮಾಡಬೇಕಾಗುತ್ತದೆ. ದೀಪಾವಳಿ ಬಳಿಕ ಮನೆಯನ್ನು ಸ್ವಚ್ಛ ಮಾಡಲು ಕೆಲವೊಂದು ಟಿಪ್ಸ್ ಗಳನ್ನು ನೀಡಲಾಗಿದೆ. ಈ ಟಿಪ್ಸ್ ಗಳು ತುಂಬಾ ನೆರವಾಗಲಿದೆ.

1. ಬೇಡವಾದ ವಸ್ತುಗಳನ್ನು ತೆಗೆಯಿರಿ
ದೀಪಾವಳಿಗೆ ಮನೆಯನ್ನು ಶೃಂಗರಿಸಿದಂತಹ ವಸ್ತುಗಳನ್ನು ಆದಷ್ಟು ಬೇಗ ತೆಗೆಯಿರಿ. ದೀಪಾವಳಿ ಬಳಿಕ ಮನೆಯನ್ನು ಸ್ವಚ್ಛಗೊಳಿಸಲು ಬಾಗಿಲು ಹಾಗೂ ಕಿಟಕಿಯಲ್ಲಿ ನೇತಾಡುವ ಒಣಗಿದ ಹೂ ಮಾಲೆ, ಸಣ್ಣ ಸಣ್ಣ ದೀಪಗಳು ಮತ್ತು ರಂಗೋಲಿ ಬಣ್ಣ ಎಲ್ಲಾ ಕಡೆಗೆ ಪಸರಿಸುವ ಮೊದಲು ಅದನ್ನು ತೆಗೆಯಬೇಕು.

2. ಅಡುಗೆ ಮನೆಯನ್ನು ಸ್ವಚ್ಛವಾಗಿಡಿ
ಮನೆಯಲ್ಲಿ ಮುಖ್ಯವಾಗಿ ಸ್ವಚ್ಛವಾಗಿಡಬೇಕಾದ ಜಾಗವೆಂದರೆ ಅದು ಅಡುಗೆಮನೆ. ದೀಪಾವಳಿ ಸಮಯದಲ್ಲಿ ವಿವಿಧ ಬಗೆಯ ತಿನಿಸುಗಳು, ಅಡುಗೆ ಮಾಡಬೇಕಾಗಿರುವ ಕಾರಣ ಅಡುಗೆ ಮನೆಯ ಸಾಮಾನುಗಳು ಅಲ್ಲಲ್ಲಿ ಬಿದ್ದಿರುತ್ತದೆ. ದೀಪಾವಳಿ ಸ್ವಚ್ಛತೆಯ ಸಲಹೆಯಲ್ಲಿ ಸ್ವಲ್ಪ ಸಮಯ ಪಡೆದು ಅಡುಗೆ ಮನೆಯನ್ನು ನೀಟಾಗಿ ಇಡಿ. ಅಡುಗೆಗೆ ಬಳಸಿದ ಎಲ್ಲಾ ಪಾತ್ರೆಗಳನ್ನು ತೊಳೆದು ಮೊದಲಿನ ಸ್ಥಳದಲ್ಲೇ ಇಡಿ. ಅಡುಗೆ ಮನೆಯನ್ನು ಮತ್ತೆ ಹೊಸದನ್ನಾಗಿ ಮಾಡಿ.

3. ಕಪಾಟನ್ನು ನಿರ್ಮಲವಾಗಿಡಿ
ಹೊಸ ಬಟ್ಟೆ, ಆಭರಣ ಮತ್ತು ಎಲ್ಲಾ ರೀತಿಯ ಮೇಕಪ್ ಹಚ್ಚಿಕೊಳ್ಳಲು ದೀಪಾವಳಿ ಒಂದು ಕಾರಣ. ಆದರೆ ಇದನ್ನು ಮಾಡುವುದರಿಂದ ಕಪಾಟು ಮತ್ತು ಡ್ರೆಸ್ಸಿಂಗ್ ಟೇಬಲ್ ಎಲ್ಲಾ ಕೊಳಕಾಗಿರುತ್ತದೆ. ದೀಪಾವಳಿ ಬಳಿಕ ಮನೆಯನ್ನು ಸ್ವಚ್ಛಗೊಳಿಸಲು ಮೊದಲು ಕಪಾಟು ಮತ್ತು ಡ್ರೆಸ್ಸಿಂಗ್ ಟೇಬಲ್ ನ್ನು ನಿರ್ಮಲವಾಗಿ ಜೋಡಿಸಿಡಿ. ದೀಪಾವಳಿ ವೇಳೆ ಧರಿಸಿದ ಎಲ್ಲಾ ಬಟ್ಟೆಬರೆಗಳನ್ನು ಡ್ರೈ ಕ್ಲೀನ್ ಗೆ ಕೊಟ್ಟು ಕಪಾಟಿನಲ್ಲಿ ಚೆನ್ನಾಗಿ ಜೋಡಿಸಿಡಿ.

4. ಧೂಳನ್ನು ತೆಗೆಯಿರಿ
ದೀಪಾವಳಿ ಬಳಿಕ ದೊಡ್ಡ ಚಿಂತೆಯೆಂದರೆ ಪಾಟಕಿಯಿಂದ ಹೊರಬರುವ ಧೂಳು ಮತ್ತು ಹೊಗೆ ಮನೆಯ ಫರ್ನಿಚರ್ ಮತ್ತು ಇತರ ವಸ್ತುಗಳನ್ನು ಆವರಿಸಿರುತ್ತದೆ. ದೀಪಾವಳಿ ಬಳಿಕದ ಸ್ವಚ್ಛತೆಗೆ ಸಲಹೆಯೆಂದರೆ ವಾಕ್ಯುಮ್ ಕ್ಲೀನರ್ ಬಳಸಿ ಅಥವಾ ಬಟ್ಟೆಯನ್ನು ಬಳಸಿ ಫರ್ನಿಚರ್, ಟೇಬಲ್, ಫ್ಯಾನ್ ಮತ್ತು ಇತರ ವಸ್ತುಗಳನ್ನು ಸ್ವಚ್ಛಗೊಳಿಸಿ. ದೀಪಾವಳಿ ಬಳಿಕ ಮನೆಯನ್ನು ಸ್ವಚ್ಛಗೊಳಿಸಲು ಇದು ಒಳ್ಳೆಯ ವಿಧಾನ.

5. ಎಲ್ಲವನ್ನು ಬದಲಾಯಿಸಿ
ದೀಪಾವಳಿ ಬಳಿಕದ ಸ್ವಚ್ಛತೆಯ ಸಲಹೆಯೆಂದರೆ ಎಲ್ಲಾ ಬೆಡ್ ಶೀಟ್, ಬೆಡ್ ಕವರ್, ಕರ್ಟೈನ್ ಮತ್ತು ಸೋಫಾ ಕವರ್ ಗಳನ್ನು ಬದಲಾಯಿಸಿ. ಇದರಿಂದ ಮನೆ ಹೊಸತು ಹಾಗೂ ಸ್ವಚ್ಛವಾಗಿ ಕಾಣಿಸುತ್ತದೆ. ನಿಮ್ಮ ಮನೆ
ಸುಂದರ ಹಾಗೂ ಪ್ರಕಾಶಮಾನವಾಗಿರುತ್ತದೆ.

6. ಮಾಪ್ ಮಾಡಿ
ಮೇಲಿನ ಎಲ್ಲಾ ವಿಧಾನಗಳನ್ನು ಅನುಸರಿಸಿದ ಬಳಿಕ ಒಂದು ಬಟ್ಟೆಯನ್ನು ಹಿಡಿದು ಅದನ್ನು ಒದ್ದೆ ಮಾಡಿ. ಇದರಿಂದ ಎಲ್ಲಾ ವಸ್ತುಗಳನ್ನು ಸ್ವಚ್ಛಗೊಳಿಸಿ ಅಂತಿಮ ಸ್ಪರ್ಶ ನೀಡಿದಂತಾಗುತ್ತದೆ.

7. ಲಿಕ್ವಿಡ್ ಬಳಸಿ
ದೀಪಾವಳಿಯ ಬಳಿಕ ಮನೆಯನ್ನು ಸ್ವಚ್ಛಗೊಳಿಸುವ ಈ ಎಲ್ಲಾ ಸಲಹೆಗಳು ನಿಮ್ಮ ಮನೆಯನ್ನು ಹಬ್ಬದ ಬಳಿಕ ಒಪ್ಪಓರಣವಾಗಿಡಲು ನೆರವಾಗಲಿದೆ.



Click it and Unblock the Notifications
