Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ಮನೆ ಶುಚಿತ್ವದಲ್ಲಿ ನಿಂಬೆ ಹಣ್ಣಿನ 10 ಮ್ಯಾಜಿಕ್
ಕೊಳೆ ಪಾತ್ರೆಗಳನ್ನು ಸಂಪೂರ್ಣ ಸ್ವಚ್ಛಗೊಳಿಸುವುದರಲ್ಲಿ ನಿಂಬೆ ರಸ ಹೆಚ್ಚ ಪರಿಣಾಮಕಾರಿ ಎಂಬುದು ಹೇಗೆ?ಇಲ್ಲಿದೆ ಅದರ ಬಗ್ಗೆ ಒಂದಿಷ್ಟು ಡೀಟೇಲ್ಸ್.ಇದರಲ್ಲಿ ಹೆಚ್ಚು ಸಿಟ್ರಿಕ್ ಆಸಿಡ್ ಇದೆ.
ನಿಂಬೆ ಹಣ್ಣಿನಲ್ಲಿ ಕ್ರಿಮಿನಾಶಕ ಗುಣವಿದ್ದು ಹಾಗೂ ಹೆಚ್ಚು ಪಿಹೆಚ್ ಇರುವುದರಿಂದ ಇದರಲ್ಲಿ ನೈಸರ್ಗಿಕ ಶುದ್ಧೀಕರಣದ ಗುಣಹೊಂದಿದೆ.ನಿಂಬೆ ಹಣ್ಣು ಆಕರ್ಷಕ ಸುವಾಸನೆ ಹೊಂದಿದ್ದು ನೀವು ಯಾವುದೇ ಲೋಹದ ಪಾತ್ರಗಳಾದರೂ ಅದನ್ನು ಶುದ್ಧವಾಗು ಸ್ವಚ್ಛಗೊಳಿಸುತ್ತದೆ.
ಈ10 ವಸ್ತುಗಳನ್ನು ನಿಂಬೆ ರಸದಿಂದ ಸ್ವಚ್ಛಗೊಳಿಸಿ ಮ್ಯಾಜಿಕ್ ನೋಡಿ:

1.ಚಾಪಿಂಗ್ ಬೋರ್ಡ್ (ತುರಿಯುವ ಮಣೆ)
ನೀವು ತೆಂಗಿನಕಾಯಿ ಹಾಗೂ ಯಾವುದೇ ತರಕಾರಿಗಳನ್ನು ಹೆಚ್ಚಲು ಬಳಸುವ ಕಬ್ಬಿಣ ಹಾಗೂ ಯಾವುದೇ ಲೋಹದಿಂದ ತಯಾರಾದ ತುರಿಯುವ ಮಣೆಯನ್ನು ಶುದ್ಧ ಮಾಡಲು ನಿಂಬೆ ರಸ ಬಳಸುವುದರಿಂದ ಅದು ಸಂಪೂರ್ಣ ಸ್ವಚ್ಛವಾಗುತ್ತದೆ.

2. ಹಿತ್ತಾಳೆ
ಒಂದು ನಿಂಬೆ ಹಣ್ಣನ್ನು ಅರ್ಧ ಕತ್ತರಿಸಿ ನೀವು ಶುದ್ಧ ಮಾಡಬೇಕೆಂದಿರುವ ಪಾತ್ರೆಯ ಮೇಲೆ ಅದನ್ನು ಹಿಂಡಿ ಅದಕ್ಕೆ ಚಿಟಕಿ ಉಪ್ಪು ಬೆರೆಸಿ ಪಾತ್ರೆ ಬೆಳಗಿದರೆ ಅದು ಪಳಪಳನೆ ಹೊಳೆಯುತ್ತದೆ.ನಿಂಬೆ ಹಣ್ಣಿನ ಸಿಪ್ಪೆಯನ್ನು ಹಿತ್ತಾಳೆ ವಸ್ತುವಿನ ಮೇಲೆ ಉಜ್ಜಿ.ಪಾತ್ರ ತೊಳೆಯಲು ಹಿಂದಿನ ಕಾಲದಿಂದಲೂ ಬಂದಿರುವ ಒಂದು ರೂಢಿಯಾಗಿದೆ.

3.ತುಕ್ಕು ಹಿಡಿದ ವಸ್ತು
ನಿಂಬೆ ರಸ ಹಾಗೂ ಸ್ವಲ್ಪ ಉಪ್ಪು ಬೆರೆಸಿ ತುಕ್ಕು ಹಿಡಿದ ವಸ್ತುವಿನ ಮೇಲೆ ಹಚ್ಚಿ.ಸ್ವಲ್ಪ ಸಮಯ ಬಿಟ್ಟು ಅದನ್ನು ಉಜ್ಜಿ ತೊಳೆಯುವುದರಿಂದ ಸ್ವಚ್ಛವಾಗುತ್ತದೆ. ತುಕ್ಕು ಪೂರ್ಣ ಪ್ರಮಾಣದಲ್ಲಿ ಹೋಗದಿದ್ದರೆ ಮತ್ತೆ ಮತ್ತೆ ಹೀಗೆ ನಿಂಬೆ ರಸ, ಉಪ್ಪಿನ ಮಿಶ್ರಣ ಬಳಸಿ ಶುದ್ಧ ಮಾಡಬಹುದು.

4.ತರಕಾರಿ ಹಾಗೂ ಹಣ್ಣು
ಉಪಯೋಗಿಸುವುದಕ್ಕೆ ಮುಂಚೆ ಹಣ್ಣು ಹಾಗೂ ತರಕಾರಿಗಳುನ್ನು ಹಾಗೆ ಬಳಸುವುರಿಂದ ಅನೇಕ ಕೀಟಾಣುಗಳು ಶರೀರದಲ್ಲಿ ಸೇರಿ ಹಲವು ಕಾಯಿಲೆಗಳಿಗೆ ಕಾರಣವಾಗಬಹುದು. ಆದ್ದರಿಂದ ಯಾವುದೇ ತರಕಾರಿ ಹಾಗೂ ಹಣ್ಣುಗಳನ್ನು ಉಪಯೋಗಿಸುವುದಕ್ಕೆ ಮುಂಚೆ ಅದನ್ನು ನಿಂಬೆ ರಸ ಹಾಗೂ ಉಪ್ಪ ಬೆರೆಸಿದ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಹಾಕಿ ನಂತರ ತೊಳೆದು ಉಪಯೋಗಿಸುವುದು ಒಳ್ಳೆಯದು ಎಂದು ಕೊಲೊರ್ಯಾಡೀ ಸ್ಟೇಟ್ ಯೂನಿವರ್ಸಿಟಿಯ ಅನುಭವಿಗಳು ತಿಳಿಸಿದ್ದರೆ.

5.ಕಿಟಕಿಗಳು
ಹೌದು ನಿಂಬೆ ರಸದಿಂದ ಕಿಟಕಿಗಳನ್ನು ಸ್ವಚ್ಛ ಮಾಡಬಹುದು. ಉಗುರು ಬೆಚ್ಚಗಿನ ನೀರಿಗೆ ಅರ್ಧ ಕಪ್ಪು ಬಿಳಿ ವಿನಿಗರ್ ಹಾಕಿ ಮಿಶ್ರ ಮಾಡಿಕೊಳ್ಳಿ. ಇದಕ್ಕೆ ಕಾಲು ಕಪ್ಪು ನಿಂಬೆ ರಸ ಮಿಶ್ರಮಾಡಿ.ಈ ಮಿಶ್ರಣವು ಅಡುಗೆ ಮನೆಯ ಕಿಟಕಿಗೆ ಅಂಟಿರುವ ಎಣ್ಣೆ ಅಂಶವನ್ನು ಸಂಪೂರ್ಣವಾಗಿ ತೊಲಗಿಸುತ್ತದೆ.

6.ಗಾಜಿನ ಬಾಗಿಲುಗಳು
: ಗಾಜಿನ ವಸ್ತುಗಳನ್ನು ಸಂಪೂರ್ಣ ಸ್ವಚ್ಛ ಮಾಡುವ ನೈಸರರ್ಗಿಕ ಗುಣ ಹೊಂದಿದೆ.ನಿಂಬೆ ಮಿಶ್ರಿತ ಸೋಪಿನಿಂದ ಗಾಜನ್ನು ಶುದ್ಧ ಮಾಡಿದಾಗ ಅದು ಮಂಕಾಗಿದ್ದರೆ, ನಿಂಬೆ ಹಣ್ಣನ್ನು ಅರ್ಧ ಕತ್ತರಿಸಿ ಅದನ್ನು ಗಾಜಿನ ಮೇಲೆ ಉಜ್ಜಿ ಸ್ವಚ್ಛವಾಗುತ್ತದೆ.ನಿಂಬೆ ರಸವನ್ನು ಶುದ್ಧ ನೀರಿನಲ್ಲಿ ಮಿಶ್ರ ಮಾಡಿ ಅದನ್ನು ಸ್ಪ್ರೇ ಬಾಟಲಿನಲ್ಲಿ ಹಾಕಿ ಗಾಜಿನ ಮೇಲ ಸ್ಪ್ರೇ ಸ್ವಲ್ಪ ಸಮಯ ಹಾಗೇ ಬಿಡಿ. ಅರ್ಧಗಂಟೆ ಬಿಟ್ಟು ಮತ್ತೆ ಗಾಜಿನ ಬಾಗಿಲನ್ನು ತೇವ ಮಾಡಿ ನಂತರ ನೀರಿನ ಸ್ಪಂಜಿನಿಂದ ಅದನ್ನು ವರೆಸಿ.

7.ಟಾಯ್ಲೆಟ್
ನಿಂಬೆ ರಸ ಹಾಗೂ ಬೇಕಿಂಗ್ ಸೋಡಾದ ಮಿಶ್ರಣವು ಬಾತ್ ರೂಮ್ ಹಾಗೂ ಟಾಯ್ಲೆಟ್ ಸ್ವಚ್ಛಗೊಳಿಸುವ ಮನೆಯ ರಾಸಾಯನವಾಗಿದೆ. ಟಾಯ್ಲೆಟ್ ನ ಬೇಸನ್ನಿಗೆ ಈ ಮಿಶ್ರಣವನ್ನು ಚಿಮುಕಿಸಿ ೀ ರಾಸಾಯನ ಕೆಲಸ ಮಾಡಲು ಸ್ವಲ್ಪ ಸಮಯ ಬಿಡಿ. ನಂತರ ಒಳಗೂ ಹಾಗೂ ಹೊರಗೂ ಚೆನ್ನಾಗಿ ಬ್ರಶ್ ಮಾಡಿ.

8.ಟಪ್ಪರ್ ವೇರ್ ವಸ್ತುಗಳು
ಟಪ್ಪರ್ ವೇರ್ ನ ಒಳಗೆ ಹಾಗೂ ಹೊರ ಭಾಗಕ್ಕೆ ಬೇಕಿಂಗ್ ಸೋಡ ಹಾಗೂ ನಿಂಬೆ ರಸದ ಮಿಶ್ರಣ ಹಾಕಿ. ನಂತರ ಉಜ್ಜಿ ತೊಳೆಯುವುದರಿಂದ ಶುದ್ಧವಾಗುವುದರ ಜೊತೆಗೆ ಅದರ ಬಣ್ಣವೂ ಮಾಸುವುದಿಲ್ಲ.

9.ಪೀಠೋಪಕರಣಳು
ವೆಜಿಟೇಬಲ್ ಆಯಿಲ್ ಹಾಗೂ ನಿಂಬೆ ರಸವನ್ನು ಸಮಾನವಾಗಿ ಮಿಶ್ರ ಮಾಡಿಕೊಳ್ಳಿ. ನಿಂಬೆ ರಸದ ಜೊತೆಗೆ ಸ್ವಲ್ಪ ಮಿನರಲ್ ಆಯಿಲ್ ಕೂಡ ಮಿಶ್ರ ಮಾಡಿಕೊಳ್ಳುವುದ ಉತ್ತಮ ಎಂದು ನ್ಯಾಚುರಲ್ ಎನ್ ವೈರನ್ಮೆಂಟ್ ಸರ್ವೀಸ್ ಸೆಂಟರ್ ತಿಳಿಸಿದೆ.ಒಳ್ಳೆ ಪರಿಣಾಮಕ್ಕಾಗಿ ಈ ಮಿಶ್ರಣವನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿ ಸ್ಪ್ರೇ ಮಾಡಿ.ಇದನ್ನು ಮರದ ಪೀಠೋಪಕರಣಗಳ ಮೇಲೆ ಸಿಂಪಡಿಸಿ ನಯವಾಗಿ ಉಜ್ಜುವುದರಿಂದ ಪಾಲಿಶ್ ಆಗುತ್ತದೆ.

10.ಸ್ಟವ್ ನ ಮೇಲ್ಭಾಗ
ಬೇಕಿಂಗ್ ಸೋಡ ಹಾಗೂ ನಿಂಬೆ ರಸದ ಪೇಸ್ಟ್ ಮಾಡಿಕೊಳ್ಳು.ಇದನ್ನು ಸ್ಟವ್ ಹಾಗೂ ಅದರ ಮೇಲ್ಭಾಗದ ಕಬ್ಬಿಣದ ಪ್ಲೇಟ್ ಗಳಿಗೆ ಹಚ್ಚಿ ಸ್ವಲ್ಪ ಸಮಯ ಹಾಗೇ ಬಿಡಿ. ಸುಮಾರು 15 ನಿಮಿಷಗಳ ನಂತರ ಇದನ್ನು ತೊಳೆದು ಸ್ಪಂಜ್ ನಿಂದ ಒರೆಸಿ ಸ್ವಚ್ಛಗೊಳಿಸಿ.



Click it and Unblock the Notifications