Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ವಸ್ತುಗಳನ್ನು ಉಪ್ಪು ಬಳಸಿ ಶುಚಿ ಮಾಡಿ ನೋಡಿ!
ಅಡುಗೆ ಮನೆಯಲ್ಲಿರುವ ಉಪ್ಪನ್ನು ಅಡುಗೆಗೆ ಮಾತ್ರವಲ್ಲದೆ ಮನೆಯಲ್ಲಿ ವಸ್ತುಗಳ ಶುಚಿಗೂ ಬಳಸಬಹುದು. ಉದಾಹರಣೆಗೆ ವಿನಿಗರ್, ನಿಂಬೆ ಹಣ್ಣು, ಅಡುಗೆ ಸೋಡಾ ಈ ರೀತಿಯ ವಸ್ತುಗಳನ್ನು ಮನೆ ಶುಚಿಯಲ್ಲಿ ಬಳಸಿದರೆ ಉತ್ತಮ ಪ್ರಯೋಜನವನ್ನು ಪಡೆಯಬಹುದು. ಹೀಗೆ ಅಡುಗೆಗೆ ಮತ್ತು ಮನೆ ಶುಚಿತ್ವಕ್ಕೆ ಬಳಸಬಹುದಾದ ವಸ್ತುಗಳ ಸಾಲಿನಲ್ಲಿ ಉಪ್ಪು ಕೂಡ ಸೇರುತ್ತದೆ.
ಉಪ್ಪನ್ನು ಬಳಸಿ ಈ ಕೆಳಗಿನ ವಸ್ತುಗಳನ್ನು ಶುಚಿ ಮಾಡಬಹುದು.

ಜೀನ್ಸ್
ಜೀನ್ಸ್ ತುಂಬಾ ಕೊಳೆಯಾಗಿದ್ದರೆ ಅದನ್ನು ತೊಳೆಯಲು ಅರ್ಧ ಬಕೆಟ್ ನೀರಿನಲ್ಲಿ 2 ಚಮಚ ಉಪ್ಪು ಹಾಕಿ ನೆನೆ ಹಾಕಿ, ನಂತರ ಸೋಪು ತಿಕ್ಕಿ ಕೈಯಿಂದ ತಿಕ್ಕಿದರೆ ಸಾಕು. ಜೀನ್ಸ್ ಅನ್ನು ಬ್ರೆಷ್ ಹಾಕಿ ತಿಕ್ಕಿದರೆ ಕಲರ್ ಹೋಗಬಹುದು.

ತಾಮ್ರದ ವಸ್ತುಗಳು
ಮನೆಯಲ್ಲಿರುವ ತಾಮ್ರದ ವಸ್ತುಗಳನ್ನು ನಿಂಬೆ ಹಣ್ಣು ಅಥವಾ ಹುಣಸೆ ಹಣ್ಣಿಗೆ ಉಪ್ಪು ಹಾಕಿ ತಿಕ್ಕಿದರೆ ಪಳಪಳ ಹೊಳೆಯುತ್ತದೆ.

ಚಿಮ್ಮಣಿ
ಅಡುಗೆ ಮನೆಯಲ್ಲಿರುವ ಚಿಮ್ಮಣಿಯನ್ನು ಶುಚಿ ಮಾಡಲು ಉಪ್ಪು, ವಿನಿಗರ್, ಬೇಕಿಂಗ್ ಸೋಡಾ ಹಾಕಿ ಉಜ್ಜಿದರೆ ಸಾಕು.

ಕಾರ್ಪೆಟ್
ಕಾರ್ಪೆಟ್ ನಲ್ಲಿರುವ ವಾಸನೆಯನ್ನು ತೆಗೆಯಲು ಸ್ವಲ್ಪ ಉಪ್ಪು ಉದುರಿಸಿ ನಂತರ ಕ್ಲೀನ್ ಮಾಡಿದರೆ ಕಾರ್ಪೆಟ್ ಶುಚಿಯಾಗುತ್ತದೆ.

ಬಟ್ಟೆ
ಬಟ್ಟೆಯನ್ನು ಒಗೆಯುವ ಮೊದಲು ಒಂದು ಬಕೆಟ್ ನೀರಿಗೆ ಉಪ್ಪು ಹಾಕಿ ಅದರಲ್ಲಿ ಬಟ್ಟೆ ನೆನೆ ಹಾಕಿ ನಂತರ ಒಗೆದರೆ ಬಟ್ಟೆಯ ಕಲರ್ ಅಷ್ಟಾಗಿ ಹೋಗುವುದಿಲ್ಲ ಮತ್ತು ಬಟ್ಟೆ ಸುವಾಸನೆಯಿಂದ ಕೂಡಿರುತ್ತದೆ.

ಕಬ್ಬಿಣದ ಪಾತ್ರೆಗಳು
ಕಬ್ಬಿಣದ ಪಾತ್ರೆಯಲ್ಲಿರುವ ಎಣ್ಣೆಯಂಶ, ಹಳದಿ ಇವುಗಳನ್ನು ಹೋಗಲಾಡಿಸಲು ಸ್ವಲ್ಪ ಉಪ್ಪು ಹಾಕಿ ತಿಕ್ಕಿ ಬಿಸಿ ನೀರಿನಿಂದ ತೊಳೆದರೆ ಸಾಕು.

ಗ್ಲಾಸ್ ಜಾರ್
ಗ್ಲಾಸ್ ಜಾರ್ ಅನ್ನು ಉಪ್ಪು ಹಾಕಿ ತಿಕ್ಕಿದರೆ ಯಾವುದೇ ವಾಸನೆ ಉಳಿಯುವುದಿಲ್ಲ, ಜಾರ್ ಸ್ವಚ್ಛವಾಗುತ್ತದೆ.

ಫ್ರಿಜ್
ಕೆಲವೊಮ್ಮೆ ಕೆಟ್ಟ ದುರ್ನಾತ ಬರುತ್ತದೆ. ಅದನ್ನು ತಡೆಗಟ್ಟಲು ವಿನಿಗರ್ ಮತ್ತು ಉಪ್ಪು ಹಾಕಿದ ನೀರಿಗೆ ಬಟ್ಟೆ ಅದ್ದಿ ಫ್ರಿಜ್ ಕ್ಲೀನ್ ಮಾಡಿದರೆ ಕೆಟ್ಟ ವಾಸನೆ ಇಲ್ಲದಾಗುತ್ತದೆ.

ಪಾತ್ರೆಗಳಿಂದ ವಾಸನೆ ತೆಗೆಯಲು
ಮೊಟ್ಟೆ, ಮಾಂಸ, ಮೀನು ಈ ರೀತಿಯ ಆಹಾರಗಳು ತಿಂದ ನಂತರ ಪ್ಲೇಟ್ ತೊಳೆಯುವಾಗ ಸ್ವಲ್ಪ ಉಪ್ಪು ಹಾಕಿ ತಿಕ್ಕಿದರೆ ಪ್ಲೇಟ್ ವಾಸನೆ ರಹಿತವಾಗಿರುತ್ತದೆ.

ಬೆಳ್ಳಿಯನ್ನು ಶುಚಿ ಮಾಡಲು
ಬೆಳ್ಳಿ ವಸ್ತುಗಳನ್ನು ಉಪ್ಪು ಹಾಕಿ ಉಜ್ಜಿದರೆ ಸಾಕು ಆ ವಸ್ತುಗಳು ಪಳಪಳ ಹೊಳೆಯುತ್ತದೆ.



Click it and Unblock the Notifications
