Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮನೆ ಬದಲಾಯಿಸುವಾಗ ಸಹಾಯಕ್ಕೆ ಬರುತ್ತೆ ಈ ಸಲಹೆ

ಅದರಲ್ಲೂ ಅಡುಗೆ ಮನೆಯ ವಸ್ತುಗಳನ್ನು ಸಾಗಿಸುವುದು ಸ್ವಲ್ಪ ಶ್ರಮದ ಕೆಲಸವೆಂದೇ ಹೇಳಬಹುದು. ನೂರೆಂಟು ಡಬ್ಬಗಳು, ಪಾತ್ರೆಗಳು ಇವುಗಳನ್ನು ಹೊಸ ಮನೆಗೆ ತೆಗೆದುಕೊಂಡು ಹೋಗಿ ಜೋಡಿಸುವಷ್ಟರಲ್ಲಿ ಅಬ್ಬಾಬ್ಬ ಅನಿಸಿಬಿಡುತ್ತದೆ. ಒಂದು ವೇಳೆ ಮನೆ ಬದಲಾಯಿಸುವುದಾದರೆ ಅಡುಗೆ ಮನೆಯ ವಸ್ತುಗಳನ್ನು ಸಾಗಿಸುವಾಗ ಕೆಳಗಿನ ಸಲಹೆಗಳನ್ನು ಪಾಲಿಸಿದರೆ, ನಿಮಗೆ ಅರ್ಧದಷ್ಟು ಶ್ರಮ ಕಡಿಮೆಯಾಗುವುದು.
1. ನಿಮ್ಮ ಜೊತೆ ಯಾವ ವಸ್ತುಗಳೆನ್ನೆಲ್ಲ ತೆಗೆದುಕೊಂಡು ಹೋಗಬೇಕು ಎಂದು ಪಟ್ಟಿ ಮಾಡಿ, ಕೆಲವೊಂದು ವಸ್ತುಗಳನ್ನು ಸಾಗಿಸಲು ಕಷ್ಟವಾಗುತ್ತದೆ. ಅಂತಹ ವಸ್ತುಗಳನ್ನು ಮಾರುವುದು ಸಾಮಾನ್ಯ. ಆದ್ದರಿಂದ ಯಾವ ವಸ್ತು ಕೊಂಡೊಯ್ಯಬಹುದು, ಯಾವೆಲ್ಲಾ ವಸ್ತುಗಳನ್ನು ಮಾರಬೇಕು ಎಂಬುದನ್ನು ಪಟ್ಟಿ ಮಾಡಿ.
2. ಅತೀ ಅವಶ್ಯಕವಿರುವ ವಸ್ತುಗಳನ್ನು ಒಂದು ಕಡೆ ಬಾಕ್ಸ್ ನಲ್ಲಿ ಇಟ್ಟು ಪ್ಯಾಕ್ ಮಾಡಬೇಕು. ಏಕೆಂದರೆ ಬೇರೆ ಮನೆಗೆ ಹೋದಾಗ ಅಂತಹ ವಸ್ತುಗಳು ಸುಲಭವಾಗಿ ಸಿಗುವಂತೆ ಇರಬೇಕು.
3. ಪ್ಯಾಕಿಂಗ್ ವಸ್ತುಗಳನ್ನು ತರಬೇಕು. ನಂತರ ಭಾರ ಕಮ್ಮಿಯಾದ ವಸ್ತುಗಳನ್ನು ಒಂದು ಬಾಕ್ಸ್ ನಲ್ಲಿ ಹಾಕಬೇಕು. ಡಿಶ್ ಟವಲ್, ಸೋಪು, ಕ್ಲೀನರ್, ಡಿಶ್ ಕ್ಲೋಥ್ ಇಂತಹ ವಸ್ತುಗಳನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಬೇಕು.
4. ಗಾಜು ಅಥವಾ ಪಿಂಗಾಣಿ ಪ್ಲೇಟ್, ಗ್ಲಾಸ್ ಇಂತಹ ವಸ್ತುಗಳನ್ನು ತುಂಬಾ ಸೂಕ್ಷ್ಮವಾಗಿ ಪ್ಯಾಕ್ ಮಾಡಬೇಕು. ಇಲ್ಲದಿದ್ದರೆ ಒಡೆದು ಹೋಗುತ್ತದೆ. ಆದ್ದರಿಂದ ಇಂತಹ ವಸ್ತುಗಳನ್ನು ಪ್ರತ್ಯೇಕವಾಗಿ ನ್ಯೂಸ್ ಪೇಪರ್ ಮತ್ತು ಬಟ್ಟೆಯಿಂದ ಸುತ್ತಿ ಪ್ಯಾಕ್ ಮಾಡಿ.
5. ಬಾಟಲಿ ಮತ್ತು ಗಾಜಿನ ಡಬ್ಬಿಗಳನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಬೇಕು.
ಈ ರೀತಿ ಪ್ಯಾಕ್ ಮಾಟಡಲು ಈ ಕೆಳಗಿನ ವಸ್ತುಗಳನ್ನು ಬಳಸುವುದು ಒಳ್ಳೆಯದು.
ನ್ಯೂಸ್ ರಾಪ್ (Unprinted Newswrap): ಆಹಾರ ಸಾಮಾಗ್ರಿಗಳನ್ನು ಪ್ಯಾಕ್ ಮಾಡಲು ಬಳಸಬಹುದು.
ಬಬಲ್ ರಾಪ್ (Bubblewrap): ಡಬ್ಬಿಗಳನ್ನು ಪ್ಯಾಕ್ ಮಾಡಲು ಬಳಸಬಹುದು.
ಸೆಲ್ ಕಿಟ್ (cell kit) -ಗಾಜಿನ ವಸ್ತುಗಳನ್ನು ಪ್ಯಾಕ್ ಮಾಡಲು ಬಳಸಬಹುದು.
ಸೀಲಿಂಗ್ ಟ್ಯಾಪ್ (Sealing Tape)
ಈ ರೀತಿ ವಸ್ತುಗಳನ್ನು ಪ್ರತ್ಯೇಕವಾಗಿ ಜೋಡಿಸಿದರೆ ವಸ್ತುಗಳಿಗೆ ಹಾನಿಯಾಗದಂತೆ ಸಾಗಿಸಲು ಸುಲಭ.



Click it and Unblock the Notifications
