Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಶಾಪಿಂಗ್ ಮಾಡುವಾಗ ಬಳಸಿ ಸ್ಮಾರ್ಟ್ ಐಡಿಯಾ
ಮನೆಗೆ ಬೇಕಾಗುವ ಆಹಾರ ಸಾಮಾಗ್ರಿಗಳನ್ನು ಕೊಳ್ಳಲು ಹೋಗುವಾಗ ಸ್ವಲ್ಪ ಅಧಿಕವಾಗಿ ಸಾಮಾನುಗಳನ್ನು ತಂದಿಟ್ಟುಕೊಳ್ಳುವುದು ಒಳ್ಳೆಯದು. ಮಳೆಗಾಲವಾದ ಕಾರಣ ಆಗಾಗ ಅಂಗಡಿ ಅಥವಾ ಫುಡ್ ಮಾರ್ಕೆಟ್ ಗೆ ಹೋಗುವುದು ಕೂಡ ಕಿರಿಕಿರಿಯ ವಿಷಯವೇ. ಒಂದು ತಿಂಗಳಿಗೆ ಅಥವಾ ಒಂದು ವಾರಕ್ಕೆ ಒಮ್ಮೆಲೇ ಶಾಪಿಂಗ್ ಮಾಡುವಾಗ ಯಾವ ಸಾಮಾನುಗಳನ್ನು ಕೊಳ್ಳಬೇಕು, ಯಾವುದನ್ನು ಕೊಳ್ಳಬಾರದು ಎಂಬುದನ್ನು ಕೊಂಡುಕೊಳ್ಳಲು ಹೋಗುವ ಮೊದಲೇ ನಿರ್ಧರಿಸಬೇಕು. ಇಲ್ಲದಿದ್ದರೆ ಫುಡ್ ವರ್ಲ್ಡ್ ಅಥವಾ ಬಜಾರ್ ಗೆ ಹೋದಾಗ ಕಣ್ಣಿಗೆ ಕಾಣಸಿಗುವ ವಸ್ತುಗಳನ್ನು ಕೊಳ್ಳುತ್ತಾ ಮುಖ್ಯವಾದ ವಸ್ತುಗಳನ್ನು ಕೊಳ್ಳುವುದನ್ನೇ ಮರೆತು ಬಿಡುತ್ತೇವೆ ಅಲ್ಲದೆ ನಾವು ಲೆಕ್ಕಚಾರ ಹಾಕಿರುವುದಕ್ಕಿಂತ ಅಧಿಕ ಬಜೆಟ್ ಖರ್ಚಾಗುವುದು.

ಆದ್ದರಿಂದ ಮಾರ್ಕೆಟ್ ಗೆ ಹೋಗುವ ಮುನ್ನ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಸ್ಮಾರ್ಟ್ ಶಾಪಿಂಗ್ ಮಾಡಿ ಬರಬಹುದು:
ಬೇಕಾದ ವಸ್ತುಗಳ ಪಟ್ಟಿ: ಮಾರ್ಕೆಟ್ ಗೆ ಹೊಗುವ ಮೊದಲೇ ಬೇಕಾದ ವಸ್ತುಗಳ ಪಟ್ಟಿ ಮಾಡಿಕೊಂಡು ಹೋಗಬೇಕು. ಈ ರೀತಿ ಮಾಡಿದರೆ ಅನಾವಶ್ಯಕವಾಗಿ ಬೇರೆ ವಸ್ತುಗಳನ್ನು ಕೊಳ್ಳುವುದನ್ನು ತಪ್ಪಿಸಬಹುದು. ಪಟ್ಟಿ ಮಾಡಿದ ವಸ್ತುಗಳನ್ನು ನೋಡಿ ತೆಗೆದುಕೊಳ್ಳುತ್ತಾ ಹೋಗಬೇಕು. ಇಲ್ಲದಿದ್ದರೆ ಕಣ್ಣಿಗೆ ಕಂಡ ವಸ್ತುಗಳೆಲ್ಲಾ ಬೇಕೆನಿಸುತ್ತದೆ. ವಸ್ತುಗಳನ್ನು ಕೊಳ್ಳುವಾಗ ಅಗತ್ಯವಿರುವ ವಸ್ತುಗಳನ್ನು ಅಗತ್ಯ ಪ್ರಮಾಣದಲ್ಲಿ ಕೊಳ್ಳಬೇಕು. ಸುಮ್ಮನೆ ತಗೊಂಡು ಹೋಗಿ ಸ್ಟಾಕ್ (ಶೇಖರಿಸಿ) ಇಟ್ಟರೆ ಕೆಲವೊಂದು ವಸ್ತುಗಳು ಹಾಳಾಗಬಹುದು. ಆದ್ದರಿಂದ ವಸ್ತುಗಳನ್ನು ಕೊಳ್ಳುವಾಗ ನೋಡಿಕೊಳ್ಳಬೇಕು.
ಬಜೆಟ್: ಏನೇ ಆಗಲಿ ಬಜೆಟ್ ಲೆಕ್ಕಾಚಾರ ಮುಖ್ಯ. ಒಮ್ಮೆ ಮಾರ್ಕೆಟ್ ಗೆ ಹೋಗಿ ಬಂದರೆ ಸಾಕು ಕೈಯಲ್ಲಿರುವ ದುಡ್ಡು ಖರ್ಚಾಗುವುದೇ ಗೊತ್ತಾಗುವುದಿಲ್ಲ. ಆದ್ದರಿಂದ ಯಾವೆಲ್ಲಾ ವಸ್ತುಗಳನ್ನು ಕೊಳ್ಳಬೇಕು, ಅದಕ್ಕೆ ಎಷ್ಟು ದುಡ್ಡು ಬೇಕಾಗಬಹುದು ಎಂದು ಮೊದಲೇ ಲೆಕ್ಕಚಾರ ಹಾಕಬೇಕು. ನಂತರ ಲೆಕ್ಕಚಾರಕ್ಕಿಂತ ಸ್ವಲ್ಪ ಅಧಿಕ ದುಡ್ಡು ತೆಗೆದುಕೊಂಡು ಶಾಪಿಂಗ್ ಮಾಡಬೇಕು. ಮತ್ತೊಂದು ಉಪಾಯವೆಂದರೆ ಕ್ರೆಡಿಟ್ ಕಾರ್ಟ್ ತಗೊಂಡು ಹೋಗದಿರುವುದು ಒಳ್ಳೆಯದು. ಏಕೆಂದರೆ ಕ್ರೆಡಿಟ್ ಕಾರ್ಟ್ ಕೈಯಲ್ಲಿ ಇದ್ದರೆ ಹೆಚ್ಚು ಖರ್ಚಾಗುವ ಸಾಧ್ಯತೆ ಹೆಚ್ಚು.
ಶೇಖರಿಸಿಡಬಹುದಾದ ವಸ್ತುಗಳು: ಅಧಿಕ ಕಾಲ ಇಡಬಹುದಾದ ವಸ್ತುಗಳನ್ನು ಸ್ವಲ್ಪ ಅಧಿಕ ಕೊಂಡರೂ ಏನೂ ನಷ್ಟ ಉಂಟಾಗುವುದಿಲ್ಲ. ಆದರೆ ಬೇಗ ಹಾಳಾಗುವಂತಹ ಕೆಲ ತರಕಾರಿಗಳು, ಹಣ್ಣುಗಳನ್ನು ಮಿತಿಯಲ್ಲಿ ಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ದುಡ್ಡುಕೊಟ್ಟು ತಂದು ಹಾಳು ಮಾಡಿದಂತೆ ಆಗುವುದು.
ಸಾಮಾನುಗಳನ್ನು ಮತ್ತು ಬಿಲ್ಲನ್ನು ಪರೀಕ್ಷಿಸುವುದು: ಕೆಲವೊಮ್ಮೆ ಬಿಲ್ ಕಟ್ಟಿರುತ್ತೇವೆ, ಆದರೆ ಆ ವಸ್ತುವನ್ನು ಅಂಗಡಿಯಲ್ಲಿಯೇ ಬಿಟ್ಟು ಬಂದಿರುತ್ತೇವೆ. ಆದ್ದರಿಂದ ಕೊಂಡ ವಸ್ತು ಮತ್ತು ಬಿಲ್ಲನ್ನು ಮತ್ತೊಮ್ಮೆ ಪರೀಕ್ಷಿಸುವುದು ಒಳ್ಳೆಯದು.
ಈ ರೀತಿ ಶಾಪಿಂಗ್ ಮಾಡಿದರೆ ಅನಾವಶ್ಯಕವಾಗಿ ಜೇಬು ಭಾರ ಕಮ್ಮಿಯಾಗುವುದನ್ನು ತಪ್ಪಿಸಬಹುದು.



Click it and Unblock the Notifications
